2024ರಲ್ಲಿ ಭಾರತದ ಜಿಡಿಪಿ ದರ ಶೇ.7.5 ಪ್ರಗತಿ: ವಿಶ್ವಬ್ಯಾಂಕ್‌

2024ನೇ ಹಣಕಾಸು ವರ್ಷದಲ್ಲಿ ಭಾರತ ಶೇ.7.5ರಷ್ಟು ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ. ವಿಶೇಷವೆಂದರೆ ತನ್ನ ಈ ಹಿಂದಿನ ವರದಿಯಲ್ಲಿ ಅದು ಭಾರತದ ಜಿಡಿಪಿ ಬೆಳವಣಿಗೆ ದರ ಶೇ.6.3ರಷ್ಟು ಇರಬಹುದು ಎಂದು ಹೇಳಿತ್ತು.
 

World Bank projects Indian economy to grow at 7 5 percent in 2024 gvd

ವಾಷಿಂಗ್ಟನ್‌ (ಏ.04): 2024ನೇ ಹಣಕಾಸು ವರ್ಷದಲ್ಲಿ ಭಾರತ ಶೇ.7.5ರಷ್ಟು ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ. ವಿಶೇಷವೆಂದರೆ ತನ್ನ ಈ ಹಿಂದಿನ ವರದಿಯಲ್ಲಿ ಅದು ಭಾರತದ ಜಿಡಿಪಿ ಬೆಳವಣಿಗೆ ದರ ಶೇ.6.3ರಷ್ಟು ಇರಬಹುದು ಎಂದು ಹೇಳಿತ್ತು. ಅದಕ್ಕೆ ಹೋಲಿಸಿದರೆ ಇದೀಗ ಭಾರೀ ಪ್ರಗತಿ ದರ ಭಾರೀ ಏರಿಕೆಯ ಸುಳಿವನ್ನು ಅದು ನೀಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇಡೀ ದಕ್ಷಿಣ ಏಷ್ಯಾ ವಲಯ ಶೇ.6.0ರಷ್ಟು ಜಿಡಿಪಿ ಪ್ರಗತಿ ಸಾಧಿಸಲಿದೆ. 

ಇದಕ್ಕೆ ಮುಖ್ಯ ಕಾರಣ ಭಾರತದಲ್ಲಿ ಉತ್ತಮ ಆರ್ಥಿಕ ಪ್ರಗತಿ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳಲ್ಲಿ ಆರ್ಥಿಕತೆ ಮತ್ತೆ ಹಳಿಗೆ ಮರಳಿರುವುದು ಕಾರಣ ಎಂದು ದಕ್ಷಿಣ ಏಷ್ಯಾ ಕುರಿತಾದ ತನ್ನ ವರದಿಯಲ್ಲಿ ವಿಶ್ವಬ್ಯಾಂಕ್‌ ಹೇಳಿದೆ. ಸದ್ಯ ಭಾರತದಲ್ಲಿ ಹಣದುಬ್ಬರ ಪ್ರಮಾಣ ಆರ್‌ಬಿಐನ ಗುರಿಯಾದ ಶೇ.2- ಶೇ.6ರ ಮಿತಿಯಲ್ಲೇ ಇದೆ. 2023ರ ಫೆಬ್ರುವರಿಯಿಂದ ಬಡ್ಡಿದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ದೇಶದಲ್ಲಿ ವಾಣಿಜ್ಯ ವಲಯಕ್ಕೆ ಸಾಲ ವಿತರಣೆ ಪ್ರಮಾಣ ಶೇ.14ರಷ್ಟು ಏರಿಕೆ ಕಂಡಿದೆ. ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಪ್ರಮಾಣವೂ ನಿಗದಿತ ಮಿತಿಯಲ್ಲೇ ಇದೆ ಎಂದು ವರದಿ ಹೇಳಿದೆ.

ಮೋದಿ ವರ್ಸಸ್‌ ಯಾರು ಎಂಬ ಪ್ರಶ್ನೆಯೇ ಅಪ್ರಸ್ತುತ: ಶಶಿ ತರೂರ್‌

ಭಾರತದ ಆರ್ಥಿಕತೆಯಲ್ಲಿ ಸಮಸ್ಯೆಗಳಿವೆ: ‘ಭಾರತದ ಆರ್ಥಿಕತೆ ಭಾರೀ ವೇಗದಲ್ಲಿ ಬೆಳೆಯುತ್ತಿದೆ ಎಂದು ಕೆಲವರು ಹೇಳುತ್ತಿರುವುದನ್ನು ನಂಬುವ ಮೂಲಕ ನಾವು ದೊಡ್ಡ ತಪ್ಪು ಮಾಡುತ್ತಿದ್ದೇವೆ. ನಮ್ಮ ಆರ್ಥಿಕತೆ ಬೆಳೆಯಲು ಇನ್ನೂ ಸಾಕಷ್ಟು ವರ್ಷಗಳ ಕಠಿಣ ಪರಿಶ್ರಮದ ಅಗತ್ಯವಿದೆ. ಈಗಲೂ ನಮ್ಮ ಆರ್ಥಿಕತೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಈ ವರ್ಷ ಅಧಿಕಾರಕ್ಕೆ ಬರುವ ಹೊಸ ಸರ್ಕಾರ ಅವುಗಳನ್ನು ಆದ್ಯತೆಯ ಮೇಲೆ ಸರಿಪಡಿಸಬೇಕಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)ನ ಮಾಜಿ ಗವರ್ನರ್‌ ರಘುರಾಂ ರಾಜನ್‌ ಹೇಳಿದ್ದಾರೆ.

ಅವರ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ‘ರಾಜನ್‌ ಒಬ್ಬ ಪ್ಯಾರಾಶೂಟ್‌ ಅರ್ಥಶಾಸ್ತ್ರಜ್ಞ. 1990ರ ದಶಕದಲ್ಲಿ ದೇಶದ ಆರ್ಥಿಕತೆ ಸಮಸ್ಯೆಯಲ್ಲಿದ್ದಾಗ ವಿಶ್ವಬ್ಯಾಂಕ್‌, ಐಎಂಎಫ್‌ ಮುಂತಾದ ಸಂಸ್ಥೆಗಳಿಂದ ವಿದೇಶಗಳಿಂದ ಬಂದು ಟೀಕೆ ಮಾಡಿ ಹೋಗುತ್ತಿದ್ದವರಿಗೆ ನಾವು ಪ್ಯಾರಾಶೂಟ್‌ ಅರ್ಥಶಾಸ್ತ್ರಜ್ಞರು ಎಂದು ಕರೆಯುತ್ತಿದ್ದೆವು. ಅವರಂತೆಯೇ ರಾಜನ್‌ ಮಾತನಾಡುತ್ತಿದ್ದಾರೆ. ಇವರ ಮಾತು ಕೇಳಿದರೆ ಅರ್ಧ ಶತಮಾನದಿಂದ ಭಾರತದ ಆರ್ಥಿಕತೆಯನ್ನು ಅಧ್ಯಯನ ಮಾಡಿದಂತೆ ತೋರುತ್ತಿದೆ’ ಎಂದು ನೀತಿ ಆಯೋಗದ ಸದಸ್ಯ ಅರವಿಂದ ವೀರಮಣಿ ವ್ಯಂಗ್ಯವಾಡಿದ್ದಾರೆ.

12 ದಿನದಲ್ಲಿ ಕೇಜ್ರಿವಾಲ್‌ ತೂಕ 4.5 ಕೆ.ಜಿ ಇಳಿ: ಸಚಿವೆ ಅತಿಷಿ ಆರೋಪ

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಘುರಾಂ ರಾಜನ್‌, ‘2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗುವುದು ಸುಲಭವಿಲ್ಲ. ನಮ್ಮ ಎಷ್ಟೊಂದು ಮಕ್ಕಳಿಗೆ ಇಂದಿಗೂ ಸರಿಯಾದ ಹೈಸ್ಕೂಲ್‌ ಶಿಕ್ಷಣವಿಲ್ಲ. ಶಾಲೆಯಿಂದ ಹೊರಗುಳಿಯುವವರ ದರ ಹೆಚ್ಚಿದೆ. ಈ ಸಮಯದಲ್ಲಿ ಅಭಿವೃದ್ಧಿ ಹೊಂದಿದ ಆರ್ಥಿಕತೆಯ ಬಗ್ಗೆ ಮಾತನಾಡುವುದೇ ನಾನ್‌ಸೆನ್ಸ್‌. ನಮ್ಮ ಆರ್ಥಿಕತೆಯಲ್ಲಿ ವಿನ್ಯಾಸಾತ್ಮಕ ಸಮಸ್ಯೆಗಳಿವೆ. ಮೊದಲು ಅವುಗಳನ್ನು ಸರಿಪಡಿಸಬೇಕು’ ಎಂದು ಹೇಳಿದ್ದರು.

Latest Videos
Follow Us:
Download App:
  • android
  • ios