Asianet Suvarna News Asianet Suvarna News

19ರ ಯುವಕ ಜಗತ್ತಿನ ಸಿರಿವಂತ, ನೆಟ್‌ವರ್ಥ್ ಏನು ಇವನದ್ದು?

ವಿಶ್ವದಲ್ಲಿ ದಿನೇ ದಿನೇ ಶ್ರೀಮಂತರ ಸಂಖ್ಯೆ ಹೆಚ್ಚಾಗ್ತಿದೆ. ಕೆಲವರು ಶ್ರಮಪಟ್ಟು ಹಣ ಮಾಡಿದ್ರೆ ಮತ್ತೆ ಕೆಲವರಿಗೆ ಅದೃಷ್ಟ ಕೈಹಿಡಿದಿರುತ್ತದೆ. ಇನ್ನು ಕೆಲವರಿಗೆ ಅಜ್ಜ, ತಂದೆ ಮಾಡಿದ್ದ ಆಸ್ತಿಯಲ್ಲಿ ಪಾಲು ಸಿಗುತ್ತದೆ. ೧೯ನೇ ವಯಸ್ಸಿನಲ್ಲಿ ಶ್ರೀಮಂತನಾದ ಈತನ ಕಥೆ ಏನು ? 
 

Worlds Youngest Billionaires Clemente Del Vecchio Net Worth  roo
Author
First Published Dec 5, 2023, 3:38 PM IST

ವಿಶ್ವದಲ್ಲಿ ಶ್ರೀಮಂತ ವ್ಯಕ್ತಿಗಳು ಯಾರು ಎಂದಾಗ ಎಲೋನ್ ಮಸ್ಕ್, ಜೆಫ್ ಬೆಜೋಸ್, ಬರ್ನಾರ್ಡ್ ಅರ್ನಾಲ್ಟ್, ಬಿಲ್ ಗೇಟ್ಸ್ ಸೇರಿದಂತೆ ಕೆಲ ಕೋಟ್ಯಾಧಿಪತಿಗಳ ಹೆಸರನ್ನು ನಾವು ಹೇಳ್ತೇವೆ. ಕೋಟ್ಯಾಧಿಪತಿಯಾಗ್ಬೇಕು, ಶ್ರೀಮಂತರ ಪಟ್ಟಿಯಲ್ಲಿ ಹೆಸರು ಸೇರಬೇಕು ಎನ್ನುವ ಆಸೆ ಎಲ್ಲರಿಗಿದ್ರೂ ಅದು ಈಡೇರೋದು ಕಷ್ಟ. ಆರಂಭದಲ್ಲಿ ಓದು, ನಂತ್ರ ಸಣ್ಣಪುಟ್ಟ ಕೆಲಸ, ಆ ನಂತ್ರ ವ್ಯಾಪಾರ ಅಥವಾ ದೊಡ್ಡ ಹುದ್ದೆಗೆ ಏರಿ ಕೋಟ್ಯಾಧಿಪತಿಯಾಗುವ ವೇಳೆಗೆ ವಯಸ್ಸು ೫೦ ವರ್ಷ ಮೀರಿರುತ್ತದೆ. ಆದ್ರೆ ಚಿಕ್ಕ ವಯಸ್ಸಿನಲ್ಲೇ ಬಿಲಿಯನೇರ್ ಆದ,  ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಹೆಸರುಪಡೆದ ವ್ಯಕ್ತಿಯೊಬ್ಬರ ಬಗ್ಗೆ ನಾವಿಂದು ನಿಮಗೆ ಹೇಳ್ತೇವೆ. ತನ್ನ ಏಳು ಜನ್ಮಕ್ಕೆ ಸಾಕಾಗುವಷ್ಟು ಹಣ ಗಳಿಸಿದ ಈ ವ್ಯಕ್ತಿ ವಯಸ್ಸು ಹಾಗೆ ಸಾಧನೆ ಕೇಳಿದ್ರೆ ನೀವು ಬೆರಗಾಗ್ತೀರಿ.

ನಿಮಗೆಲ್ಲ ತಿಳಿದಿರುವಂತೆ ಅಂತರಾಷ್ಟ್ರೀಯ (International) ನಿಯತಕಾಲಿಕೆ ಫೋರ್ಬ್ಸ್ (Forbes)  ಬಿಲಿಯನೇರ್‌ಗಳ ಪಟ್ಟಿ ಬಿಡುಗಡೆ ಮಾಡಿದೆ. ಇದ್ರಲ್ಲಿ ನಾವು ಮೇಲೆ ಹೇಳಿದ ಎಲ್ಲ ವ್ಯಕ್ತಿಗಳ ಹೆಸರಿರೋದು ವಿಶೇಷವಲ್ಲ. ಇಲ್ಲಿ 19 ವರ್ಷದ ಹುಡುಗನೊಬ್ಬನ ಹೆಸರು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಗ್ಯಾರಂಟಿ ಸರ್ಕಾರಕ್ಕೆ ಫೈನಾನ್ಸ್ ಬೂಸ್ಟರ್ ಕೊಟ್ಟ ಬಿಯರ್ ಪ್ರಿಯರು: 22,500 ಕೋಟಿ ರೂ. ಆದಾಯ

19 ವರ್ಷದಲ್ಲೇ ಈತ ಕೋಟ್ಯಾಧಿಪತಿ (Millionaire) : ತನ್ನ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಕೋಟ್ಯಾಧಿಪತಿಯಾದ ಈತನ ಹೆಸರು ಕ್ಲೆಮೆಂಟೆ ಡೆಲ್ ವೆಚಿಯೊ. ಈತ ಇಟಲಿಯ ವ್ಯಕ್ತಿ. ಕ್ಲೆಮೆಂಟೆ ಡೆಲ್ ವಚಿಯೊ ನಿವ್ವಳ ಮೌಲ್ಯ 4 ಶತಕೋಟಿ ಡಾಲರ್. ಅಂದರೆ 33,000 ಕೋಟಿ ರೂಪಾಯಿ.  ಕ್ಲೆಮೆಂಟೆ ಡೆಲ್ ವಚಿಯೊ  ಇಷ್ಟೊಂದು ಶ್ರೀಮಂತನಾಗಿದ್ದು ಹೇಗೆ? : ಇಷ್ಟು ಚಿಕ್ಕ ವಯಸ್ಸಿನಲ್ಲಿ ಕ್ಲೆಮೆಂಟೆ ಡೆಲ್ ವಚಿಯೊ ಶ್ರೀಮಂತನಾಗಿದ್ದು ಹೇಗೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡ್ತಿರಬಹುದು. ನನಗೆ ೩೦ ವರ್ಷವಾಯ್ತು, ನಾನಿನ್ನು ಒಂದು ಕೋಟಿ ಸಂಪಾದನೆ ಮಾಡಿಲ್ಲ ಅಂತಾ ಮನಸ್ಸಿನಲ್ಲೇ ಬೇಸರಪಟ್ಟುಕೊಳ್ತಿದ್ದರೆ ಅದ್ರ ಅವಶ್ಯಕತೆ ಇಲ್ಲ. ಕ್ಲೆಮೆಂಟೆ ಡೆಲ್ ವಚಿಯೊಗೆ ವಂಶಪಾರಂಪರ್ಯವಾಗಿ ಈ ಆಸ್ತಿ ಬಂದಿದೆ.

ಈ ಕಂಪನಿ ಮಾಲೀಕ ಕ್ಲೆಮೆಂಟೆ ಡೆಲ್ ವಚಿಯೊ ತಂದೆ :  ಕ್ಲೆಮೆಂಟ್ ತಂದೆ ಬಿಲಿಯನೇರ್ ಆಗಿದ್ದರು. ಇಟಾಲಿಯ ಲಿಯೊನಾರ್ಡೊ ಡೆಲ್ ವೆಚಿಯೊ ಕ್ಲೆಮೆಂಟ್ ತಂದೆ. ಲಿಯಾನಾರ್ಡೊ ಡೆಲ್ , ವಿಶ್ವದ ಅತಿದೊಡ್ಡ ಕನ್ನಡಕ ಕಂಪನಿಯಾದ ಎಸ್ಸಿಲೋರ್ ಲುಕ್ಸೊಟಿಕಾದ ಅಧ್ಯಕ್ಷರಾಗಿದ್ದರು. ಕಳೆದ ವರ್ಷ ಜೂನ್‌ನಲ್ಲಿ ತಮ್ಮ 87 ನೇ ವಯಸ್ಸಿನಲ್ಲಿ ಅವರು ನಿಧನರಾದರು. ಅವರ ಉಯಿಲಿನ ಆಧಾರದ ಮೇಲೆ, 25.5 ಬಿಲಿಯನ್ ಡಾಲರ್  ಆಸ್ತಿಯನ್ನು ಹಂಚಲಾಗಿದೆ. ಅವರ ಪತ್ನಿ ಮತ್ತು 6 ಮಕ್ಕಳು ಇದರಲ್ಲಿ ಪಾಲು ಪಡೆದಿದ್ದಾರೆ. ಅದರಲ್ಲಿ  ಕ್ಲೆಮೆಂಟೆ ಪಾಲು ಸೇರಿದೆ. ತಂದೆ ಆಸ್ತಿಪಡೆದ ಕ್ಲೆಮೆಂಟೆ ಶ್ರೀಮಂತನಾಗಿದ್ದು, ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾನೆ.

ಅಬ್ಬಬ್ಬಾ.. 2 ಸಾವಿರ ರೂ. ನೋಟು ಪ್ರಿಂಟ್‌ ಮಾಡೋಕೆ ಆರ್‌ಬಿಐ ಖರ್ಚು ಮಾಡಿದ್ದು ಇಷ್ಟೊಂದಾ?

ಇನ್ನು ಕ್ಲೆಮೆಂಟೆಯ ಸಹೋದರ 22 ವರ್ಷದ ಲುಕಾ ಡೆಲ್ ವೆಚಿಯೊ ಕೂಡ ರೇಸ್ ನಲ್ಲಿ ಹಿಂದಿಲ್ಲ. ಅವರ ನಿವ್ವಳ ಮೌಲ್ಯ 4 ಬಿಲಿಯನ್ ಡಾಲರ್. ಸಹೋದರಿ ಲಿಯೊನಾರ್ಡೊ ಮಾರಿಯಾ ಡೆಲ್ ವೆಚಿಯೊ ಯುವ ಬಿಲಿಯನೇರ್‌ಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಕ್ಲೆಮೆಂಟೆ ಇಷ್ಟೆಲ್ಲ ಆಸ್ತಿ ಹೊಂದಿದ್ದರೂ, ಲಕ್ಸೆಂಬರ್ಗ್ ಮೂಲದ ಹೋಲ್ಡಿಂಗ್ ಕಂಪನಿ ಡೆಲ್ಫಿನ್‌ನಲ್ಲಿ ಶೇಕಡಾ 12.5ರಷ್ಟು ಪಾಲನ್ನು ಪಡೆದ್ದರೂ ಶಿಕ್ಷಣವನ್ನು ಅರ್ಥಕ್ಕೆ ಬಿಟ್ಟಿಲ್ಲ. ಕ್ಲೆಮೆಂಟೆ ಕಾಲೇಜಿಗೆ ಹೋಗ್ತಿದ್ದಾನೆ. ಇಟಲಿಯಲ್ಲಿ ಕ್ಲೆಮೆಂಟೆ ಒಡೆತನದಲ್ಲಿ ಸಾಕಷ್ಟು ಆಸ್ತಿಯಿದೆ. ಲೇಕ್ ಕೊಮೊ ಬಳಿ ಇರುವ ವಿಲ್ಲಾ ಮತ್ತು ಮಿಲನ್‌ನಲ್ಲಿರುವ ಅಪಾರ್ಟ್ಮೆಂಟ್ ಕೂಡ ಆತನ ಆಸ್ತಿಯಲ್ಲಿ ಸೇರಿದೆ. 
 

Follow Us:
Download App:
  • android
  • ios