ಟಾಟಾ ಮಾಲೀಕತ್ವದ ಜಾಗ್ವಾರ್ ಕಾರಿಗೆ ಹೊಸ ಲೋಗೋ, ಖರೀದಿಗೆ ಮುಂದಾದ್ರಾ ಮಸ್ಕ್?

ಟಾಟಾ ಮಾಲೀಕತ್ವದ ಜಾಗ್ವಾರ್ ಕಾರು ಹೊಸ ಅವಾತರದಲ್ಲಿ ಬಂದಿದೆ. ಇದೀಗ ಜಾಗ್ವಾರ್ ಕಾರಿನ ಲೋಗೋ ಬದಲಿಸಲಾಗಿದೆ. ವಿಶೇಷ ಹಾಗೂ ಭಿನ್ನ ಲೋಗೋ ಅನಾವರಣ ಮಾಡಲಾಗಿದೆ. ಇದರ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಜಾಗ್ವಾರ್ ಕಾರನ್ನು ಉದ್ಯಮಿ ಎಲಾನ್ ಮಸ್ಕ್ ಖರೀದಿಸುತ್ತಾರಾ? 

Tata owned British brand jaguar unveils new logo Elon musk ask Do you sell cars ckm

ನವದೆಹಲಿ(ನ.20) ಟಾಟಾ ಮಾಲೀಕತ್ವದ ಬ್ರಿಟಿಷ್ ಕಾರು ಜಾಗ್ವಾರ್ ಐಷಾರಾಮಿ ಹಾಗೂ ಲಕ್ಷುರಿ ಬ್ರ್ಯಾಂಡ್. ವಿಶ್ವದ ಹಲವು ದೇಶಗಳಲ್ಲಿ ಜಾಗ್ವಾರ್ ಮೋಸ್ಟ್ ಟ್ರಸ್ಟೆಡ್ ಬ್ರ್ಯಾಂಡ್. ಇದೀಗ ಜಾಗ್ವಾರ್ ಕಾರು ತನ್ನ ಲಾಂಛನ ಬದಲಿಸಿದೆ. ಬರೋಬ್ಬರಿ 102 ವರ್ಷಗಳ ಇತಿಹಾಸವಿರುವ ಜಾಗ್ವಾರ್ ಇದೀಗ ಹೊಸ ಲೋಗೋ ಅನಾವರಣ ಮಾಡಿ ಸಂಚಲನ ಸೃಷ್ಟಿಸಿದೆ. ಹೊಸ ಲೋಗೋ ಕಾರಿನ ಹೊಸ ಬ್ರ್ಯಾಂಡ್ ಕುರಿತು ಸೂಚಿಸುತ್ತಿದೆ . ಈ ಮೂಲಕ ಜಾಗ್ವಾರ್ ಎಲೆಕ್ಟ್ರಿಕ್ ಕಾರು ಕ್ಷೇತ್ರಕ್ಕೂ ಕಾಲಿಡುವ ಸೂಚನೆ ನೀಡಿದೆ. ಹೊಸ ಲೋಗೋ ಕರಿತು ವಿಡಿಯೋವನ್ನು ಜಾಗ್ವಾರ್ ಬಿಡುಗಡೆ ಮಾಡಿದೆ. ಆದರೆ ಈ ವಿಡಿಯೋ ಹಲವವರನ್ನು ಗೊಂದಲಕ್ಕೀಡುಮಾಡಿದೆ. ಇವೆಲ್ಲಾ ಒಂದೆಡೆಯಾದರೆ ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿ ಮಾಲೀಕ, ಉದ್ಯಮಿ ಎಲಾನ್ ಮಸ್ಕ್ ಜಾಗ್ವಾರ್ ಮಾಡಿದ ಕಮೆಂಟ್, ಕಂಪನಿ ಖರೀದಿಸುತ್ತಾರಾ ಅನ್ನೋ ಕುತೂಹಲ ಸೃಷ್ಟಿಸಿದೆ.

ಜಾಗ್ವಾರ್ ಹೊಸ ಲೋಗೋ ವಿಡಿಯೋದಲ್ಲಿ ವಿವಿಧ ಬಣ್ಣಗಳ ಉಡುಗೆ ಧರಿಸಿರುವ ರೂಪದರ್ಶಿಯರು ಹೊಸತನದ ಸೂಚನೆ ನೀಡುತ್ತಾರೆ. ವಿವಿಧತೆ, ಹೊಸತನ, ಕಟ್ಟುಪಾಡುಗಳ ಮೀರಿ, ನಕಲು ಮಾಡದ, ಹೊಸ ಆವಿಷ್ಕಾರ ಜಾಗ್ವಾರ್ ಅನ್ನೋ ಸಂದೇಶ ನೀಡಿದ್ದಾರೆ. ಈ ಮೂಲಕ ಹೊಸ ಜಾಗ್ವಾರ್ ಲೋಗೋ ಅನಾವರಣ ಮಾಡಲಾಗಿದೆ. ಕಾರಿನ ಲೋಗೋ ಅನಾವರಣದಲ್ಲಿ ಒಂದೇ ಒಂದು ಜಾಗ್ವಾರ್ ಕಾರು ಬಳಸಿಲ್ಲ, ರೀ ಬ್ರ್ಯಾಂಡಿಂಗ್ ಮಾಡಿಲ್ಲ. ಇದು ಹಲವರನ್ನು ಗೊಂದಲಕ್ಕೀಡು ಮಾಡಿದೆ. 

ರೇಂಜ್ ರೋವರ್ ಬೆಲೆ ಬರೋಬ್ಬರಿ 56 ಲಕ್ಷ ರೂ ಇಳಿಕೆ, ಕೈಗೆಟುಕವ ದರದಲ್ಲಿ ಐಷಾರಾಮಿ ಕಾರು!

ಮೊದಲು ಜಾಗ್ವಾರ್ ಲೋಗೋದಲ್ಲಿ ಇಂಗ್ಲೀಷ್ ಅಪ್ಪರ್ ಕೇಸ್ ಲೆಟರ್ ಬಳಕೆ ಮಾಡಲಾಗಿತ್ತು. ಇದೀಗ ಲೋವರ್ ಕೇಸ್ ಲೆಟರ್ ಬಳಕೆಮಾಡಲಾಗಿದೆ. ಹೊಸ ಲೋಗೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಹಲವರು ಲೋಗೋ ಉತ್ತಮವಾಗಿದೆ ಎಂದಿದ್ದರೆ,ಮತ್ತೆ ಕೆಲವರು 100 ವರ್ಷಗಳ ಹಳೇ ಲೋಗೋ ಇತಿಹಾಸ ನೆನಪಿಸುತ್ತದೆ. ಹೀಗಾಗಿ ಹಳೇ ಲೋಗೋ ಇರಲಿ ಎಂದು ಸಲಹೆ ನೀಡಿದ್ದಾರೆ.

 

 

ಜಾಗ್ವಾರ್ ಹೊಸ ಲೋಗೋ ಅನಾವರಣದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.ಇದರ ಬೆನ್ನಲ್ಲೇ ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ. ನೀವು ಕಾರುಗಳನ್ನು ಮಾರಾಟ ಮಾಡುತ್ತೀರಾ ಎಂದು ಎಲಾನ್ ಮಸ್ಕ್ ಎಕ್ಸ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ಪ್ರಶ್ನೆ ಕುತೂಹಲಕ್ಕೆ ಕಾರಣವಾಗಿದೆ. ಜಾಗ್ವಾರ್ ಕಾರು ಕಂಪನಿಯನ್ನು ಎಲಾನ್ ಮಸ್ಕ್ ಖರೀದಿಸುತ್ತಾರ ಅನ್ನೋ ಕುತೂಹಲ ಮನೆ ಮಾಡಿದೆ. 

ಎಲಾನ್ ಮಸ್ಕ್ ಕಮೆಂಟ್‌ಗೆ ಜಾಗ್ವಾರ್ ಪ್ರತಿಕ್ರಿಯಿಸಿದೆ. ಹೌದು ನಾವು ಕಾರು ಮಾರಾಟ ಮಾಡುತ್ತೇವೆ. ಡಿಸೆಂಬರ್ 2ರಂದು ಮಿಯಾಮಿಯ ಕಪ್ಪಾದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ನಾವು ಪಾಲ್ಗೊಳ್ಳಿ. ನಿಮ್ಮನ್ನು ಪ್ರೀತಿಯಿಂದ ಆಹ್ವಾನ ಮಾಡುತ್ತಿದ್ದೇವೆ ಎಂದು ಜಾಗ್ವಾರ್ ಪ್ರತಿಕ್ರಿಯಿಸಿದೆ. ಈ ಮೂಲಕ ಜಾಗ್ವಾರ್ ಮಹತ್ವದ ಸ್ಪಷ್ಟನೆಯನ್ನೂ ನೀಡಿದೆ. ಜಾಗ್ವಾರ್ ಕಾರುಗಳು ಮಾರಾಟ ಮಾಡುತ್ತೆ, ಕಂಪನಿ ಮಾರಾಟ ಮಾಡುತ್ತಿಲ್ಲ ಅನ್ನೋದನ್ನು ಪರೋಕ್ಷವಾಗಿ ಹೇಳಿದೆ.

ಇನ್ಮುಂದೆ ಭಾರತದಿಂದ ವಿದೇಶಗಳಿಗೆ ಜಾಗ್ವಾರ್ ಲ್ಯಾಂಡ್ ರೋವರ್ ಕಾರು ರಫ್ತು, ಟಾಟಾ $ 1 ಬಿಲಿಯನ್ ಹೂಡಿಕೆ!

Latest Videos
Follow Us:
Download App:
  • android
  • ios