ಮ್ಯೂಚುವಲ್ ಫಂಡ್ ಲಾಭ-ನಷ್ಟ ಪರಿಶೀಲಿಸೋದು ಹೇಗೆ? ಯಾವಾಗ ಹೂಡಿಕೆ ಹಿಂತೆಗೆಯಬೇಕು?

ನೀವು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ರೆ ಅದರ ಮಾರುಕಟ್ಟೆ ಸ್ಥಿತಿಗತಿಗಳ ಮೇಲೆ ನಿರಂತರ ನಿಗಾ ಇಟ್ಟಿರೋದು ಅತ್ಯಗತ್ಯ. ಒಂದು ವೇಳೆ ಸತತವಾಗಿ ಮ್ಯೂಚುವಲ್ ಫಂಡ್ ಉತ್ತಮ ನಿರ್ವಹಣೆ ತೋರುತ್ತಿಲ್ಲ ಎಂಬುದು ತಿಳಿದು ಬಂದರೆ ಅದರಿಂದ ನಿರ್ಗಮಿಸೋದು ಉತ್ತಮ. ಹಾಗಾದ್ರೆ ಮ್ಯೂಚುವಲ್ ಫಂಡ್ ಉತ್ತಮ ನಿರ್ವಹಣೆ ತೋರುತ್ತಿದೆಯೋ ಇಲ್ಲವೋ ಎಂಬುದನ್ನು ತಿಳಿಯೋದು ಹೇಗೆ? ಅದರಿಂದ ಯಾವಾಗ ನಿರ್ಗಮಿಸಬೇಕು? ಇಲ್ಲಿದೆ ಮಾಹಿತಿ.

When Should You Exit A Badly Performing Mutual Fund Know Here anu

Business Desk:ಅನೇಕರಿಗೆ ಮ್ಯೂಚುವಲ್ ಫಂಡ್ಸ್ ಅತ್ಯಂತ ಆಕರ್ಷಕ ಹೂಡಿಕೆ ಆಯ್ಕೆಯಾಗಿದೆ. ಇದಕ್ಕೆ ಮುಖ್ಯಕಾರಣ ದೀರ್ಘಾವಧಿಯಲ್ಲಿ ಮ್ಯೂಚುವಲ್ ಫಂಡ್ಸ್ ಉತ್ತಮ ರಿಟರ್ನ್ಸ್ ಒದಗಿಸೋದು. ಷೇರು ಮಾರುಕಟ್ಟೆಯಲ್ಲಿ ನೇರ ಹೂಡಿಕೆ ಮಾಡಿ ಕೈಸುಟ್ಟುಕೊಳ್ಳುವುದಕ್ಕಿಂತ ಮ್ಯೂಚುವಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡೋದು ಉತ್ತಮ ಎಂಬ ಮನೋಭಾವ ಕೆಲವರಲ್ಲಿದೆ. ಆದರೆ, ಮ್ಯೂಚುವಲ್ ಫಂಡ್ಸ್ ನಲ್ಲಿನ ಹೂಡಿಕೆ ಕೂಡ ಹಣದುಬ್ಬರ, ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು, ಕ್ರೆಡಿಟ್ ಹಾಗೂ ಲಿಕ್ವಿಡಿಟಿ ಸೇರಿದಂತೆ ಅನೇಕ ರಿಸ್ಕ್ ಗಳನ್ನು ಒಳಗೊಂಡಿವೆ. ಈ ರಿಸ್ಕ್ ಗಳಿಂದ ಮ್ಯೂಚುವಲ್ ಫಂಡ್ ಹೂಡಿಕೆ ನಷ್ಟವನ್ನು ಉಂಟು ಮಾಡುವ ಸಾಧ್ಯತೆಯಿದೆ. ಅನೇಕರು ಮೊದಲ ಬಾರಿಗೆ ತೊಂದರೆ ಕಾಣಿಸಿಕೊಂಡ ತಕ್ಷಣ ಮ್ಯೂಚುವಲ್ ಫಂಡ್ ಮೇಲಿನ ಹೂಡಿಕೆ ಹಿಂತೆಗೆದುಕೊಳ್ಳುತ್ತಾರೆ. ಆದರೆ, ಕೆಲವರಿಗೆ ಯಾವಾಗ ಮ್ಯೂಚುವಲ್ ಫಂಡ್ ನಿಂದ ನಿರ್ಗಮಿಸಬೇಕು ಎಂಬುದು ತಿಳಿದಿರೋದಿಲ್ಲ. ಹಾಗಾದ್ರೆ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ ಹಣ ರಿಸ್ಕ್ ನಲ್ಲಿದೆ ಎಂದು ತಿಳಿದುಕೊಳ್ಳುವುದು ಹೇಗೆ? ಯಾವ ಸಂದರ್ಭದಲ್ಲಿ ಮ್ಯೂಚುವಲ್ ಫಂಡ್ ನಿಂದ ಹೊರ ನಡೆಯುವುದು ಸೂಕ್ತ? ಇಲ್ಲಿದೆ ಮಾಹಿತಿ.

 ಈ ಅಂಶಗಳನ್ನು ಗಮನಿಸಿ
*ಕಿರು ಅವಧಿಯ ಅಥವಾ ಶಾರ್ಟ್ ಟರ್ಮ್ ಮ್ಯೂಚುವಲ್ ಫಂಡ್ ಗಳಿಗೆ ಸಂಬಂಧಿಸಿ ಏರಿಳಿತ ಇದ್ದೇಇರುತ್ತದೆ. ಈ ವ್ಯತ್ಯಾಸ ಮ್ಯೂಚುವಲ್ ಫಂಡ್ ಯಾವ ವಲಯ ಹಾಗೂ ವರ್ಗದಲ್ಲಿದೆ ಎಂಬುದನ್ನು ಅವಲಂಬಿಸಿದೆ. ಉದಾಹರಣೆಗೆ ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ ಗಳು ಲಾಂಗ್ ಕ್ಯಾಪ್ ವಲಯದ ಮ್ಯೂಚುವಲ್ ಫಂಡ್ಸ್ ಗಿಂತ ಹೆಚ್ಚು ರಿಸ್ಕ್ ಹೊಂದಿವೆ.
*ತ್ವರಿತ ನಿರ್ವಹಣೆಯ ಮ್ಯೂಚುವಲ್ ಫಂಡ್ ಗಳು ಮಾತ್ರ ಹೂಡಿಕೆಗೆ ಒಂದೇ ಮಾನದಂಡವಾಗಿರಬಾರದು. ವಿವಿಧ ಸಮಯಾವಧಿಯಲ್ಲಿ ಸಿಕ್ಕಿದ ರಿಟರ್ನ್ಸ್ ಪರಿಶೀಲಿಸಿ. ಒಂದು ವೇಳೆ ಮ್ಯೂಚುವಲ್ ಫಂಡ್ ಹೂಡಿಕೆ ವಲಯದ ಇತರ ಆಯ್ಕೆಗಳಿಗಿಂತ ಕಳಪೆ ರಿಟರ್ನ್ಸ್ ಹೊಂದಿದೆಯಾ ಅಥವಾ ಸ್ಟಾಕ್ ಮಾರ್ಕೆಟ್ ನಷ್ಟ ಅನುಭವಿಸುತ್ತಿದೆಯಾ ಎಂಬುದನ್ನು ಪರಿಶೀಲಿಸಿ.

SBI Vs Post Office: ಯಾವ ಎಫ್ ಡಿಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ರಿಟರ್ನ್ಸ್ ಸಿಗುತ್ತೆ?

*ಒಂದು ವೇಳೆ ಮ್ಯೂಚುವಲ್ ಫಂಡ್ ನಿರ್ವಹಣೆ ಕಳೆದ ಕೆಲವು ಸಮಯದಿಂದ ಸ್ಥಿರವಾಗಿರದಿದ್ರೆ ಆಗ ಅದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ. ಒಂದು ವೇಳೆ ಸತತ ಎರಡು ವರ್ಷಗಳಿಂದ ಮ್ಯೂಚುವಲ್ ಫಂಡ್ ನಿರ್ವಹಣೆ ನಿಗದಿತ ಮಟ್ಟಕ್ಕಿಂತ ಕೆಳಗಿದೆಯಾ ಎಂಬುದನ್ನು ಪರಿಶೀಲಿಸಿ.
*ಮ್ಯೂಚುವಲ್ ಫಂಡ್ ಕಳಪೆ ನಿರ್ವಹಣೆ ಬಗ್ಗೆ ನಿಮ್ಮ ಹೂಡಿಕೆ ತಜ್ಞರ ಜೊತೆಗೆ ಚರ್ಚಿಸಿ. ಹಾಗೆಯೇ ಈ ಫಂಡ್ ನಷ್ಟವನ್ನು ಮರಳಿ ಹಿಂಪಡೆಯುವ ಸಾಧ್ಯತೆ ಇದೆಯಾ ಅಥವಾ ಇದು ನಿರಂತರವಾಗಿ ನಿರೀಕ್ಷೆಯ ಮಟ್ಟದಿಂದ ಕೆಳಗೆ ನಿರ್ವಹಣೆ ತೋರಲಿದೆಯಾ ಎಂಬ ಬಗ್ಗೆ ಮರೆಯದೆ ಚರ್ಚಿಸಿ.

ತೆರಿಗೆದಾರರೇ ಎಚ್ಚರ, 2 ಪ್ಯಾನ್ ಕಾರ್ಡ್ ಹೊಂದಿದ್ರೆ ಬೀಳುತ್ತೆ 10 ಸಾವಿರ ರೂ. ದಂಡ

ಯಾವಾಗ ಮ್ಯೂಚುವಲ್ ಫಂಡ್ ನಿಂದ ಹೊರಹೋಗಬೇಕು?
*ಮ್ಯೂಚುವಲ್ ಫಂಡ್ ನಿಂದ ಹೊರನಡೆಯುವ ಮುನ್ನ ನಿಮ್ಮ ಹಣಕಾಸಿನ ಗುರಿಗಳು, ನಿಯಮಗಳಲ್ಲಿನ ಬದಲಾವಣೆಗಳು, ಮಾರುಕಟ್ಟೆ ಪರಿಸ್ಥಿತಿಗಳು ಹಾಗೂ ಇತರ ಅಂಶಗಳನ್ನು ಪರಿಗಣಿಸಿ.
*ಫಂಡ್ ಒಂದರಿಂದ ಎರಡು ವರ್ಷಗಳ ತನಕ ನಿರಂತರವಾಗಿ ಬೆಂಚ್ ಮಾರ್ಕ್ ನಿಂದ ಕೆಳಮಟ್ಟದ ನಿರ್ವಹಣೆ ತೋರುತ್ತಿದ್ದರೆ ಆಗ ಅದರಿಂದ ಹೊರ ನಡೆಯೋದು ಉತ್ತಮ.
*ಉತ್ತಮ ನಿರ್ವಹಣೆಯ ದಾಖಲೆ ಹೊಂದಿರುವ ಅದೇ ಮಾದರಿಯ ಫಂಡ್ ಗೆ ನಿಮ್ಮ ಹೂಡಿಕೆಯನ್ನು ವರ್ಗಾಯಿಸಬಹುದು. ಆದರೆ, ಯಾವುದೇ ಹೂಡಿಕೆಗಳನ್ನು ಮಾಡುವ ಮುನ್ನ ನೀವು ಆ ಬಗ್ಗೆ ಸಂಪೂರ್ಣವಾಗಿ ರಿಸರ್ಚ್ ಮಾಡೋದು ಅಗತ್ಯ. 
*ಉತ್ತಮ ರಿಟರ್ನ್ಸ್ ಗೆ ವಿಭಿನ್ನ ಹೂಡಿಕೆ ಪೋರ್ಟ್ ಫೊಲಿಯೋ ಹೊಂದಿರೋದು ಅಗತ್ಯ. ಅದರಲ್ಲಿ ಮ್ಯೂಚುವಲ್ ಫಂಡ್ಸ್, ಟರ್ಮ್ ಡೆಫಾಸಿಟ್ಸ್ ಹಾಗೂ ಇತರ ಹೂಡಿಕೆ ಆಯ್ಕೆಗಳು ಇರಬೇಕು. 

Latest Videos
Follow Us:
Download App:
  • android
  • ios