Asianet Suvarna News Asianet Suvarna News

Tesla in India: ಕಾರು ಘಟಕ ತೆರೆಯಲು ಎಲಾನ್‌ಗೆ ವಿವಿಧ ರಾಜ್ಯಗಳ ಆಫರ್: ಮಸ್ಕ್‌ ಟ್ವೀಟ್‌ಗೆ ಭರ್ಜರಿ ಪ್ರತಿಕ್ರಿಯೆ!

*ಭಾರತದ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದ ಎಲಾನ್‌ ಮಸ್ಕ್
*ಟೆಸ್ಲಾ ಸಿಇಓಗೆ ಆಹ್ವಾನ ನೀಡಿದ್ದ ತೆಲಂಗಾಣ ಸಚಿವ ಕೆ.ಟಿ ರಾಮರಾವ್‌ 
*ಈ ಬೆನ್ನಲ್ಲೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಪಂಜಾಬ್‌ ಆಫರ್

After Telangana Maharashtra and West Bengal now Punjab woos Elon Musk to  open Tesla hub mnj
Author
Bengaluru, First Published Jan 17, 2022, 10:45 AM IST

ನವದೆಹಲಿ (ಜ. 17) : ‘ಭಾರತದಲ್ಲಿ ಟೆಸ್ಲಾ ಕಾರು (Tesla Hub) ಉತ್ಪಾದನಾ ಕಂಪನಿ ಸ್ಥಾಪಿಸಲು ಸರ್ಕಾರದ ನಿಯಮಗಳ ಅಡೆತಡೆ ಎದುರಿಸುತ್ತಿದ್ದೇನೆ’ ಎಂದು ಟೆಸ್ಲಾ ಕಂಪನಿಯ ಸಿಇಒ ಹಾಗೂ ಸ್ಪೇಸ್‌ ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌ (Elon Musk) ಹೇಳಿದ ಬೆನ್ನಲ್ಲೇ, ಅವರಿಗೆ ತಮ್ಮ ಕಂಪನಿ ತೆರೆಯಲು ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಆಹ್ವಾನ ನೀಡಿವೆ. ಜತೆಗೆ ಪಂಜಾಬ್ ಕಾಂಗ್ರೆಸ್‌ನ ರಾಜ್ಯ ಘಟಕದ ಮುಖ್ಯಸ್ಥರಾಗಿರುವ ನವಜೋತ್ ಸಿಂಗ್ ಸಿಧು ಕೂಡ ಆಫರ್‌ ನೀಡಿದ್ದಾರೆ. 

ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ್‌ ಪಾಟೀಲ್‌ (Jayant Patil), ‘ಮಹಾರಾಷ್ಟ್ರ ಮುಂದುವರಿದ ರಾಜ್ಯಗಳಲ್ಲಿ ಒಂದಾಗಿದೆ. ಇಲ್ಲಿ ನಿಮ್ಮ ಕಂಪನಿ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ನೆರವು ನೀಡುತ್ತೇವೆ. ನೀವು ನಿಮ್ಮ ಕಾರು ಉತ್ಪಾದನಾ ಘಟಕವನ್ನು ಇಲ್ಲಿ ತೆರೆಯಬಹುದು’ ಎಂದು ಶನಿವಾರ ಟ್ವೀಟ್‌ ಮೂಲಕ ಆಹ್ವಾನ ನೀಡಿದ್ದಾರೆ. 

 

 

ಇನ್ನು ಪಶ್ಚಿಮ ಬಂಗಾಳ ಸಚಿವ ಎಂ.ಡಿ. ಘುಲಾಮ್‌ ರಬ್ಬಾನಿ ಸಹ, ‘ನಿಮ್ಮ ಸಂಸ್ಥೆಯನ್ನು ಬಂಗಾಳದಲ್ಲಿ ಸ್ಥಾಪಿಸಿ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ದೂರದೃಷ್ಟಿಇದೆ. ಬಂಗಾಳ ಎಂದರೆ ವ್ಯವಹಾರ’ ಎಂದು ಟ್ವೀಟ್‌ ಮಾಡಿದ್ದಾರೆ.  ಪಂಜಾಬ್ ಕಾಂಗ್ರೆಸ್‌ನ ರಾಜ್ಯ ಘಟಕದ ಮುಖ್ಯಸ್ಥರಾಗಿರುವ ನವಜೋತ್ ಸಿಂಗ್ ಸಿಧು ಕೂಡ  ಟೆಸ್ಲಾ ಸಿಇಒ ಎಲೋನ್ ಮಸ್ಕ್‌ಗೆ ಆಹ್ವಾನ ನೀಡಿದ್ದಾರೆ. "ಪಂಜಾಬ್ ಮಾದರಿ" ಅಡಿಯಲ್ಲಿ, ಲುಧಿಯಾನ ಎಲೆಕ್ಟ್ರಿಕ್ ವಾಹನ ಮತ್ತು ಬ್ಯಾಟರಿ ಉದ್ಯಮದ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಸಿಧು ಹೇಳಿದ್ದಾರೆ. ರಾಜ್ಯವು "ಹೊಸ ತಂತ್ರಜ್ಞಾನವನ್ನು ತರುವ ಹೂಡಿಕೆಗೆ ಟೈಮ್‌ ಬೌಂಡ್ ಸಿಂಗಲ್ ವಿಂಡೋ ಕ್ಲಿಯರೆನ್ಸ್" ನೀಡುತ್ತದೆ ಮತ್ತು "green jobs" ಸೃಷ್ಟಿಸುತ್ತದೆ,‌ ಎಂದು ಸಿಧು ಹೇಳಿದ್ದಾರೆ.  ಮುಂದಿನ ತಿಂಗಳು ವಿಧಾನಸಭಾ  ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರವನ್ನು ಉಳಿಸಿಕೊಂಡರೆ ಮುಖ್ಯಮಂತ್ರಿ ಹುದ್ದೆಗೆ ಸಿಧು ಪ್ರಮುಖ ಸ್ಪರ್ಧಿ ಎಂದು ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ತೆಲಂಗಾಣ ಸಚಿವ ಕೆ.ಟಿ ರಾಮರಾವ್‌ ಸಹ ಮಸ್ಕ್‌ಗೆ ಇದೇ ರೀತಿ ಆಹ್ವಾನ ನೀಡಿದ್ದರು.  "ಎಲೋನ್, ನಾನು ಭಾರತದಲ್ಲಿ ತೆಲಂಗಾಣ ರಾಜ್ಯದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ. ಭಾರತ/ತೆಲಂಗಾಣದಲ್ಲಿ ಟೆಸ್ಲಾ ಸ್ಥಾಪಿಸಲು ಇರುವ ಸವಾಲುಗಳನ್ನು ಎದುರಿಸುವಲ್ಲಿ ಕೆಲಸ ಮಾಡಲು ಟೆಸ್ಲಾ ಜತೆ ಪಾಲುದಾರರಾಗಲು ಸಿದ್ದರಿದ್ದೇವೆ.  ನಮ್ಮ ರಾಜ್ಯವು ಸುಸ್ಥಿರತೆಯ ಉಪಕ್ರಮಗಳಲ್ಲಿ (sustainability) ಚಾಂಪಿಯನ್ ಆಗಿದೆ ಮತ್ತು ಭಾರತದಲ್ಲಿ ಉನ್ನತ ದರ್ಜೆಯ ವ್ಯಾಪಾರ ತಾಣವಾಗಿದೆ" ಎಂದು ಕೆಟಿಆರ್ ಹೇಳಿದ್ದರು.

After Telangana Maharashtra and West Bengal now Punjab woos Elon Musk to  open Tesla hub mnj

ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಎಲಾನ್‌: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಈ ಹಿಂದೆ ಪ್ರಣಯ್ ಪಾಥೋಲ್ ಅವರ ಟ್ವೀಟ್‌ಗೆ ಉತ್ತರಿಸಿದ್ದರು, ಅವರು ಭಾರತದಲ್ಲಿ ಟೆಸ್ಲಾ ಬಿಡುಗಡೆಗೆ ಸಂಬಂಧಿಸಿದ ಪ್ರಶ್ನೆಯನ್ನು ಪೋಸ್ಟ್ ಮಾಡಿದ್ದಾರೆ - “yo @elonmusk ಭಾರತದಲ್ಲಿ ಟೆಸ್ಲಾವನ್ನು ಯಾವಾಗ ಪ್ರಾರಂಭಿಸಲಾಗುವುದು ಎಂಬುದರ ಕುರಿತು ಯಾವುದೇ ಹೆಚ್ಚಿನ Updateಇದೆಯೇ? ಟೆಸ್ಲಾ ಬಹಳ ಅದ್ಭುತವಾಗಿದೆ ಮತ್ತು ಪ್ರಪಂಚದ ಪ್ರತಿಯೊಂದು ಮೂಲೆಯಲ್ಲಿಯೂ ಇರಲು ಅರ್ಹ!" ಎಂದು ಪೋಸ್ಟ್‌ ಮಾಡಿದ್ದರು

ಇದನ್ನೂ ಓದಿ: Tesla India Launch ಭಾರತದಲ್ಲಿ ವಿಶ್ವದ ಎಲ್ಲೂ ಇಲ್ಲದ ತೆರಿಗೆ, ಟೆಸ್ಲಾ ಕಾರು ಬಿಡುಗಡೆ ವಿಳಂಬಕ್ಕೆ ಕಾರಣ ಹೇಳಿದ ಮಸ್ಕ್!

ಇದಕ್ಕೆ ಉತ್ತರಿಸಿದ ಮಸ್ಕ್, "ಇನ್ನೂ ಸರ್ಕಾರದೊಂದಿಗೆ ಸಾಕಷ್ಟು ಸವಾಲುಗಳ ಮೂಲಕ ಕೆಲಸ ಮಾಡುತ್ತಿದ್ದೇನೆ" ಎಂದು ಹೇಳಿದ್ದರು.  ರಾಯಿಟರ್ಸ್‌ಗೆ ಹೇಳಿದಂತೆ ಕಂಪನಿಯು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ಮೊದಲು ಇವಿಗಳ (EV) ಮೇಲಿನ ಆಮದು ತೆರಿಗೆಯನ್ನು ಕಡಿತಗೊಳಿಸುವಂತೆ ಮಸ್ಕ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದರು. ವಾಸ್ತವವಾಗಿ, ಭಾರತವು ಆಮದು ಮಾಡಿದ ಕಾರುಗಳ ಮೇಲೆ 60 ಪ್ರತಿಶತದಿಂದ 100 ಪ್ರತಿಶತದವರೆಗೆ ಕಸ್ಟಮ್ಸ್ ಸುಂಕವನ್ನು ಹೊಂದಿದೆ.

 

 

ಭಾರತದಲ್ಲಿನ ತೆರಿಗೆಗಳು ವಿಶ್ವದಲ್ಲೇ ಅತ್ಯಧಿಕವಾಗಿದೆ ಮತ್ತು ಆದ್ದರಿಂದ ಭಾರತೀಯ ಇವಿ ಮಾರುಕಟ್ಟೆಗೆ ಪ್ರವೇಶಿಸುವ ಮೊದಲು ಅವುಗಳನ್ನು ಕಡಿತಗೊಳಿಸಬೇಕೆಂದು ಮಸ್ಕ್ ಹೇಳಿದರು. ಇದು ಬಹಳಷ್ಟು ಭಾರತೀಯ ಆಟೋಮೊಬೈಲ್ ತಯಾರಕರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೇ  ಇದು ಸ್ಥಳೀಯ ಉತ್ಪಾದನೆಯಲ್ಲಿ ಹೂಡಿಕೆಯನ್ನು ನಿರುತ್ಸಾಹಗೊಳಿಸಬಹುದು ಎಂದು ಅವರು ಹೇಳಿದ್ದರು

Follow Us:
Download App:
  • android
  • ios