ಇನ್ನು ಹೋಂಡಾ ಸಿವಿಕ್, ಸಿಆರ್- ವಿ ಕಾರಿನ ಉತ್ಪಾದನೆ ಇಲ್ಲ!
ಗ್ರೇಟರ್ ನೋಯ್ಡಾದಲ್ಲಿದ್ದ ತನ್ನ ಉತ್ಪಾದನಾ ಘಟಕವನ್ನು ರಾಜಸ್ಥಾನದ ತಪುಕಾರ್‌ಗೆ ಸ್ಥಳಾಂತರ ಮಾಡುತ್ತಿರುವ ಬೆನ್ನಲ್ಲೇ ಭಾರತದಲ್ಲಿ ಹೋಂಡಾ ಕಂಪನಿ, ಹೋಂಡಾ ಸಿವಿಕ್ ಮತ್ತು ಸಿಆರ್-ವಿ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಲಿದೆ. ಪ್ರೀಮಿಯಂ ಐಕಾನಿಕ್ ಕಾರುಗಳಾಗಿದ್ದ ಈ ಎರಡೂ ಮಾದರಿಗಳನ್ನು ಭಾರತೀಯ ಗ್ರಾಹಕರು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಲಿದ್ದಾರೆ.
ಹೌದು. ಇದು ನಿಜ. ಹೋಂಡಾ ಕಾರ್ಸ್ ಇಂಡಿಯಾ ಇನ್ನು ಮುಂದೆ ಭಾರತದಲ್ಲಿ ಸಿವಿಕೆ ಸೆಡಾನ್ ಮತ್ತು ಸಿಆರ್-ವಿ ಎಸ್‌ಯುವಿಯನ್ನು ಉತ್ಪಾದಿಸುವುದಿಲ್ಲ!
ಗ್ರೇಟರ್ ನೋಯ್ಡಾದಿಂದ ತನ್ನ ಉತ್ಪಾದನಾ ಘಟಕವನ್ನು ಹೋಂಡಾ ಕಂಪನಿ ರಾಜಸ್ಥಾನದ ತಪುಕಾರಾಗೆ ಸ್ಥಳಾಂತರ ಮಾಡುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ಈ ತೀರ್ಮಾನ ಪ್ರಕಟಿಸಿದೆ. ಭಾರತದ ರಸ್ತೆಗಳಲ್ಲಿ ಹೋಂಡಾ ಸಿವಿಕ್ ಸೆಡಾನ್ ಮತ್ತು ಸಿಆರ್-ವಿ ಮಜಬೂತ್ ಕಾರುಗಳು ಎನಿಸಿಕೊಂಡಿದ್ದವು. ಜೊತೆಗೆ ಪ್ರೀಮಿಯಂ ಕಾರುಗಳಾದ್ದರಿಂದ ಅವುಗಳನ್ನು ಖರೀದಿಸುವುದು ಪ್ರತಿಷ್ಠೆಯ ವಿಷಯವಾಗಿತ್ತು. ಆದರೆ, ಇದೀಗ ಕಂಪನಿ ಈ ಎರಡೂ ಐಕಾನಿಕ್ ಕಾರುಗಳ ಉತ್ಪಾದನೆಯನ್ನು ಭಾರತದಲ್ಲಿ ನಿಲ್ಲಿಸಲಿರುವುದರಿಂದ ಅವುಗಳನ್ನು ನೀವಿನ್ನು ರಸ್ತೆಗಳ ಮೇಲೆ ನೋಡಲಾರರಿ.
ವರ್ಷಾಂತ್ಯದ ಆಫರ್: ಕ್ವಿಡ್, ಟ್ರೈಬರ್, ಡಸ್ಟರ್ ಖರೀದಿಸಿದ್ರೆ 70,000 ರೂ.ವರೆಗೂ ಲಾಭ!
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಪನಿ ವಕ್ತಾರ, ಗ್ರೇಟರ್ ನೋಯ್ಡಾ ಘಟಕದಲ್ಲಿ ಉತ್ಪಾದನೆ ಸ್ಥಗಿತಗೊಂಡ ಕಾರಣ, ಸಿಆರ್-ವಿ ಮತ್ತು ಸಿವಿಕ್ ಉತ್ಪಾದನೆ ಇರುವುದಿಲ್ಲ. ಏಕೆಂದರೆ ಈ ಎರಡೂ ಮಾದರಿಗಳನ್ನು ತಪುಕಾರ್ ಘಟಕದಲ್ಲಿ ಉತ್ಪಾದಿಸಲಾಗುತ್ತಿಲ್ಲ. ಈ ಘಟಕವನ್ನು ಸಣ್ಣ ಮತ್ತು ಮಧ್ಯಮ ಗಾತ್ರವನ್ನು ಕಾರುಗಳನ್ನು ಉತ್ಪಾದಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಕುಸಿದಿದ್ದ ಮಾರಾಟ
ಹೋಂಡಾ ಕಾರುಗಳ ಪೈಕಿ ಹೋಂಡಾ ಸಿವಿಕ್ ಮತ್ತು ಸಿಆರ್-ವಿ ಕಾರುಗಳ ಮಾರಾಟದಲ್ಲಿ ಗಣನೀಯ ಕುಸಿತವಾಗಿತ್ತು. ಕಳೆದ ಆರು ತಿಂಗಳಲ್ಲಿ ಭಾರತದಲ್ಲಿ ಕಂಪನಿ ಕೇವಲ 850 ಸಿವಿಕ್ ಕಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗಿದ್ದರೆ, 100 ಸಿಆರ್ ವಿ ಕಾರುಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದೆ. ಅಂದರೆ, ಈ ಎರಡೂ ಮಾದರಿಯ ಕಾರುಗಳು ಮಾರಾಟವನ್ನು ಕಾಣುತ್ತಿರಲಿಲ್ಲ. ಇದಕ್ಕೆ ಬದಲಾಗಿ ಹೊಸದಾಗಿ ಬಿಡುಗಡೆಯಾದ ಹೋಂಡಾ ಸಿಟಿ ತಿಂಗಳಿಗೆ ಸರಾಸರಿ 4000 ಮಾರಾಟವಾದರೆ, ಡಬ್ಲ್ಯೂ ಆರ್ ವಿ ಸಾವಿರದಷ್ಟು ಕಾರುಗಳು ಮಾರಾಟ ಕಾಣುತ್ತಿವೆ. ಇದರ ಮಧ್ಯೆ ಹೋಂಡಾ ಅಮೇಜ್ ಕಾರು ಕಂಪನಿ ಅತಿ ಹೆಚ್ಚು ಮಾರಾಟವಾಗುವ ಕಾರ್ ಎಂದು ಗುರುತಿಸಿಕೊಂಡಿದ್ದು, ತಿಂಗಳಿಗೆ 5000 ಕಾರುಗಳು ಮಾರಾಟವಾಗುತ್ತಿವೆ. ಇನ್ನು ಜಾಜ್ ತಿಂಗಳಿಗೆ ಕನಿಷ್ಠ 7000 ಆದರೂ ಮಾರಾಟವಾಗುತ್ತಿವೆ.
ಮಾರುತಿಯಿಂದ ಮತ್ತೆ ಡೀಸೆಲ್ ಎಂಜಿನ್ ಕಾರು ಉತ್ಪಾದನೆ
ನೋಯ್ಡಾ ಘಟಕ ರಾಜಸ್ಥಾನಕ್ಕೆ ಸ್ಥಳಾಂತರ
ಪ್ರೀಮಿಯಂ ಹಾಗೂ ಮಧ್ಯಮ ಬಜೆಟ್ ಕಾರುಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹೋಂಡಾ ಕಂಪನಿ, ತನ್ನ ಗ್ರೇಟರ್ ನೋಯ್ಡಾ ಘಟಕವನ್ನು ಮುಚ್ಚುವ ನಿರ್ಧಾರವನ್ನು ಕೈಗೊಂಡಿದೆ. ಇಲ್ಲಿನ ಸಂಪೂರ್ಣ ಉತ್ಪಾದನಾ ಘಟಕವು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತುಪುಕಾರಾ ಘಟಕಕ್ಕೆ ವರ್ಗಾವಣೆಯಾಗಲಿದೆ. ಎಕನಾಮಿಕ್ಸ್ ಟೈಮ್ಸ್ ಆಟೋ ವರದಿಯ ಪ್ರಕಾರ, 2020ರ ಡಿಸೆಂಬರ್ ತಿಂಗಳ ಅವಧಿಯಲ್ಲಿ ನೋಯ್ಡಾ ಘಟಕದಲ್ಲಿ ಯಾವುದೇ ಉತ್ಪಾದನೆಯಾಗಿಲ್ಲ. ಕಳೆದ ತಿಂಗಳವರೆಗೂ ಈ ಘಟಕದಲ್ಲಿ ಹೋಂಡಾ ಸಿಟಿ ಸೆಡಾನ್, ಸಿಆರ್-ವಿ ಎಸ್‌ಯುವಿ, ಸಿವಿಕ್ ಸೆಡಾನ್‌ನಂಥ ಕಾರುಗಳನ್ನು ಉತ್ಪಾದಿಸಲಾಗುತ್ತಿತ್ತು. ಗ್ರೇಟರ್ ನೋಯ್ಡಾ ಘಟಕದಲ್ಲಿ ಸುಮಾರು ಎರಡು ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಆದರೆ, ಪರ್ಮನೆಂಟ್ ಉದ್ಯೋಗಿಗಳ ಸಂಖ್ಯೆ ಸಾವಿರದಷ್ಟಿತ್ತು. ಈ ಪೈಕಿ ಹೆಚ್ಚಿನವರು ವಿಆರ್‌ಎಸ್ ತೆಗೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಇದೇ ವೇಳೆ, ಕಂಪನಿಯ ಕಾರ್ಪೋರೇಟ್ ಕಚೇರಿ ಮತ್ತು ಆರ್ ಆಂಡ್ ಡಿ ಡಿಪಾರ್ಟ್‌ಮೆಂಟ್ ಗ್ರೇಟರ್ ನೋಯ್ಡಾದಿಂದಲೇ ಕಾರ್ಯನಿರ್ವಹಿಸಲಿದೆ.
1997ರಲ್ಲಿ ಸ್ಥಾಪನೆ
ಗ್ರೇಟರ್ ನೋಯ್ಡಾದಲ್ಲಿ ಘಟಕವನ್ನು ಹೋಂಡಾ ಕಂಪನಿ 1997ರಲ್ಲಿ ಆರಂಭಿಸಿತ್ತು. ಜಪಾನ್ ಮೂಲದ ಈ ಕಂಪನಿಯ ದೇಶದಲ್ಲಿನ ಮೊದಲ ಉತ್ಪಾದನಾ ಘಟಕವಿದು. ವರ್ಷಕ್ಕೆ ಮೊವತ್ತು ಸಾವಿರ ವಾಹನಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಬಳಿಕ ಈ ಸಾಮರ್ಥ್ಯವನ್ನು 50 ಸಾವಿರಕ್ಕೆ ಏರಿಸಲಾಯಿತು. 2008ರ ಬಳಿಕ ಉತ್ಪಾದನಾ ಸಾಮಾರ್ಥ್ಯವನ್ನು ಒಂದು ಲಕ್ಷದವರೆಗೂ ಹೆಚ್ಚಿಸಲಾಯಿತು. ರಾಜಸ್ಥಾನದ ತಪುಕಾರ ಘಟಕದಲ್ಲಿ ವರ್ಷಕ್ಕೆ 1.80 ಲಕ್ಷ ಯುನಿಟ್ಸ್ ಉತ್ಪಾದನೆ ಮಾಡಲಾಗುತ್ತದೆ. ಈ ವರ್ಷ ಹೋಂಡಾ ಉತ್ಪಾದಿಸಿದ ತಿಂಗಳಿಗೆ 10 ಸಾವಿರ ಕಾರುಗಳ ಪೈಕಿ ಅರ್ಧದಷ್ಟು ಕಾರುಗಳು ಈ ಗ್ರೇಟರ್ ನೋಯ್ಡಾ ಘಟಕದಲ್ಲಿ ತಯಾರಾಗುತ್ತಿದ್ದವು. ಕಂಪನಿಯ ಅಮೇಜ್ ಮತ್ತು ಸಿಟಿ ಸೆಡಾನ್ ಕಾರುಗಳು ಸಿಕ್ಕಾಪಟ್ಟೆ ಮಾರಾಟವಾಗುತ್ತಿವೆ. ತಿಂಗಳಿಗೆ ನಾಲ್ಕು ಸಾವಿರದಿಂದ 5000ವರೆಗೂ ಮಾರಾಟವಾಗುತ್ತವೆ.
ಜನವರಿಯಲ್ಲಿ ಟಾಟಾ ಅಲ್ಟ್ರೋಜ್ ಟರ್ಬೋ-ಪೆಟ್ರೋಲ್ ಕಾರು ಬಿಡುಗಡೆ