ಫಿಗೋ ಆಟೋಮ್ಯಾಟಿಕ್ ವೇರಿಯೆಂಟ್ ಕಾರು ಪರಿಚಯಿಸಿದ ಫೋರ್ಡ್!

  • ಟೈಟಾನಿಯಂ+ ಟ್ರಿಮ್ಸ್‍ ವೇರಿಯೆಂಟ್‌ನಲ್ಲಿ ಫಿಗೋ ಕಾರು ಲಭ್ಯ
  • ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ 1.2 ಲೀಟರ್ ಎಂಜಿನ್
  • ಫೋರ್ಡ್ ಫಿಗೋ ಬೆಲೆ 7.75 ಲಕ್ಷ ರೂಪಾಯಿಯಿಂದ ಆರಂಭ
Ford Launch Automatic variant figo car in India ckm

ಬೆಂಗಳೂರು(ಜು.22):  ಗ್ರಾಹಕರಿಗೆ ತನ್ನ ಬದ್ಧತೆಯನ್ನು ಮರು ದೃಢೀಕರಿಸುವ ನಿಟ್ಟಿನಲ್ಲಿ ಫೋರ್ಡ್ ಇಂಡಿಯಾ  ಹ್ಯಾಚ್‍ಬ್ಯಾಕ್ ಫಿಗೊ ಆಟೊಮ್ಯಾಟಿಕ್ ವೇರಿಯೆಂಟ್‍ಗಳನ್ನು ಪರಿಚಯಿಸಿದೆ.  ಟೈಟಾನಿಯಂ ಮತ್ತು ಟೈಟಾನಿಯಂ+ ಟ್ರಿಮ್ಸ್‍ನಲ್ಲಿ ಪ್ರಾರಂಭಿಕ ಬೆಲೆ ಕ್ರಮವಾಗಿ 7.75 ಲಕ್ಷ ರೂಪಾಯಿ  ಹಾಗೂ 8.20ಲಕ್ಷ ರೂಪಾಯಿ(ಎಕ್ಸ್ ಶೋಂ ರೂಂ) ಹೊಂದಿದೆ. AT ಅತ್ಯುತ್ತಮ ಸಿಕ್ಸ್-ಸ್ಪೀಡ್, ಟಾರ್ಕ್ ಕನ್ವರ್ಟರ್ ಆಟೊಮ್ಯಾಟಿಕ್ ಟ್ರಾನ್ಸ್‌ಮಿಶನ್ ಭಾರತ್ ಸ್ಟೇಜ್ 6 ಥ್ರೀ-ಸಿಲಿಂಡರ್ 1.2ಲೀ ಪೆಟ್ರೋಲ್ ಎಂಜಿನ್ ಹೊಂದಿದೆ. 

ಫೋರ್ಡ್ ಫಿಗೋ ಫೇಸ್‌ಲಿಫ್ಟ್ ಬಿಡುಗಡೆ - ಕಡಿಮೆ ಬೆಲೆ, ಗರಿಷ್ಠ ಮೈಲೇಜ್!

ಹೊಸ ವೇರಿಯೆಂಟ್‍ಗಳು ಕಾಂಪ್ಯಾಕ್ಟ್ ಕಾರು ವರ್ಗದಲ್ಲಿ ಕಾರ್ಯಕ್ಷಮತೆಯಲ್ಲೂ ಸೈ ಎನಿಸಿಕೊಂಡಿದೆ. 96PS ಶಕ್ತಿ ಮತ್ತು 119Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 

ಫೋರ್ಡ್ ಫಿಗೊ AT ಕಾರ್ಯಕ್ಷಮತೆ, ಪರಿಷ್ಕರಣೆ ಮತು ಚಾಲನೀಯತೆಯ ಪರಿಪೂರ್ಣ ಸಂಯೋಜನೆಯಾಗಿದ್ದು ಹೊಸ ಸ್ಪೋರ್ಟ್ ಮೋಡ್ ಮತ್ತು ಸೆಲೆಕ್ಟ್ ಶಿಫ್ಟ್ ವಿಶೇಷತೆಗಳು ಸಿಕ್ಸ್-ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್‍ಮಿಷನ್‍ನಲ್ಲಿವೆ. ಸ್ಪೋರ್ಟ್ ಮೋಡ್‍ನಲ್ಲಿ ಟ್ರಾನ್ಸ್‍ಮಿಷನ್ ಗರಿಷ್ಠ ಗೇರ್ ಅನ್ನು ಆಯ್ಕೆ ಮಾಡಿಕೊಳ್ಳುತ್ತದೆ ಬದಲಾವಣೆಗಳು ಹೆಚ್ಚು ಪ್ರತಿಕ್ರಿಯಾತ್ಮಕ ಚಾಲನೆಗೆ ವೇಗವಾಗಿ ಆಗುತ್ತವೆ. ಸೆಲೆಕ್ಟ್‍ಶಿಫ್ಟ್ ವಿಶೇಷತೆಯು ಚಾಲಕನಿಗೆ ಗೇರ್‍ಶಿಫ್ಟ್ ಲಿವರ್ ಮೇಲಿರುವ ಟಾಗ್ಲ್ ಸ್ವಿಚ್ ಬಳಸಿ ಹಸ್ತಚಾಲಿತವಾಗಿ ಗೇರ್‍ಗಳನ್ನು ಬದಲಿಸಲು ಸನ್ನದ್ಧವಾಗಿಸುತ್ತದೆ. 

ಲಾಕ್‌ಡೌನ್ ಕಾರಣ ಕಾರು ತೆಗೆಯುವಂತಿಲ್ಲ; ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನ ನಿರ್ವಹಣೆಗೆ 7 ಟಿಪ್ಸ್!

ನೂತನ ಕಾರು 5 ಬಣ್ಣಗಳಲ್ಲಿ ಲಭ್ಯವಿದೆ.  ಹೊಸ ಫೋರ್ಡ್ ಫಿಗೊ ಆಟೊಮ್ಯಾಟಿಕ್ ಹ್ಯಾಚ್‍ಬ್ಯಾಕ್‍ನಲ್ಲಿ ಮಾತ್ರ ಲಭ್ಯವಿದ್ದು ಜಾಗತಿಕವಾಗಿ ಖ್ಯಾತಿ ಪಡೆದ ಮೊಬಿಲಿಟಿ ಮತ್ತು ಕನೆಕ್ಟಿವಿಟಿ ಪರಿಹಾರ ಫೋರ್ಡ್‍ಪಾಸ್ ಅನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀಡುತ್ತದೆ. ಫೋರ್ಡ್ ಫಿಗೊ ಎಟಿ ಮಾಲೀಕರು ಸ್ಟಾರ್ಟಿಂಗ್, ಸ್ಟಾಪಿಂಗ್, ಲಾಕಿಂಗ್ ಅಥವಾ ವಾಹನವನ್ನು ದೂರದಿಂದ ಅನ್‍ಲಾಕಿಂಗ್ ಮಾಡುವುದು ಒಳಗೊಂಡು ಹಲವಾರು ವಾಹನ ಕಾರ್ಯಾಚರಣೆಗಳನ್ನು ಫೋರ್ಡ್‍ಪಾಸ್ ಆ್ಯಪ್ ಮೂಲಕ ನೀಡುತ್ತದೆ. 

ಫೋರ್ಡ್ ಫಿಗೊ 3 ವರ್ಷ ಅಥವಾ 100,000 ಕಿ.ಮೀ. ಸ್ಟಾಂಡರ್ಡ್ ವಾರೆಂಟಿ, 10,000 ಕಿ.ಮೀ. ದೀರ್ಘಾವಧಿ ಸೇವಾ ಮಧ್ಯಂತರಗಳ ಮೂಲಕ ಮಾಲೀಕತ್ವದ ಮೌಲ್ಯದಲ್ಲಿ ಮೈಲಿಗಲ್ಲು ಹೊಂದಿದ್ದು ಸ್ಪರ್ಧಿಗಳ ಮಾಡೆಲ್‍ಗಳು 5,000 ಕಿ.ಮೀ. ನೀಡುತ್ತಿವೆ. ಫೋರ್ಡ್ ಫಿಗೊ ಮಾಲೀಕರು ಮೊದಲ ವರ್ಷ ನಿಗದಿತ ಸರ್ವೀಸ್‍ಗೆ ರೂ.1,313ರಷ್ಟು ಕಡಿಮೆ ವೆಚ್ಚ ಮಾಡುತ್ತಿದೆ ಅಥವಾ 10-ವರ್ಷ ಸೇವೆಯನ್ನು ಆಶ್ಚರ್ಯಕರವಾದ ಕೈಗೆಟುಕುವ ಬೆಲೆ ಕೇವಲ ರೂ.4,907ರಲ್ಲಿ ನೀಡುತ್ತಿದೆ. 

ಪ್ರಸ್ತುತ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಗ್ರಾಹಕರ ಆರೋಗ್ಯ ಮತ್ತು ಅನುಕೂಲಕ್ಕೆ ಆದ್ಯತೆ ನೀಡುವ ಕಂಪನಿಯು ಹೊಸ ಫಿಗೊ ಎಟಿಯನ್ನು ವಿಶೇಷವಾದ ಆನ್‍ಲೈನ್ ಮೂಲಕ ಬುಕಿಂಗ್ ಅವಕಾಶವಿದೆ.  

Latest Videos
Follow Us:
Download App:
  • android
  • ios