ಶೀಘ್ರದಲ್ಲಿ ಯುಪಿಐ ಮೂಲಕವೂ ಸಿಗಲಿದೆ ಸಾಲ: ಮಾಹಿತಿ ನೀಡಿದ RBI

ಯುಪಿಐ ಪಾವತಿ ವ್ಯವಸ್ಥೆ ಭಾರತದ ಆರ್ಥಿಕತೆಗೆ ಹೊಸ ಆಯಾಮವನ್ನೇ ನೀಡಿದೆ. ಹೀಗಿರುವಾಗ ಯುಪಿಐ ಮೂಲಕ ಸಾಲ ಸೌಲಭ್ಯವನ್ನು ಕೂಡ ಒದಗಿಸುವ ಬಗ್ಗೆ ಆರ್ ಬಿಐ ಚಿಂತನೆ ನಡೆಸಿದೆ. ಶೀಘ್ರದಲ್ಲಿ ಈ ಸೌಲಭ್ಯವನ್ನು ಜಾರಿಗೊಳಿಸುವ ಬಗ್ಗೆ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಹಣಕಾಸು ನೀತಿ ಸಮಿತಿಯ ದ್ವಿಮಾಸಿಕ ವರದಿ ಪ್ರಕಟಿಸುವ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

Permits operation of pre sanctioned credit lines at banks to widen and expand the footprint of UPI anu

ನವದೆಹಲಿ (ಏ.7): ಯುಪಿಐ ಪಾವತಿ ವ್ಯವಸ್ಥೆ ಬಳಕೆ ಇಂದು ಹೆಚ್ಚಿದೆ. ಈ ಡಿಜಿಟಲ್ ಪಾವತಿ ವ್ಯವಸ್ಥೆಯಿಂದ ನಗದು ಪಡೆಯಲು ಬ್ಯಾಂಕ್ ಅಥವಾ ಎಟಿಎಂಗೆ ಹೋಗುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ತರಕಾರಿಯಿಂದ ಹಿಡಿದು ಚಿನ್ನದ ಖರೀದಿ ತನಕ ಎಲ್ಲದಕ್ಕೂ ಯುಪಿಐ ಪಾವತಿಯನ್ನು ನೆಚ್ಚಿಕೊಂಡಿದ್ದೇವೆ. ಹೀಗಿರುವಾಗ ಯುಪಿಐ ಮೂಲಕ ಸಾಲವೂ ಸಿಗುವಂತಾದರೆ? ಹೌದು ಇಂಥದೊಂದು ಸೌಲಭ್ಯ ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ. ಈ ಬಗ್ಗೆ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಹಣಕಾಸು ನೀತಿ ಸಮಿತಿಯ ದ್ವಿಮಾಸಿಕ ವರದಿ ಪ್ರಕಟಿಸುವ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ. ಯುಪಿಐ ಮೂಲಕ ಬ್ಯಾಂಕ್ ಗಳ ಪೂರ್ವ ಅನುಮತಿಯುಳ್ಳ ಸಾಲಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ಯುಪಿಐ ಮೂಲಕ ದಿನಕ್ಕೆ ಸರಾಸರಿ 36 ಕೋಟಿ ರೂ. ವಹಿವಾಟುಗಳು ನಡೆಯುತ್ತಿವೆ. ಹಣ ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಿದ ಡಿಜಿಟಲ್ ಪಾವತಿ ಅಪ್ಲಿಕೇಷನ್ ಗಳ ಮೂಲಕ ಶೀಘ್ರದಲ್ಲಿ ಸಾಲವೂ ಸಿಗಲಿದೆ. ಅಂದರೆ ಗೂಗಲ್ ಪೇ, ಪೋನ್ ಪೇ ಮೂಲಕ ನೀವು ಬ್ಯಾಂಕಿನಿಂದ ತ್ವರಿತ ಸಾಲ ಪಡೆಯಬಹುದು. 

ಈ ಹಿಂದೆ ಚೀನಾದ ಸಾಲ ನೀಡುವ ಅಪ್ಲಿಕೇಷನ್ ಗಳಿಂದ ಜನರು ಸಾಕಷ್ಟು ತೊಂದರೆಗೆ ಸಿಲುಕಿದ್ದರು. ಈ ಅಪ್ಲಿಕೇಷನ್ ಗಳು ಜನರಿಗೆ ದುಬಾರಿ ಬಡ್ಡಿದರಕ್ಕೆ ಸಾಲ ನೀಡುತ್ತಿದ್ದವು. ಜನರು ಇಂಥ ವಂಚನೆ ಜಾಲಗಳಿಗೆ ಸಿಲುಕಬಾರದು ಎಂಬ ಉದ್ದೇಶದಿಂದ ಕೂಡ ಆರ್ ಬಿಐ ಯುಪಿಐ ಮೂಲಕ ಸಾಲ ನೀಡಲು ಮುಂದಾಗಿರುವ ಸಾಧ್ಯತೆಯೂ ಇದೆ. 

ನಿಷ್ಕ್ರಿಯ ಬ್ಯಾಂಕ್ ಖಾತೆಗಳ ಮಾಹಿತಿಗೆ ವೆಬ್ ಪೋರ್ಟಲ್ ರೂಪಿಸಲಿರುವ RBI ; ಕ್ಲೇಮ್ ಆಗದ ಹಣ ಎಷ್ಟು?

ಏನಿದು ಕ್ರೆಡಿಟ್ ಲೈನ್?
ಪೂರ್ವ ಅನುಮೋದನೆಗೊಂಡಿರುವ ಸಾಲ ಅಥವಾ pre-sanctioned credit lines ಅಂದ್ರೆ ಬ್ಯಾಂಕ್ ನಿಂದ ಗ್ರಾಹಕರಿಗೆ ಮೊದಲೇ ನಿರ್ದಿಷ್ಟ ಮೊತ್ತದ ಸಾಲವನ್ನು ಮಂಜೂರು ಮಾಡಲಾಗಿರುತ್ತದೆ. ಹೀಗೆ ಬ್ಯಾಂಕ್ ನಿಂದ ಮಂಜೂರಾಗಿರುವ ಸಾಲವನ್ನು ಯುಪಿಐ ಮೂಲಕ ಪಡೆಯಬಹುದು. ಇನ್ನು ಗ್ರಾಹಕ ಎಷ್ಟು ಮೊತ್ತದ ಹಣವನ್ನು ವಿತ್ ಡ್ರಾ ಮಾಡಿರುತ್ತಾನೋ ಅಥವಾ ಬಳಸಿಕೊಂಡಿರುತ್ತಾನೋ ಅದಕ್ಕೆ ಮಾತ್ರ ಬಡ್ಡಿ ದರ ಪಾವತಿಸಬೇಕು. 

'ಇಲ್ಲಿಯ ತನಕ ಯುಪಿಐ ಅನ್ನು ಪಾವತಿಗಾಗಿ ಬ್ಯಾಂಕ್ ಡೆಬಿಟ್ ಖಾತೆಗಳು ಮತ್ತು ರುಪೇ ಕ್ರೆಡಿಟ್ ಕಾರ್ಡ್ ಗಳಿಗೆ ಮಾತ್ರ ಲಿಂಕ್ ಮಾಡಲಾಗಿತ್ತು.ಆದರೆ, ಆರ್ ಬಿಐ ಘೋಷಣೆಯಿಂದ ಯುಪಿಐ ಈಗಿನ ಪ್ರಯೋಜನಗಳಿಗೆ ಮತ್ತಷ್ಟನ್ನು ಸೇರ್ಪಡೆಗೊಳಿಸಿದೆ. ಅಲ್ಲದೆ, ಗ್ರಾಹಕರಿಗೆ ಸಾಲದ ಖಾತೆಗಳು ಸೇರಿದಂತೆ ಕ್ರೆಡಿಟ್ ಖಾತೆಗಳನ್ನು ಲಿಂಕ್ ಮಾಡಲು ನೆರವು ನೀಡಿದೆ. ಅಲ್ಲದೆ, ಯುಪಿಐ ಮೂಲಕ ಪಾವತಿಗೆ ಲಭ್ಯವಾಗುವಂತೆ ಮಾಡಿದೆ. ಇದು ಗ್ರಾಹಕರಿಗೆ ಕ್ರೆಡಿಟ್ ಬಳಕೆಯನ್ನು ಸರಳಗೊಳಿಸಲು ನೆರವು ನೀಡಿದೆ' ಎಂದು ಬ್ಯಾಂಕ್ ಬಜಾರ್ ಡಾಟ್ ಕಾಮ್ ಸಿಇಒ ಅದಿಲ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ. 

ನಿಷ್ಕ್ರಿಯ ಬ್ಯಾಂಕ್ ಖಾತೆಗಳ ಮಾಹಿತಿಗೆ ವೆಬ್ ಪೋರ್ಟಲ್ ರೂಪಿಸಲಿರುವ RBI ; ಕ್ಲೇಮ್ ಆಗದ ಹಣ ಎಷ್ಟು?

ರೆಪೋ ದರ ಏರಿಕೆಯಿಲ್ಲ
2023-24ನೇ ಹಣಕಾಸು ಸಾಲಿನ ಆರ್ ಬಿಐ ಹಣಕಾಸು ನೀತಿ ಸಮಿತಿಯ ಮೊದಲ ದ್ವಿಮಾಸಿಕ ಪರಿಶೀಲನ ಸಭೆಯಲ್ಲಿ ಈ ಬಾರಿ ರೆಪೋ ದರ ಏರಿಕೆ ಮಾಡುವ ನಿರ್ಧಾರ ಕೈಗೊಂಡಿಲ್ಲ.ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ  ಈ ಬಗ್ಗೆ ಮಾಹಿತಿ ನೀಡಿದ್ದು, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಈ ಹಿಂದಿನ ಶೇ.6.5ಕ್ಕೆ ಸ್ಥಿರಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ಹಣದುಬ್ಬರ ನಿಗದಿತ ಮಿತಿಗಿಂತ ಹೆಚ್ಚಿದ್ದರೂ ಈ ಬಾರಿ ರೆಪೋ ದರ ಏರಿಕೆ ಮಾಡದಿರುವ ಸರ್ವಾನುಮತದ  ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.  2022ರ ಮೇನಿಂದ ಆರ್ ಬಿಐ ರೆಪೋ ದರವನ್ನು ಸತತ ಆರು ಬಾರಿ ಹೆಚ್ಚಳ ಮಾಡಿದ್ದು, ಒಟ್ಟು 250 ಬೇಸಿಸ್ ಪಾಯಿಂಟ್ಸ್ ಏರಿಕೆಯಾಗಿದೆ. 


 

Latest Videos
Follow Us:
Download App:
  • android
  • ios