Asianet Suvarna News Asianet Suvarna News

ಕೋಟಿ ಆಸ್ತಿ ಒಡತಿ ಸುಧಾ ಮೂರ್ತಿ ಮದ್ವೆಗೆ ಖರ್ಚಾಗಿದ್ದು ಕೆಲವೇ ನೂರು, ಇಬ್ಬರದ್ದೂ ಶೇರ್ ಅಂತೆ!

ಸರಳತೆಗೆ ಸುಧಾ ಮೂರ್ತಿ ಹೆಸರುವಾಸಿ. ಅನಾವಶ್ಯಕ ಖರ್ಚುಗಳನ್ನು ಅವರು ಮಾಡೋದಿಲ್ಲ.ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಆದ್ರೆ ತಮ್ಮ ಮದುವೆ ಕೂಡ ಅವರು ಇಷ್ಟು ಸಿಂಪಲ್ ಆಗಿ ಮಾಡ್ಕೊಂಡಿದ್ದಾರೆ ಅಂದ್ರೆ ನೀವು ನಂಬ್ಲೇಬೇಕು.
 

Infosys Sudha Murthy Narayana Murthy Spent A Total Of Eight Hundred On Their Wedding roo
Author
First Published Jan 5, 2024, 3:48 PM IST

ಭಾರತದ ಪ್ರಸಿದ್ಧ ಜೋಡಿಗಳಲ್ಲಿ ಲೇಖಕಿ ಸುಧಾ ಮೂರ್ತಿ ಹಾಗೂ   ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ದಂಪತಿ ಸೇರಿದ್ದಾರೆ. ಅವರ ಜೀವನ ಶೈಲಿ ಕಿರಿಯರಿಗೆ ಸ್ಪೂರ್ತಿದಾಯಕವಾಗಿದೆ. ಸರಳ ಜೀವನ ನಡೆಸುವ ಸುಧಾ ಮೂರ್ತಿ ಹಾಗೂ ನಾರಾಯಣ ಮೂರ್ತಿ, ತಮ್ಮ ಜೀವನದ ಅನೇಕ ಘಟನೆಗಳನ್ನು ಜನರ ಮುಂದಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಸುಧಾ ಮೂರ್ತಿ ಹಾಗೂ ನಾರಾಯಣ ಮೂರ್ತಿ, ತಮ್ಮ ಮದುವೆ ದಿನಗಳನ್ನು ನೆನಪಿಸಿಕೊಂಡರು. ಆ ಸಂದರ್ಭದಲ್ಲಿ ಅವರು ಖರ್ಚು ಮಾಡಿದ ಹಣ ಎಷ್ಟು ಎನ್ನುವ ಬಗ್ಗೆ ಮಾಹಿತಿ ನೀಡಿದರು.

ಈಗಿನ ದಿನಗಳಲ್ಲಿ ಮದುವೆ (Marriage) ಯನ್ನು ಜನರು ಅದ್ಧೂರಿಯಾಗಿ ಮಾಡ್ತಾರೆ. ಮದುವೆ, ಸೀರೆ, ಬಂಗಾರಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಾರೆ. ಆದ್ರೆ ಮದುವೆ ಎಂದ್ರೇನು, ಅದು ಹೇಗಿರಬೇಕು, ಅದಕ್ಕೆ ಎಷ್ಟು ಖರ್ಚು ಮಾಡ್ಬೇಕು ಎಂಬುದನ್ನು ಸುಧಾ ಮೂರ್ತಿ (Sudha Murthy) ಹೇಳಿದ್ದಾರೆ. 

ಮದುವೆ ವಾರ್ಷಿಕೋತ್ಸವದ ರೊಮ್ಯಾಂಟಿಕ್‌ ಹಾಲಿಡೇ ಬಗ್ಗೆ ಬಾಯಿ ಬಿಟ್ಟ ದೀಪಿಕಾ ಪಡುಕೋಣೆ

ಅತ್ಯಂತ ಸರಳವಾಗಿ ನಡೆದಿತ್ತು ಸುಧಾಮೂರ್ತಿ – ನಾರಾಯಣ ಮೂರ್ತಿ (Narayana Murthy) ಮದುವೆ : ನಾರಾಯಣ ಮೂರ್ತಿ  1978ರಲ್ಲಿ ಸುಧಾ ಮೂರ್ತಿಯವರ ಕೈ ಹಿಡಿದಿದ್ದಾರೆ. ಇವರಿಬ್ಬರು ತಮ್ಮ ಮದುವೆಗೆ ಒಟ್ಟು 800 ರೂಪಾಯಿ ಖರ್ಚು ಮಾಡಿದ್ದರು. ಸುಧಾಮೂರ್ತಿ 400 ರೂಪಾಯಿ ನೀಡಿದ್ದರೆ, ನಾರಾಯಣ ಮೂರ್ತಿ 400 ರೂಪಾಯಿ ನೀಡಿದ್ದರು. 

ನಿರೂಪಕಿ ಪ್ರಶ್ನೆಗೆ ಉತ್ತರ ನೀಡಿದ ಸುಧಾ ಮೂರ್ತಿ, ನಮ್ಮ ಕುಟುಂಬ ಬಹಳ ದೊಡ್ಡದು. ಎಪ್ಪತ್ತೈದಕ್ಕಿಂತ ಹೆಚ್ಚು ಸೋದರ ಸಂಬಂಧಿಗಳನ್ನು ನಾನು ಹೊಂದಿದ್ದು, ನಮ್ಮ ಕುಟುಂಬ ಒಂದು ಮರವಲ್ಲ, ಫಾರೆಸ್ಟ್ ಇದ್ದಂತೆ. ನನ್ನ ಮದುವೆ ನಮ್ಮ ಕುಟುಂಬದಲ್ಲಿ ಮೊದಲ ಮದುವೆಯಾಗಿತ್ತು. ಸುಮಾರು ಇನ್ನೂರಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇತ್ತು. ಈ ಬಗ್ಗೆ ನಾನು ಮತ್ತು ಮೂರ್ತಿ ಚರ್ಚೆ ನಡೆಸಿದ್ವಿ. ದೊಡ್ಡದಾಗಿ ಮದುವೆ ಮಾಡೋದ್ರಿಂದ ಏನಾಗುತ್ತೆ, ಜನರು ಬಂದು ತಿಂದು, ಮಾತನಾಡಿ ಹೋಗ್ತಾರೆ. ನಮ್ಮ ಜೀವನದ ನಿರ್ಧಾರ ನಾವು ತೆಗೆದುಕೊಳ್ಬೇಕು. ಮದುವೆ ಪಾಲಕರಿಗೆ, ಸಂಬಂಧಿಕರಿಗೆ ಒಂದು ದಿನದ ಇವೆಂಟ್..ಆದ್ರೆ ನಮಗೆ ಇಡೀ ಜೀವನದ ಕಮಿಟ್ಮೆಂಟ್. ನಾನು ಸರಳ ಜೀವನ ನಡೆಸುತ್ತಿದ್ದ ಕಾರಣ ಮದುವೆಯನ್ನೂ ಸರಳವಾಗಿ ಆಚರಿಸಲು ನಿರ್ಧರಿಸಿದ್ವಿ. ತುಂಬಾ ಸರಳವಾಗಿ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದು ಬರೀ 800 ರೂಪಾಯಿ ಖರ್ಚು ಮಾಡಿದ್ವಿ ಎನ್ನುತ್ತಾರೆ ಸುಧಾ ಮೂರ್ತಿ.  ನನ್ನ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಪ್ಲಾನ್ ನಲ್ಲಿದ್ದ ತಂದೆಗೆ ಬೇಸರವಾಗಿತ್ತು ಎಂದು ಸುಧಾ ಮೂರ್ತಿ ಹೇಳಿದ್ದಾರೆ. 

ಪಾರ್ಟೀಲಿ ಮಾಡಿದ ಒಂದೇ ಒಂದು ತಪ್ಪಿಗೆ ಪತ್ನಿ, ಮನೆ, ಕೆಲಸ ಎಲ್ಲವೂ ಕಳೆದುಕೊಂಡ!

ಸುಧಾ ಮೂರ್ತಿ ಹಾಗೂ ನಾರಾಯಣ ಮೂರ್ತಿ ಮದುವೆಗೆ ಬರೀ ಅವರಿಬ್ಬರ ಸಿಬ್ಲಿಂಗ್ಸ್ ಬಂದಿದ್ದರು. ಹುಬ್ಬಳ್ಳಿಯಲ್ಲಿ ಮದುವೆ ಬೇಡ ಎಂಬ ನಿರ್ಧಾರಕ್ಕೆ ಬಂದ ಅವರು, ನಾರಾಯಣಮೂರ್ತಿ ತಾಯಿಯ ಮಾತಿನಂತೆ ಮನೆಯಲ್ಲಿ ಸರಳವಾಗಿ ಮದುವೆ ಆದ್ರು. ಸುಧಾ ಮೂರ್ತಿ ಕಡೆಯಿಂದ ಆರು ಜನ ಬಂದಿದ್ದರೆ ನಾರಾಯಣ ಮೂರ್ತಿ ಕಡೆಯಿಂದ ಬಂದಿದ್ದು ಪಾಲಕರು, ಅವರ ಸಿಬ್ಲಿಂಗ್ಸ್. 

ಮುನ್ನೂರು ರೂಪಾಯಿ ನೀಡಿದ್ದ ನಾರಾಯಣಮೂರ್ತಿ : ಮಾಂಗಲ್ಯ ಸರ, ಸೀರೆಗೆ ಈಗ ಕೋಟಿ ಖರ್ಚು ಮಾಡೋರಿದ್ದಾರೆ. ಆಗ ಸುಧಾ ಮೂರ್ತಿ ಮುನ್ನೂರು ರೂಪಾಯಿಯಲ್ಲಿ ಇದನ್ನು ಖರೀದಿ ಮಾಡಿದ್ದರು. ಮುನ್ನೂರು ರೂಪಾಯಿ ನೀಡ್ತೇನೆ, ಸೀರೆ ಅಥವಾ ಮಂಗಳಸೂತ್ರ  ತೆಗೆದುಕೊಳ್ಳಬಹುದು ಎಂದು ನಾರಾಯಣ ಮೂರ್ತಿ ಹೇಳಿದ್ದರು. ಸೀರೆಗಿಂತ ಮಂಗಳಸೂತ್ರ ಬಾಳಿಕೆ ಬರಬೇಕು ಎನ್ನುವ ಕಾರಣಕ್ಕೆ ಸುಧಾ ಮೂರ್ತಿ ಮಂಗಳಸೂತ್ರವನ್ನು ಆಯ್ಕೆ ಮಾಡಿಕೊಂಡರು. ಅದು ದಾರದಲ್ಲಿ ಪೋಣಿಸಿದ ಮಂಗಳಸೂತ್ರವಾಗಿತ್ತು ಎನ್ನುತ್ತಾರೆ ಸುಧಾ ಮೂರ್ತಿ.

ರಾಘವೇಂದ್ರ ದೇವಸ್ಥಾನದಲ್ಲಿ ಊಟ : ಇವರಿಬ್ಬರ ಮದುವೆ ಅರ್ಧ ಗಂಟೆಯಲ್ಲಿ ಮುಗಿದಿತ್ತು. ಸಂಸ್ಕೃತ ತಿಳಿದಿರುವ ಸುಧಾ, ಮದುವೆ ಮಂತ್ರದಲ್ಲಿ ಮುಖ್ಯವಾದದ್ದನ್ನು ಆರಿಸಿದ್ದರು. ಮದುವೆ ನಂತ್ರ ಮನೆ  ಹತ್ತಿರವಿರುವ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು ಎನ್ನುತ್ತಾರೆ ನಾರಾಯಣ ಮೂರ್ತಿ. ಅಷ್ಟೇ ಅಲ್ಲ ಮದುವೆ ದಿನ, ನಾರಾಯಣ ಮೂರ್ತಿ ಬದಲು ಸುಧಾ ಮೂರ್ತಿ ಉಡುಗೊರೆ ನೀಡಿದ್ದರು.  
 

Follow Us:
Download App:
  • android
  • ios