ಮೋದಿ ವರ್ಸಸ್ ಯಾರು ಎಂಬ ಪ್ರಶ್ನೆಯೇ ಅಪ್ರಸ್ತುತ: ಶಶಿ ತರೂರ್
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಪಕ್ಷಗಳ ಪಾಳೆಯದಿಂದ ಎದುರಾಳಿ ಯಾರು ಎಂಬ ಪ್ರಶ್ನೆಯೇ ಅಪ್ರಸ್ತುತ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ನವದೆಹಲಿ (ಏ.04): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಪಕ್ಷಗಳ ಪಾಳೆಯದಿಂದ ಎದುರಾಳಿ ಯಾರು ಎಂಬ ಪ್ರಶ್ನೆಯೇ ಅಪ್ರಸ್ತುತ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿ ಜನರು ವ್ಯಕ್ತಿಯನ್ನು ಆರಿಸುವುದಿಲ್ಲ. ಬದಲಿಗೆ ಒಂದು ಪಕ್ಷ ಅಥವಾ ಒಂದು ಮೈತ್ರಿಕೂಟವನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ ಮೋದಿ ಅವರಿಗೆ ಪರ್ಯಾಯ ಯಾರು ಎಂದರೆ ಅನುಭವ, ಸಮರ್ಥ ಹಾಗೂ ವೈವಿಧ್ಯತೆಯನ್ನು ಹೊಂದಿರುವ ನಾಯಕರ ಗುಂಪು.
ಅವರು ಜನರ ಸಮಸ್ಯೆಗಳಿಗೆ ಸಂವೇದನೆ ಹೊಂದಿದವರಾಗಿರುತ್ತಾರೆ. ವೈಯಕ್ತಿಕ ಅಹಂ ಹೊಂದಿರುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಮೋದಿಗೆ ಪರ್ಯಾಯ ನಾಯಕ ಯಾರು ಎಂದು ಹೇಳುವಂತೆ ಪತ್ರಕರ್ತರು ಮತ್ತೊಮ್ಮೆ ನನಗೆ ಕೇಳಿದ್ದಾರೆ. ಅಧ್ಯಕ್ಷೀಯ ವ್ಯವಸ್ಥೆಯಲ್ಲಿರುವಂತೆ ನಾವೇನು ವ್ಯಕ್ತಿಯನ್ನು ಇಲ್ಲಿ ಆಯ್ಕೆ ಮಾಡುತ್ತಿಲ್ಲ. ಬದಲಾಗಿ ಭಾರತದ ವೈವಿಧ್ಯತೆ, ಬಹುತ್ವ ಹಾಗೂ ಸಮಗ್ರ ಅಭಿವೃದ್ಧಿಯನ್ನು ರಕ್ಷಿಸುವ ಸಿದ್ಧಾಂತ ಮತ್ತು ಬದ್ಧತೆಯನ್ನು ಪ್ರತಿನಿಧಿಸುವ ಒಂದು ಪಕ್ಷ ಅಥವಾ ಒಂದು ಮೈತ್ರಿಕೂಟವನ್ನು ಆಯ್ಕೆ ಮಾಡುತ್ತಿದ್ದೇವೆ ಎಂದಿದ್ದಾರೆ.
ವಿಮಾನ ವಿಳಂಬ ಮೋದಿ ನಿರ್ಮಿತ ವಿಪತ್ತು: ಪ್ರತಿಕೂಲ ಹವಾಮಾನದ ಪರಿಣಾಮ ಕಳೆದ ಭಾನುವಾರದಂದು ದೆಹಲಿ, ಮುಂಬೈ ಸೇರಿದಂತೆ ಹಲವು ವಿಮಾನ ನಿಲ್ದಾಣಗಳಲ್ಲಿ ಉಂಟಾದ ಅವ್ಯವಸ್ಥೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಮೋದಿ ಸರ್ಕಾರ ನಿರ್ಮಿತ ವಿಪತ್ತು ಎಂದು ಬಣ್ಣಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ದಟ್ಟ ಮಂಜು ಆವರಿಸುತ್ತದೆ ಎಂದು ಗೊತ್ತಿದ್ದೂ ಸಹ ದೆಹಲಿ ವಿಮಾನ ನಿಲ್ದಾಣದಲ್ಲಿ ರನ್‌ವೇಯನ್ನು ಕೆಟಗರಿ-3ಕ್ಕೆ ಅಣಿಗೊಳಿಸದೆ ಜನರ ಹಬ್ಬದ ಸಂಭ್ರಮವನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಸಿದಿದೆ.
ಉಗ್ರರ ಬೆಂಬಲದೊಂದಿಗೆ ಕಾಂಗ್ರೆಸ್ ಸ್ಪರ್ಧೆ: ಬಿಜೆಪಿ ಆರೋಪ
ಹಾಗಾಗಿ ವಿಮಾನ ಪ್ರಯಾಣಿಕರ ಅವ್ಯವಸ್ಥೆಯೂ ಮೋದಿಯೇ ನಿರ್ಮಿಸಿದ ವಿಪತ್ತು’ ಎಂದು ಕಿಡಿಕಾರಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ವಿಮಾನಯಾನ ಸಚಿವ ಸಿಂಧಿಯಾ, ‘ತರೂರ್ ಒಬ್ಬ ‘ಆರಾಮ ಕುರ್ಚಿ ಟೀಕಾಕಾರ’, ಅಂತರ್ಜಾಲದಲ್ಲಿ ಲಭ್ಯವಾಗುವ ಸುದ್ದಿಯನ್ನೇ ಸತ್ಯವೆಂದು ನಂಬಿ ಸಂಶೋಧನೆ ಎಂದು ಬಣ್ಣಿಸುವ ಕಾಂಗ್ರೆಸ್ ಸಂಸದರಿಗೆ ವಿಮಾನಯಾನದ ತಾಂತ್ರಿಕ ಸಮಸ್ಯೆಗಳು ಅರ್ಥವಾಗದು’ ಎಂದು ತಿರುಗೇಟು ನೀಡಿದ್ದಾರೆ.