ಕಾರು ಖರೀದಿಗೆ ಪ್ಲಾನ್ ಮಾಡಿದ್ದರೆ, ಯಾವ ಕಾರು ಎಂದು ಚರ್ಚಿಸುತ್ತಿದ್ದರೆ ನಿಮಗೊಂದು ಅವಕಾಶವಿದೆ. ಕೆಲವೇ ದಿನಗಳಲ್ಲಿ ಭಾರತದಲ್ಲಿ 10 ಹೊಸ ಕಾರು ಬಿಡುಗಡೆಯಾಗುತ್ತಿದೆ. ಈ ಕಾರುಗಳು ಬೆಲೆ, ವಿನ್ಯಾಸ, ಪರ್ಫಾಮೆನ್ಸ್ ಸೇರಿದಂತೆ ಎಲ್ಲದರಲ್ಲೂ ಆಪ್ತವಾಗಲಿದೆ.

ನವದೆಹಲಿ (ಆ.14) ಭಾರತದಲ್ಲಿ ಹೊಸ ಹೊಸ ಕಾರುಗಳು ಮಾರುಕಟ್ಟೆಗೆ ಎಂಟ್ರಿಕೊಡುತ್ತಿದೆ. ವಿಶೇಷ ಅಂದರೆ ಈ ತಿಂಗಳು (ಆಗಸ್ಟ್ ) ಬರೋಬ್ಬರಿ 10 ಕಾರುಗಳು ಬಿಡುಗಡೆಯಾಗುತ್ತಿದೆ. ಕಾರು ಕನಸು ನನಸು ಮಾಡಿಕೊಳ್ಳಲು ಈ ತಿಂಗಳು ಉತ್ತಮ ಅವಕಾಶವಿದೆ. ಲಾಂಚ್ ಆಗುವ ಕಾರುಗಳ ಪೈಕಿ ಹೈಬ್ರಿಡ್, ಪೆಟ್ರೋಲ್ ಹಾಗೂ ಡೀಸೆಲ್, ಎಲೆಕ್ಟ್ರಿಕ್ ಕಾರುಗಳು ಸೇರಿವೆ.

ಧೂಳೆಬ್ಬಿಸಲಿದೆ ಮಹೀಂದ್ರಾ

ಮಹೀಂದ್ರ ಸ್ಕಾರ್ಪಿಯೋ ಎನ್ ಪಿಕಪ್ ಬಿಡುಗಡೆಯಾಗುತ್ತಿದೆ. ಸ್ಕಾರ್ಪಿಯೋ-ಎನ್ ಆಧಾರಿತ ಡ್ಯುಯಲ್-ಕ್ಯಾಬ್ ಲೈಫ್‌ಸ್ಟೈಲ್ ಪಿಕಪ್ ಟ್ರಕ್ ಇದಾಗಿದೆ. ಪ್ರೀಮಿಯಂ ಕ್ಯಾಬಿನ್, ಲೆವೆಲ್-2 ADAS ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳಿವೆ. ಇನ್ನು ಮಹೀಂದ್ರ ಬಿಇ6 ಫಾರ್ಮುಲಾ ಇ ಎಡಿಶನ್ ಎಲೆಕ್ಟ್ರಿಕ್ ಕಾರು ಕೂಡ ಬಿಡುಗಡೆಯಾಗುತ್ತಿದೆ. ಸ್ಟೈಲಿಶ್ ಡಿಸೈನ್ ಸೇರಿದಂತೆ ಹಲವು ವಿಶೇಷತೆಗಳು ಇದರಲ್ಲಿದೆ.

ಮಾರುತಿ ಹಾಗೂ ಕಿಯಾ ಮೇಲೆ ಎಲ್ಲರ ಕಣ್ಣು

ಮಾರುತಿ ಸುಜಿಕಿ ಬಲೆನೋ ಫೇಸ್‌ಲಿಫ್ಟ್ ಕಾರು ಇದೇ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದ ಕಾರು ಹೆಚ್ಚಿನ ಮೈಲೇಜ್ ಹಾಗೂ ಪ್ರೀಮಿಯಂ ಸ್ಟೈಲ್‌ನೊಂದಿಗೆ ಬಿಡುಗಡೆಯಾಗುತ್ತಿದೆ.ಇತ್ತ ಕಿಯಾದಿಂದ ಸೊರೊಂಟೊ ಕಾರು ಬಿಡುಗಡೆ ಮಾಡುತ್ತಿದೆ. ಅಡಾಸ್ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.

ಟಾಟಾ ಟಿಗೋರ್ ಫೇಸ್‌ಲಿಫ್ಟ್ ಹಾಗೂ ವಿನ್‌ಫಾಸ್ಟ್

ಟಾಟಾ ಭಾರತದಲ್ಲಿ ಮಾರುಕಟ್ಟೆ ಆಕ್ರಮಿಸಿಕೊಳ್ಳುತ್ತಿದೆ. ಇದೀಗ ಟಿಗೋರ್ ಕಾರಿನ ಸುಧಾರಿತ ಹಾಗೂ ಹೆಚ್ಚುವರಿ ಫೀಚರ್ಸ್ ಇರೋ ಟಿಗೋರ್ ಫೇಸ್‌ಲಿಫ್ಟ್ ಬಿಡುಗಡೆ ಮಾಡುತ್ತಿದೆ. ಅತ್ಯಂತ ಆಕರ್ಷಕ ವಿನ್ಯಾಸದೊಂದಿದೆ ಹೊಸ ಟಿಗೋರ್ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗುತ್ತಿದೆ. ಇದೇ ವೇಳೆ ವಿಯೆಟ್ನಾಂನ ವಿನ್‌ಫಾಸ್ಟ್ ಈಗಾಗಲೇ ಕೆಲ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆ ಮಾಡಿದೆ. ಇಗದೀಗ ವಿನ್‌ಫಾಸ್ಟ್ ವಿಎಫ್‌5 ಕಾರು ಬಿಡುಗಡೆ ಮಾಡುತ್ತಿದೆ. ಇದು ಎಲೆಕ್ಟ್ರಿಕ್ ಎಸ್‌ಯುವಿ ಕಾರಾಗಿದೆ. ಟಾಟಾ ಪಂಚ್ ಇವಿ ಕಾರಿಗೆ ಪ್ರತಿಸ್ಪರ್ಧಿಯಾಗಿದೆ.

ಸ್ಕೋಡಾ ಹಾಗೂ BMW

ಸ್ಕೋಡಾ ಸ್ಲಾವಿಯಾ ಫೇಸ್‌ಲಿಫ್ಟ್ ಕಾರು ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಹೊಸ ವಿನ್ಯಾಸ, ಮತ್ತಷ್ಟೂ ಸ್ಮೂತ್ ಡ್ರೈವ್ ಫೀಲ್‌ನೊಂದಿಗೆ ಸ್ಕೋಡಾ ಫೇಸ್‌ಲಿಫ್ಟ್ ಕಾರು ಬರುತ್ತಿದೆ. ಇಂಟಿರಿಯರ್ ಸೇರಿದಂತೆ ಹಲವು ಬದಲಾವಣೆ ಈ ಕಾರಿನಲ್ಲಿದೆ. ಇನ್ನು BMW X1 LWB ಕಾರು ಬಿಡುಗಡೆಯಾಗುತ್ತಿದೆ. ಲಾಂಗ್ ವ್ಹೀಲ್‌ಬೇಸ್ ಮಾದರಿಯ ಈ ಕಾರು ಐಷಾರಾಮಿ ಪ್ರಯಾಣ ನೀಡಲಿದೆ. ಇದೇ ವೇಳೆ ಆಡಿ ಕ್ಯೂ3 ಕಾರು ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಎಸ್‌ಯುವಿ ಕಾರು ಇದಾಗಿದ್ದು, ಹೊಸ ತಂತ್ರಜ್ಞಾನ ಹೊಂದಿದೆ.