Business Ideas ಕೇವಲ 8ನೇ ತರಗತಿ ಅನ್ನೋ ಚಿಂತೆ ಬೇಡ, ಕಡಿಮೆ ಹೂಡಿಕೆಯಲ್ಲಿ ಕೈತುಂಬ ಆದಾಯ ಗಳಿಸಿ!

  • ಕನಿಷ್ಠ ವಿದ್ಯಾರ್ಹತೆ ಗರಿಷ್ಠ ಆದಾಯ ಗಳಿಸಲು ಇದೆ ಮಾರ್ಗ
  • ಹೂಡಿಕೆ ಮಾಡಿದ ಹಣ ವಾಪಸ್ ಪಡೆಯಲು ಸುವರ್ಣವಕಾಶ
  • ಪ್ರತಿ ತಿಂಗಳು ಲಾಭಗಳಿಸಬಹುದಾದ ಪೋಸ್ಟ್ ಆಫೀಸ್ ಫ್ರಾಂಚೈಸಿ ಹೂಡಿಕೆ
You can earn Lakhs Of Rupees Every Year by taking post office franchises

Business Desk: ಭಾರತ (India)ದ ಅಂಚೆ (post)ಇಲಾಖೆ ವಿಶ್ವ(World)ದ ಅತಿದೊಡ್ಡ ನೆಟ್‌ವರ್ಕ್ (Network) ಹೊಂದಿದೆ. ದೇಶದಲ್ಲಿ ಸುಮಾರು 1.55 ಲಕ್ಷ ಅಂಚೆ ಕಚೇರಿಗಳಿವೆ. ದೇಶದ ಮೂಲೆ ಮೂಲೆಗಳಿಗೆ ಮಾಹಿತಿ ತಲುಪಿಸಲು ಇದು ನೆರವಾಗುತ್ತದೆ. ಅಂಚೆ ಕಚೇರಿ ಈಗ ಅನೇಕ ಸೌಲಭ್ಯಗಳನ್ನು ಹೊಂದಿದೆ. ಉಳಿತಾಯ ಯೋಜನೆಗಳು ಸೇರಿದಂತೆ ಆಧಾರ್ ಕೂಡ ಅಂಚೆ ಕಚೇರಿಯಲ್ಲಿ ಸಿದ್ಧವಾಗ್ತಿದೆ. ಆದ್ರೆ ದೇಶದ ಇನ್ನೂ ಅನೇಕ ಸ್ಥಳಗಳಲ್ಲಿ ಅಂಚೆ ಕಚೇರಿ ಸೌಲಭ್ಯವಿಲ್ಲ. ಈ ಅಗತ್ಯವನ್ನು ಪೂರೈಸಲು, ಅಂಚೆ ಇಲಾಖೆ ತನ್ನದೇ ಆದ ಫ್ರ್ಯಾಂಚೈಸಿ ಯೋಜನೆಯನ್ನು ಪ್ರಾರಂಭಿಸಿದೆ. ಕಡಿಮೆ ಶಿಕ್ಷಣ ಪಡೆದಿರುವ,ಸ್ವಂತ ಉದ್ಯೋಗ ಮಾಡಲು ಬಯಸುವವರಿಗೆ ಇದು ಒಳ್ಳೆಯ ಅವಕಾಶ. 8ನೇ ತರಗತಿ ಪಾಸ್ ಆದವರು ಕೂಡ ಅಂಚೆ ಕಚೇರಿ ಫ್ರ್ಯಾಂಚೈಸಿ ಪಡೆಯಬಹುದು. ಕಡಿಮೆ ವೆಚ್ಚದಲ್ಲಿ ಅಂಚೆ ಕಚೇರಿ ಸೇವೆ ಶುರು ಮಾಡಿ ಆದಾಯ ಗಳಿಸಬಹುದು. ಇಂದು ಅಂಚೆ ಕಚೇರಿ ಫ್ರ್ಯಾಂಚೈಸಿ ಬಗ್ಗೆ ನಾವಿಲ್ಲಿ ಮಾಹಿತಿ ನೀಡ್ತೆವೆ.

ಅಂಚೆ ಇಲಾಖೆ ಎರಡು ರೀತಿಯಲ್ಲಿ ಫ್ರ್ಯಾಂಚೈಸಿ ನೀಡುತ್ತದೆ. ನಿಮಗೆ ಯಾವುದು ಸೂಕ್ತವೋ ಆ ಫ್ರ್ಯಾಂಚೈಸಿಯನ್ನು ನೀವು ತೆಗೆದುಕೊಳ್ಳಬಹುದು.

ಮೊದಲನೆಯದು  ಔಟ್ಲೆಟ್ ಫ್ರಾಂಚೈಸಿ. ದೇಶದಾದ್ಯಂತ ಇಂತಹ ಅನೇಕ ಸ್ಥಳಗಳಿವೆ. ಅಲ್ಲಿ ಅಂಚೆ ಕಚೇರಿ ತೆರೆಯುವ ಅವಶ್ಯಕತೆಯಿದೆ. ಆದರೆ ಅಲ್ಲಿ ಅಂಚೆ ಕಚೇರಿ ತೆರೆಯಲು ಸಾಧ್ಯವಿಲ್ಲ. ಅಲ್ಲಿನ ಜನರಿಗೆ ಸೌಲಭ್ಯ ಕಲ್ಪಿಸಲು ಫ್ರಾಂಚೈಸಿ ಔಟ್ ಲೆಟ್ ತೆರೆಯಬಹುದು.
ಎರಡನೆಯದು ಪೋಸ್ಟಲ್ ಏಜೆಂಟ್‌ಗಳ ಫ್ರಾಂಚೈಸಿ. ಅಂದರೆ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಚೀಟಿಗಳು ಮತ್ತು ಸ್ಟೇಷನರಿಗಳನ್ನು ಮನೆ-ಮನೆಗೆ ತಲುಪಿಸುವ ಏಜೆಂಟ್‌.

ಯಾರು ಫ್ರ್ಯಾಂಚೈಸಿ ತೆರೆಯಬಹುದು ? 
ಯಾರು ಬೇಕಾದರೂ ಪೋಸ್ಟ್ ಆಫೀಸ್ ಫ್ರಾಂಚೈಸಿ ತೆರೆಯಬಹುದು. ಅದನ್ನು ಪಡೆಯಲು ಕನಿಷ್ಟ 18 ವರ್ಷ ವಯಸ್ಸಿನವರಾಗಿರಬೇಕು. ಮಾನ್ಯತೆ ಪಡೆದ ಶಾಲೆಯಿಂದ 8ನೇ ತರಗತಿ ಪಾಸಾದ ವ್ಯಕ್ತಿಯೂ ಈ ಫ್ರ್ಯಾಂಚೈಸಿ ತೆಗೆದುಕೊಳ್ಳಬಹುದು. 
ಅಂಚೆ ಕಚೇರಿಯಿಂದ ಗ್ರಾಹಕರಿಗೆ ಸ್ಟ್ಯಾಂಪ್‌ಗಳು, ಸ್ಟೇಷನರಿಗಳು, ಸ್ಪೀಡ್ ಪೋಸ್ಟ್, ಪತ್ರ, ಮನಿ ಆರ್ಡರ್‌ಗಳ ಬುಕಿಂಗ್ ಸೌಲಭ್ಯವನ್ನು ನೀವು ಒದಗಿಸಬೇಕಾಗುತ್ತದೆ. ಫ್ರ್ಯಾಂಚೈಸಿ ಔಟ್ಲೆಟ್ ತೆರೆಯುವ ಮೂಲಕ ಅಥವಾ ಪೋಸ್ಟಲ್ ಏಜೆಂಟ್ ಆಗುವ ಮೂಲಕ ನೀವು ಈ ಸೌಲಭ್ಯಗಳನ್ನು ಮನೆ-ಮನೆಗೆ ಒದಗಿಸಬಹುದು.

ಪ್ರತಿರೋಧಕ ಕಾಕ್ ಟೈಲ್ ಚಿಕಿತ್ಸೆ ವೆಚ್ಚ ಭರಿಸಲು ಆರೋಗ್ಯ ವಿಮಾ ಕಂಪನಿಗಳಿಗೆ IRDAI ಸಲಹೆ

ಹಣ ಗಳಿಕೆ ಹೇಗೆ ? 
ನೀವು ಈ ಫ್ರಾಂಚೈಸಿಯನ್ನು ತೆಗೆದುಕೊಳ್ಳಲು ಬಯಸಿದರೆ, ಇದಕ್ಕಾಗಿ ನೀವು 5000 ರೂಪಾಯಿ ಭದ್ರತಾ ಠೇವಣಿ ಪಾವತಿಸಬೇಕಾಗುತ್ತದೆ. ಫ್ರಾಂಚೈಸಿಯನ್ನು ಪಡೆದ ನಂತರ, ನಿಮ್ಮ ಕೆಲಸಕ್ಕೆ ಅನುಗುಣವಾಗಿ ನಿಮಗೆ ನಿಗದಿತ ಕಮಿಷನ್ ನೀಡಲಾಗುತ್ತದೆ. ಪೋಸ್ಟ್ ಆಫೀಸ್ ಫ್ರ್ಯಾಂಚೈಸಿ ತೆಗೆದುಕೊಳ್ಳಲು ನೀವು ಅರ್ಜಿಯನ್ನು ಸಲ್ಲಿಸಬೇಕು. https://www.indiapost.gov.in/VAS/DOP_PDFFiles/Franchise.pdf ಗೆ ಭೇಟಿ ನೀಡುವ ಮೂಲಕ ನೀವು ಫಾರ್ಮ್ ಅನ್ನು ಭರ್ತಿ ಮಾಡಬೇಕು. ಆಯ್ಕೆಯಾದವರು ಅಂಚೆ ಇಲಾಖೆಯೊಂದಿಗೆ ಎಂಒಯುಗೆ ಸಹಿ ಹಾಕಬೇಕು. ಆಗ ಮಾತ್ರ ಗ್ರಾಹಕರಿಗೆ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ.

Income Tax Returns : ಮಾರ್ಚ್ 15ರವರೆಗೆ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ

ಯಾವ ಕೆಲಸಕ್ಕೆ ಎಷ್ಟು ಕಮಿಷನ್ ? : 
ನೋಂದಾಯಿತ ಲೇಖನಗಳ ಬುಕಿಂಗ್ ಮೇಲೆ ನೀವು 3 ರೂಪಾಯಿ ಕಮಿಷನ್ ಪಡೆಯುತ್ತೀರಿ.
ಸ್ಪೀಡ್ ಪೋಸ್ಟ್ ಲೇಖನಗಳ ಬುಕಿಂಗ್ ಮೇಲೆ 5 ರೂಪಾಯಿ ಕಮಿಷನ್ ನೀಡಲಾಗುವುದು. 
100 ರೂಪಾಯಿಯಿಂದ 200 ರೂಪಾಯಿ ಮನಿ ಆರ್ಡರ್ ಬುಕ್ಕಿಂಗ್ ಮೇಲೆ 3.50  ರೂಪಾಯಿ ಕಮಿಷನ್ ಸಿಗುತ್ತದೆ.
200 ರೂಪಾಯಿಗಿಂತ ಹೆಚ್ಚಿನ ಮನಿ ಆರ್ಡರ್‌ಗಳಲ್ಲಿ ನೀವು 5 ರೂಪಾಯಿ ಕಮಿಷನ್ ಪಡೆಯಬಹುದು.
ಪ್ರತಿ ತಿಂಗಳು ರಿಜಿಸ್ಟ್ರಿ ಮತ್ತು ಸ್ಪೀಡ್ ಪೋಸ್ಟ್ ನ 1000 ಕ್ಕೂ ಹೆಚ್ಚು ಬುಕಿಂಗ್‌ಗಳಿಗೆ ಹೆಚ್ಚುವರಿ ಶೇಕಡಾ 20ರಷ್ಟು ಕಮಿಷನ್ ನೀಡಲಾಗುತ್ತದೆ.
ಅಂಚೆ ಚೀಟಿಗಳು, ಪೋಸ್ಟಲ್ ಸ್ಟೇಷನರಿ ಮತ್ತು ಮನಿ ಆರ್ಡರ್ ಫಾರ್ಮ್‌ಗಳ ಮಾರಾಟದಲ್ಲಿ ಶೇಕಡಾ 5ರಷ್ಟು ಕಮಿಷನ್ ಸಿಗುತ್ತದೆ.

Latest Videos
Follow Us:
Download App:
  • android
  • ios