ಆಗಾಗ ಕೈಕೊಡ್ತಿದ್ದ 17.5 ಲಕ್ಷದ ಕಾರು: ಬೇಸತ್ತ ಮಾಲೀಕ ಏನ್ ಮಾಡ್ದ ನೋಡಿ..!
ಕಾರು ಖರೀದಿಸುವವರೆಗೂ ಚೆನ್ನಾಗಿ ನಡೆದುಕೊಳ್ಳುವ ಶೋ ರೂಮ್ ಸಿಬ್ಬಂದಿ ಕಾರು ಖರೀದಿಸಿದ ನಂತರ ನೀಡಬೇಕಾದ ಕೆಲವು ಸೇವೆಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. 17.5 ಲಕ್ಷ ಮೌಲ್ಯದ ಕಾರು ಖರೀದಿಸಿದ ವ್ಯಕ್ತಿಯೊಬ್ಬರಿಗೆ ಇದೇ ಅನುಭವ ಆಗಿದ್ದು, ಅದಕ್ಕೆ ಅವರೇನು ಮಾಡಿದ್ದಾರೆ ನೋಡಿ.
ಉದಯ್‌ಪುರ: ಯಾವುದೇ ದುಬಾರಿ ವಸ್ತುಗಳು ವಿಶೇಷವಾಗಿ ವಾಹನಗಳನ್ನು ಖರೀದಿಸಿದಾಗ ನಾವು ಎಲ್ಲಿ ವಾಹನ ಖರೀದಿಸಿರುತ್ತೇವೆಯೋ ಅಲ್ಲಿನ ಶೋ ರೂಮ್ ಸಿಬ್ಬಂದಿ ಅದಕ್ಕೆ ಸಂಬಂಧಿಸಿದ ಸೇಲ್ಸ್ ಸರ್ವಿಸ್‌ಗಳನ್ನು ಮಾಡುತ್ತಾರೆ. ಅದರಲ್ಲಿ ಅವರಿಗೂ ಲಾಭವಿರುತ್ತದೆ. ಆದರೆ ಕೆಲವರು ಕಾರು ಖರೀದಿಸುವವರೆಗೂ ಚೆನ್ನಾಗಿ ನಡೆದುಕೊಳ್ಳುವ ಶೋ ರೂಮ್ ಸಿಬ್ಬಂದಿ ಕಾರು ಖರೀದಿಸಿದ ನಂತರ ನೀಡಬೇಕಾದ ಕೆಲವು ಸೇವೆಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. 17.5 ಲಕ್ಷ ಮೌಲ್ಯದ ಕಾರು ಖರೀದಿಸಿದ ವ್ಯಕ್ತಿಯೊಬ್ಬರಿಗೆ ಇದೇ ಅನುಭವ ಆಗಿದ್ದು, ಅದಕ್ಕೆ ಅವರೇನು ಮಾಡಿದ್ದಾರೆ ನೋಡಿ.
ರಾಜಸ್ಥಾನದ ಶಂಕರ್‌ಲಾಲ್ (Shankarlal) ಎಂಬುವರು 17.5ಲಕ್ಷ ರೂಪಾಯಿ ಮೌಲ್ಯದ ಹೊಸ ಕಾರೊಂದನ್ನು ಖರೀದಿಸಿದ್ದರು. ಆದರೆ ಕಾರಿನಲ್ಲಿ ಮತ್ತೆ ಮತ್ತೆ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರುವಾಗಿದ್ದವು. ಈ ಹಿನ್ನೆಲೆಯಲ್ಲಿ ಅವರು ಎರಡೆರಡು ಬಾರಿ ಕಾರನ್ನು ಸರ್ವಿಸ್‌ಗೆ ನೀಡಿದ್ದರು. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಬೇಸರಗೊಂಡ ಅವರು ಈ 17.5 ಲಕ್ಷ ಮೌಲ್ಯದ ಕಾರನ್ನು ಕತ್ತೆಗಳಿಗೆ ಕಟ್ಟಿ ಎಳೆಸಿ ಶೋ ರೂffಗೆ ತಲುಪಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರು ಕತ್ತೆಗಳಿಂದ ಕಾರನ್ನು ಎಳೆಸಿಕೊಂಡು ಹೋಗುತ್ತಿದ್ದರೆ, ಮೂವರು ಈ ಕಾರನ್ನು ಹಿಂದಿನಿಂದ ತಳ್ಳಿಕೊಂಡು ಹೋಗುತ್ತಿದ್ದಾರೆ. ರಾಜಸ್ಥಾನದ ಉದಯ್‌ಪುರ ನಿವಾಸಿಯಾಗಿರುವ ಶಂಕರ್‌ಲಾಲ್ ಅವರು ಮದ್ರಿ ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವವ ಶೋ ರೂಮ್ ಒಂದರಿಂದ ಈ ಕಾರನ್ನು ಖರೀದಿಸಿದ್ದರು.
Viral Photo : ಇಂಟರ್ನೆಟ್ ಗಮನ ಸೆಳೆದ ಅಪ್ಪ – ಮಾವನ ನಿದ್ರೆ ಫೋಟೋ
ಈ ಬಗ್ಗೆ ಶಂಕರ್‌ಲಾಲ್ (Shankarlal) ಅವರ ಅಳಿಯ ಉದಯ್‌ಪುರದ ಸುಂದರ್‌ವಾಸ್ (Sundarwas area in Udaipur) ಪ್ರದೇಶದ ನಿವಾಸಿಯಾಗಿರು ರಾಜ್‌ಕುಮಾರ್ ಗಯಾರಿ (Raj Kumar Gayari) ಅವರು ಪ್ರತಿಕ್ರಿಯಿಸಿದ್ದು, ಈ ಕಾರನ್ನು ಖರೀದಿಸಿದ ನಂತರ ಹಲವು ಬಾರಿ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಹೀಗಾಗಿ ಇದನ್ನು ಈ ಹಿಂದೆಯೇ ಎರಡು ಬಾರಿ ಸರ್ವೀಸ್ ಸೆಂಟರ್‌ಗೆ ತರಲಾಗಿತ್ತು. ಆದರೆ ಸರ್ವಿಸ್ ಸೆಂಟರ್‌ನ ಸಿಬ್ಬಂದಿ ಯಾವುದೇ ಸಮಾಧಾನಕರವಾದ ಪರಿಹಾರವನ್ನು ನೀಡಲಿಲ್ಲ.
ಅಲ್ಲದೇ ಕುಟುಂಬದ ಕಾರ್ಯಕ್ರಮವೊಂದಕ್ಕೆ ಈ ಕಾರಲ್ಲಿ ತೆರಳಿದ್ದಾಗ ಮತ್ತೆ ಕಾರು ಕೈಕೊಟ್ಟಿದ್ದು, ಕಾರನ್ನು ಸ್ಟಾರ್ಟ್ ಮಾಡಬೇಕಾದರೆ ಹಲವು ಬಾರಿ ಹಿಂದಿನಿಂದ ತಳ್ಳಬೇಕಾದಂತಹ ಸ್ಥಿತಿ ನಿರ್ಮಾಣವಾಗಿತ್ತು ಎಂದು ರಾಜ್‌ಕುಮಾರ್ (Raj Kumar) ಹೇಳಿದ್ದಾರೆ. ಆದರೆ ಈ ಆರೋಪದ ಬಗ್ಗೆ ಶೋರೂಮ್‌ನವರು ಪ್ರತಿಕ್ರಿಯಿಸಿದ್ದು, ಬ್ಯಾಟರಿ ಸಮಸ್ಯೆಯಿಂದಾಗಿ ಹೀಗಾಗಿದೆ. ಸ್ವಲ್ಪ ದೂರ ವಾಹನ ಓಡಿಸಿದರೆ ಬ್ಯಾಟರಿ ಚಾರ್ಜ್ ಆಗಿ ಈ ಸಮಸ್ಯೆ ದೂರವಾಗಲಿದೆ ಎಂದಿದ್ದಾರೆ. ಆದರೆ ಇವರ ಈ ಸಲಹೆಯಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಾರಿನ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಎಲ್ಲಾ ಅವಾಂತರಗಳಿಂದಾಗಿ ನಾವು ಕಾರನ್ನು ಶೋ ರೂಮ್‌ಗೆ (showroom) ವಾಪಸು ನೀಡಲು ನಿರ್ಧರಿಸಿದ್ದೇವೆ. ಕಾರು ಪ್ರಸ್ತುತ ಶೋರೂಮ್‌ನಲ್ಲಿದ್ದು, ಕಾರಿನ ಮಾಲೀಕರು ಇದರ ಬದಲು ಬೇರೆ ಕಾರು ನೀಡುವಂತೆ ಆಗ್ರಹಿಸಿದ್ದಾರೆ.
ಭಾರತದಲ್ಲಿ 1.3 ಕೋಟಿ ಬೆಲೆಯ ಡಿಫೆಂಡರ್ 130 ಕಾರು ಲಾಂಚ್!