Asianet Suvarna News Asianet Suvarna News

200 ರೂಪಾಯಿ ನೋಟ್ ಬ್ಯಾನ್ ಆಗುತ್ತಾ? ಮಾರುಕಟ್ಟೆಯಿಂದ 137 ಕೋಟಿ ಹಿಂಪಡೆದ ಆರ್‌ಬಿಐ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರುಕಟ್ಟೆಯಿಂದ 200 ರೂ. ಮುಖಬೆಲೆಯ 137 ಕೋಟಿ ರೂಪಾಯಿಗಳನ್ನು ಹಿಂಪಡೆದಿದೆ. ಈ ಬಗ್ಗೆ ಆರ್‌ಬಿಐ ಹೇಳಿದ್ದೇನು?

Will the 200 rupee note be banned RBI withdrew 137 crores from the market mrq
Author
First Published Oct 8, 2024, 6:10 PM IST | Last Updated Oct 8, 2024, 6:10 PM IST

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2,000 ರೂಪಾಯಿ ಮುಖಬೆಲೆಯ ನೋಟ್‌ಗಳನ್ನು ಭಾಗಶಃ ಹಿಂಪಡೆದುಕೊಂಡಿದೆ. ಎಲ್ಲಾ 2 ಸಾವಿರ ಮುಖಬೆಲೆ ನೋಟು ತಲುಪುವ ಮೊದಲೇ ಇದೀಗ 200 ರೂ. ಮುಖಬೆಲೆ ನೋಟ್ ಹಿಂಪಡೆಯುವ ಕೆಲಸವನ್ನು  ಆರ್‌ಬಿಐ ಮಾಡುತ್ತಿದೆ. ಕೆಲ ವರದಿಗಳ ಪ್ರಕಾರ, ಆರ್‌ಬಿಐ ಮಾರುಕಟ್ಟೆಯಿಂದ 200 ರೂ. ಮುಖಬೆಲೆಯ ಅಂದಾಜ 137 ಕೋಟಿ ಮೌಲ್ಯದ ಹಣ ಹಿಂಪಡೆದುಕೊಂಡಿದೆ. ಕಳೆದ ಆರು ತಿಂಗಳಿನಿಂದಲೇ ಆರ್‌ಬಿಐ ಹಣ ಹಿಂಪಡೆಯುವ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ವರದಿಯಾಗಿದೆ. ಆರ್‌ಬಿಐ ಯಾಕೆ ಹಣವನ್ನು ಹಿಂಪಡೆದುಕೊಳ್ಳುತ್ತಿದೆ ಎಂಬುದರ ಬಗ್ಗೆಮ ಹಲವು ಪ್ರಶ್ನೆಗಳು ಮಾರುಕಟ್ಟೆಯಲ್ಲಿ ಹುಟ್ಟಿಕೊಂಡಿವೆ. 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 ರೂ. ನೋಟುಗಳನ್ನು ಹಿಂಪಡೆಯುವ ಹಿಂದಿನ ಉದ್ದೇಶ ಬೇರೆಯಾಗಿದೆ. ಆರ್‌ಬಿಐ ನೋಟ್‌ ಬ್ಯಾನ್ ಮಾಡಲು ಹಣ ಹಿಂಪಡಯುತ್ತಿಲ್ಲ, ಬದಲಾಗಿ ನೋಟುಗಳ ಕಳಪೆ ಸ್ಥಿತಿಯಿಂದ ವಾಪಸ್ ಪಡೆಯುತ್ತಿದೆ. ಆರ್‌ಬಿಐ ತನ್ನ ಅರ್ಧ ವಾರ್ಷಿಕ ವರದಿಯಲ್ಲಿ 200 ರೂಪಾಯಿ ನೋಟುಗಳ ಗುಣಮಟ್ಟ ಇಳಿಕೆಯಾಗಿದ್ದರ ಪರಿಣಾಮ ಒಟ್ಟು 137 ಕೋಟಿಯನ್ನು ಮಾರುಕಟ್ಟೆಯಿಂದ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿಯನ್ನು ನೀಡಿದೆ. 

ಕಳೆದ ವರ್ಷ ಭಾರತೀಯ ರಿಸರ್ವ್ ಬ್ಯಾಂಕ್ ಒಟ್ಟು 135 ಕೋಟಿ ಮೌಲ್ಯದ ನೋಟುಗಳನ್ನು ಮಾರುಕಟ್ಟೆಯಿಂದ ಹಿಂದಕ್ಕೆ ತೆಗೆದುಕೊಂಡಿತ್ತು. 200 ರೂ. ಮೌಲ್ಯದ ನೋಟುಗಳು ಹೆಚ್ಚು ಕೊಳಕು, ಹರಿದು ಡ್ಯಾಮೇಜ್ ಆಗಿವೆ. 500 ರೂಪಾಯಿ ಮೌಲ್ಯದ ನೋಟ್‌ಗಳೇ ಹೆಚ್ಚು ಹಾನಿಗೆ ಒಳಗಾಗಿವೆ. 2000 ರೂಪಾಯಿ ನೋಟ್ ಬಂದ್ ಆದ ನಂತರ ಮಾರುಕಟ್ಟೆಯಲ್ಲಿ 200 ರೂ. ನೋಟ್ ಹೆಚ್ಚು ಚಲಾವಣೆಯಾಗುತ್ತಿರುವ ಕಾರಣ ನೋಟಿನ ಕಾಗದ ಹೆಚ್ಚು ಡ್ಯಾಮೇಜ್‌ಗೆ ಒಳಗಾಗುತ್ತಿದೆ ಎಂದು ಬ್ಯಾಂಕಿಂಗ್ ತಜ್ಞರು ಹೇಳುತ್ತಾರೆ. 

ಊರಿನಲ್ಲಿದ್ದುಕೊಂಡು ಲಕ್ಷಾಧಿಪತಿ ಆಗಲು ಈ 5 ವ್ಯವಹಾರ ಆರಂಭಿಸಿ

ಕಳೆದ ವರ್ಷ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅತಿ ಹೆಚ್ಚು 500 ರೂಪಾಯಿಯ ಹರಿದ, ಗಲೀಜು ಆದ ನೋಟುಗಳನ್ನು ಹೆಚ್ಚು ಹಿಂಪಡೆದುಕೊಂಡಿತ್ತು. ಹಿಂದಿನ ಆರ್ಥಿಕ ವರ್ಷದಲ್ಲಿ 500 ರೂ. ಮುಖಬೆಲೆಯ 633 ಕೋಟಿ ಮೌಲ್ಯದ ನೋಟ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆದುಕೊಂಡಿತ್ತು. ಚಾಲ್ತಿ ವರ್ಷದಲ್ಲಿ ಶೇ.50ರಷ್ಟು 500ರ ನೋಟ್ ಹಾಗೂ ಶೇ.110ರಷ್ಗಟು 200 ರೂ. ನೋಟ್‌ ಮಾರುಕಟ್ಟೆಯಿಂದ ಆರ್‌ಬಿಐ ಹಿಂದಕ್ಕೆ ತರಿಸಿಕೊಂಡಿದೆ. 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರದಿ ಪ್ರಕಾರ, ಹಾಳಾದ ಅಥವಾ ಹರಿದ ನೋಟುಗಳಲ್ಲಿ ದೊಡ್ಡ ಮೌಲ್ಯದ ನೋಟ್‌ಗಳು ಜೊತೆಯಲ್ಲಿ ಕಡಿಮೆ ಮೌಲ್ಯದ ಕರೆನ್ಸಿಯೂ ಸೇರಿದೆ. 5 ರೂ. ಮೌಲ್ಯದ 3.7 ಕೋಟಿ, 10 ರೂ ಮೌಲ್ಯದ 234 ಕೋಟಿ, 20 ರೂ ಮೌಲ್ಯದ 139 ಕೋಟಿ, 50 ರೂ ಮೌಲ್ಯದ 190 ಕೋಟಿ, 100 ರೂ ಮೌಲ್ಯದ 602 ಕೋಟಿ ರೂಪಾಯಿ ಹಿಂಪಡೆದುಕೊಳ್ಳಲಾಗಿದೆ. 

ಯಾವ ಡೆಬಿಟ್/ಕ್ರೆಡಿಟ್ ಕಾರ್ಡ್ ಮೇಲಿದೆ ಕಡಿಮೆ ಶುಲ್ಕ? ಬಳಕೆದಾರರಿಗೆ ಗೊತ್ತಿರಬೇಕಾದ ವಿಷಯಗಳು

Latest Videos
Follow Us:
Download App:
  • android
  • ios