Asianet Suvarna News Asianet Suvarna News

Auto Sales 2021: ಸಾಕಷ್ಟು ಅಡೆತಡೆಗಳ ನಡುವೆಯೂ ಶೇ.27ರಷ್ಟು ಮಾರಾಟದ ಪ್ರಗತಿ ಸಾಧಿಸಿದ ಆಟೊಮೊಬೈಲ್ ಕ್ಷೇತ್ರ!

  • ಸೆಮಿಕಂಡಕ್ಟರ್‌, ಕೋವಿಡ್‌-19, ಕಚ್ಚಾ ವಸ್ತುಗಳ ಬೆಲೆ ಏರಿಕೆ ಸವಾಲುಗಳು
  • 2020ರಲ್ಲಿ ಸಂಪೂರ್ಣ ಕುಸಿತ ಕಂಡಿದ್ದ ಮಾರುಕಟ್ಟೆ
  • 2021ರಲ್ಲಿ ಏಕಾಏಕಿ ಪ್ರಗತಿ
Automobile field sees 27 percent growth in sales despite all the bumps
Author
Bangalore, First Published Jan 2, 2022, 12:29 PM IST
  • Facebook
  • Twitter
  • Whatsapp

Auto Desk: ಕೋವಿಡ್‌-19 ಸಾಂಕ್ರಾಮಿಕದಿಂದ 2020ನೇ ಸಾಲಿನಲ್ಲಿ ಬಳಲಿದ್ದ ಆಟೊಮೊಬೈಲ್‌ (Automobile) ಕ್ಷೇತ್ರಕ್ಕೆ 2021ನೇ ಸಾಲು ಅಷ್ಟೇನು ನಿರಾಶದಾಯಕವಾಗಿರಲಿಲ್ಲ. ಹಾಗೆಂದು ಸವಾಲುಗಳೇನು ಕಡಿಮೆಯಿರಲಿಲ್ಲ. ಈ ಎಲ್ಲಾ ಸವಾಲುಗಳ ನಡುವೆಯೇ 2021ನೇ ಸಾಲಿನಲ್ಲಿ ಆಟೊಮೊಬೈಲ್ ಮಾರಾಟ ಪ್ರಮಾಣ ದೇಶದಲ್ಲಿ ಶೇ.27 ಮೀರಿದೆ. ಇದು ಇತಿಹಾಸದಲ್ಲೇ ಮೂರನೇ ಬಾರಿಗೆ ದಾಖಲಾದ ಅತಿ ಹೆಚ್ಚಿನ ಮಾರಾಟವಾಗಿದೆ. 2021ರಲ್ಲಿ ಮಾರಣಾಂತಿಕವಾಗಿದ್ದ ಕೋವಿಡ್‌ (Covid) ಎರಡನೇ ಅಲೆ, ಸೆಮಿಕಂಡಕ್ಟರ್‌ ಕೊರತೆ, ಕಚ್ಚಾ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳು ಆಟೊಮೊಬೈಲ್‌ ಕ್ಷೇತ್ರವನ್ನು ಕಾಡುತ್ತಿದ್ದವು. ಆದರೂ, ವಾಹನಗಳ ಮಾರಾಟ ಸಂಖ್ಯೆ 30 ಲಕ್ಷ ದಾಟಿರುವುದು ಒಂದು ದಾಖಲೆಯಾಗಿದೆ.

ಸಾಕಷ್ಟು ಉತ್ಪಾದನಾ ಅಡ್ಡಿಗಳು ಮತ್ತು ಬಾಕಿ ಉಳಿದಿರುವ ಸುದೀರ್ಘ ಡೆಲಿವರಿಗಳು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ. ಹಲವು ಕಾರು ತಯಾರಕರಿಂದ ಒಟ್ಟು ಸುಮಾರು 7 ಲಕ್ಷ ವಾಹನಗಳು ಡೆಲಿವರಿಗೆ ಬಾಕಿ ಇದೆ ಎಂದು ಅಂದಾಜಿಸಲಾಗುತ್ತಿದೆ. ಇದೆಲ್ಲದರ ನಡುವೆಯೂ 2021ನೇ ಸಾಲಿನಲ್ಲಿ ಕಾರು ತಯಾರಕ ಕಂಪನಿಗಳು ಡೀಲರ್‌ಶಿಪ್‌ಗಳಿಗೆ (dealership) 30.82 ಲಕ್ಷ ಕಾರುಗಳನ್ನು ಪೂರೈಕೆ ಮಾಡಿವೆ. 2020ರಲ್ಲಿ ಇದು 24.33 ಲಕ್ಷ ವಾಹನಗಳಾಗಿದ್ದವು. 2020ರಲ್ಲಿ ಕೋವಿಡ್‌ ಸಾಂಕ್ರಾಮಿಕದ ಆರಂಭಿಕ ಹಂತವಾಗಿದ್ದು, ಕಂಪನಿಗಳು, ಡೀಲರ್‌ಗಳು ಮತ್ತು ಗ್ರಾಹಕರು ಕೂಡ ಇದನ್ನು ಎದುರಿಸುವ ಮಾರ್ಗ ಅರಸುತ್ತಿದ್ದರಿಂದ ಮಾರುಕಟ್ಟೆ ಸಂಪೂರ್ಣ ಕುಸಿತ ಕಂಡಿತ್ತು. ಇದರ ಪರಿಣಾಮವಾಗಿಯೇ 2021ರಲ್ಲಿ ಎಲ್ಲವೂ ಮತ್ತೊಮ್ಮೆ ಸುಗಮಗೊಂಡಿದ್ದು, ಮಾರುಕಟ್ಟೆ ಪ್ರಮಾಣ ಕೂಡ ಗಣನೀಯವಾಗಿ ಏರಿಕೆಯಾಗಿದೆ.

5 ಲಕ್ಷ ದಾಟಿದ ದೇಶಿಯ ಕಾರುಗಳ ಮಾರಾಟ!

ಪ್ರಯಾಣಿಕರ ವಾಹನಗಳ ಮಾರಾಟ ಮೊಟ್ಟ ಮೊದಲ ಬಾರಿಗೆ 2017ರಲ್ಲಿ 30 ಲಕ್ಷದ ಗಡಿ ದಾಟಿತ್ತು. ಈ ವರ್ಷ 32.3 ಲಕ್ಷ ವಾಹನಗಳು ಮಾರಾಟವಾಗಿದ್ದವು. ನಂತರ, 2018ರಲ್ಲಿ ಕೂಡ 33.95 ಲಕ್ಷ ವಾಹನಗಳು ಮಾರಾಟವಾಗಿದ್ದವು. ನಂತರ 2019ರಲ್ಲಿ ಅದು 29.62 ಲಕ್ಷಕ್ಕೆ ಕುಸಿದಿತ್ತು. 2021ರಲ್ಲಿ ಮತ್ತೆ ಏರಿಕೆಯಾಗಿದೆ. ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ (Maruti Suzuki) ಕೂಡ ಸೆಮಿ ಕಂಡಕ್ಟರ್‌ ಕೊರತೆಯಿಂದ ಭಾರಿ ಸಮಸ್ಯೆ ಎದುರಿಸಿದ್ದು, 2021ರಲ್ಲಿ 13.65 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. 2020ರಲ್ಲಿ ಇದು 12.14 ಲಕ್ಷದಷ್ಟಿತ್ತು. 2018ರಲ್ಲಿ ಮಾರಾಟಗೊಂಡ 17.31 ಲಕ್ಷ ವಾಹನಗಳ ಮಾರಾಟಕ್ಕೆ ಹೋಲಿಸಿದರೆ ಇದು ಅತ್ಯಂತ ಕಡಿಮೆಯಾಗಿದೆ.

ಇದನ್ನೂ ಓದಿAuto Sales: 2021ರಲ್ಲಿ ಶೇ.130ರಷ್ಟು ಪ್ರಗತಿ ದಾಖಲಿಸಿದ ಸ್ಕೋಡಾ ಆಟೋ ಇಂಡಿಯಾ

ಮಾರುತಿಯ ಪ್ರತಿಸ್ಪರ್ಧಿ ಹ್ಯುಂಡೈ (Hyundai), 2021ರಲ್ಲಿ ಶೇ.19ರಷ್ಟು ಮಾರಾಟ ಪ್ರಗತಿ ದಾಖಲಿಸಿದೆ. ದೇಶಿಯ ಕಾರುಗಳ ಮಾರಾಟ 5 ಲಕ್ಷದಷ್ಟಿದೆ. 2020ರಲ್ಲಿ ಇದು 4.2 ಲಕ್ಷದಷ್ಟಿತ್ತು. ಸೆಮಿ ಕಂಡಕ್ಟರ್‌ ಕೊರತೆಯಿಂದ ಕಂಪನಿಯ ಕ್ರೇಟಾ ಹಾಗೂ ವೆನ್ಯೂ ಎಸ್‌ಯುವಿಗಳ ಡೆಲಿವರಿ ವಿಳಂಬವಾಗುತ್ತಿದ್ದು, 1 ಲಕ್ಷಕ್ಕೂ ಹೆಚ್ಚಿನ ವಾಹನಗಳಿಗಾಗಿ ಗ್ರಾಹಕರು ಕಾದು ಕುಳಿತಿದ್ದಾರೆ ಎನ್ನಲಾಗಿದೆ. ಮಾರುತಿಯ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕ ಶಶಾಂಕ್‌ ಶ್ರೀವಾತ್ಸವ್‌ (Shashank Srivatsav) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ಸೆಮಿಕಂಡಕ್ಟರ್‌ ಕೊರತೆ ತಡೆಯಲು ಕಂಪನಿಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಶೇ.40ರಷ್ಟಿದ್ದ ಅತ್ಯಂತ ಕಡಿಮೆ ಉತ್ಪಾದನಾ ಮಟ್ಟದಿಂದ ನಾವು 2021ರ ನವೆಂಬರ್‌ನಲ್ಲಿ ಶೇ.83 ಹಾಗೂ ಡಿಸೆಂಬರ್‌ನಲ್ಲಿ ಶೇ.87ಕ್ಕೆ ತಲುಪಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇದೇ ಪ್ರಗತಿ ಮುಂದುವರಿಯುವ ನಿರೀಕ್ಷೆಯಿದೆ” ಎಂದಿದ್ದಾರೆ.

ಇದನ್ನೂ ಓದಿ: Auto Sales: 2021ರಲ್ಲಿ 40,273 ಎಂಜಿ ಮೋಟಾರ್ಸ್ ವಾಹನಗಳ ಮಾರಾಟ!

ಆದರೆ, ಬೇಡಿಕೆಯ ಪ್ರಮಾಣ ಏರುಪೇರಾಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಯಾವುದೇ ಊಹೆ ಮಾಡುವುದುಕಷ್ಟವಾಗಿದೆ. ಸದ್ಯಕ್ಕೆ ಇನ್ನೂ ಹಲವು ವಿಷಯಗಳು ಅನಿಶ್ಚಿತವಾಗಿವೆ. ಇದು ಸೆಮಿಕಂಡಕ್ಟರ್‌ (Semiconducter) ಲಭ್ಯತೆ, ಆರ್ಥಿಕತೆಯ ಪ್ರಗತಿ ಮತ್ತು ಕೋವಿಡ್‌ ಪರಿಸ್ಥಿತಿಗಳನ್ನು ಒಳಗೊಂಡಿದೆ ಎಂದಿದ್ದಾರೆ. ಇದೆಲ್ಲದರ ಜೊತೆಗೆ, ಕಚ್ಚಾ ವಸ್ತುಗಳ ಗಣನೀಯ ಏರಿಕೆ ಹಿನ್ನೆಲೆಯಲ್ಲಿ, ಕಳೆದ ಕೆಲ ತಿಂಗಳಲ್ಲಿ ವಾಹನಗಳ ಬೆಲೆ ಕೂಡ ಏರಿಕೆಯಾಗಿದೆ. ಮುಂದಿನ ಕೆಲ ದಿನಗಳಲ್ಲಿ ಮತ್ತೊಂದು ಸುತ್ತಿನ ದರ ಏರಿಕೆಯಾಗುವ ನಿರೀಕ್ಷೆಯಿದೆ.

Follow Us:
Download App:
  • android
  • ios