ಸ್ಟ್ರೋಕ್‌ನಿಂದ ಆಸ್ಪತ್ರೆ ದಾಖಲಾದ ನಿತಿನ್ ಕಾಮತ್, ಮಹತ್ವದ ಸಂದೇಶ ಹಂಚಿಕೊಂಡ ಉದ್ಯಮಿ!
ಯುವ ಉದ್ಯಮಿ, ಝೆರೋಧಾ ಸಂಸ್ಥೆ ಸಿಇಒ ನಿಖಿಲ್ ಕಾಮತ್ ಬ್ಯೂಸಿನೆಸ್ ಜಗತ್ತಿನಲ್ಲಿ ಅತೀ ದೊಡ್ಡ ಹೆಸರು. ಕರ್ನಾಟಕದ ಈ ಯುವ ಉದ್ಯಮಿ ದೇಶ ವಿದೇಶಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಆದರೆ ಫಿಟ್ ಅಂಡ್ ಫೈನ್ ಆಗಿದ್ದ ನಿತಿನ್ ಕಾಮತ್ ಸ್ಟ್ರೋಕ್‌ನಿಂದ ಆಸ್ಪತ್ರೆ ದಾಖಲಾಗಿರುವ ಮಾಹಿತಿ ಬಹಿರಂಗವಾಗಿದೆ.
ಬೆಂಗಳೂರು(ಫೆ.26) ಭಾರತದ ಯುವ ಉದ್ಯಮಿ, ವಿಶ್ವ ಮಟ್ಟದಲ್ಲಿ ಭಾರಿ ಪ್ರಖ್ಯಾತಿ ಪಡೆದಿರುವ ಕರ್ನಾಟಕದ ನಿಖಿಲ್ ಕಾಮತ್ ಅವರ ಝೆರೋಧಾ ಸಂಸ್ಥೆ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಝೆರೋದಾ ಸಂಸ್ಥೆಯ ಸಿಇಒ ನಿತಿನ್ ಕಾಮತ್ ಸ್ಟ್ರೋಕ್‌ನಿಂದ ಆಸ್ಪತ್ರೆ ದಾಖಲಾಗಿರುವ ಮಾಹಿತಿ ಬಹಿರಂಗವಾಗಿದೆ. 6 ವಾರಗಳ ಹಿಂದೆ ಸ್ಟ್ರೋಕ್‌ಗೆ ತುತ್ತಾಗಿ ಆಸ್ಪತ್ರೆ ದಾಖಲಾಗಿದ್ದೆ, ಇದೀಗ ನಿಧಾನವಾಗಿ ಚೇತರಿಸಿಕೊಳುತ್ತಿದ್ದೇನೆ. ಕನಿಷ್ಠ 3 ರಿಂದ 6 ತಿಂಗಳ ಅವಶ್ಯಕತೆ ಇದೆ ಎಂದು ನಿತಿನ್ ಕಾಮತ್ ಹೇಳಿದ್ದಾರೆ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ನಿತಿನ್ ಕಾಮತ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. 42 ವರ್ಷದ ಯುವ ಉದ್ಯಮಿ ತಮ್ಮ ಆರೋಗ್ಯ ಕುರಿತ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಬಿಡುವಿಲ್ಲದ ಕೆಲಸ, ಒತ್ತಡ, ಪ್ರಯಾಣ ಜೊತೆಗೆ, ಕಡಿಮೆ ನಿದ್ದೆಯಿಂದ ನಿತಿನ್ ಕಾಮತ್ ಆರೋಗ್ಯ ಹದಗೆಟ್ಟಿದೆ. ಇದರ ಜೊತೆಗೆ ತಂದೆಯ ನಿಧನ ನಿತಿನ್ ಕಾಮತ್‌ರನ್ನು ಮತ್ತಷ್ಟು ಕಾಡಿದೆ. ಇದರ ಪರಿಣಾಮ ಮೈಲ್ಡ್ ಸ್ಟ್ರೋಕ್‌ಗೆ ತುತ್ತಾಗಿದ್ದಾರೆ. ಕಳೆದ ಒಂದು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಿತಿನ್ ಕಾಮತ್ ಇದೀಗ ಬಿಡುಗಡೆಯಾಗಿದ್ದಾರೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ನಿತಿನ್ ಕಾಮತ್‌ಗೆ ಕನಿಷ್ಠ 3 ರಿಂದ 6 ತಿಂಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.
ಉಡುಪಿ ಬೀಚ್ ಫೋಟೋ ಶೇರ್ ಮಾಡಿದ ಬಿಲಿಯನೇರ್ ನಿಖಿಲ್ ಕಾಮತ್, ನಮ್ಮೂರೆ ಬೆಸ್ಟ್ ಅಂತಿದ್ದಾರೆ ಖ್ಯಾತ ಉದ್ಯಮಿ!
ತಮ್ಮ ಆರೋಗ್ಯದ ಕುರಿತು ನಿತಿನ್ ಕಾಮತ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. 6 ವಾರಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದೆ. ತಂದೆಯ ನಿಧನ, ಕಡಿಮೆ ನಿದ್ರೆ, ನಿಶ್ಯಕ್ತಿ, ನಿರ್ಜಲೀಕರಣ, ಅತಿಯಾದ ಕೆಲಸ, ಒತ್ತಡಗಳಲ್ಲಿ ನನ್ನಗೆ ಭಾದಿಸಿದ ಮೈಲ್ಡ್ ಸ್ಟ್ರೋಕ್‌ಗೆ ಕಾರಣವಾಗಿರಬದು. ಇದರಿಂದ ನಾನು ಸೊರಗಿ ಹೋದೆ. ಓದಲು-ಬರೆಯಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದೇನೆ. ನಿಧಾನವಾಗಿ ಓದಲು ಬರೆಯಲು ಪ್ರಯತ್ನಿಸುತ್ತಿದ್ದೇನೆ. ಆ್ಯಬ್ಸೆಂಟ್ ಮೈಂಡ್‌ನಿಂದ ಪ್ರೆಸೆಂಟ್ ಮೈಂಡ್‌ಗೆ ಬರುತ್ತಿದ್ದೇನೆ. ಚೇತರಿಕೆಗೆ ಕನಿಷ್ಠ 3 ರಿಂದ 6 ತಿಂಗಳ ಅವಶ್ಯಕತೆ ಇದೆ. ಫಿಟ್ ಆಗಿರುವ ವ್ಯಕ್ತಿಗೆ ಈ ರೀತಿ ಆಗಿದೆ ಅನ್ನೋದು ನನ್ನನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿದೆ. ಒಂದೇ ವೇಗ, ವೇಗ ಹೆಚ್ಚಿಸುತ್ತಾ ಓಡುತ್ತಿರುವಾಗ ಗೇರ್ ಬದಲಿಸುವುದು ತಿಳಿದೊಳ್ಳಬೇಕು. ಅವಶ್ಯಕತೆ ಬಿದ್ದಾಗ ನಿಧಾನವಾಗಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಸ್ವಲ್ಪ ಮುರಿದಿದೆ, ಆದರೆ ಟ್ರೆಡ್ ಮಿಲ್ ಕೌಂಟ್ ಆರಂಭಿಸುತ್ತಿದ್ದೇನೆ ಎಂದು ನಿಖಿಲ್ ಕಾಮತ್ ಸುದೀರ್ಘ ಪೋಸ್ಟ್ ಮಾಡಿದ್ದಾರೆ.
ಮೈಲ್ಡ್ ಸ್ಟ್ರೋಕ್‌ನಿಂದ ಚೇತರಿಸಿಕೊಳ್ಳುತ್ತಿರುವ ನಿತಿನ್ ಕಾಮತ್ ಇದೀಗ ವೈದ್ಯರು ಸೂಚನೆಯಂತೆ ನಿಧಾನವಾಗಿ ವ್ಯಾಯಾಮ ಆರಂಭಿಸಿದ್ದಾರೆ. ಶೀಘ್ರದಲ್ಲೇ ಚೇತರಿಸುವ ಭರವಸೆಯನ್ನು ಹೊಂದಿದ್ದಾರೆ. ತಮ್ಮ ಟ್ವೀಟ್ ಮೂಲಕ ಮಹತ್ವದ ಸಂದೇಶವನ್ನು ನೀಡಿದ್ದಾರೆ. ಒತ್ತಡದಲ್ಲಿ ಕೆಲಸ, ಅತೀಯಾದ ಕೆಲಸದಿಂದ ಕಡಿಮೆ ನಿದ್ದೆ, ಆರೋಗ್ಯದ ಕಾಳಜಿ ವಹಿಸದೇ ಇರುವುದು ಅತೀ ದೊಡ್ಡ ಹಿನ್ನಡೆ ಕಾರಣವಾಗಲಿದೆ ಎಂದಿದ್ದಾರೆ. ಇಷ್ಟೇ ಅಲ್ಲ ನೀವು ಜಿಮ್ ಅಭ್ಯಾಸ ಮಾಡಿ ಅದೆಷ್ಟೇ ಫಿಟ್ ಆಗಿದ್ದರೂ ದೇಹಕ್ಕೆ ನಿಯಮಿತವಾದ ನಿದ್ದೆ, ಆಹಾರ, ನೀರು, ಒತ್ತಡವಿಲ್ಲದ ಬದುಕು ಅತೀ ಅಗತ್ಯ ಅನ್ನೋದನ್ನು ಹೇಳಿದ್ದಾರೆ.
ನಿಖಿಲ್ ಕಾಮತ್ ಜೊತೆಗಿನ ರಿಲೇಶನ್‌ಶಿಪ್‌ಗೆ ಮಾನುಶಿ ಬ್ರೇಕ್, ರಿಯಾ ಎಂಟ್ರಿಯಿಂದ ಚಿಲ್ಲರ್ ಔಟ್!
ನಿತಿನ್ ಕಾಮತ್ ಆರೋಗ್ಯ ಮಾಹಿತಿ ತಿಳಿಯುತ್ತಿದ್ದಂತೆ ಉದ್ಯಮ ಕ್ಷೇತ್ರದ ದಿಗ್ಗಜರು ಸೇರಿದಂತೆ ಹಲವರು ಶೀಘ್ರ ಗುಣಮುಖರಾಗಲು ಪ್ರಾರ್ಥಿಸಿದ್ದಾರೆ.