Asianet Suvarna News Asianet Suvarna News

Tesla India Launch ಭಾರತದಲ್ಲಿ ವಿಶ್ವದ ಎಲ್ಲೂ ಇಲ್ಲದ ತೆರಿಗೆ, ಟೆಸ್ಲಾ ಕಾರು ಬಿಡುಗಡೆ ವಿಳಂಬಕ್ಕೆ ಕಾರಣ ಹೇಳಿದ ಮಸ್ಕ್!

  • ಭಾರತದಲ್ಲಿ ಅಮೆರಿಕದ ಟೆಸ್ಲಾ ಕಾರು ಬಿಡುಗಡೆ ವಿಳಂಬ
  • ಮಾಹಿತಿ ಹಂಚಿಕೊಂಡ ಎಲನ್ ಮಸ್ಕ್, ಸರ್ಕಾರದ ವಿರುದ್ಧ ಅಸಮಾಧಾನ
  • ಅಮೆರಿಕದಲ್ಲಿನ 30 ಲಕ್ಷದ ಕಾರು ಭಾರತದಲ್ಲಿ ತೆರಿಗೆ ಕಾರಣ 60 ಲಕ್ಷ ರೂ
Highest tax lot of challenges with government Elon Musk shares Tesla car launch update in India ckm
Author
Bengaluru, First Published Jan 13, 2022, 11:46 AM IST

ನವದೆಹಲಿ(ಜ.13): ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ(Electric Cars) ಬೇಡಿಕೆ ಹೆಚ್ಚಾಗುತ್ತಿದೆ. ಇದರ ನಡುವೆ ವಿಶ್ವದ ಅತೀ ದೊಡ್ಡ ಹಾಗೂ ಅತ್ಯಂತ ಜನಪ್ರಿಯ ಟೆಸ್ಲಾ ಕಾರು(Tesla Car) ಭಾರತದಲ್ಲಿ ಬಿಡುಗಡೆ ಮಾಡಲು ಕಳೆದ ಮೂರು ವರ್ಷಗಳಿಂದ ಸತತ ಪ್ರಯತ್ನಗಳು ನಡೆಯುತ್ತಿದೆ. ಆದರೆ ಇನ್ನು ಕಾರು ಭಾರತ ತಲುಪಿಲ್ಲ. ಈ ಕುರಿತು ಹಲವು ಬಾರಿ ಸ್ಪಷ್ಟನೆ ನೀಡಿರುವ ಟೆಸ್ಲಾ ಸಿಇಒ ಎಲಾನ್ ಮಸ್ಕ್(Elon Musk) ಇದೀಗ ಭಾರತದ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಈಗಾಗಲೇ ಟೆಸ್ಲಾ ಭಾರತದಲ್ಲಿ ಕಾರುಗಳ ಬಿಡುಗಡೆ ಮಾಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಹಲವು ಸುತ್ತಿನ ಮಾತುಕತೆಗಳು ನಡೆದಿದೆ. ಟೆಸ್ಲಾ ಕಾರು(Tesla Car Unit) ಘಟಕಕ್ಕೂ ಸ್ಥಳ ಪರಿಶೀಲನೆ ಸೇರಿದಂತೆ ದಾಖಲೆಗಳ ಪರಿಶೀಲನೆ ನಡೆದಿದೆ. ಆದರೆ ಕಾರು ಬಿಡುಗಡೆ ಮಾತ್ರ ಸಾಧ್ಯವಿಲ್ಲ. ಈ ಕುರಿತು ಭಾರತೀಯನ ಪ್ರಶ್ನೆಗೆ ಸ್ವತ ಟೆಸ್ಲಾ ಸಂಸ್ಥಾಪಕ ಹಾಗೂ ಸಿಇಓ ಎಲಾನ್ ಮಸ್ಕ್ ಕಾರಣ ಹೇಳಿದ್ದಾರೆ.

Tesla Autopilot ತಂಡಕ್ಕೆ ನೇಮಕಗೊಂಡ ಮೊದಲ ವ್ಯಕ್ತಿ ಭಾರತೀಯ Ashok Elluswamy: ಎಲಾನ್‌ ಮಸ್ಕ್

ಭಾರತದಲ್ಲಿ ಕಾರು ಬಿಡುಗಡೆ ಪ್ರಯತ್ನಗಳು ನಡೆಯುತ್ತಿದೆ. ಸರ್ಕಾರದ ಹಲವು ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂದು ಎಲಾನ್ ಮಸ್ಕ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. 

ಟೆಸ್ಲಾ ಈಗಾಗಲೇ ಭಾರತದಲ್ಲಿ ಕಾರು(India Car Launch) ಬಿಡುಗಡೆಗೆ ವಿಳಂಭಕ್ಕೆ ಕಾರಣಗಳನ್ನು ಹೇಳಿದೆ. ಪ್ರಮುಖವಾಗಿ ಭಾರತದಲ್ಲಿ ಆಮದು ಸುಂಕದ ಸಮಸ್ಯೆಯನ್ನು ಟೆಸ್ಲಾ ಎದುರಿಸುತ್ತಿದೆ. ವಿಶ್ವದಲ್ಲಿ ಎಲ್ಲೂ ಇರದ ದುಬಾರಿ ತೆರಿಗೆ ಭಾರತದಲ್ಲಿದೆ. ಹೀಗಾಗಿ ಅಮೆರಿಕದಲ್ಲಿನ ಕೈಗೆಟುಕುವ ದರದ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರಿನ ಬೆಲೆ 30 ಲಕ್ಷ ರೂಪಾಯಿ. ಇದೇ ಕಾರು ಭಾರತದಲ್ಲಿ ಶೇಕಡಾ 100 ರಷ್ಟು ತೆರಿಗೆ ಪಾವತಿಸಿಬೇಕು. ಹೀಗಾಗಿ ಈ ಕಾರಿನ ಬೆಲೆ 60 ಲಕ್ಷ ರೂಪಾಯಿ ಆಗಲಿದೆ. ಹೀಗಾಗಿ ಭಾರತದಲ್ಲಿ ದುಬಾರಿ ಕಾರು ಮಾರಾಟ ಟೆಸ್ಲಾಗೆ ಹಿನ್ನಡೆಯಾಗಲಿದೆ ಎಂದು ಈಗಾಗಲೇ ಟೆಸ್ಲಾ ಹೇಳಿದೆ.

Elon Musk Job ಉದ್ಯೋಗ ತೊರೆಯಲು ನಿರ್ಧರಿಸಿದ ವಿಶ್ವದ ಶ್ರೀಮಂತ, ಮುಂದಿನ ವೃತ್ತಿ ಮತ್ತಷ್ಟು ಕುತೂಹಲ!

ಆಮದು ಕಾರಿನ ಮೇಲೆ ಭಾರತದ ಆಮದು ಸುಂಕ ಶೇಕಡಾ 100. ಹೀಗಾಗಿ 30 ಲಕ್ಷ ರೂಪಾಯಿಗೆ ಭಾರತ ಸರ್ಕಾರಕ್ಕೆ 30 ಲಕ್ಷ ರೂಪಾಯಿ ಆಮಂದು ಸುಂಕ ನೀಡಬೇಕು. ಹೀಗಾಗಿ ಕಾರಿನ ಬೆಲೆ 60 ಲಕ್ಷ ರೂಪಾಯಿ ಆಗುತ್ತಿದೆ. ಬಿಡಿ ಭಾಗಗಳ ಆಮದು ಸುಂಕವೂ ಶೇಕಡಾ 60. ಹೀಗಾಗಿ ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಗೆ ಹಿಂದೇಟು ಹಾಕುತ್ತಿದೆ.

ಮೇಕ್ ಇನ್ ಇಂಡಿಯಾ:
ಭಾರತದಲ್ಲಿ ಮೇಕ್ ಇನ್ ಇಂಡಿಯಾ(Make in India) ಯೋಜನೆಯಿಂದ ಭಾರತದಲ್ಲಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.  ಇಲ್ಲೇ ಕಾರಿನ ಎಲ್ಲಾ ಬಿಡಿಭಾಗ ಉತ್ಪಾದನೆ ಮಾಡಿ ಸಂಪೂರ್ಣ ಕಾರನ್ನು ಉತ್ಪಾದನೆ(Production) ಮಾಡುವುದಾದರೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳು ಸಿಗಲಿದೆ. ಆದರೆ ವಿದೇಶಗಳಿಂದ ಆಮದು ಮಾಡುವ ಕಾರುಗಳಿಗೆ ದುಬಾರಿ ಸುಂಕ ತೆರಬೇಕು. ಇದು ಟೆಸ್ಲಾಗೆ ಹೊಡೆತ ಬಿದ್ದಿದೆ. 

ಇತ್ತೀಚೆಗೆ ಟೆಸ್ಲಾ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿತ್ತು. ಈ ವೇಳೆ ಕೇಂದ್ರ ಸರ್ಕಾರ ಟೆಸ್ಲಾ ಕಾರು ಭಾರತದಲ್ಲಿ ಬಿಡುಗಡೆ ಮಾಡಲು ಆಮದು ಸುಂಕ ಕಡಿತಗೊಳಿಸುವುದಾಗಿ ಹೇಳಿತ್ತು. ಆದರೆ ಈ ಹೇಳಿಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಟಾಟಾ ಮೋಟಾರ್ಸ್ ಸೇರಿದಂತೆ ಭಾರತದ ಕಾರು ತಯಾರಕ ಕಂಪನಿಗಳು ಟೆಸ್ಲಾಗೆ ಮಾತ್ರ ಆಮದು ಸುಂಕ ಮಾಡುವ ಕೇಂದ್ರದ ನಿರ್ಧಾರ ಸರಿಯಲ್ಲ. ಮಾಡುವುದಾದರೇ  ಎಲ್ಲರಿಗೂ ಆಮದು ಸಂಕು ಕಡಿತಗೊಳಿಸಬೇಕು. ಕೇವಲ ಟೆಸ್ಲಾಗೆ ಮಾತ್ರ ಆಮದು ಸುಂಕ ಮಾಡಿದರೆ ತಾರತಮ್ಯ ಮಾಡಿದಂತಾಗುತ್ತದೆ. ಇದರಿಂದ ಭಾರತದಲ್ಲೇ ಉತ್ಪಾದನೆ ಮಾಡುವ ಕಂಪನಿಗಳಿಗೆ ಹೊಡೆತ ಬೀಳಲಿದೆ ಎಂದು ಟಾಟಾ ಮೋಟಾರ್ಸ್ ಆಕ್ಷೇಪ ವ್ಯಕ್ತಪಡಿಸಿತ್ತು. 

Follow Us:
Download App:
  • android
  • ios