ಮಾರುಕಟ್ಟೆಯಲ್ಲಿ 8 ಲಕ್ಷ ರೂ. ಬಜೆಟ್ನಲ್ಲಿ ಲಭ್ಯವಿರುವ ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್, ಸ್ಕೋಡಾ ಕೈಲಾಕ್ ಮತ್ತು ಹ್ಯುಂಡೈ ವೆನ್ಯೂ ಕಾರುಗಳ ಬೆಲೆ, ಮೈಲೇಜ್ ಮತ್ತು ಫೀಚರ್ಸ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ನಿಮ್ಮ ಫ್ಯಾಮಿಲಿಗೆ ಯಾವ ಎಸ್ಯುವಿ ಬೆಸ್ಟ್ ಎಂದು ಆಯ್ಕೆ ಮಾಡಲು ಈ ಹೋಲಿಕೆ ಸಹಾಯ ಮಾಡುತ್ತದೆ.
ಮಾರುಕಟ್ಟೆಯಲ್ಲಿ ಬಜೆಟ್ ಎಸ್ಯುವಿ ಕಾರುಗಳಿಗೆ ಯಾವಾಗಲೂ ಭಾರಿ ಡಿಮ್ಯಾಂಡ್ ಇರುತ್ತದೆ. ಕೇವಲ 8 ಲಕ್ಷ ರೂ. ಬಜೆಟ್ನಲ್ಲಿ ಬೆಸ್ಟ್ ಮೈಲೇಜ್ ಹಾಗೂ ಟಾಪ್ ಸೇಫ್ಟಿ ಫೀಚರ್ಸ್ ಇರುವ ಕಾರುಗಳು ಈಗ ಲಭ್ಯವಿವೆ. ಮಾರುತಿ, ಟಾಟಾ, ಸ್ಕೋಡಾ ಮತ್ತು ಹ್ಯುಂಡೈ ಕಂಪನಿಯ ಈ ಕಾರುಗಳ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
8 ಲಕ್ಷದೊಳಗಿನ ಬೆಸ್ಟ್ ಎಸ್ಯುವಿ ಕಾರುಗಳು
ನಿಮ್ಮ ಬಜೆಟ್ 8 ಲಕ್ಷ ರೂ. ಇದೆಯಾ? ಫ್ಯಾಮಿಲಿಗಾಗಿ ಒಂದು ಒಳ್ಳೆ ಎಸ್ಯುವಿ ಕಾರು ಖರೀದಿಸುವ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ದರೆ ಮಾರುಕಟ್ಟೆಯಲ್ಲಿ ನಿಮಗಾಗಿ ಸೂಪರ್ ಆಪ್ಷನ್ಗಳಿವೆ. ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್, ಸ್ಕೋಡಾ ಕೈಲಾಕ್ ಹಾಗೂ ಹ್ಯುಂಡೈ ವೆನ್ಯೂ ಕಾರುಗಳು ಗ್ರಾಹಕರ ಫಸ್ಟ್ ಚಾಯ್ಸ್ ಆಗಿವೆ. ಆದರೆ ಈ ನಾಲ್ಕು ಕಾರುಗಳಲ್ಲಿ ನಿಮ್ಮ ದುಡ್ಡಿಗೆ ತಕ್ಕ ಬೆಲೆ ಕೊಡುವ ಕಾರು ಯಾವುದು ಅಂತ ಡಿಸೈಡ್ ಮಾಡೋದು ಸ್ವಲ್ಪ ಕಷ್ಟ. ಈ ಜನಪ್ರಿಯ ಎಸ್ಯುವಿಗಳ ಬೆಲೆ, ಮೈಲೇಜ್, ಇಂಜಿನ್, ಸೇಫ್ಟಿ ಹಾಗೂ ಫೀಚರ್ಸ್ ಬಗ್ಗೆ ನಾವಿಲ್ಲಿ ಹೇಳ್ತೀವಿ.
ಟಾಟಾ ನೆಕ್ಸಾನ್: 5-ಸ್ಟಾರ್ ಸೇಫ್ಟಿ ಜೊತೆಗೆ ಸೂಪರ್ ಮೈಲೇಜ್
ಟಾಟಾ ನೆಕ್ಸಾನ್ ಕಾರಿನ ಆರಂಭಿಕ ಬೆಲೆ ಕೂಡ 7.39 ಲಕ್ಷ ರೂ. (ಎಕ್ಸ್-ಶೋರೂಂ) ಇದೆ. ಈ ಕಾರು 1.2 ಲೀಟರ್ ಟರ್ಬೊ-ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಇಂಜಿನ್ ಆಪ್ಷನ್ಗಳಲ್ಲಿ ಸಿಗುತ್ತದೆ. ನೆಕ್ಸಾನ್ ಕಾರು 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಅಷ್ಟೇ ಅಲ್ಲ, ಇದರಲ್ಲಿ 6 ಏರ್ಬ್ಯಾಗ್ಗಳು ಸ್ಟ್ಯಾಂಡರ್ಡ್ ಆಗಿ ಬರುತ್ತವೆ. ಕಾರಿನ ಒಳಗೆ 10.25 ಇಂಚಿನ ಟಚ್ಸ್ಕ್ರೀನ್, ಡಿಜಿಟಲ್ ಕ್ಲಸ್ಟರ್, 360 ಡಿಗ್ರಿ ಕ್ಯಾಮೆರಾ ಹಾಗೂ ವೆಂಟಿಲೇಟೆಡ್ ಸೀಟ್ಗಳಂತಹ ಮಾಡರ್ನ್ ಫೀಚರ್ಸ್ ಇವೆ. ಇದರ ಪೆಟ್ರೋಲ್ ಮಾಡೆಲ್ 17 ರಿಂದ 17.5 ಕಿ.ಮೀ ಮೈಲೇಜ್ ಕೊಟ್ಟರೆ, ಡೀಸೆಲ್ ಮಾಡೆಲ್ ಬರೋಬ್ಬರಿ 23 ರಿಂದ 24 ಕಿ.ಮೀ ಮೈಲೇಜ್ ಕೊಡುತ್ತದೆ.
ಮಾರುತಿ ಸುಜುಕಿ ಬ್ರೆಝಾ: ಸೂಪರ್ ಲುಕ್, ಬೆಸ್ಟ್ ಪರ್ಫಾರ್ಮೆನ್ಸ್
ಮಾರುತಿ ಸುಜುಕಿ ಬ್ರೆಝಾ ಕಾರಿನ ಆರಂಭಿಕ ಬೆಲೆ 7.39 ಲಕ್ಷ ರೂ. (ಎಕ್ಸ್-ಶೋರೂಂ) ಇದೆ. ಕಂಪನಿಯು ಇದರಲ್ಲಿ 1.5 ಲೀಟರ್ K15C ಪೆಟ್ರೋಲ್ ಇಂಜಿನ್ ನೀಡಿದ್ದು, ಇದು ಸ್ಮೂತ್ ಪರ್ಫಾರ್ಮೆನ್ಸ್ ಕೊಡುತ್ತದೆ. ಈ ಕಾರಿನ ಇಂಟೀರಿಯರ್ ತುಂಬಾ ಕಂಫರ್ಟ್ ಆಗಿದ್ದು, ಕ್ಯಾಬಿನ್ನಲ್ಲಿ ಒಳ್ಳೆ ಲೆಗ್ರೂಮ್ ಸಿಗುತ್ತದೆ.
ಸೇಫ್ಟಿ ವಿಚಾರಕ್ಕೆ ಬಂದರೆ, ಬ್ರೆಝಾ ಕಾರಿನಲ್ಲಿ 6 ಏರ್ಬ್ಯಾಗ್ಗಳು, 5-ಸ್ಟಾರ್ ಭಾರತ್ NCAP ರೇಟಿಂಗ್, ESP ಹಾಗೂ ಹಿಲ್ ಹೋಲ್ಡ್ ಅಸಿಸ್ಟ್ ಫೀಚರ್ಸ್ ಇವೆ. ಜೊತೆಗೆ 9/10.1 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್, ಎಲೆಕ್ಟ್ರಿಕ್ ಸನ್ರೂಫ್, 360-ಡಿಗ್ರಿ ಕ್ಯಾಮೆರಾ ಮತ್ತು ವೈರ್ಲೆಸ್ ಚಾರ್ಜರ್ ಸೌಲಭ್ಯಗಳಿವೆ.
ಸದ್ಯ ಮಾರುತಿ ಸುಜುಕಿ ಕಂಪನಿಯಲ್ಲಿ ಅತಿ ಹೆಚ್ಚು ಸೇಲ್ ಆಗುತ್ತಿರುವ ಮಾಡೆಲ್ ಎಂದರೆ ಇದೇ ಬ್ರೆಝಾ. ಹಬ್ಬದ ಸೀಸನ್ನಲ್ಲಿ ಈ ಕಾರು ಭರ್ಜರಿಯಾಗಿ ಸೇಲ್ ಆಗುತ್ತಿದೆ. ದೇಶಾದ್ಯಂತ ಇದುವರೆಗೆ ಬರೋಬ್ಬರಿ 15 ಲಕ್ಷ ಬ್ರೆಝಾ ಕಾರುಗಳು ಮಾರಾಟವಾಗಿವೆ.
ಹ್ಯುಂಡೈ ವೆನ್ಯೂ: ಅರ್ಬನ್ ಸ್ಟೈಲ್ ಜೊತೆಗೆ ಅಡ್ವಾನ್ಸ್ಡ್ ಟೆಕ್ನಾಲಜಿ
ಹ್ಯುಂಡೈ ವೆನ್ಯೂ ಕಾರಿನ ಆರಂಭಿಕ ಬೆಲೆ 7.99 ಲಕ್ಷ ರೂ. (ಎಕ್ಸ್-ಶೋರೂಂ) ನಿಂದ ಶುರುವಾಗುತ್ತದೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಟರ್ಬೊ-ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಇಂಜಿನ್ ಆಪ್ಷನ್ಗಳಿವೆ. ವೆನ್ಯೂ ಕ್ಯಾಬಿನ್ ತುಂಬಾ ಪ್ರಾಕ್ಟಿಕಲ್ ಆಗಿದೆ. ಇದರಲ್ಲಿ ರಿಕ್ಲೈನಿಂಗ್ ರಿಯರ್ ಸೀಟ್ಗಳು ಹಾಗೂ ಆಂಬಿಯೆಂಟ್ ಲೈಟಿಂಗ್ ನೀಡಿದ್ದಾರೆ. ಜೊತೆಗೆ 8 ಇಂಚಿನ ಟಚ್ಸ್ಕ್ರೀನ್, ಬ್ಲೂಲಿಂಕ್ ಕನೆಕ್ಟೆಡ್ ಕಾರ್ ಟೆಕ್, ಲೆವೆಲ್-2 ADAS ನಂತಹ ಸೇಫ್ಟಿ ಫೀಚರ್ಸ್ ಇವೆ. ಎಲ್ಲಾ ವೇರಿಯೆಂಟ್ಗಳಲ್ಲೂ 6 ಏರ್ಬ್ಯಾಗ್ಗಳು ಸ್ಟ್ಯಾಂಡರ್ಡ್ ಆಗಿ ಸಿಗುತ್ತವೆ. ಇಂಜಿನ್ ಆಧಾರದ ಮೇಲೆ ಈ ಕಾರು 17 ರಿಂದ 21 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ.
ಸ್ಕೋಡಾ ಕೈಲಾಕ್: ಪ್ರೀಮಿಯಂ ಡಿಸೈನ್, ಪವರ್ಫುಲ್ ಇಂಜಿನ್
ಸ್ಕೋಡಾ ಕೈಲಾಕ್ ಕಾರಿನ ಆರಂಭಿಕ ಬೆಲೆ 7.59 ಲಕ್ಷ ರೂ. (ಎಕ್ಸ್-ಶೋರೂಂ) ಇದೆ. ಕಂಪನಿಯು ಇದರಲ್ಲಿ 1.0 ಲೀಟರ್ TSI ಟರ್ಬೊ-ಪೆಟ್ರೋಲ್ ಇಂಜಿನ್ ನೀಡಿದೆ. ಇದು 115PS ಪವರ್ ಹಾಗೂ 178Nm ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿ 446 ಲೀಟರ್ ಬೂಟ್ ಸ್ಪೇಸ್ ಇದ್ದು, ಫ್ಯಾಮಿಲಿ ಟ್ರಿಪ್ಗಳಿಗೆ ಹೇಳಿಮಾಡಿಸಿದಂತಿದೆ. ಇದರಲ್ಲಿ 10.1 ಇಂಚಿನ ಟಚ್ಸ್ಕ್ರೀನ್, ವೆಂಟಿಲೇಟೆಡ್ ಸೀಟ್ಗಳು ಹಾಗೂ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಫೀಚರ್ಸ್ ಇವೆ. ಸೇಫ್ಟಿಗಾಗಿ 6 ಏರ್ಬ್ಯಾಗ್ಗಳು ಮತ್ತು ರೋಲ್ಓವರ್ ಪ್ರೊಟೆಕ್ಷನ್ ನೀಡಿದ್ದಾರೆ. ಈ ಕಾರು ಸುಮಾರು 18 ರಿಂದ 19 ಕಿ.ಮೀ ಮೈಲೇಜ್ ಕೊಡುತ್ತದೆ.
ನಿಮ್ಮ ಫ್ಯಾಮಿಲಿಗೆ ಯಾವ ಎಸ್ಯುವಿ ಬೆಸ್ಟ್?
ಯಾವುದೇ ಟೆನ್ಷನ್ ಇಲ್ಲದೆ ಒಳ್ಳೆ ಮೈಲೇಜ್ ಹಾಗೂ ಕಡಿಮೆ ಮೇಂಟೆನೆನ್ಸ್ ಬೇಕು ಎನ್ನುವವರಿಗೆ ಮಾರುತಿ ಬ್ರೆಝಾ ಬೆಸ್ಟ್ ಆಪ್ಷನ್. ಇನ್ನು ಹೆಚ್ಚಿನ ಸೇಫ್ಟಿ ಹಾಗೂ ಡೀಸೆಲ್ ಇಂಜಿನ್ ಇಷ್ಟಪಡುವವರಿಗೆ ಟಾಟಾ ನೆಕ್ಸಾನ್ ಪರ್ಫೆಕ್ಟ್ ಚಾಯ್ಸ್. ಪವರ್ಫುಲ್ ಡ್ರೈವಿಂಗ್ ಎಕ್ಸ್ಪೀರಿಯೆನ್ಸ್ ಹಾಗೂ ದೊಡ್ಡ ಬೂಟ್ ಸ್ಪೇಸ್ ಬೇಕಿದ್ದರೆ ನೀವು ಸ್ಕೋಡಾ ಕೈಲಾಕ್ ಆಯ್ಕೆ ಮಾಡಬಹುದು. ಮಾಡರ್ನ್ ಡಿಸೈನ್ ಹಾಗೂ ADAS ನಂತಹ ಅಡ್ವಾನ್ಸ್ಡ್ ಫೀಚರ್ಸ್ ಹುಡುಕುತ್ತಿರುವವರಿಗೆ ಹ್ಯುಂಡೈ ವೆನ್ಯೂ ಹೇಳಿಮಾಡಿಸಿದ ಕಾರು.


