Asianet Suvarna News

ಥಾರ್‌ಗೆ ಠಕ್ಕರ್ ನೀಡಲು ಬರ್ತಿದೆ ಫೋರ್ಸ್ ಮೋಟರ್ಸ್‌ನ ಗೂರ್ಖಾ

ಆಫ್‌ರೋಡ್ ಎಸ್‌ಯುವಿಗಳ ಪೈಕಿ ಭಾರತದಲ್ಲಿ ಹೆಚ್ಚು ಜನಪ್ರಿಯ ಎಸ್‌ಯುವಿ ಎಂದರೆ ಅದು ಮಹಿಂದ್ರಾ ಕಂಪನಿಯ, ಮಹಿಂದ್ರಾ ಥಾರ್ ಮಾತ್ರ. ಆದರೆ, ಇದೀಗ ಈ ಥಾರ್‌ಗೆ ಠಕ್ಕರ್ ನೀಡಲು ಫೋರ್ಸ್ ಮೋಟರ್ಸ್, ಹೊಸ ತಲೆಮಾರಿನ ಆಫ್‌ರೋಡ್ ಎಸ್‌ಯುವಿ ಗೂರ್ಖಾ ಶೀಘ್ರವೇ ಲಾಂಚ್ ಮಾಡುವ ಸಾಧ್ಯತೆಯ ಬಗ್ಗೆ ಸುಳಿವು ಬಿಟ್ಟುಕೊಟ್ಟಿದೆ. 

Force Motors may launch its new Gurkha SUV in this festive season
Author
Bengaluru, First Published Jun 21, 2021, 11:07 AM IST
  • Facebook
  • Twitter
  • Whatsapp

ಟ್ರಾಕ್ಟರ್, ಸ್ಕೂಲ್‌ ವಾಹನ-ಬಸ್ ಹಾಗೂ ಟೆಂಪೊ ಟ್ರಾವೆಲರ್‌ಗಳ ಉತ್ಪಾದನೆಯಲ್ಲಿ ಪ್ರಸಿದ್ಧಿಯಾಗಿರುವ ಫೋರ್ಸ್ ಮೋಟರ್ಸ್ ಕಂಪನಿ, ತನ್ನ ಹೊಸ ತಲೆಮಾರಿನ ಆಫ್‌ರೋಡ್ ಎಸ್‌ಯುವಿ ಗೂರ್ಖಾ ಶೀಘ್ರವೇ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮಹಿಂದ್ರಾ ಥಾರ್ ಎಸ್‌ಯುವಿಗೆ ಇದು ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ.

ಬಹುಶಃ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಫೋರ್ಸ್ ಗೂರ್ಖಾ ರಸ್ತೆಗಿಳಿಯುವ ಸಾಧ್ಯತೆ ಇದೆ. ಮೂರನೇ ತ್ರೈಮಾಸಿಕ ಎಂದರೆ, ಜುಲೈನಿಂದ ಸೆಪ್ಟೆಂಬರ್‌ ತಿಂಗಳೊಳಗೆ ಈ ಗೂರ್ಖಾ ಎಸ್‌ಯುವಿ ಲಾಂಚ್ ಆಗಬಹುದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಹಬ್ಬದ ಸೀಸನ್‌ಗಳ ಹೊತ್ತಿಗೆ ಈ ಎಸ್‌ಯುವಿ ಬಿಡುಗಡೆಯನ್ನು ಕಂಪನಿ ಪ್ಲ್ಯಾನ್‌ ಮಾಡಿಕೊಂಡಿರುವಂತಿದೆ. ಅಲ್ಲಿಗೆ ಆಫ್‌ರೋಡ್‌ನಲ್ಲಿ ಮಹಿಂದ್ರಾ ಥಾರ್‌ಗೆ ಸರಿಯಾದ ಪೈಪೋಟಿ ನೀಡಬಲ್ಲ, ಪ್ರತಿಸ್ಪರ್ಧಿಯೊಬ್ಬನ ಆಗಮನ ಪಕ್ಕಾ ಆದಂತಿದೆ. ಮಹಿಂದ್ರಾ ಭಾರತದ ಮಾರುಕಟ್ಟೆಗೆ ಬಿಡುಗಡೆಯಾದಾಗಿನಿಂದ ಆ ಸೆಗ್ಮೆಂಟ್‌ನಲ್ಲಿ ಪೈಪೋಟಿ ನೀಡಬಲ್ಲ ಯಾವುದೇ ಎಸ್‌ಯುವಿಗಳು ಬಿಡುಗಡೆಯಾಗಿರಲಿಲ್ಲ.

ರೆನೋ ಕ್ವಿಡ್, ಡಸ್ಟರ್, ಕಿಗರ್, ಟ್ರೈಬರ್ ಕಾರು ಖರೀದಿ ಮೇಲೆ ಭರ್ಜರಿ ಜೂನ್ ಆಫರ್ಸ್!

2020ರಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಫೋರ್ಸ್ ಮೋಟರ್ಸ್ ಕಂಪನಿಯು ಹೊಸ ತಲೆಮಾರಿನ ಗೂರ್ಖಾ ಎಸ್‌ಯುವಿಯನ್ನು ಪ್ರದರ್ಶನ ಮಾಡಿತ್ತು. ಈ ಎಸ್‌ಯುವಿ ಬಿಎಸ್-6 ನಿಮಯಗಳನ್ನು ಪಾಲನೆ ಮಾಡಿದ್ದು,  2.6 ಲೀಟರ್ ಡಿಸೇಲ್ ಎಂಜಿನ್‌ನೊಂದಿಗೆ ಬರುತ್ತದೆ. 5 ಸ್ಪೀಡ್ ಗಿಯರ್ ಬಾಕ್ಸ್ ಇದ್ದು ಗರಿಷ್ಠ 89 ಬಿಎಚ್‌ಪಿ ಪವರ್ ಉತ್ಪಾದಿಸಬಲ್ಲದು. 

ಇಷ್ಟು ಮಾತ್ರವಲ್ಲದೇ, ಸಾಹಸ ಉತ್ಸಾಹಿಗಳನ್ನು ರೋಮಾಂಚನಗೊಳಿಸಲು ಇದು ಆಲ್-ವೀಲ್-ಡ್ರೈವ್ ವ್ಯವಸ್ಥೆಯನ್ನು ಪಡೆಯಲಿದೆ. ಎಸ್‌ಯುವಿ ಮುಖ್ಯ ಹೈಲೈಟ್‌ಗಳ ಪೈಕಿ ಗಮನ ಸೆಳೆಯುವ ಸಂಗತಿ ಎಂದರೆ ಅದರ ಮುಂಭಾಗದ ಸ್ವತಂತ್ರ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿರುವ ಗಟ್ಟಿಮುಟ್ಟಾದ ಆಕ್ಸಲ್ ಎಂದು ಹೇಳಬಹುದು. ಈ ಎರಡು ಕಾರಣಗಳಿಂದಾಗಿ ಆಫ್‌ರೋಡ್ ಎಸ್‌ಯುವಿಗಳ ಪೈಕಿ ಇದು ಹೆಚ್ಚು ಗಮನ ಸೆಳೆಯುತ್ತದೆ. 

 

 

ಈ ಫೋರ್ಸ್ ಮೋಟರ್ಸ್ ಕಂಪನಿಯ ಆಫ್‌ರೋಡ್ ಎಸ್‌ಯುವಿ ಗೂರ್ಖಾ ಹೊರ ಮೈ ಲುಕ್ ಕೂಡ ರಗಡ್ ಆಗಿದೆ. ಇತ್ತೀಚೆಗೆ ಮಹಿಂದ್ರಾ ಬಿಡುಗಡೆ ಮಾಡಿರುವ ಥಾರ್ ಎಸ್‌ಯುವಿ ಪರಿಷ್ಕರಿಸಿದಂತೆ, ಫೋರ್ಸ್ ಮೋಟರ್ಸ್ ಕೂಡ ಈ ಎಸ್‌ಯುವಿಯನ್ನು ಪರಿಷ್ಕರಿಸಿ, ಅದರ ಹೊರ ಮೈಲೆ ಲುಕ್ ಹೆಚ್ಚು ರಗಡ್ ಆಗಿರುವಂತೆ ನೋಡಿಕೊಂಡಿದೆ.

ಕಳೆದ ವರ್ಷ ನಡೆದ ಆಟೋ ಎಕ್ಸ್‌ಫೋದಲ್ಲಿ ಫೋರ್ಸ್ ಮೋಟರ್ಸ್ ಈ ಗೂರ್ಖಾ ಎಸ್‌ಯುವಿಯನ್ನು ಪ್ರದರ್ಶನ ಮಾಡಿತ್ತು. ಎಲ್ಇಡಿ ಡಿಎಲ್‌ಆರ್ ಒಳಗೊಂಡಿರುವ ವೃತ್ತಾಕಾರದ ಹೆಡ್‌ಲ್ಯಾಂಪ್, ಸ್ನಾರ್ಕೆಲ್, ಫ್ರಂಟ್ ಫೆಂಡರ್ಸ್ ಮೇಲೆ ಟರ್ನ್ ಇಂಡಿಕೆಟರ್‌ಗಳನ್ನು ಅಳವಡಿಸಲಾಗಿದೆ. ಎಸ್‌ಯುವಿ ಹಿಂಭಾಗದ ಬಾಗಿಲಿಗೆ ಸ್ಪೇರ್ ವ್ಹೀಲ್ ನೀಡಲಾಗಿದೆ. 

ಎಲೆಕ್ಟ್ರಿಕ್ ವಾಹನ ಖರೀದಿಸಬೇಕಾ? ಈ ಸಂಗತಿಗಳ ಬಗ್ಗೆ ತಿಳಿದಿರಿ

ಮಹಿಂದ್ರಾ ಥಾರ್‌ಗೆ ಸ್ಪರ್ಧೆ ನೀಡುವ ಸಾಮರ್ಥ್ಯವನ್ನು ಹೊಂದಿರುವ ಫೋರ್ಸ್ ಮೋಟರ್ಸ್‌ನ ಈ ಗೂರ್ಖಾನ್ ಎಸ್‌ಯುವಿ ಒಳಾಂಗಣ ಬಗ್ಗೆ ಹೇಳುವುದಾದರೆ, ಹೊಸ ಮಾದರಿಯ ಟಚ್ ಸ್ಕ್ರೀನ್ ಸಿಸ್ಟಮ್, ಸೆಕೆಂಡ್ ರೋದಲ್ಲಿ ಕ್ಯಾಪ್ಟನ್ ಸೀಟ್, ಹಿಂಬದಿಯಲ್ಲಿ ಸೈಡ್ ಫೇಸಿಂಗ್ ಜಂಪ್ ಸೀಟ್ಸ್‌ಗಳಿವೆ.

ಕ್ಯಾಬಿನ್ ಪೂರ್ತಿ ಕಪ್ಪು ಬಣ್ಣದಿಂದ ಕೂಡಿದ್ದು, ತ್ರೀ ಸ್ಪೋಕ್ ಸ್ಟಿಯರಿಂಗ್ ವ್ಹೀಲ್ ಇದೆ. ಪಿಲ್ಲರ್‍ ಮೌಂಟೆಂಡ್ ಗ್ರ್ಯಾಬ್ ರೇಲ್, ಚೌಕಾಕಾರದ ಗ್ಲೋ ಬಾಕ್ಸ್ ಸೇರಿದಂತೆ ಇನ್ನತಿರ ಫೀಚರ್‌ಗಳನ್ನು ನಿರೀಕ್ಷಿಸಬಹುದು ಎನ್ನಲಾಗುತ್ತಿದೆ. ಈ ಹೊಸ ತಲೆಮಾರಿನ ಗೂರ್ಖಾ ಸಂಪೂರ್ಣವಾಗಿ ಪರಿಷ್ಕರಣೆಗೊಳಾಗುತ್ತಿದೆ ಎಂದು ಹೇಳಬಹುದು.

ಬಹುಶಃ ಈ ಗೂರ್ಖಾ ಎಸ್‌ಯುವಿ ಲಾಂಚ್ ಆದ ಬಳಿಕ, ಮಹಿಂದ್ರಾ ಥಾರ್‌ಗೆ ಹೆಚ್ಚು ಪೈಪೋಟಿ ನೀಡುವ ಸಾಧ್ಯತೆ ಇದೆ. ಇದೇ ಸೆಗ್ಮೆಂಟ್‌ನಲ್ಲಿ ಮಾರುತಿ ಸುಜುಕಿ ಕೂಡ ತನ್ನ ಹೊಸ ತಲೆಮಾರಿನ ಜಿಮ್ನಿ ಎಸ್‌ಯುವಿಯನ್ನು ಲಾಂಚ್ ಮಾಡುವ ಸಾಧ್ಯತೆ ಇದೆ. ಬಹುಶಃ ಈ ಎರಡೂ ಎಸ್‌ಯುವಿಗಳು ಲಾಂಚ್ ಆದರೆ, ಆಫ್‌ರೋಡ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಮಹಿಂದ್ರಾ ಥಾರ್, ಫೋರ್ಸ್ ಮೋಟರ್ಸ್‌ನ ಗೂರ್ಖಾ ಮತ್ತು ಮಾರುತಿ ಸುಜುಕಿ ಕಂಪನಿಯ ಜಿಮ್ನಿ ಮಧ್ಯೆ ಭಾರೀ ಪೈಪೋಟಿ ನೋಡಬಹುದಾಗಿದೆ.

ಗರಿಷ್ಠ 70 ಕಿ.ಮೀ. ವೇಗದ ಮಿತಿ ಮೀರಿದ್ರೆ ಬೀಳುತ್ತೆ ಫೈನ್!

Follow Us:
Download App:
  • android
  • ios