Asianet Suvarna News Asianet Suvarna News

ಹೇಗಾದ್ರೂ ಈ ವರ್ಷ ಹಣ ಉಳಿಸಬೇಕು ಅಂತ ಪ್ಲ್ಯಾನ್ ಮಾಡಿದ್ದರೆ, ಇಲ್ಲಿವೆ ಟಿಪ್ಸ್!

ಉಳಿತಾಯ ಸಣ್ಣದರಿಂದ್ಲೇ ಶುರುವಾಗ್ಬೇಕು. ನೀವು ಉಳಿತಾಯ ಮಾಡಿದ ಹಣಕ್ಕೆ ಬಡ್ಡಿ ಸಿಕ್ಕಿದ್ರೆ ಉಳಿತಾಯಕ್ಕೊಂದು ಅರ್ಥ ಬರೋದು. ಹೆಚ್ಚು ಆದಾಯ ಬರುವ ಹಾಗೂ ಸುರಕ್ಷಿತ ಹೂಡಿಕೆ ಬಗ್ಗೆ ಮಹಿಳೆಯರು ಆಲೋಚನೆ ಮಾಡುವ ಅಗತ್ಯ ಈಗಿದೆ.
 

Why Mutual Funds Are Better Than Gold And Fixed Deposits roo
Author
First Published Jan 6, 2024, 4:31 PM IST

ಹಣ ಉಳಿತಾಯದ ವಿಷ್ಯ ಬಂದಾಗ ಅದ್ರಲ್ಲೂ ಭಾರತೀಯರನ್ನಷ್ಟೇ ನಾವು ಗಮನಿಸಿದಾಗ ಇದ್ರಲ್ಲಿ ಇಲ್ಲಿನ ಮಹಿಳೆಯರು ಹಿಂದಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಭಾರತದ ಮಹಿಳೆಯರು ಸೂಕ್ತ ಪ್ರದೇಶದಲ್ಲಿ ಹೂಡಿಕೆ ಮಾಡಿ ಉಳಿತಾಯ ಮಾಡೋದು ಬಹಳ ಕಡಿಮೆ. ಮನೆಯ ಸಾಸಿವೆ ಡಬ್ಬದಲ್ಲಿ ಹಣ ಇಡ್ತಿದ್ದ ಮಹಿಳೆಯರು ಬದಲಾಗಿ ಬಂಗಾರ ಹಾಗೂ ಎಫ್ಡಿಯಲ್ಲಿ ಹೂಡಿಕೆ ಮಾಡಲು ಕಲಿತಿದ್ದರು. ಬೆರಳೆಣಿಕೆಯಷ್ಟು ಮಹಿಳೆಯರು ಬಂಗಾರ ಹಾಗೂ ಎಫ್ಡಿ ಸುರಕ್ಷಿತ ಹೂಡಿಕೆ ಎಂದು ನಂಬಿದ್ದರಲ್ಲದೆ ಅದ್ರಲ್ಲಿ ಹಣ ಹೂಡುತ್ತಿದ್ದರು. ಆದ್ರೆ ಈಗ ಭಾರತದ ಸ್ಥಿತಿ ಮತ್ತಷ್ಟು ಬದಲಾಗಿದೆ. ವೃತ್ತಿಪರ ಮಹಿಳೆಯರು ಸಾಂಪ್ರದಾಯಿಕ ಉಳಿತಾಯದ ವಿಧಾನದಿಂದ ಹೊರ ಬಂದಿದ್ದಾರೆ. ತಮ್ಮ ಮುಂದಿರುವ ಆಯ್ಕೆಗಳ ಬಗ್ಗೆ ಆಲೋಚನೆ ನಡೆಸುತ್ತಿದ್ದಾರೆ. ಹೊಸ ವಿಧಾನಕ್ಕೆ ಅವರು ತೆರೆದುಕೊಂಡ್ರೂ ಅವರ ಮೊದಲ ಆದ್ಯತೆ ಹೆಚ್ಚಿನ ಸಂಪಾದನೆಗಿಂತ ಹಣದ ಸುರಕ್ಷತೆಯೇ ಆಗಿದೆ.

ವೃತ್ತಪರ (Professional) ಮಹಿಳೆಯರಲ್ಲಿ 23 ರಿಂದ 45 ವರ್ಷ ವಯಸ್ಸಿನ ಶೇಕಡಾ 40 ರಷ್ಟು ಮಹಿಳೆಯರು ಮ್ಯೂಚ್ಯುವಲ್ ಫಂಡ್ (Mutual Fund) ನಲ್ಲಿ ಹಣ ಹೂಡುತ್ತಿದ್ದಾರೆ ಎಂದು ಬ್ಯಾಂಕ್‌ಬಜಾರ್‌ನ ಅಧ್ಯಯನ ಹೇಳಿದೆ. ಶೇಕಡಾ 40 ಮಹಿಳೆಯರು ನೇರವಾಗಿ ಷೇರುಮಾರುಕಟ್ಟೆ (Stock Market) ಯಲ್ಲಿ ಹೂಡಿಕೆ ಮಾಡ್ತಿದ್ದಾರೆ. ಇನ್ನು ಶೇಕಡಾ 15ರಷ್ಟು ಮಹಿಳೆಯರು ರಿಯಲ್ ಎಸ್ಟೇಟ್ ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಈ ಸಮೀಕ್ಷೆ ವರದಿ ಮಹಿಳೆಯರು ಬುದ್ಧಿವಂತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆಯಾದ್ರೂ ಇದ್ರಲ್ಲಿ ವೃತ್ತಿಪರ ಮಹಿಳೆಯರು ಮಾತ್ರ ಬರ್ತಾರೆ ಅನ್ನೋದು ಬೇಸರದ ಸಂಗತಿ. ಮನೆಯಲ್ಲಿರುವ ಗೃಹಿಣಿಯರ ಉಳಿತಾಯದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. 
ಭಾರತದಲ್ಲಿ ಅನೇಕ ಮಹಿಳೆಯರು ಮನೆ ಕೆಲಸದ ಜೊತೆ ಸಣ್ಣಪುಟ್ಟ ಕೆಲಸವನ್ನು ಮನೆಯಲ್ಲೇ ಮಾಡಿ ಹಣ ಸಂಪಾದನೆ ಮಾಡ್ತಾರೆ. ಆದ್ರೆ ಅವರಿಗೆ ಎಲ್ಲಿ ಉಳಿತಾಯ ಮಾಡಬೇಕು ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅವರನ್ನು ಜಾಗೃತಿಗೊಳಿಸಲಾಗ್ತಿಲ್ಲ. ಹಾಗಾಗಿ ಅವರು ಬಂಗಾರ, ಎಫ್ಡಿಗೆ ಸೀಮಿತವಾಗಿದ್ದಾರೆ.

ಕೋಟಿ ಆಸ್ತಿ ಒಡತಿ ಸುಧಾ ಮೂರ್ತಿ ಮದ್ವೆಗೆ ಖರ್ಚಾಗಿದ್ದು ಕೆಲವೇ ನೂರು, ಇಬ್ಬರದ್ದೂ ಶೇರ್ ಅಂತೆ!

ಮಹಿಳೆಯರಿಗೆ ಈ ಬಗ್ಗೆ ಆಲೋಚನೆ ಮಾಡುವ, ಸಂಶೋಧನೆ ನಡೆಸಲು ಸಮಯವಿಲ್ಲ. ಮಹಿಳೆಯರಿಗೆ ಇದ್ರ ಬಗ್ಗೆ ಸುಲಭವಾಗಿ ಮಾಹಿತಿ ಸಿಗ್ತಿಲ್ಲ. ಮ್ಯೂಷ್ಯುವಲ್ ಫಂಡ್ ಸೇರಿದಂತೆ ಬೇರೆ ಹೂಡಿಕೆ ಬಗ್ಗೆ ಮಾಹಿತಿ ಪಡೆದ ಮಹಿಳೆಯರು ಹಳೆ ಸಾಂಪ್ರದಾಯ ಬಿಟ್ಟು ಹೊರಬಂದಿದ್ದಾರೆ.

ಮಹಿಳೆಯರು ಹಣದುಬ್ಬದರ ಬಗ್ಗೆ ಆಲೋಚನೆ ಮಾಡ್ಬೇಕು ಎನ್ನುತ್ತಾರೆ ತಜ್ಞರು. ವರ್ಷದಿಂದ ವರ್ಷಕ್ಕೆ ಹಣದುಬ್ಬರ ಹೆಚ್ಚಾಗ್ತಿದೆ. ಮಕ್ಕಳ ಶಿಕ್ಷಣ, ನಿತ್ಯದ ಖರ್ಚು ಹೆಚ್ಚಾಗ್ತಿದೆ. ಎಫ್‌ಡಿಯಲ್ಲಿ ನೀವು ಹಣ ಹೂಡಿಕೆ ನಾಡಿದ್ರೆ ನಿಮಗೆ ಶೇಕಡಾ ೭ರಷ್ಟು ಆದಾಯ ಸಿಗುತ್ತದೆ. ಅದು ಏರುತ್ತಿರುವ ಹಣದುಬ್ಬರಕ್ಕೆ ಸರಿಸಾಟಿಯಾಗೋದಿಲ್ಲ. ಅದೇ ಮ್ಯೂಚುವಲ್ ಫಂಡ್‌ಗಳು ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ನೀವು 5 ರಿಂದ 8 ವರ್ಷಗಳವರೆಗೆ ಹೂಡಿಕೆ ಮಾಡಿದರೆ ಸುಲಭವಾಗಿ 12 ರಿಂದ 15 ಪ್ರತಿಶತದಷ್ಟು ಆದಾಯ ಪಡೆಯುತ್ತೀರಿ ಎನ್ನುತ್ತಾರೆ ತಜ್ಞರು. 

ಈಕೆ ಸಾಮಾನ್ಯದವಳಲ್ಲ, 2 ಸಾವಿರ ಕೊಲೆ.. ಕೊಕೇನ್ ವ್ಯವಹಾರದಲ್ಲಿ 157 ಶತಕೋಟಿ ಸಂಪಾದಿಸಿದ್ದಾಳೆ

ಹಣ ಹೂಡಿಕೆ ಮಾಡುವ ಸಮಯದಲ್ಲಿ ಮಹಿಳೆಯರು ಆತುರದ ನಿರ್ಧಾರ ತೆಗೆದುಕೊಳ್ಳಬೇಕಾಗಿಲ್ಲ. ಮ್ಯೂಚ್ಯುವಲ್ ಫಂಡ್ ಗಳ ಬಗ್ಗೆ ಸರಿಯಾದ ಮಾಹಿತಿ ಪಡೆದು, ಅದ್ರ ಬಗ್ಗೆ ಜ್ಞಾನ ಸಂಗ್ರಹಿಸಿ ನಂತ್ರ ಹೂಡಿಕೆ ಮಾಡಬೇಕು. ಆರಂಭದಲ್ಲಿ ಗೊಂದಲವೆನ್ನಿಸಿದ್ರೂ ನಂತ್ರ ಅಲ್ಲಿನ ವಿಧಾನ ನಿಮಗೆ ಅರ್ಥವಾಗ್ತಾ ಹೋಗುತ್ತದೆ. ನಿಫ್ಟಿ 50 ನಂತಹ ನಿಷ್ಕ್ರಿಯ ನಿಧಿಯಿಂದ ಪ್ರಾರಂಭಿಸಬಹುದು. ಈ ನಿಧಿಗಳು ನಿಫ್ಟಿ ಸೂಚ್ಯಂಕಕ್ಕೆ ಅನುಗುಣವಾಗಿ ಚಲಿಸುತ್ತವೆ. ಆರಂಭದಲ್ಲಿ ಇದು ನಿಮಗೆ ಉತ್ತಮ ಆಯ್ಕೆಯಾಗಿರುತ್ತದೆ. ಮಹಿಳೆಯರು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಸಮಯದಲ್ಲಿ ತಾಳ್ಮೆ ಬಹಳ ಮುಖ್ಯವಾಗುತ್ತದೆ. ಒಂದೇ ಬಾರಿಗೆ ನಿರಾಶೆಗೊಳ್ಳದೆ ತಾಳ್ಮೆಯಿಂದ ದೀರ್ಘಕಾಲದವರೆಗೆ ಕಾಯಬೇಕು. ಮ್ಯೂಜ್ಯುವಲ್ ಫಂಡ್ ಗಳ ಬಗ್ಗೆ ಮಾಹಿತಿ ಪಡೆಯೋದು ಕಷ್ಟವಾದರೆ ತಜ್ಞರ ಸಲಹೆ ಪಡೆಯಬಹುದು. 

Latest Videos
Follow Us:
Download App:
  • android
  • ios