ನವದೆಹಲಿ[ಸೆ.11]: ಡಿಜಿಟಲ್‌ ಪಾವತಿ ಸೇವೆ ನೀಡುವ ಮುಂಚೂಣಿ ಕಂಪನಿಯಾದ ಪೇಟಿಎಂ, ಖಾಸಗಿ ವಲಯದ ಯಸ್‌ ಬ್ಯಾಂಕ್‌ನಲ್ಲಿ ಷೇರುಪಾಲು ಖರೀದಿಸುವ ಕುರಿತು ಮಾತುಕತೆ ಆರಂಭಿಸಿದೆ ಎನ್ನಲಾಗಿದೆ. ಈ ಸಂಬಂಧ ಪೇಟಿಎಂ ಸಂಸ್ಥಾಪಕ ವಿಜಯ್‌ಶೇಖರ್‌ ಶರ್ಮಾ ಮತ್ತು ಯಸ್‌ ಬ್ಯಾಂಕ್‌ ಸಂಸ್ಥಾಪಕ ರಾಣಾ ಕಪೂರ್‌ ನಡುವೆ ಪ್ರಾಥಮಿಕ ಹಂತದ ಮಾತುಕತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಒಂದು ವೇಳೆ ಉಭಯ ಮುಖ್ಯಸ್ಥರ ನಡುವೆ ಒಪ್ಪಂದ ಆದರೂ ಅದಕ್ಕೆ ಆರ್‌ಬಿಐನ ಅನುಮೋದನೆ ಕಡ್ಡಾಯ. ಪೇಟಿಎಂ ಮುಖ್ಯಸ್ಥ ವಿಜಯ್‌ಶೇಖರ್‌ ಈಗಾಗಲೇ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನಲ್ಲಿ ಹೆಚ್ಚಿನ ಷೇರುಪಾಲು ಹೊಂದಿದ್ದಾರೆ.

ಯೆಸ್ ಬ್ಯಾಂಕ್ ಅಧ್ಯಕ್ಷರಾಗಿ ಕರ್ನಾಟಕದ ಬ್ರಹ್ಮದತ್ ಆಯ್ಕೆ

ಹೀಗಾಗಿ ಆರ್‌ಬಿಐ ಅನುಮೋದನೆ ಆಧಾರದ ಮೇಲೆ ಷೇರು ಪಾಲು ಮಾರಾಟ ನಿಂತಿದೆ ಎನ್ನಲಾಗಿದೆ. ಕಳೆದ ಹಣಕಾಸು ವರ್ಷಾಂತ್ಯಕ್ಕೆ ಪೇಟಿಎಂ 3960 ಕೋಟಿ ರು. ನಷ್ಟದಲ್ಲಿತ್ತು.