Asianet Suvarna News Asianet Suvarna News

Delhi Bomb Threat : ರಾಷ್ಟ್ರ ರಾಜಧಾನಿಯಲ್ಲಿ ತಪ್ಪಿದ ದೊಡ್ಡ ದುರಂತ!

ಅನುಮಾನಾಸ್ಪದ ಬ್ಯಾಗ್ ನಲ್ಲಿ ಐಇಡಿ ಪತ್ತೆ
ರಾಷ್ಟ್ರ ರಾಜಧಾನಿಯಲ್ಲಿ ತಪ್ಪಿದ ದೊಡ್ಡ ದುರಂತ
ದೆಹಲಿಯ ಓಲ್ಡ್ ಸೀಮಾಪುರಿ ಪ್ರದೇಶದಲ್ಲಿ ಪತ್ತೆಯಾಗಿರುವ ಬ್ಯಾಗ್

IED recovered from suspicious bag in Old Seemapuri area of Delhi  Major tragedy averted in the national capital san
Author
Bengaluru, First Published Feb 17, 2022, 7:47 PM IST

ನವದೆಹಲಿ (ಫೆ 17): ದೆಹಲಿಯ ಓಲ್ಡ್ ಸೀಮಾಪುರಿ ಪ್ರದೇಶದ ರಸ್ತೆಯಲ್ಲಿ ಕಂಡುಬಂದ ಅನುಮಾನಾಸ್ಪದ ಬ್ಯಾಗ್‌ನಿಂದ ಸುಧಾರಿತ ಸ್ಫೋಟಕ ಸಾಧನ (ಐಇಡಿ) (Improvised Explosive Device) ಪತ್ತೆಯಾಗಿದೆ. ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) (National Security Guard), ದೆಹಲಿ ಪೊಲೀಸರು (Delhi Police) ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ( Fire Department officials ) ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. 

ಪ್ರಕರಣ ವರದಿಯಾಗುತ್ತಿದ್ದಂತೆ ಸ್ಥಳದಲ್ಲಿ ಭಾರೀ ಪ್ರಮಾಣದ ಪೊಲೀಸ್ ಜಮಾವಣೆಯಾಗಿದೆ. ಮಧ್ಯಾಹ್ನ 2.15ರ ಸುಮಾರಿಗೆ ಅಪರಿಚಿತ ಬ್ಯಾಗ್‌ನ ಸುಳಿವು ಪತ್ತೆಯಾಗಿತ್ತು. ಇದರ ಬೆನ್ನಲ್ಲಿಯೇ ಪ್ರದೇಶವನ್ನು ಸುತ್ತುವರಿದ ಪೊಲೀಸರು ಸುತ್ತಲಿನ ಜಾಗವನ್ನು ಖಾಲಿ ಮಾಡುವಂತೆ ಸ್ಥಳೀಯ ನಿವಾಸಿಗಳಿಗೆ ಮನವಿ ಮಾಡಿದ್ದರು. ಎನ್‌ಎಸ್‌ಜಿ ಕಮಾಂಡೋಗಳು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದು, ಎನ್ ಎಸ್ ಜಿ ತಂಡ ಬಾಂಬ್ ಅನ್ನು ತೆರೆದ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ನಾಶಪಡಿಸಲಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಸೀಮಾಪುರಿಯ ಮನೆಯೊಂದರ ಮೇಲೆ ದಾಳಿ ನಡೆಸಿದ್ದಾರೆ. ಪರಿಶೀಲನೆ ನಡೆಸಿದಾಗ ಕೊಠಡಿಯೊಂದರಲ್ಲಿ ಇಟ್ಟಿದ್ದ ಬ್ಯಾಗ್ ನಲ್ಲಿ ಸೀಲ್ ಮಾಡಿದ ಪ್ಯಾಕ್ ಮಾಡಿದ ವಸ್ತುಗಳು ಪತ್ತೆಯಾಗಿವೆ. ಪರಿಶೀಲಿಸಿದಾಗ ಇದು ಐಇಡಿ ಎಂಬುದು ಪತ್ತೆಯಾಗಿದೆ. ಇದಾದ ಬಳಿಕ ಎನ್‌ಎಸ್‌ಜಿ ಮತ್ತು ಬಾಂಬ್‌ ನಿಗ್ರಹ ದಳವನ್ನು ಕರೆಸಲಾಗಿತ್ತು. ಬಾಂಬ್ ಪತ್ತೆಯಾದ ಕೋಣೆಯಲ್ಲಿ ಮೂರ್ನಾಲ್ಕು ಹುಡುಗರು ಬಾಡಿಗೆಗೆ ವಾಸಿಸುತ್ತಿದ್ದರು.


ಪೊಲೀಸರ ದಾಳಿಯ ವೇಳೆ ಹುಡುಗರು ಕೋಣೆಯಲ್ಲಿ ಇರಲಿಲ್ಲ. ಅವರು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ದೆಹಲಿಯ ಗಾಜಿಪುರದಲ್ಲಿ ಪತ್ತೆಯಾದ ಐಇಡಿ ಪ್ರಕರಣದ ತನಿಖೆ ವೇಳೆ ಪೊಲೀಸರಿಗೆ ಈ ಯಶಸ್ಸು ಸಿಕ್ಕಿದೆ. ಐಇಡಿ ತಂದಿರುವ ಹುಡುಗರು ಯಾರು ಮತ್ತು ಅವರ ನೆಟ್‌ವರ್ಕ್ ಯಾರ ಬಳಿ ಇದೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

Hijab Row: ಹಿಜಾಬ್ ಸಂಘರ್ಷಕ್ಕೂ ಎಂಟ್ರಿ ಕೊಟ್ಟ ಖಲಿಸ್ತಾನ್, ಬಯಲಾಯ್ತು ಷಡ್ಯಂತ್ರ!
"ಗಾಜಿಪುರ ಆರ್‌ಡಿಎಕ್ಸ್ (Ghazipur RDX case investigation) ಪ್ರಕರಣದ ತನಿಖೆಯಲ್ಲಿ, ಹಳೆ ಸೀಮಾಪುರಿಯಲ್ಲಿರುವ (Old Seemapuri) ಈ ಮನೆಯ ಬಗ್ಗೆ ವಿಶೇಷ ಸೆಲ್‌ಗೆ ( Special Cell ) ಮಾಹಿತಿ ಸಿಕ್ಕಿತ್ತು. ವಿಶೇಷ ಸೆಲ್ ತಂಡ ಇಲ್ಲಿಗೆ ತಲುಪಿದಾಗ, ಈ ಮನೆಯ ಬಾಗಿಲು ಮುಚ್ಚಿತ್ತು ತೆರೆದು ಒಳನುಗ್ಗಿದಾಗ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದೆ, ಸ್ಥಳಕ್ಕೆ ತಲುಪಲು ಅಗ್ನಿಶಾಮಕ ದಳ ಮತ್ತು ಎನ್‌ಎಸ್‌ಜಿಗೆ (NSG) ಮಾಹಿತಿ ನೀಡಲಾಯಿತು. ," ಎಂದು ದೆಹಲಿ ಪೊಲೀಸ್ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.

Punjab Elections: ಮೋದಿ 'ಶಬ್ಧ ಕೀರ್ತನೆ' ಹಿಂದಿದ್ಯಾ ಪಂಜಾಬ್ ಮತಬೇಟೆ ರಹಸ್ಯ?
ಕಳೆದ ತಿಂಗಳು, ಜನವರಿ 22 ರಂದು, ರಾಷ್ಟ್ರ ರಾಜಧಾನಿಯ ತ್ರಿಲೋಕಪುರಿ ಮೆಟ್ರೋ ನಿಲ್ದಾಣದಲ್ಲಿ(Trilokpuri Metro Station ) ಎರಡು ಅನುಮಾನಾಸ್ಪದ ಬ್ಯಾಗ್ ಗಳು ಕಂಡು ಬಂದಿದ್ದವು. ಇದರಿಂದಾಗಿ ಆ ಪ್ರದೇಶದಲ್ಲಿ ಬಾಂಬ್ ಭೀತಿ ಉಂಟಾಗಿತ್ತು. ಬಾಂಬ್ ನಿಷ್ಕ್ರೀಯ ದಳ ಸ್ಥಳಕ್ಕೆ ಆಗಮಿಸಿ ಬ್ಯಾಗ್ ಗಳನ್ನು ಸ್ಕ್ಯಾನ್ ಮಾಡಿದ ಬಳಿಕ ಅದರಲ್ಲಿ ಅನುಮಾನಾಸ್ಪದವಾಗಿ ಏನೂ ಇದ್ದಿರಲಿಲ್ಲ ಎಂದು ಘೋಷಿಸಿದ್ದರು. ಇತ್ತೀಚೆಗೆ ದೆಹಲಿಯ ಗಾಜಿಪುರ ಹೂವಿನ ಮಾರುಕಟ್ಟೆಯಲ್ಲಿ( Delhi's Ghazipur Flower Market) ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾಗಿತ್ತು. ಬಾಂಬ್ ನಿಷ್ಕ್ರಿಯ ದಳ ತೆರೆದ ಮೈದಾನದ ಗುಂಡಿಯೊಂದರಲ್ಲಿ ಐಇಡಿ ಸ್ಫೋಟ ನಡೆಸಿತ್ತು. ಘಟನೆಯಲ್ಲಿ ಯಾವುದೇ ಜೀವ ಹಾನಿ ಆಗಿರಲಿಲ್ಲ. ಹಳೆಯ ಸೀಮಾಪುರಿಯಲ್ಲಿ ಬ್ಯಾಗ್ ಪತ್ತೆಗೆ ಸಂಬಂಧಿಸಿದಂತೆ ಪ್ರಸ್ತುತ ತನಿಖೆಯು ಗಾಜಿಪುರ ಮಂಡಿ (Ghazipur Mandi) ಐಇಡಿ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತರನ್ನು ಗುರುತಿಸುವ ಬಗ್ಗೆ ಸುಳಿವುಗಳಿಗೆ ಕಾರಣವಾಗಬಹುದು.

 

Follow Us:
Download App:
  • android
  • ios