Econimic Crisis ಪಾಕಿಸ್ತಾನದಲ್ಲಿ ಹದಗೆಟ್ಟ ಆರ್ಥಿಕ ಪರಿಸ್ಥಿತಿ, ಕಾರು ಆಮದು ನಿಷೇಧ!

  • ಲಂಕಾ ಬಳಿಕ ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲ
  • ವಿದೇಶಿ ವಿನಿಮಮಯ ಉಳಿಸಿಕೊಳ್ಳಲು ಹರಸಾಹಸ
  • ಕಾರು, ಮೊಬೈಲ್ ಸೇರಿ ವಿದೇಶ ಆಮದು ನಿಷೇಧ
Econmic Crisis Pakistan puts ban on Imported car mobile and non essential items to save foreign Exchange ckm

ಇಸ್ಲಮಾಬಾದ್(ಮೇ.21): ಶ್ರೀಲಂಕಾದ ಆರ್ಥಿಕ ಪರಿಸ್ಥಿತಿಯಿಂದ ಲಂಕಾ ಜನರು ಹೈರಾಣಾಗಿದ್ದಾರೆ. ಇದೀಗ ಇದೇ ಪರಿಸ್ಥಿತಿಯತ್ತ ಪಾಕಿಸ್ತಾನ ನಡೆಯುತ್ತಿದೆ. ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಡಾಲರ್ ಎದರು ಪಾಕಿಸ್ತಾನ ರೂಪಾಯಿ ಮೌಲ್ಯ ಕುಸಿದಿದೆ. ಖಜಾನೆ ಖಾಲಿಯಾಗಿದೆ. ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಇದರಿಂದ ಆಗತ್ಯ ವಸ್ತುಗಳನ್ನು ಹೊರತುಪಡಿಸಿ ಇನ್ನುಳಿದ ಕಾರು, ಮೊಬೈಲ್ ಸೇರಿದಂತೆ ಇತರ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದನ್ನು ಪಾಕಿಸ್ತಾನ ನಿಷೇಧಿಸಿದೆ.

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಈ ಮಹತ್ವದ ಘೋಷಣೆ ಮಾಡಿದ್ದಾರೆ.  ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿದೇಶಿ ವಿನಿಮಯದಲ್ಲಿ ಪಾಕಿಸ್ತಾನ ಸೆಂಟ್ರಲ್ ಬ್ಯಾಂಕ್ ಬುಡ ಅಲುಗಾಡುತ್ತಿದೆ. ಇದರ ಜೊತೆಗೆ ಅಂತಾರಾಷ್ಟ್ರೀಯ ಮಾನಿಟರಿ ಫಂಡ್(IMF)ನಿಂದ ಪಡೆದಿರುವ 6 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ಕೂಡ ಹೊರೆಯಾಗಿದೆ. ಹೀಗಾಗಿ ವಿದೇಶಿ ವಸ್ತುಗಳ ಆಮದಿಗೆ ಹೆಚ್ಚಿನ ಹಣ ವ್ಯಯಿಸುವುದರಿಂದ ವಿದೇಶಿ ವಿನಿಮಯ ಕೊರತೆ ಎದುರಾಗುತ್ತಿದೆ ಎಂದು ಪಾಕಿಸ್ತಾನ ಮಾಹಿತಿ ಸಚಿವ ಮಾರಿಯುಮ್ ಔರಂದಜೇಬ್ ಹೇಳಿದ್ದಾರೆ.

ಕಳ್ಳರ ಕೈಗೆ ಅಧಿಕಾರ ಕೊಡೋದಕ್ಕಿಂತ ದೇಶದ ಮೇಲೆ ಅಣ್ವಸ್ತ್ರ ಹಾಕಿ ಎಂದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್!

ಕಾರು, ಮೊಬೈಲ್ ಸೇರಿದಂತೆ ಇತರ ಹಲವು ವಸ್ತುಗಳಿಗೆ ಪಾಕಿಸ್ತಾನ ವಿದೇಶಗಳನ್ನೇ ಅವಲಂಬಿಸಿದೆ. ಅದರಲ್ಲೂ ಆಟೋಮೊಬೈಲ್ ಕ್ಷೇತ್ರ ಹೆಚ್ಚಾಗಿ ವಿದೇಶಿ ಕಂಪನಿಗಳೇ ಪ್ರಾಬಲ್ಯ ಸಾಧಿಸಿದೆ . ಹೀಗಾಗಿ ಕಾರು , ಮೊಬೈಲ್ ಫೋನ್ ಸೇರಿದಂತೆ ವಿದೇಶಿಗಳಿಂದ ಆಮದು ಮಾಡಿಕೊಳ್ಳುವ ಹಲವು ವಸ್ತುಗಳಿಗೆ ಪಾಕಿಸ್ತಾ ನಿಷೇಧ ಹೇರಿದೆ.

ಕಾರುಗಳ ಪೈಕಿ ಸುಜುಕಿ, ಹ್ಯುಂಡೈ,BMW, ಆಡಿ, ಮರ್ಸಿಡೀಸ್ ಬೆಂಜ್ ಸೇರಿದಂತೆ ಹಲವು ಕಾರುಗಳಿಗೆ ನಿಷೇಧ ಹೇರಲಾಗಿದೆ. ಪಾಕಿಸ್ತಾನದಲ್ಲಿರುವ ಬಹುತೇಕ ಕಂಪನಿಗಳ ಕಾರುಗಳು ವಿದೇಶದಲ್ಲಿ ತಯಾರಾಗುತ್ತಿದೆ. ಪಾಕಿಸ್ತಾನದಲ್ಲಿ ಬೆರಳಣಿಕೆ ಉತ್ಪಾದನಾ ಘಟಕಗಳಿವೆ. ಹೀಗಾಗಿ ಆಟೋಮೊಬೈಲ್ ಹಾಗೂ ಮೊಬೈಲ್ ಕ್ಷೇತ್ರಕ್ಕೆ ತೀವ್ರ ಹಿನ್ನಡೆಯಾಗಿದೆ. 

ವಿದೇಶಿ ವಿನಿಮಯ ಉಳಿಸಿಕೊಂಡು ಆರ್ಥಿಕ ಪರಿಸ್ಥಿತಿ ಎದುರಿಸಲು ಪಾಕಿಸ್ತಾನ ನೂತನ ಪ್ರಧಾನಿ ಶೆಹಬಾಜ್ ಷರೀಫ್ ಆಯ್ದುಕೊಂಡ ವಿಧಾನ ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಯೋಜನೆ. ಸ್ಥಳೀಯ ವಸ್ತುಗಳಿಗೆ ಹೆಚ್ಚಿನ ಪ್ರೋತ್ಸಾಹ, ಬೆಂಬಲ ನೀಡಲು ಕರೆ ಕೊಟ್ಟಿದ್ದಾರೆ. ಸ್ಥಳೀಯ ಉತ್ಪನ್ನಗಳ ಬಳಕೆ ಹಾಗೂ ಮಾರಾಟದಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ. ಜೊತೆಗೆ ವಿದೇಶಿ ವಿನಿಮಯ ಉಳಿಸಲು ಸಾಧ್ಯವಾಗಲಿದೆ ಎಂದು ಷರೀಫ್ ಹೇಳಿದ್ದಾರೆ.

PTV sacks employees ಪಾಕ್ ಪ್ರಧಾನಿ ಭಾಷಣ ಪ್ರಸಾರ ಮಾಡದ ಟಿವಿ ವಾಹಿನಿಯ 17 ಉದ್ಯೋಗಿಗಳು ವಜಾ!

ಡಾಲರ್‌ ಎದುರು ಪಾಕ್‌ ರು. 200ಕ್ಕೆ, ಲಂಕಾ ರುಪಾಯಿ 360ಕ್ಕೆ ಕುಸಿತ
ಭಾರೀ ಆರ್ಥಿಕ ದುಸ್ಥಿತಿಯಲ್ಲಿರುವ ನೆರೆಯ ಪಾಕಿಸ್ತಾನ ಮತ್ತು ಶ್ರೀಲಂಕಾದ ರುಪಾಯಿ ಮೌಲ್ಯ ಡಾಲರ್‌ ಎದುರು ಭಾರೀ ಕುಸಿತ ಕಂಡಿದೆ. ಪಾಕಿಸ್ತಾನದ ರುಪಾಯಿ ಮೌಲ್ಯ ಕಳೆದ 1 ತಿಂಗಳಿನಿಂದ ಕುಸಿಯುತ್ತಿದ್ದು, ಗುರುವಾರ ದಾಖಲೆಯ 200 ಪಾಕಿಸ್ತಾನ ರುಪಾಯಿಗೆ ಕುಸಿತ ಕಂಡಿದೆ. ಇದು ಇದುವರೆಗೆ ಅತಿ ಕನಿಷ್ಠ ಮೌಲ್ಯವಾಗಿದೆ. ಮತ್ತೊಂದೆಡೆ ದಿವಾಳಿ ಹಂತದಲ್ಲಿರುವ ಶ್ರೀಲಂಕಾದಲ್ಲೂ ರುಪಾಯಿ ಮೌಲ್ಯ ಡಾಲರ್‌ ಎದುರು 360 ರು.ಗೆ ಕುಸಿತ ಕಂಡಿದೆ. ವಿದೇಶಿ ವಿನಿಮಯ ಕುಸಿತ, ವಿದೇಶಿ ಹೂಡಿಕೆ ಇಲ್ಲದೇ ಇರುವುದು, ಆರ್ಥಿಕತೆ ಪತನ ಈ ಎರಡೂ ದೇಶಗಳ ಕರೆನ್ಸಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ.

Latest Videos
Follow Us:
Download App:
  • android
  • ios