Asianet Suvarna News

ಎಲೆಕ್ಟ್ರಿಕ್ ವಾಹನ ಖರೀದಿಸಬೇಕಾ? ಈ ಸಂಗತಿಗಳ ಬಗ್ಗೆ ತಿಳಿದಿರಿ

ಇನ್ನು ಕೆಲವೇ ವರ್ಷಗಳಲ್ಲಿ ಇಂಧನ ಆಧರಿತ ವಾಹನಗಳೆಲ್ಲವೂ ಮಾಯವಾಗಿ, ಬ್ಯಾಟರಿ ಚಾಲಿತ ವಾಹನಗಳದ್ದೇ ದರ್ಬಾರ್ ಆರಂಭವಾಗುವುದು ಖಚಿತ. ಈಗಾಗಲೇ ಮಾರುಕಟ್ಟೆಯಲ್ಲಿ ನಾನಾ ರೀತಿಯ ಎಲೆಕ್ಟ್ರಿಕ್ ವಾಹನಗಳಿವೆ. ಯಾವ ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬೇಕು, ಬಜೆಟ್ ಎಷ್ಟಿರಬೇಕು ಎಂಬಿತ್ಯಾದಿ ಸಂಗತಿಗಳ ಬಗ್ಗೆ ತಿಳಿವಳಿಕೆ ಕಡಿಮೆ ಇದೆ.

Focus on these tips before buying electric vehicles
Author
Bengaluru, First Published Jun 14, 2021, 4:09 PM IST
  • Facebook
  • Twitter
  • Whatsapp

ಇಡೀ ಜಗತ್ತಿನಾದ್ಯಂತ ಎಲೆಕ್ಟ್ರಿಕ್ ವಾಹನಗಳು ಜನಪ್ರಿಯವಾಗುತ್ತಿವೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ವಾಹನಗಳು ಸಾಮಾನ್ಯವಾಗಿವೆ. ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಬ್ಯಾಟರಿಚಾಲಿತ ವಾಹನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. 

ಹಲವರು ತಮ್ಮ ಹಳೆಯ ಇಂಧನ ಚಾಲಿತ ವಾಹನಗಳನ್ನು ಮಾರಾಟ ಮಾಡಿ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುತ್ತಿದ್ದಾರೆ. ಭಾರತದಲ್ಲಿ ಇನ್ನೂ ಈ ವಾಹನಗಳು ತೀರಾ ಅಗ್ಗವೆನ್ನುವಷ್ಟು ಮಟ್ಟಿಗೆ ಬೆಳೆದಿಲ್ಲವಾದರೂ, ಜನರು ನಿಧಾನವಾಗಿ ಬ್ಯಾಟರಿಚಾಲಿತ ವಾಹನಗಳನ್ನು ಖರೀದಿಸುತ್ತಿದ್ದಾರೆ. ಆದರೆ ಈ ವಾಹನಗಳ ಖರೀದಿಯ ಬಗ್ಗೆ ಇನ್ನೂ ಹಲವರಿಗೆ ಅನುಮಾನಗಳು, ನಾನಾ ಪ್ರಶ್ನಗಳು ಇದ್ದೇ ಇವೆ. ಬ್ಯಾಟರಿಚಾಲಿತ ವಾಹನ ಖರೀದಿ ಮುನ್ನ ಈ ಸಂಗಿತಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.

ರೆನೋ ಕ್ವಿಡ್, ಡಸ್ಟರ್, ಕಿಗರ್, ಟ್ರೈಬರ್ ಕಾರು ಖರೀದಿ ಮೇಲೆ ಭರ್ಜರಿ ಜೂನ್ ಆಫರ್ಸ್!

ನಿಮ್ಮ ಬಜೆಟ್‌ಗೆ ಹೊಂದುತ್ತಾ ನೋಡಿಕೊಳ್ಳಿ
ಎಲೆಕ್ಟ್ರಿಕ್ ವಾಹನಗಳ ಪೈಕಿ ತೀರಾ ಅಗ್ಗದ ಕಾರು ಖರೀದಿಸುತ್ತಿದ್ದೇನೆ ಎಂದರೂ, ಇಂಧನ  ಆಧರಿತ ಕಾರಿಗೆ ಹೋಲಿಸಿದರೆ ಬಹಳ ತುಟ್ಟಿಯೇ ಆಗಿರುತ್ತದೆ. ಹಾಗಾಗಿ, ಇವಿ ಖರೀದಿಸುವ ಮುನ್ನ ನೂರಾರು ಸಲ ಯೋಚಿಸಿ, ನೀವು ಖರೀದಿಸುವ ಕಾರು, ಅದರ ನಿರ್ವಹಣಾ ವೆಚ್ಚ ಮತ್ತು ನಿಮ್ಮ ಬಜೆಟ್‌ಗೆ ಸರಿ ಹೊಂದುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಎಲೆಕ್ಟ್ರಿಕ್ ವಾಹನಗಳ ಬಗ್ಗೆ ತಿಳಿದುಕೊಳ್ಳಿ
ಮಾರುಕಟ್ಟೆಯಲ್ಲಿ ಬಹುತೇಕ ಆಟೋ ಕಂಪನಿಗಳು ತಮ್ಮದೇ ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿವೆ. ಎಲ್ಲ ಗಾತ್ರದ, ಎಲ್ಲ ಮಾದರಿಯ ಎಲೆಕ್ಟ್ರಿಕ್ ವಾಹನಗಳಿವೆ. ನಿಮ್ಮ ಅಗತ್ಯಗಳನ್ನು ಯಾವ ಇವಿ  ಪೂರೈಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಜೊತೆಗೆ ಕಾರಿನ ಬೆಲೆಯನ್ನು ಗಮನದಲ್ಲಿಟ್ಟುಕೊಳ್ಳಿ. ಒಮ್ಮೆ ಚಾರ್ಜ್ ಮಾಡಿದರೆ, ಎಷ್ಟು ಕಿಲೋಮೀಟರ್‌ವರೆಗೂ ಓಡುತ್ತದೆ ಎಂಬುದು ಇವಿ ಖರೀದಿಸುವಾಗ ಗಮನಿಸಬೇಕಾದ ಪ್ರಮುಖ ಸಂಗತಿಯಾಗಿರುತ್ತದೆ. 

ಇವಿ ಚಾರ್ಜಿಂಗ್ ವ್ಯವಸ್ಥೆ
ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂಚೆ ನಾವು ಗಮನಿಸಬೇಕಿರುವ ಮತ್ತೊಂದು ಪ್ರಮುಖ ಸಂಗತಿ ಎಂದರೆ, ಅದರ ಚಾರ್ಜಿಂಗ್ ವ್ಯವಸ್ಥೆಯ ಬಗ್ಗೆ. ಸ್ವಂತ ಮನೆ ಆಗಿದ್ದರೆ ತೀರಾ ತೊಂದರೆಯಾಗಲಾರದು. ಒಂದು ವೇಳೆ, ನೀವು ಅಪಾರ್ಟ್‌ಮೆಂಟ್‌ನಲ್ಲೋ, ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆ, ಚಾರ್ಜಿಂಗ್ ವ್ಯವಸ್ಥೆ ಬಗ್ಗೆ ಮೊದಲು ಯೋಚಿಸಬೇಕಾಗುತ್ತದೆ. ನೀವು ಖರೀದಿಸುವ ವಾಹನ ಎಷ್ಟು ಗಂಟೆಯವರೆಗೆ ಚಾರ್ಜ್ ಆಗುತ್ತದೆ ಎಂಬುದು ಮುಖ್ಯವಾಗುತ್ತದೆ. ಮತ್ತು ಅದಕ್ಕೆ ತಕ್ಕ ಹಾಗೆ, ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಈ ವಿಷಯದಲ್ಲಿ ನಿಮಗೆ ಎಲೆಕ್ಟ್ರಿಕ್ ವಾಹನಗಳ  ಕಂಪನಿಯವರು ಹೆಚ್ಚಿನ ಸಹಾಯ ಮಾಡಬಹುದು.

2030ರ ಹೊತ್ತಿಗೆ ಫಿಯೆಟ್‌ನಿಂದ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ

ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್‌ಗಳು
ಈ ಸಂಗತಿಯು ಪ್ರಮುಖವಾಗುತ್ತದೆ. ನೀವು ವಾಸಿಸುವ ನಗರಗಳಲ್ಲಿ ಅಥವಾ ಹಳ್ಳಿಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳು ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಮನೆಯನ್ನು ಹೊರತುಪಡಿಸಿದರೆ ನೀವು ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ವಾಹನವನ್ನು ಚಾರ್ಜಿಂಗ್ ಮಾಡಿಕೊಳ್ಳಬಹುದು. ಎಷ್ಟೇ ಮೂಲಸೌಕರ್ಯವನ್ನು ನೀಡಿದ್ದರೂ, ಪೆಟ್ರೋಲ್ ಬಂಕ್‌ಗಳ ರೀತಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್‌ಗಳು ಇಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ಹಾಗಾಗಿ, ಈ ಬಗ್ಗೆ ಮೊದಲು ಯೋಚಿಸುವುದು ಒಳ್ಳೆಯದು.

ತಂತ್ರಜ್ಞಾನ ಬಗ್ಗೆ ತಿಳಿದುಕೊಳ್ಳಿ
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ನೊಂದಿಗೆ ಕಾರು ಬರುವುದು ಅಸಾಮಾನ್ಯವೇನಲ್ಲ. ಇನ್ನು ಎಲೆಕ್ಟ್ರಿಕ್ ವಾಹನಗಳಲ್ಲಿ ಸ್ಮಾರ್ಟ್‌ಫೋನ್ ಅಪ್ಲಿಕೇಷನ್‌ಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಈ ಆಪ್‌ಗಳು ಕಡಿಮೆ ಶುಲ್ಕದಲ್ಲಿ ಚಾರ್ಜಿಂಗ್ ಪಡೆದುಕೊಳ್ಳಲು, ಕಾರಿನ ಎಸಿ ಮೇಲೆ ನಿಯಂತ್ರಣ ಸಾಧಿಸಲು, ನಿಮ್ಮ ಟು ಡು ಲಿಸ್ಟ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಎಲೆಕ್ಟ್ರಿಕ್ ವಾಹನಗಳೆಂದರೆ ಮತ್ತೇನೂ ಅಲ್ಲ, ಅದು ಅತ್ಯಾಧುನಿಕ ತಂತ್ರಜ್ಞಾನದ  ಬಳಕೆಯೇ ಆಗಿದೆ. ಈ ವಿಷಯವು ನಿಮ್ಮ ಗಮನದಲ್ಲಿರಲಿ.

ಹಳೆ ಕಾರು ಮಾರಿಬಿಡಿ
ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಎಲ್ಲ ತಿಳಿದುಕೊಂಡು ನೀವು ಹೊಸ ಕಾರ್ ಖರೀದಿಸಿದ್ದರೆ, ಹಳೆಯ ಕಾರು ಮಾರಿ ಬಿಡಿ. ಒಂದೊಮ್ಮೆ ಅಗತ್ಯವಿದ್ದರೆ ಮಾತ್ರ ಇಟ್ಟುಕೊಳ್ಳಿ. ಇಲ್ಲದಿದ್ದರೆ ಮಾರುವುದೇ ಒಳ್ಳೆಯದು. ಇಲ್ಲದಿದ್ದರೆ, ಹಳೆಯ ಕಾರಿನಿಂದಲೂ ನೀವು ದುಡಿಮೆಯನ್ನು ನಿರೀಕ್ಷಿಸಬಹುದು. ನೀವು ವಾಸಿಸುವ ನಗರದಲ್ಲಿ ರೆಂಟ್ ಕಾರ್ ಕಂಪನಿಗಳಿದ್ದರೆ ಅವುಗಳಿಗೆ ನೀಡಿ, ಆಗ ಆದಾಯವೂ ನಿರಂತರವಾಗುತ್ತದೆ. ಹೊಸ ಇವಿ ವಾಹನ ಖರೀದಿಸಿದಾಗ ಹಳೆಯ ಕಾರಿನ ಉಪಯೋಗಕ್ಕೆ ಇದು ಅತ್ಯುತ್ತಮ ದಾರಿಯಾಗಿದೆ.

ಇದು ಜಗತ್ತಿನ ಅತ್ಯಂತ ದುಬಾರಿ ಪಾರ್ಕಿಂಗ್ ಲಾಟ್. ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ..!

ಹಣ ಮತ್ತು ಇಂಧನ ಉಳಿತಾಯ
ಬ್ಯಾಟರಿ ಚಾಲಿತ ವಾಹನಗಳ ಖರೀದಿಯಿಂದ ನಿಮಗೆ ಹಣ ಮತ್ತು ಇಂಧನ ಉಳಿತಾಯಗಳೆರಡೂ ಆಗುತ್ತದೆ. ಹೌದು, ಈ ವಾಹನಗಳು ದುಬಾರಿಯಾಗಿರುವುದರಿಂದ ಅವುಗಳ ಖರೀದಿಗೆ ಸಿಕ್ಕಾಪಟ್ಟೆ ಹಣ ಹೂಡಿಕೆ ಮಾಡಬೇಕಾಗುತ್ತದೆ. ಆದರೆ, ಇವುಗಳ್ನು ಖರೀದಿ ಮಾಡಿದ ಮೇಲೆ ಸಿಕ್ಕಾಪಟ್ಟೆ ಹಣವನ್ನು ವೆಚ್ಚ ಮಾಡಬೇಕಾಗುವುದಿಲ್ಲ. ಎಲ್ಲಕ್ಕಿಂತ ಬ್ಯಾಟರಿ ಚಾಲಿತ ಕಾರುಗಳ್ನು ಖರೀದಿಸುವುದರಿಂದ ಪರಿಸರ ಸಂರಕ್ಷಣೆಯೂ ಮಾಡಿದಂತಾಗುತ್ತದೆ.

Follow Us:
Download App:
  • android
  • ios