ನವದೆಹಲಿ(ಮಾ.15): ಮಾರುತಿ ಸಿಫ್ಟ್, ವೋಕ್ಸ್‌ವ್ಯಾಗನ್ ಪೋಲೋ, ಹ್ಯುಂಡೈ ಐ10 ಸೇರಿದಂತೆ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡುತ್ತಿರುವ ಫೋರ್ಡ್ ಫಿಗೋ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ.  ಕೆಲ ಬದಲಾವಣೆ ಹಾಗೂ ಹೆಚ್ಚುವರಿ ಫೀಚರ್ಸ್‌ನೊಂದಿಗೆ ಫೋರ್ಡ್ ಫಿಗೋ ಫೇಸ್‌ಲಿಫ್ಟ್ ರಸ್ತೆಗಿಳಿದಿದೆ.

ಇದನ್ನೂ ಓದಿ: ಮರ್ಸಡೀಸ್ ಬೆಂಝ್ GLS SUV ಕಾರು ಖರೀದಿಸಿದ ಬಾಲಿವುಡ್ ನಟ!

ನೂತನ ಫೋರ್ಡ್ ಫೇಸ್‌ಲಿಫ್ಟ್ ಬೇಸ್ ಆ್ಯಂಬಿಯೆಂಟ್ ಬೆಲೆ 5.15 ಲಕ್ಷ ರೂಪಾಯಿ. ಇನ್ನು ಟಾಪ್ ವೇರಿಯೆಂಟ್ ಟೈಟಾನಿಯಂ 1.5 ಪೆಟ್ರೋಲ್ ಕಾರಿಗೆ 8.46 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆಕರ್ಷಕ ವಿನ್ಯಾಸ ಹಾಗೂ ಮುಂಭಾಗದ ಗ್ರಿಲ್‌ನಲ್ಲಿ ಬದಲಾವಣೆ ಮಾಡಿರುವ ಫೋರ್ಡ್ ಗ್ರಾಹಕರನ್ನ ಮೋಡಿ ಮಾಡೋ ವಿಶ್ವಾಸದಲ್ಲಿದೆ.

ಇದನ್ನೂ ಓದಿ: 2 ತಿಂಗಳಲ್ಲಿ 13 ಸಾವಿರ ಮಹೀಂದ್ರ XUV300 ಕಾರು ಬುಕ್- ಬ್ರಿಜಾಗೆ ಪೈಪೋಟಿ!

ಫೋರ್ಡ್ ಫಿಗೋ 1.2 ಲೀಟರ್,3 ಸಿಲಿಂಡರ್ ಪೆಟ್ರೋಲ್ ಎಂಜಿನ್,  96 PS ಪವರ್ ಹಾಗೂ 120 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಎಂಜಿನ್  5 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸಿಮಿಶನ್ ಹೊಂದಿದೆ. ಡೀಸೆಲ್ ವೇರಿಯೆಂಟ್ ಕಾರು 1.5 ಲೀಟರ್, ಟರ್ಬೋಚಾರ್ಜ್ ಎಂಜಿನ್, 100 PS ಪವರ್ ಹಾಗೂ 215 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇನ್ನು  1.5 ಲೀಟರ್ ಪೆಟ್ರೋಲ್ ಎಂಜಿನ್  123PS ಪವರ್ ಉತ್ಪಾದಿಸಲಿದೆ.