Asianet Suvarna News Asianet Suvarna News

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು, ಪರೀಕ್ಷೆ ಬರೆಯದ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಬಹುದಾಗಿದ್ದು, ವೇಳಾಪಟ್ಟಿ ಈ ಕೆಳಗಿನಂತಿದೆ.

Karnataka PUC II Supplementary Exam 2020 time table released Check here
Author
Bengaluru, First Published Aug 10, 2020, 8:36 PM IST

ಬೆಂಗಳೂರು, (ಆ.10): ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸೆಪ್ಟಂಬರ್ 7 ರಿಂದ 18 ರವರೆಗೆ ಪರೀಕ್ಷೆಗಳು ನಡೆಯಲಿವೆ.

ವೇಳಾಪಟ್ಟಿಯನ್ನು ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸಿ ವಿದ್ಯಾರ್ಥಿಗಳ ಗಮನಕ್ಕೆ ತರುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ರಾಜ್ಯದ ಎಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿಸಿದ್ದಾರೆ.

ಚಿತ್ರಗಳು: ಇವರೇ ಕರ್ನಾಟಕ SSLC ಟಾಪರ್ಸ್, 625ಕ್ಕೆ 625 ಅಂಕ ಪಡೆದ ಸಾಧಕರು

ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು, ಪರೀಕ್ಷೆ ಬರೆಯದ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಬಹುದಾಗಿದ್ದು, ವೇಳಾಪಟ್ಟಿ ಈ ಕೆಳಗಿನಂತಿದೆ.

* ಸೆಪ್ಟಂಬರ್ 7 ರಂದು ಬೆಳಿಗ್ಗೆ: ಉರ್ದು, ಸಂಸ್ಕೃತ, (ಮಧ್ಯಾಹ್ನ: ಮಾಹಿತಿ ತಂತ್ರಜ್ಞಾನ, ರೀಟೈಲ್ ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ನೆಸ್ ಹಾಗೂ ಗೃಹಚವಿಜ್ಞಾನ)

* ಸೆಪ್ಟೆಂಬರ್ 8 ರಂದು ಬೆಳಗ್ಗೆ: ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ

* ಸೆಪ್ಟೆಂಬರ್ 9 ರಂದು ಬೆಳಗ್ಗೆ: ಹಿಂದಿ ಮಧ್ಯಾಹ್ನ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್),

* ಸೆಪ್ಟೆಂಬರ್ 10 ರಂದು ಬೆಳಗ್ಗೆ: ಇಂಗ್ಲಿಷ್

* ಸೆಪ್ಟಂಬರ್ 11 ರಂದು ಬೆಳಗ್ಗೆ: ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಗಣಕವಿಜ್ಞಾನ, (ಮಧ್ಯಾಹ್ನ: ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಭೂಗರ್ಭಶಾಸ್ತ್ರ)

* ಸೆಪ್ಟಂಬರ್ 12 ರಂದು ಬೆಳಗ್ಗೆ: ಅರ್ಥಶಾಸ್ತ್ರ, ಭೌತಶಾಸ್ತ್ರ

* ಸೆಪ್ಟಂಬರ್ 13 ರಂದು ಭಾನುವಾರ ರಜಾದಿನ

* ಸೆಪ್ಟಂಬರ್ 14 ರಂದು ಬೆಳಗ್ಗೆ: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ರಸಾಯನಶಾಸ್ತ್ರ, ಶಿಕ್ಷಣ

* ಸೆಪ್ಟಂಬರ್ 15 ರಂದು ಬೆಳಗ್ಗೆ: ಕನ್ನಡ

* ಸೆಪ್ಟೆಂಬರ್ 16 ರಂದು ಬೆಳಗ್ಗೆ: ರಾಜ್ಯಶಾಸ್ತ್ರ, ಬೇಸಿಕ್ ಮ್ಯಾಥ್ಸ್

* ಸೆಪ್ಟೆಂಬರ್ 17 ರಂದು ಬೆಳಗ್ಗೆ: ಸಮಾಜಶಾಸ್ತ್ರ, ಲೆಕ್ಕಶಾಸತ್ರ, ಗಣಿತ

* ಸೆಪ್ಟಂಬರ್ 18 ರಂದು ಬೆಳಗ್ಗೆ: ಭೂಗೋಳಶಾಸ್ತ್ರ, (ಮಧ್ಯಾಹ್ನ: ಮನಃಶಾಸ್ತ್ರ)

Follow Us:
Download App:
  • android
  • ios