ಈ ಭಾರತೀಯ ದಾನ ಕೊಟ್ಟಿದ್ದು ಬರೋಬ್ಬರಿ 8,29,734 ಕೋಟಿ ರೂ.ಗಳನ್ನು!
ಜಗತ್ತಿನಲ್ಲೇ ಅತಿ ಹೆಚ್ಚು ದಾನ ಮಾಡಿದ ವ್ಯಕ್ತಿ ಒಬ್ಬ ಭಾರತೀಯ. ಇಲ್ಲ, ಅದು ಮುಖೇಶ್ ಅಂಬಾನಿಯೂ ಅಲ್ಲ, ರತನ್ ಟಾಟಾನೂ ಅಲ್ಲ..
ಹುರುನ್ ರಿಸರ್ಚ್ ಮತ್ತು ಎಡೆಲ್‌ಗಿವ್ ಫೌಂಡೇಶನ್ ಕಳೆದ ಶತಮಾನದಿಂದ ವಿಶ್ವದಲ್ಲಿ ಅತ್ಯಂತ ದಾನ ಮಾಡಿದ ವ್ಯಕ್ತಿಗಳ ಹೆಸರು ಬಿಡುಗಡೆ ಮಾಡಿವೆ. ಇದರಲ್ಲಿ ಮೊದಲ ಶ್ರೇಣಿಯಲ್ಲಿ ಹೆಸರು ಪಡೆದಿರುವುದು ಒಬ್ಬ ಭಾರತೀಯ ಎಂಬುದು ಹೆಮ್ಮೆಯ ಸಂಗತಿ. ಈ ವ್ಯಕ್ತಿ ದಾನ ಮಾಡಿದ್ದು ಬರೋಬ್ಬರಿ 8,29,734 ಕೋಟಿ ರೂ.ಗಳನ್ನು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಗಣನೀಯ ದೇಣಿಗೆ ನೀಡಿದ ಈ ವ್ಯಕ್ತಿಯನ್ನು ವಿಶ್ವದ ಅತ್ಯಂತ ದೊಡ್ಡ ದಾನಿ ಎಂದು ಹೆಸರಿಸಲಾಗಿದೆ. ಯಾರಿರಬಹುದು ಇದು?
ಎಡೆಲ್‌ಗಿವ್ ಫೌಂಡೇಶನ್ ಮತ್ತು ಹುರುನ್ ವರದಿ 2021 ಸಿದ್ಧಪಡಿಸಿದ ಪಟ್ಟಿಯ ಪ್ರಕಾರ ಟಾಟಾ ಗ್ರೂಪ್‌ನ ಸಂಸ್ಥಾಪಕರಾದ ಜೇಮ್‌ಶೇಟ್ ಜಿ ಟಾಟಾ ಕಳೆದ 100 ವರ್ಷಗಳಲ್ಲಿ ವಿಶ್ವದ ಅತ್ಯಂತ ಹೆಚ್ಚು ದಾನ ನೀಡಿದ ವ್ಯಕ್ತಿಯಾಗಿದ್ದಾರೆ. ನಂತರದ ಸ್ಥಾನವನ್ನು ಬಿಲ್ ಗೇಟ್ಸ್ ಪಡೆದುಕೊಂಡಿದ್ದಾರೆ.
ಲಕ್ಷದ್ವೀಪವೀಗ ಹಾಟ್ ಬೆಡಗಿಯರ ತಾಣ- ಏನಂದ್ರು ಕೇಳಿ ಈ ಬಾಲಿವುಡ್ ಸುಂದರಿಯರು
ಜೇಮ್‌ಶೇಟ್ ಜಿ ಟಾಟಾ ಅವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ದೇಣಿಗೆಗಳನ್ನು ನೀಡಿದರು. ಟಾಟಾ ಅವರು 1892ರಲ್ಲಿ ತಮ್ಮ ದತ್ತಿ ಕಾರ್ಯಗಳನ್ನು ಪ್ರಾರಂಭಿಸಿದರು. 1904 ರಲ್ಲಿ ಟಾಟಾ ಕೊನೆಯುಸಿರೆಳೆದ ಬಳಿಕ ಟಾಟಾ ಗ್ರೂಪ್ ಅಧ್ಯಕ್ಷ ರತನ್ ಟಾಟಾ ಈಗ ಟಾಟಾ ಗ್ರೂಪ್ನ ಲೋಕೋಪಕಾರಿ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ.
ಟಾಟಾ ಹೊರತುಪಡಿಸಿ, ಟಾಪ್ 50 ಜಾಗತಿಕ ಲೋಕೋಪಕಾರಿಗಳ ಪಟ್ಟಿಯಲ್ಲಿರುವ ಏಕೈಕ ಭಾರತೀಯ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿಯಾಗಿದ್ದಾರೆ. ಅವರು 22 ಬಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ. ಪ್ರಸ್ತುತ ಎಚ್‌ಸಿಎಲ್ ಸಂಸ್ಥಾಪಕ ಶಿವನಾಥನ್, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅದಾನಿ ಗ್ರೂಪ್ ಚೈನ್‌ಮ್ಯಾನ್ ಗೌತಮ್ ಅದಾನಿ ಅಗ್ರಸ್ಥಾನದಲ್ಲಿದ್ದಾರೆ.
ರಾಮ ಮಂದಿರ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್, ರಾಮ ವಿರೋಧಿಗಳಿಗೆ ಜಾಗವಿಲ್ಲ ಎಂದ ಜನ!
ಜೇಮ್‌ಶೇಟ್ ಜಿ ಟಾಟಾ ಅವರು ಗುಜರಾತಿನಲ್ಲಿ ಜೊರಾಸ್ಟ್ರಿಯನ್ ಪಾರ್ಸಿ ಕುಟುಂಬದಲ್ಲಿ ಜನಿಸಿದರು. ಆ ಸಮಯದಲ್ಲಿ ಅವರ ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಜೇಮ್‌ಶೇಟ್ ಜಿ ಟಾಟಾ ಅವರು ತಮ್ಮ ಕುಟುಂಬದ ಪೌರೋಹಿತ್ಯದ ಸಂಪ್ರದಾಯವನ್ನು ಮುರಿದರು ಮತ್ತು ವ್ಯಾಪಾರವನ್ನು ಪ್ರಾರಂಭಿಸಿದ ಮೊದಲ ಕುಟುಂಬದ ಸದಸ್ಯರಾದರು. ಟಾಟಾ ಅವರು ಹೀರಾಬಾವೊ ದಾಬೂ ಅವರನ್ನು ವಿವಾಹವಾದರು ಮತ್ತು ದೊರಾಬ್ಜಿ ಟಾಟಾ ಮತ್ತು ರತನ್ಜಿ ಟಾಟಾ ಎಂಬ ಮಕ್ಕಳನ್ನು ಪಡೆದರು.