Milk Price Hike: ಅಮುಲ್, ಮದರ್‌ ಡೈರಿ ಹಾಲಿನ ದರ ಹೆಚ್ಚಳ: ನಾಳೆಯಿಂದಲೇ ಪರಿಷ್ಕೃತ ದರ ಜಾರಿ

ಅಮುಲ್‌ ಹಾಗೂ ಮದರ್‌ ಡೈರಿ ಕಂಪನಿ ಹಾಲಿನ ದರ ಹೆಚ್ಚಿಸುತ್ತಿದೆ. ಆಗಸ್ಟ್‌ 17, 2022 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಎರಡೂ ಕಂಪನಿಗಳು ಹೇಳಿಕೊಂಡಿದೆ. 

amul and mother dairy milk prices to increase by rs 2 per litre know details ash

ಅಮುಲ್‌ ಹಾಲು ಪ್ರಿಯರಿಗೆ ಬ್ಯಾಡ್‌ ನ್ಯೂಸ್‌ ಇಲ್ಲಿದೆ. ದೇಶದ ಪ್ರಮುಖ ಹಾಲು ಹಾಗೂ ಹಾಲು ಉತ್ಪನ್ನ ಬ್ರ್ಯಾಂಡ್‌ಗಳಲ್ಲೊಂದಾದ ಅಮುಲ್‌ (Amul) ಹಾಲಿನ ದರ ತುಟ್ಟಿಯಾಗುತ್ತಿದೆ. ಅಮುಲ್‌ ಹಾಲು ಮಾರಾಟವಾಗುವ ಗುಜರಾತ್‌, ದೆಹಲಿ - ಎನ್‌ಸಿಆರ್‌, ಪಶ್ಚಿಮ ಬಂಗಾಳ, ಮುಂಬೈ ಹಾಗೂ ದೇಶದ ಇತರೆ ಎಲ್ಲ ಮಾರುಕಟ್ಟೆಗಳಲ್ಲಿ ಹಾಲಿನ ದರ ನಾಳೆಯಿಂದಲೇ ಹೆಚ್ಚಾಗುತ್ತಿದೆ. ಹಾಗಾದ್ರೆ, ನೂತನ ಹಾಲಿನ ದರ ಎಷ್ಟು ಅಂತೀರಾ..? ಮುಂದೆ ಓದಿ..

ಅಮುಲ್‌ ಹಾಲಿನ ಎಲ್ಲ ಬ್ರ್ಯಾಂಡ್‌ಗಳ ದರವೂ ನಾಳೆಯಿಂದ ಪ್ರತಿ ಲೀಟರ್‌ಗೆ 2 ರೂ. ಜಾಸ್ತಿಯಾಗಲಿದೆ. ಆಗಸ್ಟ್‌ 17 ಅಂದರೆ ನಾಳೆಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಅಮುಲ್‌ ಗೋಲ್ಡ್‌ (Amul Gold) ಹಾಲಿನ ದರ ಅರ್ಧ ಲೀಟರ್‌ಗೆ 31 ರೂ. ಗೆ ಮಾರಾಟವಾಗಲಿದ್ದರೆ, ಅಮುಲ್‌ ತಾಜಾ (Amul Taaza) ಹಾಲು ಅರ್ಧ ಲೀಟರ್‌ಗೆ 25 ರೂ. ಹಾಗೂ ಅಮುಲ್‌ ಶಕ್ತಿ (Amul Shakti) ಹಾಲು ಅರ್ಧ ಲೀಟರ್‌ಗೆ 28 ರೂ. ಗೆ ಮಾರಾಟವಾಗಲಿದೆ ಎಂದು ತಿಳಿದುಬಂದಿದೆ. ಲೀಟರ್‌ಗೆ 2 ರೂ. ದರ ಹೆಚ್ಚಳ ಅಮುಲ್‌ ಹಾಲಿನ ಎಂಆರ್‌ಪಿಯಲ್ಲಿ ಶೇ. 4 ರಷ್ಟು ತುಟ್ಟಿಯಾಗಲಿದೆ ಎನ್ನಲಾಗುತ್ತಿದೆ. ಆದರೂ, ಇದು ಸರಾಸರಿ ಆಹಾರ ಹಣದುಬ್ಬರಕ್ಕಿಂತ ಕಡಿಮೆಯಾಗಿದೆ ಎಂದೂ ಕಂಪನಿ ಹೇಳಿಕೊಂಡಿದೆ.

ಶಿಮುಲ್‌ನಿಂದ ಶ್ರಾವಣ ಮಾಸದ ಕೊಡುಗೆ: ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಳ

ಇನ್ನು, ಕಾರ್ಯಾಚರಣೆಯ ಒಟ್ಟಾರೆ ವೆಚ್ಚ ಮತ್ತು ಹಾಲಿನ ಉತ್ಪಾದನೆ ವೆಚ್ಚ ಹೆಚ್ಚಳದಿಂದ ಹಾಲಿನ ದರ ದುಬಾರಿಯಾಗುತ್ತಿದೆ ಎಂದು ಅಮುಲ್‌ ಕಂಪನಿ ಮಾಹಿತಿ ನೀಡಿದೆ. ಇನ್ನು, ಕಳೆದ ವರ್ಷಕ್ಕೆ ಹೋಲಿಸಿದರೆ ಜಾನುವಾರು ಆಹಾರ ವೆಚ್ಚವೇ ಅಂದಾಜು ಶೇ. 20 ರಷ್ಟು ದುಬಾರಿಯಾಗಿದೆ ಎಂದೂ ಕಂಪನಿ ಹೇಳಿಕೊಂಡಿದೆ. ಹಾಗೂ, ಇನ್ಪುಟ್‌ ವೆಚ್ಚದಲ್ಲಿ ಹೆಚ್ಚಳ ಹಿನ್ನೆಲೆ ನಮ್ಮ ಸದಸ್ಯ ಒಕ್ಕೂಟಗಳು ರೈತರಿಗೆ ನೀಡುವ ಹಾಲಿನ ದರವೂ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 8 - 9 ರಷ್ಟು ಹೆಚ್ಚಾಗಿದೆ ಎಂದೂ ಅಮುಲ್‌ ಮಾಹಿತಿ ನೀಡಿದೆ. 

ಅಮುಲ್‌ ಬ್ರ್ಯಾಂಡ್‌ನಡಿ ಗುಜರಾತ್‌ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್‌) (Gujarat Cooperative Milk Marketing Federation) ಹಾಲು ಹಾಗೂ ಹಾಲಿನ ಇತರೆ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ತನ್ನ ಗ್ರಾಹಕರಿಂದ ಪಡೆದ ಪ್ರತಿ 1 ರೂಪಾಯಿಯಲ್ಲಿ ಅಂದಾಜು 80 ಪೈಸೆಯನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುವುದು ಅಮುಲ್‌ ಬ್ರ್ಯಾಂಡ್‌ನ ನೀತಿ. ಈ ಹಿನ್ನೆಲೆ ಈ ದರ ಹೆಚ್ಚಳವು ನಮ್ಮ ಹಾಲು ಉತ್ಪಾದಕರಿಗೆ ಉತ್ತಮ ಹಾಲಿನ ದರವನ್ನು ನೀಡುವುದಕ್ಕೆ ಸಹಾಯ ಮಾಡುತ್ತದೆ. ಇದರಿಂದ ಹಾಲಿನ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು ಉತ್ತೇಜಿಸುತ್ತದೆ ಎಂದೂ ಗುಜರಾತ್‌ ಸಹಕಾರಿ ಹಾಲು ಮಾರಾಟ ಒಕ್ಕೂಟ ಹೇಳಿಕೊಂಡಿದೆ. 

ಮೊಸರು, ಮಜ್ಜಿಗೆ ದರ ಕೊಂಚ ಇಳಿಸಿದ KMF, ಆದ್ರೂ ಜನರಿಗೆ ತಟ್ಟಿದ ಬೆಲೆ ಏರಿಕೆ ಬಿ

ಮದರ್‌ ಡೈರಿಯಿಂದಲೂ ಹಾಲಿನ ದರ ಹೆಚ್ಚಳ
ಇನ್ನೊಂದೆಡೆ, ಅಮುಲ್‌ ಬೆನ್ನಲ್ಲೇ ಮದರ್‌ ಡೈರಿ (Mother Dairy) ಕಂಪನಿ ಸಹ ತನ್ನ ಹಾಲಿನ ದರವನ್ನು ಹೆಚ್ಚಿಸುತ್ತಿದೆ. ನಾಳೆಯಿಂದ ಲೀಟರ್‌ಗೆ 2 ರೂ. ದರ ಹೆಚ್ಚಳವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು, ದೆಹಲಿ - ಎನ್‌ಸಿಆರ್‌ ಪ್ರದೇಶ ವ್ಯಾಪ್ತಿಯಲ್ಲಿ ಈ ಪರಿಷ್ಕೃತ ದರ ಜಾರಿಯಾಗಲಿದೆ ಎಂದೂ ಕಂಪನಿ ಹೇಳಿಕೊಂಡಿದೆ. ಆಗಸ್ಟ್ 17 ರಿಂದ ಹಾಲಿನ ದರ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದೂ ಕಂಪನಿಯ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಸಹ ಮದರ್‌ ಡೈರಿ ಕಂಪನಿ ದೆಹಲಿ - ಎನ್‌ಸಿಆರ್‌ ಪ್ರದೇಶದಲ್ಲಿ ಲೀಟರ್‌ಗೆ 2 ರೂ. ನಷ್ಟು ಹಾಲಿನ ದರವನ್ನು ದುಬಾರಿಯಾಗಿಸಿತ್ತು. ಈಗ 5 ತಿಂಗಳಲ್ಲಿ ಮತ್ತೊಮ್ಮೆ ತನ್ನ ಕಂಪನಿಯ ಹಾಲಿನ ದರ ಹೆಚ್ಚಿಸುತ್ತಿದೆ. 

Latest Videos
Follow Us:
Download App:
  • android
  • ios