ಸಾರ್ವಜನಿಕರ ಕರೆನ್ಸಿ ಅವಶ್ಯಕತೆಗಳನ್ನು ಪೂರೈಸಲು ಇತರ ಮುಖಬೆಲೆಯ ನೋಟುಗಳ ಸಂಗ್ರಹವು ಸಮರ್ಪಕವಾಗಿ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

ನವದೆಹಲಿ (ಡಿಸೆಂಬರ್ 5, 2023): ಹಳೆಯ 500 ರೂ. ಹಾಗೂ 1,000 ರೂ. ನೋಟುಗಳನ್ನು ಹಿಂತೆಗೆದುಕೊಂಡ ಬಳಿಕ ಆರ್‌ಬಿಐ ದೇಶದ ಜನತೆಗೆ ಹೊಸ 500 ರೂ. ಹಾಗೂ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಿತು. ಅದ್ರಲ್ಲೂ, ಜನರಲ್ಲಿ ನಗದು ಹಣದ ಕೊರತೆ ನಿವಾರಿಸಲು 2 ಸಾವಿರ ರೂ. ನೋಟುಗಳನ್ನು ಪ್ರಿಂಟ್‌ ಮಾಡಿತ್ತು.

ಸದ್ಯ, ಕೆಲ ವರ್ಷಗಳಿಂದ ಹೊಸ ನೋಟುಗಳನ್ನು ಪ್ರಿಂಟ್‌ ಮಾಡುತ್ತಿಲ್ಲ ಹಾಗೂ ಈಗಾಗಲೇ ಈ ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಇನ್ನು, ಭಾರತೀಯ ರಿಸರ್ವ್ ಬ್ಯಾಂಕ್ 2016 ರಲ್ಲಿ ಪರಿಚಯಿಸಿದಾಗಿನಿಂದ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಲು 17,688 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ ಹೇಳಿದ್ದಾರೆ.

ಇದನ್ನು ಓದಿ: ಇನ್ನೂ 9,760 ಕೋಟಿ ರೂ. ಮೌಲ್ಯದ 2,000ರೂ. ನೋಟುಗಳು ಹಿಂತಿರುಗಲು ಬಾಕಿ: ಆರ್ ಬಿಐ

2016 ರ ನವೆಂಬರ್‌ನಲ್ಲಿ ಸರ್ಕಾರವು 500 ಮತ್ತು 1000 ರೂಪಾಯಿಗಳ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿದ ನಂತರ ಕೇಂದ್ರೀಯ ಬ್ಯಾಂಕ್ 2,000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಿತ್ತು. ಈ ಪೈಕಿ, 2,000 ರೂ ಮುಖಬೆಲೆಯ ನೋಟುಗಳಲ್ಲಿ ಸುಮಾರು 89% ರಷ್ಟು ಮಾರ್ಚ್ 2017 ರ ಮೊದಲು ನೀಡಲಾಯಿತು ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಪ್ರತಿಕ್ರಿಯೆಯಲ್ಲಿ ಪಂಕಜ್ ಚೌಧರಿ ಹೇಳಿದ್ದಾರೆ. ಇನ್ನು, ಈ ನೋಟುಗಳನ್ನು ಹಿಂತೆಗೆದುಕೊಳ್ಳಲಾಗುತ್ತಿದ್ರೂ, ಸಾರ್ವಜನಿಕರ ಕರೆನ್ಸಿ ಅವಶ್ಯಕತೆಗಳನ್ನು ಪೂರೈಸಲು ಇತರ ಮುಖಬೆಲೆಯ ನೋಟುಗಳ ಸಂಗ್ರಹವು ಸಮರ್ಪಕವಾಗಿ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಎಟಿಎಂಗಳನ್ನು 2,000 ರೂಪಾಯಿಗಳ ಕರೆನ್ಸಿ ನೋಟುಗಳನ್ನು ಮರುಕ್ಯಾಲಿಬ್ರೇಟ್ ಮಾಡಲು ಸುಮಾರು 32 ಕೋಟಿ ರೂ. ಖರ್ಚು ಮಾಡಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗಳ ಮರುಕ್ಯಾಲಿಬ್ರೇಶನ್‌ಗೆ ಸರಿಸುಮಾರು 12.8 ಕೋಟಿ ರೂ. ಖರ್ಚಾಗಿದೆ ಎಂದೂ ಚೌಧರಿ ಹೇಳಿದ್ದಾರೆ. 

₹2000 ನೋಟು ಇನ್ನೂ ಇದೆಯಾ? ಅಂಚೆ ಮೂಲಕ ಕಳಿಸಿ ನಗದಾಗಿಸಿ

ಆರ್‌ಬಿಐ ಪ್ರಕಾರ 2017–19ನೇ ಹಣಕಾಸು ವರ್ಷದಿಂದ ಚಲಾವಣೆಯಲ್ಲಿರುವ 2000 ರೂಪಾಯಿ ನೋಟುಗಳ ಒಟ್ಟು ಮೌಲ್ಯ 7.4 ಲಕ್ಷ ಕೋಟಿ ರೂಪಾಯಿಯಾಗಿದೆ. ನಂತರದ ವರ್ಷಗಳಲ್ಲಿ ಆರ್‌ಬಿಐ ಯಾವುದೇ ಹೊಸ 2,000 ರೂ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸಲಿಲ್ಲ. ಮೇ 19 ರಂದು, ರಿಸರ್ವ್‌ ಬ್ಯಾಂಕ್ ಕ್ಲೀನ್ ನೋಟ್ ನೀತಿಯ ಅಡಿಯಲ್ಲಿ ಚಲಾವಣೆಯಲ್ಲಿರುವ ಈ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಮತ್ತು ಸೆಪ್ಟೆಂಬರ್ 30 ರವರೆಗೆ ನೋಟುಗಳನ್ನು ವಾಪಸ್‌ ಮಾಡಲು ಕಾಲಾವಕಾಶ ನೀಡಲಾಯ್ತು. ಹಾಗೂ, ನಂತರ ಅಕ್ಟೋಬರ್ 7 ರವರೆಗೆ ವಿಸ್ತರಣೆಯಾಯ್ತು.

ಚಲಾವಣೆಯಲ್ಲಿರುವ ಅತಿ ಹೆಚ್ಚು ಮುಖಬೆಲೆಯ ಕರೆನ್ಸಿ ನೋಟುಗಳ ಒಟ್ಟು ಮೌಲ್ಯವು 3.56 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದು, ನವೆಂಬರ್ 30 ರ ಹೊತ್ತಿಗೆ 9,760 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ. ಹಾಗೂ, ಹಿಂದಿರುಗಿದ ನೋಟುಗಳನ್ನು ವಿಲೇವಾರಿ ಮಾಡಲು ನಿಗದಿಪಡಿಸಿದ ಕಾರ್ಯವಿಧಾನದ ಪ್ರಕಾರ (ದಿ) ಆರ್‌ಬಿಐನಲ್ಲಿ ಪ್ರಕ್ರಿಯೆಗೊಳಿಸಲಾಗುತ್ತಿದೆ ಎಂದೂ ಚೌಧರಿ ಹೇಳಿದರು.

ಈಗಲೂ ಸಹ ಹಲವರ ಬಳಿ 2 ಸಾವಿರ ರೂ. ನೋಟುಗಳಿದ್ದು, ಆರ್‌ಬಿಐ ಕಚೇರಿಗಳಿಗೆ ನೋಟುಗಳನ್ನು ನೀಡಲು ಅಲೆದಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.