Asianet Suvarna News Asianet Suvarna News

12 ದಿನದಲ್ಲಿ ಕೇಜ್ರಿವಾಲ್‌ ತೂಕ 4.5 ಕೆ.ಜಿ ಇಳಿ: ಸಚಿವೆ ಅತಿಷಿ ಆರೋಪ

ದೆಹಲಿ ಅಬಕಾರಿ ಹಗರಣ ಪ್ರಕರಣದಲ್ಲಿ ಬಂಧಿತವಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ತೂಕ ಇಳಿಕೆಯಾಗಿದ್ದು, ಬಿಜೆಪಿಯವರು ಕೇಜ್ರಿವಾಲ್‌ ಅವರ ಆರೋಗ್ಯವನ್ನು ಅಪಾಯದಲ್ಲಿಟ್ಟಿದ್ದಾರೆ ಎಂದು ಎಎಪಿ ನಾಯಕಿ ಅತಿಷಿ ಬುಧವಾರ ಆರೋಪಿಸಿದರು. 
 

Arvind Kejriwal lost 4 5 kg in 12 days since ED arrest Atishi claims gvd
Author
First Published Apr 4, 2024, 5:49 AM IST

ನವದೆಹಲಿ (ಏ.04): ದೆಹಲಿ ಅಬಕಾರಿ ಹಗರಣ ಪ್ರಕರಣದಲ್ಲಿ ಬಂಧಿತವಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ತೂಕ ಇಳಿಕೆಯಾಗಿದ್ದು, ಬಿಜೆಪಿಯವರು ಕೇಜ್ರಿವಾಲ್‌ ಅವರ ಆರೋಗ್ಯವನ್ನು ಅಪಾಯದಲ್ಲಿಟ್ಟಿದ್ದಾರೆ ಎಂದು ಎಎಪಿ ನಾಯಕಿ ಅತಿಷಿ ಬುಧವಾರ ಆರೋಪಿಸಿದರು. ಈ ಬಗ್ಗೆ ತಮ್ಮ ಟ್ವೀಟರ್‌ ಖಾತೆಯಲ್ಲಿ ‘ಕೇಜ್ರಿವಾಲ್‌ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿ 12 ದಿನಗಳಾಗಿದ್ದು, ಅವರಲ್ಲಿ 4.5 ಕೆಜಿ ತೂಕ ಇಳಿಕೆಯಾಗಿದೆ. 

ಬಿಜೆಪಿಯವರು ಕೇಜ್ರಿವಾಲ್‌ ಅವರ ಆರೋಗ್ಯವನ್ನು ಅಪಾಯದಲ್ಲಿಟ್ಟಿದ್ದಾರೆ. ಕೇಜ್ರಿವಾಲ್‌ಗೆ ಏನಾದರು ಆದರೆ ದೇಶದ ಜನರೇ ಅಲ್ಲ, ಆ ದೇವರೂ ಅವರನ್ನು ಕ್ಷಮಿಸುವುದಿಲ್ಲ ಎಂದು ಪೋಸ್ಟ್‌ ಮಾಡಿದ್ದಾರೆ. ಈ ಆರೋಪಕ್ಕೆ ತಿಹಾರ್‌ ಜೈಲಿನ ಅಧಿಕಾರಿಗಳು ಪ್ರತಿಕ್ರಿಯಿಸಿ ಕೇಜ್ರಿವಾಲ್‌ ಆರೋಗ್ಯ ಸ್ಥಿರವಾಗಿದೆ. ನಮ್ಮ ವಶಕ್ಕೆ ಬಂದ ದಿನದಿಂದಲೂ 65 ಕೆಜಿಯಲ್ಲೇ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಸೇರದಿದ್ದರೆ ನಾಲ್ಕು ನಾಯಕರ ಬಂಧನದ ಎಚ್ಚರಿಕೆ: ದೆಹಲಿ ಸಚಿವೆ ಆತಿಷಿ ಆರೋಪ

ವಿಚಾರಣೆಯಲ್ಲಿ 2 ಮಂತ್ರಿ ಹೆಸರೇಳಿದ ಕೇಜ್ರಿ: ಅಬಕಾರಿ ಹಗರಣ ಸಂಬಂಧ ಬಂಧನಕ್ಕೆ ಒಳಗಾಗಿ ಜಾರಿ ನಿರ್ದೇಶನಾಲಯ (ಇ.ಡಿ.)ದ ವಿಚಾರಣೆ ಎದುರಿಸಿದ ವೇಳೆ ದೆಹಲಿಯ ಇಬ್ಬರು ಮಂತ್ರಿಗಳಾದ ಅತಿಷಿ ಹಾಗೂ ಸೌರಭ್‌ ಭಾರದ್ವಾಜ್‌ ಅವರ ಹೆಸರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬಾಯಿಬಿಟ್ಟಿದ್ದಾರೆ ಎಂದು ಇ.ಡಿ. ಹೇಳಿಕೊಂಡಿದೆ. ಅಬಕಾರಿ ಹಗರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಆಮ್‌ ಆದ್ಮಿ ಪಕ್ಷದ ಸಂವಹನ ವಿಭಾಗದ ಮಾಜಿ ಮುಖ್ಯಸ್ಥ ವಿಜಯ್‌ ನಾಯರ್‌ ನನಗೇನೂ ವರದಿ ಮಾಡಿಕೊಳ್ಳುತ್ತಿರಲಿಲ್ಲ. 

ಅತಿಷಿ ಹಾಗೂ ಸೌರಭ್‌ ಜತೆ ಮಾತನಾಡುತ್ತಿದ್ದ. ಆತನ ಜತೆ ನನ್ನ ಮಾತುಕತೆ ಸೀಮಿತವಾಗಿತ್ತು ಎಂದು ಕೇಜ್ರಿ ಹೇಳಿದ್ದಾರೆ ಎಂದು ಇ.ಡಿ. ತಿಳಿಸಿದೆ. ಇದರಿಂದಾಗಿ ಕೇಜ್ರಿವಾಲ್‌ ಬಂಧನ ಖಂಡಿಸಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಹಾಗೂ ದೆಹಲಿ ಸರ್ಕಾರವನ್ನು ಮುನ್ನಡೆಸುತ್ತಿರುವ ಈ ಇಬ್ಬರೂ ಮಂತ್ರಿಗಳಿಗೆ ಸಂಕಷ್ಟ ಎದುರಾದಂತಾಗಿದೆ. ಈ ನಡುವೆ, ಅತಿಷಿ ಅವರನ್ನು ಈ ಬಗ್ಗೆ ಸುದ್ದಿಗಾರರು ಮಾತನಾಡಿಸಿದಾಗ, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಉಗ್ರರ ಬೆಂಬಲದೊಂದಿಗೆ ಕಾಂಗ್ರೆಸ್‌ ಸ್ಪರ್ಧೆ: ಬಿಜೆಪಿ ಆರೋಪ

ಯಾರು ಈ ನಾಯರ್‌?: ಜಾರಿ ನಿರ್ದೇಶನಾಲಯದ ಆರೋಪ ಪಟ್ಟಿಯ ಪ್ರಕಾರ, ವಿಜಯ್‌ ನಾಯರ್‌ ‘ಸೌತ್‌ ಗ್ರೂಪ್‌’ಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ. ದೆಹಲಿ ಅಬಕಾರಿ ಲೈಸೆನ್ಸ್‌ ಅನ್ನು ಬೇಕಾದವರಿಗೆ ಮಂಜೂರು ಮಾಡಿಸಲು 100 ಕೋಟಿ ರು. ಲಂಚವನ್ನು ಕೇಜ್ರಿವಾಲ್‌ ಸರ್ಕಾರಕ್ಕೆ ಕೊಡಿಸಿದ್ದ. ಪ್ರಕರಣದಲ್ಲಿ ಆರೋಪಿಯಾಗಿರುವ ಸಮೀರ್‌ ಮಹೇಂದ್ರು ಎಂಬಾತನಿಗೆ ಕೇಜ್ರಿವಾಲ್‌ ಅವರನ್ನು ಭೇಟಿಯಾಗಲು ನಾಯರ್ ಸಮಯ ನಿಗದಿ ಮಾಡಿಸಿದ್ದ. ಆದರೆ ಭೇಟಿ ಸಾಧ್ಯವಾಗದೆ, ವಿಡಿಯೋ ಕಾಲ್‌ ಮೂಲಕ ಮಾತುಕತೆ ನಡೆದಿತ್ತು. ಆ ವೇಳೆ, ‘ನಾಯರ್‌ ನಮ್ಮ ಹುಡುಗ, ಆತನನ್ನು ನಂಬಬಹುದು. ಅವರ ಜತೆ ವ್ಯವಹಾರ ಮುಂದುವರಿಸಿಕೊಂಡು ಹೋಗಬಹುದು’ ಎಂದು ಕೇಜ್ರಿವಾಲ್‌ ತಿಳಿಸಿದ್ದರು.

Follow Us:
Download App:
  • android
  • ios