Avantha Fraud Case : ಯೆಸ್ ಬ್ಯಾಂಕ್‌ನ ರಾಣಾ ಕಪೂರ್, ಗೌತಮ್ ಥಾಪರ್‌ಗೆ ಜಾಮೀನು
307 ಕೋಟಿಯ ಆವಂತಾ ವಂಚನೆ ಪ್ರಕರಣ
ಯೆಸ್ ಬ್ಯಾಂಕ್ ನ ಸ್ಥಾಪಕ ರಾಣಾ ಕಪೂರ್, ಆವಂತಾ ರಿಯಾಲ್ಟಿ ಪ್ರಮೋಟರ್ ಗೌತಮ್ ಥಾಪರ್ ಗೆ ಜಾಮೀನು
ಮುಂಬೈನ ವಿಶೇಷ ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ) ನ್ಯಾಯಾಲಯದಿಂದ ಆದೇಶ
ಮುಂಬೈ (ಫೆ.17): ಯೆಸ್ ಬ್ಯಾಂಕ್ ನ ಸಂಸ್ಥಾಪಕ ರಾಣಾ ಕಪೂರ್ (Yes Bank founder Rana Kapoor) ಹಾಗೂ ಆವಂತಾ ರಿಯಾಲ್ಟಿ ಪ್ರಮೋಟರ್ ನ ಗೌತಮ್ ಥಾಪರ್ ಗೆ (Avantha Realty promoter Gautam Thapar) 307 ಕೋಟಿ ರೂಪಾಯಿಯ ಆವಂತಾ ರಿಯಾಲ್ಟಿ ವಂಚನೆ ಪ್ರಕರಣದಲ್ಲಿ ಮುಂಬೈನ ಸ್ಪೆಷಲ್ ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ) ನ್ಯಾಯಾಲಯ (special Prevention of Money Laundering Act (PMLA) court) ಗುರುವಾರ ಜಾಮೀನು ನೀಡಿದೆ. ನ್ಯಾಯಾಧೀಶ ಎಂ.ಜಿ.ದೇಶಪಾಂಡೆ, ಜಾಮೀನು ಮಂಜೂರು ಮಾಡುವಾಗ, ಕಪೂರ್ ಮತ್ತು ಥಾಪರ್ ತಲಾ 5 ಲಕ್ಷ ರೂ.ಗಳ ಜಾಮೀನು ಬಾಂಡ್ ಅನ್ನು ಒಂದು ಅಥವಾ ಎರಡು ಶ್ಯೂರಿಟಿಗಳೊಂದಿಗೆ ಒದಗಿಸಿದ ನಂತರ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಜಾಮೀನಿನ ಹೆಚ್ಚುವರಿ ಷರತ್ತುಗಳೆಂದರೆ, ಇಬ್ಬರೂ ವಿಚಾರಣೆಯ ಪ್ರತಿ ದಿನಾಂಕದಂದು ಕಟ್ಟುನಿಟ್ಟಾಗಿ ಹಾಜರಾಗಬೇಕು ಮತ್ತು ಜಾರಿ ನಿರ್ದೇಶನಾಲಯ (ಇಡಿ) ಸಂಗ್ರಹಿಸಿದ ಯಾವುದೇ ಸಾಕ್ಷ್ಯವನ್ನು ಹಾಳು ಮಾಡುವ ಪ್ರಯತ್ನ ಮಾಡಬಾರದು. ರಾಣಾ ಕಪೂರ್ ಮತ್ತು ಗೌತಮ್ ಥಾಪರ್ ಅವರು ತಮ್ಮ ಪಾಸ್‌ಪೋರ್ಟ್‌ಗಳನ್ನು ತಕ್ಷಣವೇ ಇಡಿಗೆ (ED) ಸಲ್ಲಿಸಬೇಕು ಮತ್ತು ವಿದೇಶಕ್ಕೆ ಪ್ರಯಾಣಿಸುವ ಮೊದಲು ನ್ಯಾಯಾಲಯದಿಂದ ಅನುಮತಿ ಪಡೆಯಬೇಕು ಎಂದು ಆದೇಶಿಸಲಾಗಿದೆ.
ರಾಣಾ ಕಪೂರ್, ಅವರ ಪತ್ನಿ ಬಿಂದು ಕಪೂರ್ (Bindu Kapoor) ಮತ್ತು ಗೌತಮ್ ಥಾಪರ್ ಮತ್ತು ಕೆಲವು ಯೆಸ್ ಬ್ಯಾಂಕ್ ಉದ್ಯೋಗಿಗಳನ್ನು ಹಣಕಾಸು ತನಿಖಾ ಸಂಸ್ಥೆಯು 1,700 ಕೋಟಿ ರೂಪಾಯಿಗೂ ಹೆಚ್ಚು ಸಾಲ ವಂಚನೆಗೆ ಆರೋಪಿಗಳೆಂದು ಹೆಸರಿಸಿದೆ. ಅಪರಾಧವನ್ನು ಸಿಬಿಐ ದಾಖಲಿಸಿದ ನಂತರ, ಇಡಿ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿದೆ.
ಎಫ್‌ಐಆರ್ ಪ್ರಕಾರ, ಆವಂತಾ ಗ್ರೂಪ್ ಕಂಪನಿಗಳಿಗೆ ಅರ್ಹತೆ ಇಲ್ಲದಿದ್ದರೂ, ರಾಣಾ ಕಪೂರ್ ಅವರು 300 ಕೋಟಿ ರೂಪಾಯಿಗೂ ಹೆಚ್ಚು ಹಣದ ಲಾಭವನ್ನು ಪಡೆದುಕೊಂಡಿದ್ದಾರೆ ಮತ್ತು ಆ ಮೂಲಕ ಯೆಸ್ ಬ್ಯಾಂಕ್‌ಗೆ 1,700 ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟವನ್ನು ಉಂಟುಮಾಡಿದ್ದಾರೆ ಎಂದು ಹೇಳಲಾಗಿದೆ. ರಾಣಾ ಕಪೂರ್ ಪರ ವಾದ ಮಂಡಿಸಿದ ವಕೀಲ ವಿಜಯ್ ಅಗರ್ವಾಲ್, ಪ್ರಕರಣದ ತನಿಖೆಯ ಸಮಯದಲ್ಲಿ ತನ್ನ ಕಕ್ಷಿದಾರನನ್ನು ಇಡಿ ಬಂಧಿಸಿಲ್ಲ ಮತ್ತು ಬಂಧನವಿಲ್ಲದೆ ಪ್ರಾಸಿಕ್ಯೂಷನ್ ದೂರನ್ನು ದಾಖಲಿಸಿದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅರ್ಹತೆ ಇದೆ ಎಂದು ಹೇಳಿದರು. ಕಪೂರ್ ವಿರುದ್ಧದ ಅಪರಾಧಗಳು ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆಯೊಂದಿಗೆ ಶಿಕ್ಷಾರ್ಹವಾಗಿವೆ ಎಂದು ಅವರು ಹೇಳಿದ್ದಾರೆ.
Triple Talaq : ಲೇಟಾಗಿ ಹಾಲು ತಂದು ಕೊಟ್ಟ ಪತ್ನಿ.. ಅಷ್ಟಕ್ಕೆ ತಲಾಖ್ ಎಂದ ಪತಿರಾಯ!
ಕಾರಂಜಾವಾಲಾ ಮತ್ತು ಕಂಪನಿಯ ವಕೀಲ ಸಂದೀಪ್ ಕಪೂರ್, ಥಾಪರ್ ಪರವಾಗಿ ವಾದಿಸಿದರು ಮತ್ತು ಇಡಿ ತಾತ್ಕಾಲಿಕವಾಗಿ ಆಸ್ತಿಯನ್ನು ಜಪ್ತಿ ಮಾಡಿರುವುದರಿಂದ ಪ್ರಕರಣದ ಅಪರಾಧದ ಆದಾಯವನ್ನು ಈಗಾಗಲೇ ಸರಿಯಾಗಿ ಪಡೆದುಕೊಂಡಿದೆ ಮತ್ತು ಆದ್ದರಿಂದ ಆರೋಪಿಗಳು ನ್ಯಾಯದಿಂದ ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ ಎಂದು ವಾದ ಮಾಡಿದರು.
Delhi Bomb Threat : ರಾಷ್ಟ್ರ ರಾಜಧಾನಿಯಲ್ಲಿ ತಪ್ಪಿದ ದೊಡ್ಡ ದುರಂತ!
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸುನಿಲ್ ಗೊನ್ಸಾಲ್ವಿಸ್ ಅವರು ಜಾಮೀನು ಅರ್ಜಿಯನ್ನು ವಿರೋಧಿಸಿ, ಪ್ರಕರಣವು 300 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರ್ಥಿಕ ಅಪರಾಧವಾಗಿದೆ ಎಂದು ಹೇಳಿದ್ದಾರೆ. ರಾಣಾ ಕಪೂರ್ ಇತರ ಯೆಸ್ ಬ್ಯಾಂಕ್ ಸಂಬಂಧಿತ ಹಗರಣಗಳಿಗೆ ಸಂಬಂಧಿಸಿದಂತೆ ಬಂಧನದಲ್ಲಿಯೇ ಉಳಿಯಲಿದ್ದಾರೆ. ಇಡಿ ತನಿಖೆ ನಡೆಸುತ್ತಿರುವ ಮತ್ತೊಂದು ಪ್ರಕರಣಕ್ಕಾಗಿ ಥಾಪರ್‌ನನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಉಳಿದಂತೆ ಈ ಪ್ರಕರಣದಲ್ಲಿ ವಿವರವಾದ ಜಾಮೀನು ಆದೇಶಕ್ಕಾಗಿ ಕಾಯಲಾಗುತ್ತಿದೆ.