ಹ್ಯುಂಡೈನ ಕಾರುಗಳ ಪೈಕಿ ಅತೀ ಕಡಿಮೆ ಬೆಲೆಗೆ ಲಭ್ಯವಿರುವ ಎಸ್‌ಯುವಿ ಕಾರು ಎಕ್ಸ್‌ಟರ್ ಇದೀಗ ನೈಟ್ ಎಡಿಶನ್ ಮೂಲಕ ಬಿಡುಗಡೆಯಾಗಿದೆ. ಹೊಸ ಕಾರಿನ ಬೆಲೆ, ಫೀಚರ್ಸ್ ಸೇರಿದಂತೆ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.
ನವದೆಹಲಿ (ಆ.12) ಭಾರತದಲ್ಲಿ ಹ್ಯುಂಡೈ ಕಾರು ಅತೀ ದೊಡ್ಡ ಮಾರುಕಟ್ಟೆ ಹೊಂದಿದೆ. ಕ್ರೆಟಾ, ಐ20, ವೆನ್ಯೂ ಸೇರಿದಂತೆ ಹಲವು ಕಾರುಗಳ ಮೂಲಕ ತೀವ್ರ ಪೈಪೋಟಿ ನೀಡುತ್ತಿದೆ. ಹ್ಯುಂಡೈ ಕಾರುಗಳ ಪೈಕಿ ಅತೀ ಕಡಿಮೆ ಬೆಲೆಯ ಎಸ್‌ಯುವಿ ಕಾರಾಗಿರುವ ಎಕ್ಸ್‌ಟರ್ ಇದೀಗ ನೈಟ್ ಎಡಿಶನ್ ಕಾರು ಲಾಂಚ್ ಮಾಡಿದೆ. ಹ್ಯುಂಡೈ ಈಗಾಗಲೇ ಕ್ರೆಟಾ ಸೇರಿದಂತೆ ಕೆಲ ಕಾರುಗಳ ನೈಟ್ ಎಡಿಶನ್ ಕಾರು ಲಾಂಚ್ ಮಾಡಿದೆ. ಇದೀಗ ಎಕ್ಸ್‌ಟರ್ ನೈಟ್ ಎಡಿಶನ್ ಕಾರು ಬಿಡುಗಡೆ ಮಾಡಿದೆ.
ಎಕ್ಸ್‌ಟರ್ ನೈಟ್ ಎಡಿಶನ್ ಬೆಲೆ
ಸಬ್ 4 ಮೀಟರ್ ಸಣ್ಣ ಎಸ್‌ಯುವಿ ಎಕ್ಸ್‌ಟರ್ ನೈಟ್ ಎಡಿಶನ್ ಕಾರು 8.13 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಟಾಪ್ ಮಾಡೆಲ್ 9.60 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಸ್ಪೋರ್ಟೀವ್ ಲುಕ್ ಜೊತೆಗೆ ಬ್ಲಾಕ್‌ಔಟ್ ಥೀಮ್‌ನಲ್ಲಿರುವ ಹೊಸ ಕಾರು ಹಲವು ವಿಶೇಷತೆ ಹೊಂದಿದೆ.
ಕಾರಿನ ಆಕರ್ಷಕ ಲುಕ್
HX 6 ಹಾಗೂ HX 10 ಎರಡು ಟ್ರಿಮ್ ಮೂಲಕು ನಾಲ್ಕು ವೇರಿಯೆಂಟ್‌ಗಳಲ್ಲಿ ಹೊಸ ಬ್ಲಾಕ್ ಎಡಿಶನ್ ಕಾರು ಲಭ್ಯವಿದೆ. ಕಂಪ್ಲೀಟ್ ಡಾರ್ಕ್ ಥೀಮ್‌ನಲ್ಲಿರುವ ಕಾರಿನಲ್ಲಿ ಎಕ್ಸ್‌ಟರ್ ಮ್ಯಾಟ್ ಬ್ಲಾಕ್ ಫಿನಿಶಿಂಗ್ ಲೋಗೋ ನೀಡಲಾಗಿದೆ. ಫ್ರಂಟ್ ಹಾಗೂ ರೇರ್ ಬಂಬರ್ ಲುಕ್ ಮತ್ತಷ್ಟು ಆಕರ್ಷಕವಾಗಿದೆ. ಗಾರ್ನಿಷ್ ಹಾಗೂ ಸೈಡ್ ಸಿಲ್ ಭಾಗದಲ್ಲಿ ಡಾರ್ಕ್ ಗ್ರೇ ಗಿಲ್ ನೀಡಲಾಗಿದೆ. 15 ಇಂಚಿನ ಅಲಾಯ್ ಬ್ಲಾಕ್ ಅಲಾಯ್ ವ್ಹೀಲ್, ಜೊತೆಗೆ ಫ್ರಂಟ್ ರೇಡ್ ಬ್ರೇಕ್ ಕ್ಯಾಲಿಪರ್ ನೀಡಲಾಗಿದೆ. ಹೀಗಾಗಿ ಕಾರಿನ ಲುಕ್ ಮತ್ತಷ್ಟು ಹೆಚ್ಚಾಗಿದೆ. ಟೇಲ್‌ಗೇಟ್ ಮೇಲೆ ನೈಟ್ ಎಡಿಶನ್ ಬ್ಯಾಡ್ಜ್ ನೀಡಲಾಗಿದೆ. ಕಾರು 5 ಬಣ್ಣಗಳಲ್ಲಿ ಲಭ್ಯವಿದೆ.
ಆಲ್ ಬ್ಲಾಕ್ ಕ್ಯಾಬಿನ್ ಥೀಮ್‌ನಲ್ಲಿ ಹೊಸ ಕಾರು ಬಿಡುಗಡೆಯಾಗಿದೆ. ಬ್ಲಾಕ್ ಸೆಮಿ ಫ್ಯಾಬ್ರಿಕ್ ಸೀಟ್, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಮ್, ಸನ್ ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರಿಯರ್ ಎಸಿ ವೆಂಟ್ಸ್, ವೈಯರ್‌ಲೆಸ್ ಫೋನ್ ಚಾರ್ಜಿಂಗ್, ಕನೆಕ್ಟೆಡ್ ಕಾರು ಫೀಚರ್ ಸೇರಿದಂತೆ ಹಲವು ಸೌಲಭ್ಯಗಳಿದೆ.
1.2 ಲೀಟರ್ ಎಂಜಿನ್ ಹೊಂದಿದೆ. 83ಹೆಚ್‌ಪಿ ಪವರ್ ಹಾಗೂ 114 ಎನ್ಎಂ ಟಾರ್ಕ್ ನೀಡಲಿದೆ. 5 ಸ್ಪೀಡ್ ಟ್ರಾನ್ಸ್‌ಮಿಶನ್ ಹಾಗೂ 5 ಸ್ಪೀಡ್ ಎಂಎಂಟಿ ಆಟೋಮ್ಯಾಟಿಕ್ ಆಯ್ಕೆ ಲಭ್ಯವಿದೆ. ಸಿಎನ್‌ಜಿ ವೇರಿಯೆಂಟ್ ಕೂಡ ಲಭ್ಯವಿದೆ. ಬ್ಲಾಕ್ ಎಡಿಶನ್ ಕಾರು ಬಯಸುವ ಗ್ರಾಹಕರಿಗೆ ಇದು ಸೂಕ್ತ ಆಯ್ಕೆಯಾಗಿದೆ.


