ಟಾಟಾ ಮೋಟಾರ್ಸ್‌ನ ಪ್ರಮುಖ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅಲ್ಟ್ರೋಜ್ ಕಾರು ಸುರಕ್ಷತೆಯಲ್ಲಿ ಫೈವ್ ಸ್ಟಾರ್ ಪಡೆದುಕೊಂಡು ಗ್ರಾಹಕರ ಮನಸ್ಸು ಗೆದ್ದಿದೆ. ಭಾರತದ ಕಂಪನಿಯಾಗಿರುವ ಟಾಟಾ ಮೋಟಾರ್ಸ್, ತನ್ನೆಲ್ಲ ಪ್ರಯಾಣಿಕ ಕಾರುಗಳಿಗೆ ಸುರಕ್ಷತೆಯ ಆದ್ಯತೆಯನ್ನಾಗಿ ಪರಿಗಣಿಸುತ್ತದೆ. ಹಾಗಾಗಿ, ಸುರಕ್ಷತೆಯ ದೃಷ್ಟಿಯಿಂದ ಟಾಟಾ ಪ್ರಯಾಣಿಕರು ಕಾರುಗಳು ಹೆಚ್ಚು ಗಮನ ಸೆಳೆಯುತ್ತವೆ ಎಂಬುದು ಬಳಕೆದಾರರ ವಿಶ್ಲೇಷಣೆ, ಇದೀಗ ಟಾಟಾ ಅಲ್ಟ್ರೋಜ್ ಮತ್ತೊಂದು ಹಂತಕ್ಕೆ ಹೋಗಿದ್ದು, ಮುಂದಿನ ವರ್ಷದಲ್ಲಿ ಟಾಟಾ ಅಲ್ಟ್ರೋಜ್ ಟರ್ಬೋ-ಪೆಟ್ರೋಲ್ ವರ್ಷನ್ ಬಿಡುಗಡೆಯಾಗಲಿದೆ.

ಮಾರುತಿಯಿಂದ ಮತ್ತೆ ಡೀಸೆಲ್ ಎಂಜಿನ್ ಕಾರು ಉತ್ಪಾದನೆ

ಟಾಟಾ ಅಲ್ಟ್ರೋಜ್ ಟರ್ಬೊ ಪೆಟ್ರೋಲ್ ಕಾರು ಪರೀಕ್ಷಾರ್ಥವಾಗಿ ರಸ್ತೆಗಳಲ್ಲಿ ಸಂಚರಿಸಿದ್ದನ್ನು ನೀವು ಕಂಡಿರಬಹುದು. ಇದೀಗ, ಅಲ್ಟ್ರೋಜ್ ಟರ್ಬೊ ಪೆಟ್ರೋಲ್ ಕಾರು ಬಿಡುಗಡೆಗೆ ಸಿದ್ಧವಾಗಿದ್ದು, ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ. ಮುಂದಿನ ವರ್ಷ ಅಂದರೆ 2021ರ ಜನವರಿ 13ರಂದು ಅಲ್ಟ್ರೋಜ್ ಇವೆಂಟ್ ನಡೆಯಲಿದ್ದು, ಇದೇ ವೇಳೆ ಅಲ್ಟ್ರೋಜ್ ಟರ್ಬೊ ಕಾರು ಕೂಡ ಅನಾವರಣಗೊಳ್ಳಿದೆ. ಆದರೆ, ಈ ಕಾರು ಲಿಮಿಟೆಡ್ ಎಡಿಷನ್ ಕಾರು ಆಗಿರಲಿದೆಯೇ ಎಂಬುದರ ಬಗ್ಗೆ ಕಂಪನಿ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಈ ವರ್ಷದ ಆರಂಭ ಅಂದರೆ 2020ರ ಆದಿಯಲ್ಲಿ ಟಾಟಾ ಅಲ್ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಸದ್ಯ ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡು ವರ್ಷನ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಈ ಎರಡೂ ಮಾದರಿಯ ಕಾರುಗಳಲ್ಲಿ ಐದು ಸ್ಪೀಡ್ ಮ್ಯಾನುಯೆಲ್ ಟ್ರಾನ್ಸಿಮಿಷನ್ ಗೇರ್‌ಬಾಕ್ಸ್ ಏಕಮಾತ್ರ ಆಯ್ಕೆಯಾಗಿದೆ. ಇದೇ ವೇಳೆ, ಕಂಪನಿ ಆಪ್ಷನಲ್ ಡ್ಯುಯಲ್ ಕ್ಲಚ್ ಟ್ರಾನ್ಸಿಮಿಷನ್ ಅನ್ನು ಕೂಡಾ ಪರಿಚಯಿಸುವು ಸಾಧ್ಯತೆ ಎಂದು ತಿಳಿದು ಬಂದಿದೆ. 

ಗ್ರೇಟರ್ ನೋಯ್ಡಾದಲ್ಲಿ ಕಾರು ಉತ್ಪಾದನೆ ನಿಲ್ಲಿಸಲಿದೆಯಾ ಹೋಂಡಾ?

ಈ ಹೊಸ ಕಾರು 1.2 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ‌ 110 ಪಿಎಸ್ ಶಕ್ತಿಯನ್ನು ಉತ್ಪಾದಿಸಬಹುದು ಎಂದು ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ, ಈ ಎಂಜಿನ್‌ನಲ್ಲಿ 5 ಸ್ಪೀಡ್ ಮ್ಯಾನುಯೆಲ್ ಟ್ರಾನ್ಸಿಮಿಷನ್‌ನೊಂದಿಗೆ ಅಥವಾ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸಿಮಿಷನ್‌ನೊಂದಿಗೆ ಈ ಕಾರು ಬರಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಇನ್ನು ಕಾರಿನ ಹೊರಾಂಗಣ ಬಗ್ಗೆ ಹೇಳುವುದಾದರೆ, ಅಲ್ಟ್ರೋಜ್ ಟರ್ಬೋ ಕಾರು, ಈ ಹಿಂದಿನ ಕಾರುಗಳಿಗಿಂತ ತುಂಭ ಭಿನ್ನವಾದ ವಿನ್ಯಾಸವನ್ನು ಏನೂ ಹೊಂದಿಲ್ಲ ಎಂದು ಹೇಳಬಹುದು. ಆದರೆ, ಇತ್ತೀಚೆಗೆ ಬಿಡುಗಡೆಯಾದ ಚಿತ್ರಗಳ ಪ್ರಕಾರ, ಟೇಲ್‌ಗೇಟ್ ಕೆಳಭಾಗದಲ್ಲಿ ಟರ್ಬೋ ಬ್ಯಾಡ್ಜ್ ಇರಲಿದೆ ಎಂದು ಹೇಳಲಾಗುತ್ತಿದೆ. ನೆಕ್ಸಾನ್ ಸಬ್-4ಎಂ ಎಸ್‌ಯುವಿಗೆ ಬಳಸಲಾಗಿದ್ದ ಟೆಕ್ಟಾನಿಕ್ ಬ್ಲೂ ಕಲರ್‌ನಲ್ಲೂ ಈ ಪೆಟ್ರೋಲ್ ಟರ್ಬೋ ಅಲ್ಟ್ರೋಜ್ ಕಾರು ದೊರೆಯಬಹುದು. ಸದ್ಯಕ್ಕೆ ಸಾಮಾನ್ಯ ಅಲ್ಟ್ರೋಜ್ ಕಾರಿನಲ್ಲಿರುವ ಫೀಚರ್‌ಗಳಿಗಿಂತ ಹೆಚ್ಚಿನ ವೈಶಿಷ್ಟ್ಯಗಳೇನೂ ಇರಲಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.


ಹುಂಡೈ ಐ20 ಟರ್ಬೋ ಕಾರಿಗೆ  ಪ್ರತಿ ಸ್ಪರ್ಧಿಯಾಗಿ ಟಾಟಾ ಮೋಟಾರ್ಸ್ ಅಲ್ಟ್ರೋಜ್  ಪೆಟ್ರೋಲ್ ಟರ್ಬೋ ಎಂಜಿನ್ ಕಾರು ಬಿಡುಗಡೆ ಮಾಡುತ್ತಿದೆ ಎನ್ನಲಾಗುತ್ತಿದೆ.

ಅಲ್ಟ್ರೋಜ್ ಕಾರಿನ ವೈಶಿಷ್ಟ್ಯಗಳು
ಟಾಟಾ ಕಂಪನಿ ಅಲ್ಟ್ರೋಜ್ ಭಾರತದ ಅತ್ಯಂತ ಸುರಕ್ಷತೆಯ ಕಾರು ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ಅಲ್ಟ್ರೋಜ್ 3990 mm ಉದ್ದ, 1755 mm ಅಗಲ, 1523 mm ಎತ್ತರ ಹಾಗೂ 2501 mm ವೀಲ್ಹ್ ಬೇಸ್ ಹೊಂದಿದೆ. ಟಾಟಾ ಅಲ್ಟ್ರೋಜ್ XE, XM, XT, XZ ಹಾಗೂ XZ(O) ಐದು ವೇರಿಯೆಂಟ್‌ಗಳಲ್ಲಿ ಲಭ್ಯ. ಬೇಸ್ ಮಾಡಲೆ ಕಾರಿನಲ್ಲಿ 2 ಏರ್‌ಬ್ಯಾಗ್, ABS ಹಾಗೂ EBD, ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ಅಲರಾಂಗಳಂಥ ಸುರಕ್ಷಿತ ವೈಶಿಷ್ಟ್ಯಗಳನ್ನು ಕಾಣಬಹುದು. ಪೆಟ್ರೋಲ್ ಕಾರು 1.2-ಲೀಟರ್, 1199 cc ಎಂಜಿನ್ ಹೊಂದಿದ್ದು, 85 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಸಾಮರ್ಥ್ಯ. ಡೀಸೆಲ್ ಕಾರು 1.5-ಲೀಟರ್ ಟರ್ಬೋಚಾರ್ಜ್ಡ್, 1497 cc,4 ಸಿಲಿಂಡರ್ ಎಂಜಿನ್ ಹೊಂದಿದ್ದು, 89 bhp ಪವರ್ 200 Nm ಪೀಕ್ ಟಾರ್ಕ್ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. 

ವರ್ಷಾಂತ್ಯದ ಆಫರ್‌: ಕ್ವಿಡ್, ಟ್ರೈಬರ್, ಡಸ್ಟರ್ ಖರೀದಿಸಿದ್ರೆ 70,000 ರೂ.ವರೆಗೂ ಲಾಭ!