Auto Sales: 2021ರಲ್ಲಿ ಶೇ.130ರಷ್ಟು ಪ್ರಗತಿ ದಾಖಲಿಸಿದ ಸ್ಕೋಡಾ ಆಟೋ ಇಂಡಿಯಾ

*ಮೆಚ್ಚುಗೆ ಗಳಿಸಿದ ಸ್ಕೋಡಾ ಕುಶಾಕ್‌
*2021ರಲ್ಲಿ 3,324 ಸ್ಕೋಡಾ ಕಾರುಗಳ ಮಾರಾಟ
*ಶೇ.130ರಷ್ಟು ಪ್ರಗತಿ ದಾಖಲೆ

Auto Sales Skoda Kushaq sells 23858 vehicles in 2021

Auto Desk: ಸ್ಕೋಡಾ ಆಟೋ ಇಂಡಿಯಾ (Skoda Auto India) 2020ರಲ್ಲಿ ದಾಖಲಿಸಿದ್ದ 10,387 ವಾಹನಗಳ ಮಾರಾಟಕ್ಕೆ ಹೋಲಿಸಿದರೆ 2021 ರಲ್ಲಿ ಕಂಪನಿ  23,858 ವಾಹನಗಳ ಮಾರಾಟದೊಂದಿಗೆ ಶೇ.130ರಷ್ಟು ಅಂದರೆ ಮೂರು ಅಂಕಿಯ ಬೆಳವಣಿಗೆ ದಾಖಲಿಸಿದೆ. ಸ್ಕೋಡಾದ ಒಟ್ಟು ಮಾರುಕಟ್ಟೆಯಲ್ಲಿ ಶೇ.60ರಷ್ಟು ಕೊಡುಗೆ ಕುಶಾಕ್ (Kushaq) ಎಸ್ಯುವಿ (SUV)ಯದ್ದಾಗಿದೆ ಎಂದು ಕಂಪನಿ ಹೇಳಿದೆ. ಸ್ಕೋಡಾ ಕುಶಾಕ್  (Scoda Kushaq) ಅನ್ನು ಜೂನ್ 2021 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಕಂಪನಿಯು ಭಾರತದಲ್ಲಿ 11,173 ವಾಹನಗಳನ್ನು ಮಾರಾಟ ಮಾಡಿದೆ.  ಈ ಎಸ್ಯುವಿ ಎಂಕ್ಯೂಬಿ- ಎಓ-ಐಎನ್ (SUV MQB-A0-IN) ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾದ ಮೊದಲ ಮಾದರಿಯಾಗಿದೆ. ಇದು 1.0-ಲೀಟರ್ ಟಿಎಸ್ಐ (TSI) ಎಂಜಿನ್ ಮತ್ತು 1.5-ಲೀಟರ್ ಟಿಎಸ್ಯ ಮೋಟಾರ್ನೊಂದಿಗೆ ಬರುತ್ತದೆ, ಎರಡೂ  ವೇರಿಯಂಟ್ಗಳ ಮ್ಯಾನ್ಯುಯಲ್ ಮತ್ತು ಆಟೊಮೆಟಿಕ್ ವೇರಿಯಂಟ್ಗಳಲ್ಲಿ ಲಭ್ಯವಿದೆ.

ಕಂಪನಿಯು ಕಳೆದ ವರ್ಷ ಇದೇ ಅವಧಿಯ ಡಿಸೆಂಬರ್ನಲ್ಲಿ ಮಾರಾಟವಾದ 1,303 ವಾಹನಗಳಿಗೆ ಹೋಲಿಸಿದರೆ 2021 ರಲ್ಲಿ 3,234 ವಾಹನಗಳು ಮಾರಾಟ ಕಂಡಿದ್ದು, ಇದರಿಂದಾಗಿ ಶೇ.148ರಷ್ಟು ಬೆಳವಣಿಗೆ ದಾಖಲಿಸಿದೆ.ಈ ಕುರಿತು ಮಾತನಾಡಿದ ಸ್ಕೋಡಾ ಆಟೋ ಇಂಡಿಯಾದ ಬ್ರ್ಯಾಂಡ್ ನಿರ್ದೇಶಕ ಝಾಕ್ ಹೋಲಿಸ್, "ಸ್ಕೋಡಾ ಆಟೋ ಇಂಡಿಯಾದ ಸಂಪೂರ್ಣ ತಂಡಕ್ಕೆ, 2021 ಸಂತಸ ತಂದಿದೆ. ನಾವು ಸ್ಕೋಡಾ ಕುಶಾಕ್ ಅನ್ನು ಯಶಸ್ವಿಯಾಗಿ ಪರಿಚಯಿಸಿದ್ದೇವೆ. ಭಾರತದಲ್ಲಿ ಬೆಳವಣಿಗೆಯ ಹೊಸ ಹಂತವನ್ನು ಪ್ರಾರಂಭಿಸಿದ್ದೇವೆ. ದೇಶಾದ್ಯಂತ ನಮ್ಮ ಗ್ರಾಹಕರ ಸಂಪರ್ಕ ಕೇಂದ್ರಗಳನ್ನು ವಿಸ್ತರಿಸಿದ್ದೇವೆ. ಇತ್ತೀಚೆಗಷ್ಟೇ ಕಂಪನಿ ಸ್ಲಾವಿಯಾವನ್ನು ಕೂಡ ಅನಾವರಣಗೊಳಿಸಿದ್ದೇವೆ” ಎಮದರು. ಭಾರತದಲ್ಲಿ ಸ್ಲಾವಿಯಾ ಬಿಡುಗಡೆಯೊಂದಿಗೆ ಸ್ಕೋಡಾ ಆಟೋ ಭಾರತದಲ್ಲಿ ತನ್ನ ನೆಲೆಯನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುತ್ತಿದೆ.

ಸ್ಕೋಡಾ ಕೊಡಿಯಾಕ್ ಫೇಸ್ಲಿಫ್ಟ್ ಬಿಡುಗಡೆ ಸಜ್ಜು!

ಕಂಪನಿಯು ಇದೀಗ ಹೊಸ ಸ್ಕೋಡಾ ಕೊಡಿಯಾಕ್ ಫೇಸ್ಲಿಫ್ಟ್ ಬಿಡುಗಡೆಗೆ ಸಜ್ಜಾಗಿದೆ.  ಇದು  2022ರ ಜನವರಿ ತಿಂಗಳಲ್ಲಿ ನಡೆಯಲಿದೆ. 1895 ರಲ್ಲಿ ಸ್ಥಾಪಿತವಾದ ಸ್ಕೋಡಾ ಆಟೋ ಜೆಕ್ ಆಟೋಮೊಬೈಲ್ ತಯಾರಕ ಕಂಪನಿಯಾಗಿದೆ. ಇದಕ್ಕೆ ಹಿಂದೆ ಲಾರಿನ್ ಮತ್ತು ಕ್ಲೆಮೆಂಟ್ ಎಂದು ಹೆಸರಿಸಲಾಯಿತು. 1925 ರಲ್ಲಿ ಸ್ಕೋಡಾ ವರ್ಕ್ಸ್ ಸ್ವಾಧೀನಪಡಿಸಿಕೊಂಡಿತು. ಕಂಪನಿಯು 1991 ರಲ್ಲಿ ಖಾಸಗೀಕರಣಗೊಂಡಿತು ಮತ್ತು 2000 ರಲ್ಲಿ ವೋಕ್ಸ್ವ್ಯಾಗನ್ ಗ್ರೂಪ್ ಅದನ್ನು ಖರೀದಿಸಿತು. 2001 ರಲ್ಲಿ, ವೋಕ್ಸ್ವ್ಯಾಗನ್ ಗ್ರೂಪ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಸ್ಕೋಡಾ ಆಟೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಭಾರತದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ಇದನ್ನೂ ಓದಿ: Auto Sales: 2021ರಲ್ಲಿ 40,273 ಎಂಜಿ ಮೋಟಾರ್ಸ್ ವಾಹನಗಳ ಮಾರಾಟ!

ಕಂಪನಿಯು ತನ್ನ ಮೊದಲ ಕಾರು ಆಕ್ಟೇವಿಯಾ ಪ್ರೀಮಿಯಂ ಸಲೂನ್ ಅನ್ನು 2002 ರ ಆರಂಭದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಸ್ಕೋಡಾ ಇಂಡಿಯಾ ತನ್ನ ಮೊದಲ ಉತ್ಪಾದನಾ ಘಟಕವನ್ನು ಪಶ್ಚಿಮ ಔರಂಗಾಬಾದ್ನ ಶೆಂಡ್ರಾದಲ್ಲಿ ಸ್ಥಾಪಿಸಿದ್ದು ಈಗ ಅಲ್ಲಿ ಸ್ಕೋಡಾ ಕಾರುಗಳನ್ನು ತಯಾರಿಸಲಾಗುತ್ತದೆ. ಸ್ಕೋಡಾ ಇಂಡಿಯಾದ ಉತ್ಪನ್ನ ಶ್ರೇಣಿಯು ಪ್ರಾಥಮಿಕವಾಗಿ ಸಲೂನ್ಗಳು ಮತ್ತು ಎಸ್ಯುವಿ ಸೇರಿದಂತೆ ಪ್ರೀಮಿಯಂ ವಾಹನಗಳನ್ನು ನೀಡುತ್ತದೆ. ಕಂಪನಿಯು ತನ್ನ ಉತ್ಪನ್ನದ ಪೋರ್ಟ್ಫೋಲಿಯೊದಲ್ಲಿ ಪ್ರೀಮಿಯಂ ಹ್ಯಾಚ್ಬ್ಯಾಕ್ ಹೊಂದಿತ್ತು, ಇದನ್ನು ಫ್ಯಾಬಿಯಾ ಎಂದು ಹೆಸರಿಸಲಾಯಿತು, ನಂತರ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಅದನ್ನು ನಿಲ್ಲಿಸಲಾಯಿತು.

ಇದನ್ನೂ ಓದಿCar Price Hike 2022 ಮಾರುತಿ ಸುಜುಕಿ to ಟೊಯೋಟಾ, ಇಲ್ಲಿದೆ ಹೊಸ ವರ್ಷದಿಂದ ಬೆಲೆ ಹೆಚ್ಚಿಸಿದ ಕಾರು ಕಂಪನಿ ಲಿಸ್ಟ್!

ಸ್ಕೋಡಾ ಇಂಡಿಯಾ ಒಟ್ಟು 8 ಕಾರು ಮಾದರಿಗಳನ್ನು ನೀಡುತ್ತದೆ. ಇವುಗಳು ಭಾರತದಲ್ಲಿ 4 ಸ್ಕೋಡಾ ಮುಂಬರುವ ಕಾರುಗಳು ಮತ್ತು 4 ಹೊಸ ಸ್ಕೋಡಾ ಕಾರುಗಳನ್ನು ಒಳಗೊಂಡಿವೆ. ದೇಶದಲ್ಲಿರುವ ಸ್ಕೋಡಾ ಕಾರುಗಳ ಪಟ್ಟಿಯು 3 ಸೆಡಾನ್ ಕಾರುಗಳು, 1 ಎಸ್ಯುವಿ ಕಾರುಗಳನ್ನು ಒಳಗೊಂಡಿದೆ. ತಯಾರಕರು 22 ಪೆಟ್ರೋಲ್ ರೂಪಾಂತರಗಳನ್ನು ನೀಡುತ್ತಾರೆ. ಭಾರತದಲ್ಲಿನ ಕೆಲವು ಜನಪ್ರಿಯ ಸ್ಕೋಡಾ ಕಾರುಗಳಲ್ಲಿ ಸ್ಕೋಡಾ ಆಕ್ಟೇವಿಯಾ, ಸ್ಕೋಡಾ ಕುಶಾಕ್, ಸ್ಕೋಡಾ ರಾಪಿಡ್, ಸ್ಕೋಡಾ ಸೂಪರ್ಬ್ ಸೇರಿವೆ. 
 

Latest Videos
Follow Us:
Download App:
  • android
  • ios