Asianet Suvarna News Asianet Suvarna News

ಪ್ರತಿರೋಧಕ ಕಾಕ್ ಟೈಲ್ ಚಿಕಿತ್ಸೆ ವೆಚ್ಚ ಭರಿಸಲು ಆರೋಗ್ಯ ವಿಮಾ ಕಂಪನಿಗಳಿಗೆ IRDAI ಸಲಹೆ

*ಪ್ರತಿರೋಧಕ ಕಾಕ್ ಟೈಲ್ ಚಿಕಿತ್ಸೆ ಪ್ರಯೋಗಾತ್ಮಕ ಎಂಬ ಹಿನ್ನೆಲೆಯಲ್ಲಿ ವೆಚ್ಚ ಭರಿಸಲು ನಿರಾಕರಣೆ
*ಆರೋಗ್ಯ ವಿಮೆ ಕ್ಲೈಮ್ ಆಗದೆ ಆರ್ಥಿಕ ತೊಂದರೆ ಅನುಭವಿಸಿದ ಕೊರೋನಾ ಸೋಂಕಿತರು ಹಾಗೂ ಅವರ ಕುಟುಂಬ
*ಕೋವಿಡ್ -19 ಚಿಕಿತ್ಸಾ ವೆಚ್ಚ ಭರಿಸೋದಕ್ಕಾಗಿಯೇ ರೂಪಿಸಲಾಗಿದೆ ಕೊರೋನಾ ಕವಚ್ ಹಾಗೂ ಕೊರೋನಾ ರಕ್ಷಕ್

Health insurance companies can no longer deny claims deduct charges for specific Covid treatment
Author
Bangalore, First Published Jan 11, 2022, 2:08 PM IST

Business Desk: ಕೋವಿಡ್ -19 ಚಿಕಿತ್ಸೆಗೆ ಬಳಸೋ ಪ್ರತಿರೋಧಕ ಕಾಕ್ ಟೈಲ್ ಚಿಕಿತ್ಸೆ (Antibody Cocktail therapy) ವೆಚ್ಚವನ್ನು ಭರಿಸಲು ನಿರಾಕರಿಸಿರೋ ಅಥವಾ ಅದರ ವೆಚ್ಚವನ್ನು ಕಡಿತಗೊಳಿಸಿರೋ  ನಿರ್ಧಾರವನ್ನು ಮರುಪರಿಶೀಲಿಸುವಂತೆ ಆರೋಗ್ಯ ವಿಮಾ ಕಂಪನಿಗಳಿಗೆ ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (IRDAI)ಸಲಹೆ ನೀಡಿದೆ. ಅಲ್ಲದೆ, ಪಾಲಿಸಿಯ ಷರತ್ತುಗಳಿಗೆ ಅನುಗುಣವಾಗಿ ಇದಕ್ಕೆ ಸಂಬಂಧಿಸಿದ ಕ್ಲೈಮ್ ಗಳನ್ನು ಇತ್ಯರ್ಥ ಮಾಡಲು ಸೂಕ್ತ  ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.  ಹೀಗಾಗಿ ಇನ್ನು ಮುಂದೆ ಆರೋಗ್ಯ ವಿಮಾ ಕಂಪನಿಗಳು ಪ್ರತಿರೋಧಕ ಕಾಕ್ ಟೈಲ್ ಚಿಕಿತ್ಸೆ ವೆಚ್ಚ ಭರಿಸಲು ನಿರಾಕರಿಸೋದು ಅಥವಾ ಕಡಿತಗೊಳಿಸುವಂತಿಲ್ಲ. ಈ ಹಿಂದೆ ಪ್ರಯೋಗಾತ್ಮಕ ಚಿಕಿತ್ಸೆ ಎಂಬ ಕಾರಣ ಮುಂದಿಟ್ಟುಕೊಂಡು ಆರೋಗ್ಯ ವಿಮಾ ಕಂಪನಿಗಳು ಚಿಕಿತ್ಸಾ ವೆಚ್ಚ ಭರಿಸಲು ನಿರಾಕರಿಸಿದ್ದವು. 

ಕೋವಿಡ್ -19 ಚಿಕಿತ್ಸೆಗೆ ಈ ತನಕ ಯಾವುದೇ ನಿರ್ದಿಷ್ಟ ಔಷಧ ಲಭ್ಯವಿಲ್ಲ. ಈ ಕಾರಣದಿಂದಲೇ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ವಿವಿಧ ಪ್ರತಿಜೀವಕಗಳನ್ನು (antibiotics) ಪ್ರಯತ್ನಿಸಿ ನೋಡಿದ್ದಾರೆ. ಆದರೂ ಕೆಲವು ರೋಗಿಗಳಲ್ಲಿ (Patients) ಸೋಂಕು (Infection) ಕಡಿಮೆಯಾಗದ ಹಿನ್ನೆಲೆಯಲ್ಲಿ ವಿವಿಧ ಪ್ರತಿರೋಧಕ ಔ‍ಷಧಗಳ ಮಿಶ್ರಣವಾದ 'ಪ್ರತಿರೋಧಕ ಕಾಕ್ ಟೈಲ್ ಚಿಕಿತ್ಸೆ'(Antibody Cocktail therapy) ಪ್ರಾರಂಭಿಸಿದರು. ಈ ಚಿಕಿತ್ಸೆಯನ್ನು(Treatment) ಮೊದಲು ಪ್ರಯೋಗಾತ್ಮಕವಾಗಿ  (experimental ) ಪ್ರಾರಂಭಿಸಿದ ಕಾರಣ ಅನೇಕ ಆರೋಗ್ಯ ವಿಮಾ ಕಂಪನಿಗಳು (Health Insurance companies) ಇಂಥ ಚಿಕಿತ್ಸೆಗಳ ಮೇಲಿನ ವೆಚ್ಚವನ್ನು (Cost) ಭರಿಸಲು ನಿರಾಕರಿಸಿದವು ಅಥವಾ ಪ್ರತಿರೋಧಕ ಕಾಕ್ ಟೈಲ್ ಚಿಕಿತ್ಸೆ ವೆಚ್ಚವನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ಪಾವತಿಸಿದವು. ಇದ್ರಿಂದ ಅನೇಕ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರು ಸಾಕಷ್ಟು ತೊಂದರೆ ಅನುಭವಿಸಿದರು.  

How To Cut Down Expenses: ಹೊಸ ವರ್ಷದಲ್ಲಿ ಖರ್ಚು ಕಡಿಮೆ ಮಾಡಿ ಸಾಲದ ಹೊರೆ ತಗ್ಗಿಸಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ

ಭಾರತದಲ್ಲಿ ತುರ್ತು ಸಂದರ್ಭಗಳಲ್ಲಿ ಕೊರೋನಾ ಚಿಕಿತ್ಸೆಗೆ ಪ್ರತಿರೋಧಕ ಕಾಕ್ ಟೈಲ್ (Antibody Cocktail) ಬಳಕೆಗೆ ಕೇಂದ್ರೀಯ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ (CDSCO)2021ರ ಮೇನಲ್ಲಿ ಅನುಮತಿ ನೀಡಿದೆ.  ಈ ಹಿನ್ನೆಲೆಯಲ್ಲಿ ಆರೋಗ್ಯ ವಿಮಾ ಕಂಪನಿಗಳು ಈ ಚಿಕಿತ್ಸೆಗೆ ಸಂಬಂಧಿತ ಪ್ರಾಧಿಕಾರಗಳು ನೀಡಿರೋ ಅನುಮತಿಗಳು ಹಾಗೂ ಈ ನಿಟ್ಟಿನಲ್ಲಿ ನಡೆದಿರೋ ಪ್ರಗತಿಗಳನ್ನು ಪರಿಗಣಿಸಿ ಷರತ್ತುಗಳಿಗೆ ಅನುಗುಣವಾಗಿ ಎಲ್ಲ ಕ್ಲೈಮ್ ಗಳನ್ನು ಇತ್ಯರ್ಥ ಮಾಡುವಂತೆಯೂ IRDAI ಮನವಿ ಮಾಡಿದೆ. 

Sovereign Gold Bond Scheme: 9ನೇ ಸರಣಿಯಲ್ಲಿ ಹೂಡಿಕೆಗೆ ಇಂದಿನಿಂದ ಅವಕಾಶ; ಪ್ರತಿ ಗ್ರಾಂ ಚಿನ್ನದ ದರ 4,786ರೂ.

ಕೊರೋನಾ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆ ಕಂಡಿದ್ದ ಸಂದರ್ಭದಲ್ಲಿ ಕೂಡ IRDAI ಪಾಲಿಸಿದಾರರ ನೆರವಿಗೆ ಬಂದಿತ್ತು. ಕೋವಿಡ್ -19 ಚಿಕಿತ್ಸೆ ವೆಚ್ಚವನ್ನು ಭರಿಸಲು ಆರೋಗ್ಯ ವಿಮಾ ಕಂಪನಿಗಳು ನಿರಾಕರಿಸಿರೋದನ್ನು ಗಂಭೀರವಾಗಿ ಪರಿಗಣಿಸಿದ IRDAI, ಆ ಬಗ್ಗೆ ವಿಮಾ ಕಂಪನಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು.ಕೋವಿಡ್ -19 ಚಿಕಿತ್ಸಾ ವೆಚ್ಚವನ್ನು ಭರಿಸೋ ಜೊತೆಗೆ ಗುಣಮಟ್ಟದ ಹಾಗೂ ವೈಶಿಷ್ಟ್ಯಗಳನ್ನೊಳಗೊಂಡ ಎರಡು ಕೋವಿಡ್ ನಿರ್ದಿಷ್ಟ ವಿಮಾ ಪಾಲಿಸಿಗಳನ್ನು ಪರಿಚಯಿಸುವಂತೆಯೂ ಸಲಹೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ವಿಮಾ ಕಂಪನಿಗಳು 'ಕೊರೋನಾ ಕವಚ್ ಹಾಗೂ 'ಕೊರೋನಾ ರಕ್ಷಕ್' ಎಂಬ ಎರಡು ಪಾಲಿಸಿಗಳನ್ನು ಪರಿಚಯಿಸಿವೆ. ಇವುಗಳನ್ನು ಕೋವಿಡ್ -19 ಚಿಕಿತ್ಸಾ ವೆಚ್ಚ ಭರಿಸೋದಕ್ಕಾಗಿಯೇ ರೂಪಿಸಲಾಗಿದ್ದು, ಇತರ ಆರೋಗ್ಯ ವಿಮಾ ಪಾಲಿಸಿಗಳಿಗಿಂತ ಕಡಿಮೆ ದರದಲ್ಲಿ ಲಭ್ಯವಿವೆ. ಕುಟುಂಬವನ್ನು ಕೋವಿಡ್-19ನಿಂದ ಸಂರಕ್ಷಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳೋ ಜೊತೆ ಆರೋಗ್ಯ ವೆಚ್ಚಕ್ಕಾಗಿ ಇಂಥ ಪಾಲಿಸಿಗಳನ್ನು ಖರೀದಿಸೋದು ಉತ್ತಮ. ಇಂಥ ಪಾಲಿಸಿಗಳನ್ನು ಖರೀದಿಸೋದ್ರಿಂದ  ಆಸ್ಪತ್ರೆಯ ದುಬಾರಿ ಚಿಕಿತ್ಸಾ ವೆಚ್ಚಗಳಿಗೆ ಜೇಬಿನಿಂದ ಹಣ ಕಳೆದುಕೊಳ್ಳೋದು ತಪ್ಪುತ್ತದೆ. 

Follow Us:
Download App:
  • android
  • ios