ಈ ಷೇರು ಖರೀದಿಸಿ ಊರಿನವರೆಲ್ಲಾ ಕೋಟ್ಯಾಧಿಪತಿಗಳಾದ್ರು; ₹100 ಹೂಡಿಕೆ, ₹14 ಕೋಟಿ ಆಯ್ತು!

ಒಂದು ಹಳ್ಳಿಯಲ್ಲಿ ಪ್ರತಿ ಕುಟುಂಬವು ಕೋಟ್ಯಾಧಿಪತಿಯಾಗಿದೆ, ಏಕೆಂದರೆ ಪ್ರತಿ ಮಗುವಿನ ಜನನದಂದು ಒಂದು ನಿರ್ದಿಷ್ಟ ಕಂಪನಿಯ ಷೇರುಗಳನ್ನು ಖರೀದಿಸಲಾಗುತ್ತದೆ.

Wipro Stock Investment Turns Entire Village into Millionaires mrq

ನವದೆಹಲಿ: ಕಂಪನಿಯೊಂದರ ಷೇರು ಖರೀದಿಸಿದ ಈ ಹಳ್ಳಿಯ ಜನರೆಲ್ಲರೂ ಕೋಟ್ಯಧಿಪತಿಗಳಾಗಿದ್ದಾರೆ. ಹಾಗಾಗಿ ಈ ಗ್ರಾಮದ ಬಹುತೇಕ ಎಲ್ಲಾ ನಿವಾಸಿಗಳು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡೋದು ಎಷ್ಟು ಸರಳವಾಗಿದೆ ಅಂದ್ರೆ ಗ್ರಾಮದಲ್ಲಿ ಯಾವುದಾದರೂ ಮಗು ಹುಟ್ಟಿದರೂ, ಅದರ ಹೆಸರಿನಲ್ಲಿ ಷೇರುಗಳನ್ನು ಖರೀದಿಸಿ ಎತ್ತಿಡಲಾಗುತ್ತದೆ. ಈ ಷೇರು ಖರೀದಿಸಿದ್ರೆ ಒಳ್ಳೆಯ ಲಾಭ ಬರುತ್ತೆ ಎಂಬುವುದು ಈ ಗ್ರಾಮದ ಜನರ ನಂಬಿಕೆಯಾಗಿದೆ. ಹಾಗಾಗಿ ಈ ಕಂಪನಿಯ ಷೇರುಗಳನ್ನು ಕೋಟ್ಯಧಿಪತಿ ಷೇರು ಎಂದು ಕರೆಯುತ್ತಾರೆ. ಹಾಗಾದ್ರೆ ಈ ಗ್ರಾಮಸ್ಥರು ಖರೀದಿಸುವ ಷೇರು ಯಾವುದು ಅಂತ ಎಂಬುದರ ಮಾಹಿತಿ ಈ ಲೇಖನದಲ್ಲಿದೆ.

ಕೋಟ್ಯಾಧಿಪತಿಗಳನ್ನಾಗಿ ಮಾಡಿದ ಷೇರು
ಈ ಷೇರು ಬೇರೆ ಯಾವುದೂ ಅಲ್ಲ, ಐಟಿ ವಲಯದ ಅತಿದೊಡ್ಡ ಕಂಪನಿಗಳಲ್ಲಾಗಿರು ವಿಪ್ರೋ. ಸೋಪ್ ಮತ್ತು ವೆಜಿಟೇಬಲ್ ಆಯಿಲ್ ವ್ಯವಹಾರನ್ನು ವಿಪ್ರೋ ಮಾಡುತ್ತದೆ. ಈ ಕಂಪನಿಯು 1945 ರಲ್ಲಿ ಮಹಾರಾಷ್ಟ್ರದ ಅಮಲ್ನೇರ್ (Amalner) ಹಳ್ಳಿಯಲ್ಲಿ ಪ್ರಾರಂಭವಾಯ್ತು. ಇಂದು ಈ ಹಳ್ಳಿಯ ಪ್ರತಿಯೊಬ್ಬರು ಕೋಟ್ಯಧಿಪತಿಗಳಾಗಿದ್ದಾರೆ. ಅಮಲ್ನೇರ್ ಗ್ರಾಮದ ಪ್ರತಿ ಕುಟುಂಬದ ಬಳಿ ವಿಪ್ರೋ ಕಂಪನಿಯ ಷೇರುಗಳಿವೆ. ಮಗು ಜನಿಸಿದರೂ, ಅದರ ಹೆಸರಿನಲ್ಲಿ ವಿಪ್ರೋ ಕಂಪನಿಯ ಷೇರು ಖರೀದಿಸಲಾಗುತ್ತದೆ. ಹಾಗಾಗಿ ಅಮಲ್ನೇರ್ ಹಳ್ಳಿಯನ್ನು ಕೋಟ್ಯಧಿಪತಿಗಳ ಗ್ರಾಮ ಎಂದು ಕರೆಯಲಾಗುತ್ತದೆ.

ಕಳೆದ 40 ವರ್ಷಗಳಲ್ಲಿ ವಿಪ್ರೊ ಷೇರು ತನ್ನ ಹೂಡಿಕೆದಾರರಿಗೆ ಭಾರಿ ಆದಾಯವನ್ನು ನೀಡಿದೆ. ಈ ಷೇರಿನಲ್ಲಿ ಹಣ ಹೂಡಿದವರು ಲಾಭ ಗಳಿಸಿದ್ದಾರೆ. 1980 ರಲ್ಲಿ ವಿಪ್ರೊ ಷೇರಿನ ಬೆಲೆ ಕೇವಲ 100 ರೂಪಾಯಿಗಳಾಗಿತ್ತು. 1980ರಲ್ಲಿ 10 ಸಾವಿರ ರೂಪಾಯಿ ಹೂಡಿಕೆ ಮಾಡಿದ್ರೆ, ಇಂದು ಅವರು 1,400 ಕೋಟಿ ರೂ. ಮಾಲೀಕರಾಗಿರುತ್ತಾರೆ. 100 ರೂ. ಬೆಲೆಯ ಒಂದು ಷೇರು ಇದಿದ್ದರೆ ಇಂದು ಅದು 14 ಕೋಟಿ ರೂಪಾಯಿ ಆಗಿರುತ್ತದೆ. ಕಳೆದ ಹಲವು ವರ್ಷಗಳಲ್ಲಿ ವಿಪ್ರೋ ತನ್ನ ಷೇರುದಾರರಿಗೆ ಬೋನಸ್ (Bonus Share), ಸ್ಟಾಕ್ ಸ್ಪ್ಲಿಟ್ ಮತ್ತು ಲಾಭಾಂಶವನ್ನು ಹಲವು ಬಾರಿ ನೀಡಿದೆ. ಹಾಗಾಗಿ ವಿಪ್ರೋ ಷೇರುದಾರರು ಹೆಚ್ಚು ಲಾಭವನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಕಳೆದ ಗುರುವಾರ ವಿಪ್ರೊ ಷೇರುಗಳು ಹಣಕಾಸು ವರ್ಷ 2024-25ರ ಎರಡನೇ ತ್ರೈಮಾಸಿಕದ ಹಣಕಾಸು ಫಲಿತಾಂಶಗಳೊಂದಿಗೆ 1:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ಬಿಡುಗಡೆ ಮಾಡಿತ್ತು. 2021 ಮತ್ತು 2020ರಲ್ಲಿ ವಿಪ್ರೊ ತನ್ನ ಷೇರುದಾರರಿಗೆ ಪ್ರತಿ ಷೇರಿಗೆ 1 ರೂಪಾಯಿ ಲಾಭಾಂಶ ನೀಡಿತ್ತು. 1980 ರಿಂದ ಇಲ್ಲಿಯವರೆಗೆ ವಿಪ್ರೋ ಹಲವು ಬಾರಿ ಲಾಭಾಂಶ, ಬೋನಸ್, ಸ್ಟಾಕ್ ಸ್ಪ್ಲಿಟ್ ನೀಡಿದೆ. 40 ವರ್ಷಗಳಲ್ಲಿ 021 ರ ವರೆಗೆ 100 ಷೇರುಗಳು ಬೆಲೆ 2.56 ಕೋಟಿ ಮೌಲ್ಯದ ಷೇರುಗಳಾಗಿವೆ.

200 ರೂಪಾಯಿ ನೋಟ್ ಬ್ಯಾನ್ ಆಗುತ್ತಾ? ಮಾರುಕಟ್ಟೆಯಿಂದ 137 ಕೋಟಿ ಹಿಂಪಡೆದ ಆರ್‌ಬಿಐ

ಅಕ್ಟೋಬರ್ 22, 2024 ರಂದು ಷೇರು ಮಾರುಕಟ್ಟೆ ಮುಕ್ತಾಯದ ಸಮಯದಲ್ಲಿ ವಿಪ್ರೊದ ಒಂದು ಷೇರು ಬೆಲೆ (Wipro Share Price) 546 ರೂಪಾಯಿಗಳಿಗೆ ಮುಕ್ತಾಯವಾಯಿತು. ಷೇರಿನ ಒಟ್ಟು ಮೌಲ್ಯ 546 ರೂಪಾಯಿಗಳು × 2,56,00,000 ಷೇರುಗಳು = 13,977,600,000 ರೂಪಾಯಿ ಆಗುತ್ತದೆ. 1980 ರಲ್ಲಿ 10 ರೂಪಾಯಿಗಳ ಒಟ್ಟು ಮೌಲ್ಯ 2024 ರಲ್ಲಿ ಸುಮಾರು 1,400 ಕೋಟಿ ರೂಪಾಯಿಗಳಾಗಿರುತ್ತದೆ. ಅಂದರೆ ಆಗಿನ 100 ರೂಪಾಯಿಗಳು ಇಂದು 14 ಕೋಟಿ ರೂಪಾಯಿಗಳು.

ಕಳೆದ 1 ವರ್ಷದಲ್ಲಿ ಈ ಷೇರು 29.40 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಅದೇ ರೀತಿ 2 ವರ್ಷಗಳಲ್ಲಿ 41.89 ಪ್ರತಿಶತ, 5 ವರ್ಷಗಳಲ್ಲಿ 114.53 ಪ್ರತಿಶತ ಮತ್ತು 10 ವರ್ಷಗಳಲ್ಲಿ 150.80 ಪ್ರತಿಶತದಷ್ಟು ಆದಾಯವನ್ನು ನೀಡಿದೆ.

ಗಮನಿಸಿ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಹೂಡಿಕೆ ಮಾಡುವ ಮೊದಲು ನಿಮ್ಮ ಮಾರುಕಟ್ಟೆ ತಜ್ಞರ ಸಲಹೆಯನ್ನು ಪಡೆಯಿರಿ.

ಬದ್ರಿನಾಥ-ಕೇದರನಾಥ ದರ್ಶನ ಪಡೆದು ತಿಜೋರಿ ಬೀಗ ತೆರೆದು ಮುಕೇಶ್ ಅಂಬಾನಿ ದೇಣಿಗೆ ನೀಡಿದೆಷ್ಟು?

Latest Videos
Follow Us:
Download App:
  • android
  • ios