1 ಲಕ್ಷ ರೂ ಆಫರ್, ಟೊಯೋಟಾ ಗ್ಲಾಂಜಾ, ಟೈಸರ್ ಸೇರಿ ಟೊಯೋಟಾ ಕಾರಿಗೆ ವರ್ಷಾಂತ್ಯದ ಡಿಸ್ಕೌಂಟ್!

ಟೊಯೋಟಾ ಗ್ಲಾಂಜಾ, ಅರ್ಬನ್ ಕ್ರೂಸರ್ ಟೈಸರ್, ಅರ್ಬನ್ ಕ್ರೂಸರ್ ಹೈರೈಡರ್ ಲಿಮಿಟೆಡ್ ಎಡಿಶನ್ ಕಾರಿಗೆ ವರ್ಷಾಂತ್ಯದ ಭರ್ಜರಿ ಆಫರ್ ಘೋಷಿಸಲಾಗಿದೆ. ಇದು ಇಯರ್ ಎಂಡ್ ಡಿಸ್ಕೌಂಟ್ ಕಾರಣ 1 ಲಕ್ಷ ರೂಪಾಯಿ ಆಫರ್ ಘೋಷಿಸಲಾಗಿದೆ.
 

Toyota introduce limited edition car and offers up to 1 lakh year end offer ckm

ಬೆಂಗಳೂರು(ನ.13)  ಟೊಯೋಟಾ ಕಾರು ಖರೀದಿಸುವರಿಗೆ ಭರ್ಜರಿ ಆಫರ್ ನೀಡಲಾಗಿದೆ. ವರ್ಷಾಂತ್ಯದ ಆಂಗವಾಗಿ ಟೊಯೋಟಾ ಗ್ಲಾಂಜಾ ಅರ್ಬನ್ ಕ್ರೂಸರ್ ಟೈಸರ್, ಅರ್ಬನ್ ಕ್ರೂಸರ್ ಹೈರೈಡರ್ ಸೇರಿದಂತೆ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ ಮಾಡಲಾಗಿದೆ. ಇದೀಗ ಇದೇ ಲಿಮಿಟೆಡ್ ಎಡಿಶನ್ ಕಾರುಗಳಿಗೆ  ಬರೋಬ್ಬರಿ 1 ಲಕ್ಷ ರೂಪಾಯಿ ವರೆಗೆ ವರ್ಷಾಂತ್ಯದ ಆಫರ್ ನೀಡಲಾಗಿದೆ.   ಸ್ಪೆಷಲ್ ಲಿಮಿಟೆಡ್ ಎಡಿಷನ್ ಹೊರತಾಗಿ ಟೊಯೋಟಾ ಇದೀಗ ಗ್ಲಾಂಝಾ, ಅರ್ಬನ್ ಕ್ರೂಸರ್ ಟೈಸರ್ & ರೂಮಿಯನ್ (ಸಿ ಎ ಜಿ ಮಾಡೆಲ್ ಗಳನ್ನು ಹೊರತುಪಡಿಸಿ) ಕಾರಿನ ಮೇಲೆ ರೂ. 1 ಲಕ್ಷಕ್ಕಿಂತ ಹೆಚ್ಚಿನ ವರ್ಷಾಂತ್ಯದ ವಿಶೇಷ ಆಫರ್ ಗಳನ್ನು ನೀಡುತ್ತಿದೆ. ಈ ಆಫರ್ ಗಳು 2024ರ ಡಿಸೆಂಬರ್ 31ರವರೆಗೆ ಮಾತ್ರ ಲಭ್ಯವಿದೆ.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್  ಇತ್ತೀಚೆಗೆ ಬಿಡುಗಡೆ ಮಾಡಿದ, ಟೊಯೋಟಾ ಜೆನ್ಯೂನ್ ಆಕ್ಸೆಸರಿ (ಟಿಜಿಎ) ಪ್ಯಾಕೇಜ್ ಗಳು  ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆ ಮೂಲಕ ಗ್ರಾಹಕ ಸ್ನೇಹಿ ಹೆಜ್ಜೆ ಇಟ್ಟಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಟೊಯೋಟಾ ಗ್ರಾಹಕರಿಗೆ ಲಿಮಿಟೆಡ್ ಎಡಿಷನ್ ಅನ್ನು ಅನಾವರಣ ಮಾಡಿದೆ.  ಖರೀದಿದಾರರು ತಮ್ಮ ಇಷ್ಟದ ಟೊಯೋಟಾ ಮಾಡೆಲ್ ನ ವಿಶೇಷ ಅಪ್‌ ಗ್ರೇಡ್ ಮಾಡಿದ ಎಡಿಷನ್ ಖರೀದಿಸಬಹುದು. ಈ ಅಪ್ ಗ್ರೇಡೆಡ್ ವರ್ಷನ್ ವಿಶಿಷ್ಟ ಸ್ಟೈಲ್ ಮತ್ತು ಅತ್ಯುತ್ತಮ ಕಾರ್ಯ ನಿರ್ವಹಣೆ ಹೊಂದಿದೆ. ಗ್ರಾಹಕರು ಈ ಖರೀದಿಯ ವೇಳೆ ಒಂದೋ ಸ್ಪೆಷಲ್ ಲಿಮಿಟೆಡ್ ಎಡಿಷನ್ ಪ್ಯಾಕೇಜ್ ಅಥವಾ ವರ್ಷಾಂತ್ಯದ ವಿಶೇಷ ಆಫರ್ ಗಳನ್ನು ಆಯ್ಕೆ ಮಾಡುವ ಸೌಲಭ್ಯ ಒದಗಿಸಲಾಗುತ್ತದೆ.

ರಚಿತಾ ರಾಮ್ ಬಳಿ ಇದೆ 1.5 ಕೋಟಿ ರೂ ಕಾರು, ಈ ವಾಹನ ಹೊಂದಿರುವ ಕನ್ನಡದ ಏಕೈಕ ನಟಿ!

.ಸ್ಪೆಷಲ್ ಎಡಿಶನ್ ಕಾರಿನ ಮೇಲಿನ ಆಫರ್
ಗ್ಲಾಂಜಾ ಎಲ್ಲಾ ಮಾಡೆಲ್‌ಗೆ 17,381 ರೂಪಾಯಿ
ಅರ್ಬನ್ ಕ್ರೂಸರ್ ಟೈಸರ್ ಕಾರಿಗೆ 17,931 ರೂಪಾಯಿ
ಅರ್ಬನ್ ಕ್ರೂಸರ್ ಹೈರೈಡರ್ ಕಾರಿಗೆ 50,817 ರೂಪಾಯಿ

ಈ ಹಿಂದೆ ಅನಾವರಣ ಮಾಡಿದ್ದ ಗ್ಲಾಂಝಾ, ಅರ್ಬನ್ ಕ್ರೂಸರ್ ಟೈಸರ್ ಮತ್ತು ಅರ್ಬನ್ ಕ್ರೂಸರ್ ಹೈಡರ್ ನ ಫೆಸ್ಟಿವಲ್ ಎಡಿಷನ್ ಗಳಿಗೆ ಸಿಕ್ಕ ಸ್ಪಂದನೆ ಹಾಗೂ ಪ್ರತಿಕ್ರಿಯೆ ನಮಗೆ ತೃಪ್ತಿ ತಂದಿದೆ. ಇದೀಗ ಲಿಮಿಟೆಡ್ ಎಡಿಶನ್ ಕಾರುಗಳ ಬಿಡುಗಡೆ ಜೊತೆಗೆ ವರ್ಷಾಂತ್ಯದ ಆಫರ್ ಕೂಡ ನೀಡುತ್ತಿದ್ದೇವೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಶಬರಿ ಮನೋಹರ್ ಹೇಳಿದ್ದಾರೆ. ಪ್ರತಿಯೊಂದು ಮಾಡೆಲ್ ಕೂಡ ಅದ್ಭುತ ಸ್ಟೈಲ್ ಮತ್ತು ಅತ್ಯಾಧುನಿಕ ಫೀಚರ್ ಹೊಂದಿವೆ. ಗ್ಲಾಂಝಾ, ಅರ್ಬನ್ ಕ್ರೂಸರ್ ಟೈಸರ್ ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ನ ಹೊಸ ವಿಶೇಷ ಲಿಮಿಟೆಡ್ ಎಡಿಷನ್ ನಮ್ಮ ಗ್ರಾಹಕರ ಹೊಸ ಕಾಲದ ಆದ್ಯತೆಗಳನ್ನು ಪೂರೈಸಲಿದೆ ಮತ್ತು ಅವರಿಗೆ ಅತ್ಯುತ್ತಮ ಮಾಲೀಕತ್ವ ಅನುಭವ ಒದಗಿಸಲಿದೆ. ಸ್ತೃತ ವಾರಂಟಿ ಕವರೇಜ್ ಜೊತೆಗೆ ಟೊಯೋಟಾದ ಪ್ರಮಾಣೀಕೃತ ತಂತ್ರಜ್ಞರು ಅಳವಡಿಸುವ ವಿಶೇಷ ಟೊಯೋಟಾ ಜೆನ್ಯೂನ್ ಪರಿಕರಗಳನ್ನು ಹೊಂದುವ ಮೂಲಕ ಗ್ರಾಹಕರು ಅತ್ಯುತ್ತಮ ಮಾಲೀಕತ್ವದ ಅನುಭವ ಹೊಂದಬಹುದು. ಈ ಸೀಮಿತ ಅವಧಿಯ ಆವೃತ್ತಿಗಳು ಗ್ರಾಹಕರಿಗೆ ಸೊಗಸಾದ, ವೈಶಿಷ್ಟ್ಯ-ಸಮೃದ್ಧ ವಾಹನವನ್ನು ಹೊಂದಲು ಅನುವು ಮಾಡಿಕೊಡುತ್ತವೆ ಎಂದು ಶಬರಿ ಮನೋಹರ್ ಹೇಳಿದ್ದಾರೆ.

ಗ್ಲಾಂಜಾ, ಅರ್ಬನ್ ಕ್ರೂಸರ್ ಟೈಸರ್ ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ನ ವಿಶೇಷ ಲಿಮಿಟೆಡ್ ಎಡಿಷನ್ ಗೆ ಎಲ್ಲಾ ಟೊಯೋಟಾ ಡೀಲರ್‌ ಶಿಪ್‌ ಗಳಲ್ಲಿ ಮತ್ತು ಆನ್‌ ಲೈನ್‌ ನಲ್ಲಿ ಬುಕಿಂಗ್ ಮಾಡಬಹುದಾಗಿದೆ.  

500 ಕಿಮೀ ಮೈಲೇಜ್ ಜೊತೆ ಬರ್ತಿದೆ ಟೊಯೋಟಾದ ಮೊದಲ ಎಲೆಕ್ಟ್ರಿಕ್ SUV
 

Latest Videos
Follow Us:
Download App:
  • android
  • ios