Asianet Suvarna News Asianet Suvarna News

Petrol Price Hike ಹಿನ್ನೆಲೆ, ಕಾರಿನಲ್ಲಿ ಎಸಿ ಆನ್ ಮಾಡಲು ನಿರಾಕರಿಸುತ್ತಿರುವ ಕ್ಯಾಬ್ ಚಾಲಕರು

Petrol and Diesel Price Hike: ಇತರ ನಗರಗಳ ಕ್ಯಾಬ್‌ ಚಾಲಕರು, ಕಾರಿನಲ್ಲಿ ಹವಾ ನಿಯಂತ್ರಣ ವ್ಯವಸ್ಥೆಯನ್ನು ಆನ್‌ ಮಾಡಲು ಹೆಚ್ಚುವರಿ ದರದ ಬೇಡಿಕೆ ಇಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಬೆಂಗಳೂರು ನಗರದ ಕೆಲ ಪ್ರಯಾಣಿಕರು ಕೂಡ ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Cab drivers refuse to on the AC in Ola and Uber cabs due to fuel price hike
Author
Bangalore, First Published Apr 8, 2022, 2:15 PM IST

ಪಶ್ಚಿಮ ಬಂಗಾಳ, ನವದೆಹಲಿ ಮತ್ತು ತೆಲಂಗಾಣದ ನಂತರ ಬೆಂಗಳೂರು ಕ್ಯಾಬ್‌ ಡ್ರೈವರ್‌ಗಳು (Cab drivers from West Bengal, New Delhi, Bangalore, Telangana) ಕೂಡ ತಮ್ಮ ಟ್ಯಾಕ್ಸಿಗಳಲ್ಲಿ ‘ನೋ ಎಸಿ’ (No AC) ನೀತಿ ಅನುಸರಿಸುತ್ತಿದ್ದಾರೆ. ಹೆಚ್ಚುತ್ತಿರುವ ಇಂಧನ ದರ ಮತ್ತು ಕಡಿಮೆ ಕಮಿಷನ್‌ಗಳ ಸಮಸ್ಯೆಯಿಂದ ಓಲಾ (Ola) ಮತ್ತು ಊಬರ್‌ (Uber) ಚಾಲಕರು, ಪ್ರಯಾಣಿಕರಿಗೆ ಎಸಿ (AC) ಸೌಲಭ್ಯ ಒದಗಿಸುವುದನ್ನು ಕಡಿತಗೊಳಿಸಿದ್ದಾರೆ.

ಅದರಲ್ಲೂ ಬೆಂಗಳೂರಿನಲ್ಲಿ ಇದು ಬೇಸಿಗೆ ಸಮಯವಾಗಿದ್ದು, ತಾಪಮಾನ 35 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುವುದರಿಂದ ಬಳಕೆದಾರರು ಸಹಜವಾಗಿಯೇ ಕಾರುಗಳಲ್ಲಿ ಎಸಿಗಳ ಬಳಕೆಗೆ ಮನವಿ ಮಾಡುತ್ತಾರೆ. ಏಪ್ರಿಲ್‌ 5ರ ಅಂಕಿ ಅಂಶಗಳ ಪ್ರಕಾರ,ರಾಜ್ಯದಲ್ಲಿ ಪೆಟ್ರೋಲ್‌ ದರ 109.82 ರೂ.ಗಳಿವೆ ತಲುಪಿದೆ. ಮಾರ್ಚ್‌ 28 ರಂದು ಇದು 100.14 ರೂ.ಗಳಷ್ಟಿತ್ತು.

ಇತರ ನಗರಗಳ ಕ್ಯಾಬ್‌ ಚಾಲಕರು, ಕಾರಿನಲ್ಲಿ ಹವಾ ನಿಯಂತ್ರಣ ವ್ಯವಸ್ಥೆಯನ್ನು ಆನ್‌ ಮಾಡಲು ಹೆಚ್ಚುವರಿ ದರದ ಬೇಡಿಕೆ ಇಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಬೆಂಗಳೂರು ನಗರದ ಕೆಲ ಪ್ರಯಾಣಿಕರು ಕೂಡ ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಆದರೆ, ಇದಕ್ಕೆ ಕ್ಯಾಬ್‌ ಚಾಲಕರು ನೀಡುತ್ತಿರುವ ಕಾರಣಗಳೇ ಬೇರೆ. ಓಲಾ ಎಸಿ ಆನ್‌ ಮಾಡದಿರಲು ಕೋವಿಡ್‌-19 ಮಾರ್ಗಸೂಚಿಗಳ ನೆಪ ಹೇಳುತ್ತಾರೆ ಇಲ್ಲವೇ ಓಲಾ ಪ್ರೈಮ್‌ (Ola prime) ಮತ್ತು ಸೆಡಾನ್‌ (Sedan) ಬುಕಿಂಗ್‌ಗಳಲ್ಲಿ ಮಾತ್ರ ಎಸಿ ಸೌಲಭ್ಯಗಳು ಲಭ್ಯವಿರಲಿದೆ ಎಂಬು ಸಬೂಬು ಹೇಳುತ್ತಾರೆ.

ಕಳೆದ ಮಾರ್ಚ್‌ ತಿಂಗಳಲ್ಲಿ ತೆಲಂಗಾಣ ಗಿಗ್‌ ಮತ್ತು ಪ್ಲಾಟ್‌ಫಾರ್ಮ್‌ ವರ್ಕರ್ಸ್‌ ಯೂನಿಯನ್‌ (ಟಿಜಿಪಿಡಬ್ಲ್ಯುಯು-TGPWU) ಹೈದರಾಬಾದ್‌ನಲ್ಲಿ ‘ನೋ ಎಸಿ’ ಅಭಿಯಾನ ಆರಂಭಿಸಿದೆ. ಇದರಲ್ಲಿ ಚಾಲಕರು, ಪ್ರಯಾಣಿಕರಿಗೆ ಎಸಿ ಆನ್‌ ಮಾಡಿದಿರುವ ಕಾರಣಗಳನ್ನು ಸೌಮ್ಯ ರೀತಿಯಲ್ಲಿ ವಿವರಿಸುವುದನ್ನು ಕಾಣಬಹುದು. ಅಲ್ಲದೆ, ರಿಯಾಯಿತಿಗಳು ಮತ್ತು ಸಬ್ಸಿಡಿಗಳನ್ನು ನೀಡುವಂತೆ ದೇಶದ ಬಹುತೇಕ ರಾಜ್ಯಗಳ ಕ್ಯಾಬ್‌ ಚಾಲಕರ ಸಂಘಟನೆ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡುತ್ತಿವೆ.

ಟ್ವಿಟರ್‌ ಬಳಕೆದಾರರಾದ ರಾಹುಲ್‌ ಶುಕ್ಲಾ, ಓಲಾ ಕ್ಯಾಬ್‌ ಸಂಸ್ಥಾಪಕ ಭವೀಶ್‌ ಅಗರ್ವಾಲ್‌ ಅವರನ್ನು ಟ್ಯಾಗ್‌ ಮಾಡಿದ್ದು, “ನಿಮ್ಮ ಬೆಂಗಳೂರಿನ ಕ್ಯಾಬ್‌ ಚಾಲಕರು ಎಸಿ ಸ್ವಿಚ್‌ ಆನ್‌ ಮಾಡಲು ನಿರಾಕರಿಸುತ್ತಿದ್ದಾರೆ. ಇದಕ್ಕೆ ಕೋವಿಡ್‌ ಮಾರ್ಗಸೂಚಿಯ ನೆಪ ಹೇಳುತ್ತಿದ್ದಾರೆ. ಆದರೆ, ಅವರು ಮಾಸ್ಕ್‌ ಧರಿಸುತ್ತಿಲ್ಲ. ಈ ಕುರಿತು ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಮರುಪಾವತಿಯನ್ನು ಮಾಡಿಲ್ಲ. ಕ್ಯಾಬ್‌ ಬುಕ್‌ ಮಾಡಿದಾಗ ಅದರಲ್ಲಿ ಎಸಿ ಸೌಲಭ್ಯವನ್ನು ಉಲ್ಲೇಖಿಸಲಾಗಿರುತ್ತದೆ. ಹೀಗಿಲ್ಲದಿದ್ದರೂ ನಾನು ಒಂದು ಆಟೋ ತೆಗೆದುಕೊಳ್ಳಬಹುದಿತ್ತು” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Petrol- Diesel Price Today: ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಡೀಸೆಲ್‌ ಬೆಲೆ ಇಲ್ಲಿದೆ

ಪೂರ್ಣಿಮಾ ಎಂ.ಮಿಶ್ರಾ ಎಂಬುವವರು, “ನಾನು ಮಹದೇವಪುರದಿಂದ ಬಿಲೇಕಹಳ್ಳಿಗೆ ಪ್ರಯಾಣಿಸುತ್ತಿದ್ದೇನೆ. ನಾವು ಓಲಾ ಮಿನಿ (Ola Mini)ಬುಕ್‌ ಮಾಡಲು ಪ್ರಯತ್ನಿಸಿದಾಗ, ಅದು ಓಲಾ ಪ್ರೈಮ್‌ ಸೆಡಾನ್‌ಗೆ (Ola Prime Sedan) ಅಪ್‌ಗ್ರೇಡ್‌ ಆಗಿತ್ತು. ಈಗ ನಾವು ಚಾಲಕರಿಗೆ ಎಸಿ ಆನ್‌ ಮಾಡಲು ಹೇಳಿದರೆ, ಅವರು ಓಲಾ ಮಿನಿಯಲ್ಲಿ ಎಸಿ ಇರುವುದಿಲ್ಲ. ಈ ಕುರಿತು ಕ್ರಮ ಕೈಗೊಳ್ಳಿ” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Petrol Price Hike ನವವಿವಾಹಿತ ಜೋಡಿಗೆ ಪೆಟ್ರೋಲ್-ಡೀಸೆಲ್ ಗಿಫ್ಟ್!

ಇದರ ಜೊತೆಗೆ, ಓಲಾ ಕ್ಯಾಬ್‌ಗಳಲ್ಲಿ ಚಾಲಕರು ರಾತ್ರಿ ವೇಳೆ ಕೊನೆಯ ಕ್ಷಣದಲ್ಲಿ ಬುಕಿಂಗ್‌ ರದ್ದುಗೊಳಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಪ್ರವೃತ್ತಿ ಕಳೆದ 12 ತಿಂಗಳಲ್ಲಿ ಏರಿಕೆಯಾಗುತ್ತಿದೆ ಎಂದು ಇತ್ತೀಚೆಗೆ ನಡೆದ ಅಧ್ಯಯನದ ವರದಿ ತಿಳಿಸಿದೆ. ಬುಕಿಂಗ್‌ ರದ್ದುಗೊಳಿಸಿದ ನಿಗದಿತ ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ದರ ಕೇಳುತ್ತಾರೆ ಎಂಬ ದೂರುಗಳು ಕೂಡ ಕೇಳಿಬರುತ್ತಿವೆ.

Follow Us:
Download App:
  • android
  • ios