ನವದೆಹಲಿ(ಆ.11): ಕಾಯಂ ನೌಕರರಿಗೆ ಕಂಪನಿಗಳು ಪಾವತಿಸುವ ಗ್ರಾಚ್ಯುಟಿಗೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸುವ ಸಾಧ್ಯತೆಯಿದ್ದು, ಇನ್ನುಮುಂದೆ 1ರಿಂದ 3 ವರ್ಷ ಕೆಲಸ ಮಾಡಿದರೂ ಕಂಪನಿಯಿಂದ ಗ್ರಾಚ್ಯುಟಿ ಲಭಿಸುವ ಸಾಧ್ಯತೆಯಿದೆ. ಸದ್ಯ ಒಂದು ಕಂಪನಿಯಲ್ಲಿ ಸತತ 5 ವರ್ಷ ಕೆಲಸ ಮಾಡಿದರೆ ಮಾತ್ರ ಗ್ರಾಚ್ಯುಟಿ ಲಭಿಸುತ್ತದೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ನೌಕರರು ಕಂಪನಿಗಳನ್ನು ಪದೇಪದೇ ಬದಲಾಯಿಸುವುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಡಿಮೆ ಅವಧಿಗೆ ಸೇವೆ ಸಲ್ಲಿಸಿದವರಿಗೂ ಗ್ರಾಚ್ಯುಟಿ ಸಿಗಬೇಕು ಎಂಬ ಕೂಗು ಕೆಲ ವರ್ಷಗಳಿಂದ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಸಾಮಾಜಿಕ ಭದ್ರತಾ ನೀತಿಯಲ್ಲಿ 9 ಅಂಶಗಳನ್ನು ಸೇರಿಸಲು ಸಂಸದೀಯ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದ್ದು, ಅದರಲ್ಲಿ ಗ್ರಾಚ್ಯುಟಿಗೆ ವಿಧಿಸಿರುವ ಗರಿಷ್ಠ ಅವಧಿಯನ್ನು ಇಳಿಕೆ ಮಾಡುವುದೂ ಒಂದು ಎಂದು ಹೇಳಲಾಗಿದೆ. ಮುಂಬರುವ ಸಂಸತ್‌ ಅಧಿವೇಶನದಲ್ಲಿ ಈ ನೀತಿ ಮಂಡನೆಯಾಗುವ ಸಾಧ್ಯತೆಯಿದೆ.

SSLC ಫಲಿತಾಂಶ ಪ್ರಕಟ, ಮುಖರ್ಜಿಗೂ ತಗುಲಿದ ಕೊರೋನಾ: ಆ. 10ರ ಟಾಪ್ ಹತ್ತು ಸುದ್ದಿ!

ಒಂದು ಕಂಪನಿಯಲ್ಲಿ ನೌಕರನೊಬ್ಬ 5ಕ್ಕಿಂತ ಹೆಚ್ಚು ವರ್ಷ ಕೆಲಸ ಮಾಡಿ ರಾಜೀನಾಮೆ ನೀಡಿದ್ದರೆ ಅಥವಾ ನಿವೃತ್ತಿಯಾಗಿದ್ದರೆ ಆತ ಕೆಲಸ ಮಾಡಿದ ಪ್ರತಿ ವರ್ಷಕ್ಕೆ 15 ದಿನಗಳಿಗೆ ಸಮನಾದ ಸಂಬಳ ಮತ್ತು ಭತ್ಯೆಯನ್ನು ಒಟ್ಟುಗೂಡಿಸಿ ಕಂಪನಿಯಿಂದ ಹೆಚ್ಚುವರಿಯಾಗಿ ನೀಡಲಾಗುತ್ತದೆ. ಇದನ್ನೇ ಗ್ರಾಚ್ಯುಟಿ ಎನ್ನಲಾಗುತ್ತದೆ.