Asianet Suvarna News Asianet Suvarna News

ಕಲರ್ ಕೂದಲಿನ ವ್ಯಾಟ್ಸ್ಆ್ಯಪ್ ಡಿಪಿ, ದಿಗ್ಗಜ ಉದ್ಯಮಿ ಸಂದೇಶಕ್ಕೆ ದಿಗ್ಬ್ರಮೆಗೊಂಡ ಆ್ಯಪ್ ಸಂಸ್ಥಾಪಕಿ!

ಆ್ಯಪ್ ಸಂಸ್ಥಾಪಕಿ ತಮ್ಮ ವ್ಯಾಟ್ಸ್ಆ್ಯಪ್ ಡಿಪಿಗೆ ಸ್ಟೈಲಿಶ್, ಕಲರ್ ಹೇರ್ ಫೋಟೋ ಹಾಕಿದ್ದಾರೆ. ಆದರೆ ಈ ಫೋಟೋ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾರಣ ಬೆಂಗಳೂರಿನ ಕಂಪನಿ ಸಂಸ್ಥಾಪಕರೊಬ್ಬರು ಸಂದೇಶ ಈ ಚರ್ಚೆಗೆ ಕಾರಣವಾಗಿದೆ.

WhatsApp DP look like unprofessional industry veteran message aback Bengaluru App Founder ckm
Author
First Published Jan 14, 2024, 7:20 PM IST

ಬೆಂಗಳೂರು(ಜ.14) ಪ್ರತಿಯೊಬ್ಬರು ತಮ್ಮ ತಮ್ಮ ವ್ಯಾಟ್ಸ್ಆ್ಯಪ್ ಡಿಪಿಯಲ್ಲಿ ತಮಗಿಷ್ಟವಾದ ಫೋಟೋ ಬಳಸುತ್ತಾರೆ. ಆದರೆ ಲಿಂಕ್ಡ್‌ಇನ್ ಸೇರಿದಂತೆ ಉದ್ಯೋಗ, ವೃತ್ತಿಗೆ ಸಂಬಂಧಿಸಿದ್ದಲ್ಲಿ ಪಾಸ್‌ಪೋರ್ಟ್ ಸೈಜ್ ಫೋಟೋ, ವೃತ್ತಿಪರ ಫೋಟೋಗಳನ್ನು ಬಳಕೆ ಮಾಡುತ್ತಾರೆ. ಆದರೆ ಬೆಂಗಳೂರಿನ ಆ್ಯಪ್ ಸಂಸ್ಥಾಪಕಿ ತಮ್ಮ ವ್ಯಾಟ್ಸ್ಆ್ಯಪ್ ಡಿಪಿಯಲ್ಲಿ ಕೂದಲಿಗೆ ಬಣ್ಣಬಳಿದಿರುವ ಪೋಟೋ ಹಾಕಿದ್ದಾರೆ. ಆದರೆ ಬೆಂಗಳೂರಿನ ಹಿರಿಯ ಉದ್ಯಮಿ, ಕಂಪನಿ ಸಂಸ್ಥಾಪಕರೊಬ್ಬರು, ಈ ಡಿಪಿ ವೃತ್ತಿಪರವಾಗಿಲ್ಲ. ಬಣ್ಣ ಹಚ್ಚಿದ ಕೂದಲು, ಈ ಫ್ಯಾಶನ್ ನಿಮ್ಮ ವೃತ್ತಿಪರತೆಗೆ ಸವಾಲೆಸೆಯುತ್ತಿದೆ ಎಂದಿದ್ದಾರೆ. ಈ ಮಾತು ಇದೀಗ ಭಾರಿ ಚರ್ಚೆಯಾಗುತ್ತಿದೆ.ಆ್ಯಪ್ ಸಂಸ್ಥಾಪಕಿ ಕೂಡ ಈ ಮಾಹಿತಿ ಹಂಚಿಕೊಂಡಿದ್ದು, ಬಣ್ಣ ಬಳಿದ ಕೂದಲಿನ ಡಿಪಿಗೂ ವೃತ್ತಿಪರತೆ  ನಡುವಿನ ವ್ಯತ್ಯಾಸವನ್ನು ಬಿಚ್ಚಿಟ್ಟಿದ್ದಾರೆ. ಇದೀಗ ಡಿಪಿ ಹಾಗೂ ವೃತ್ತಿಪರತೆ ಬೆಂಗಳೂರಿನಾದ್ಯಂತ ಭಾರಿ ಚರ್ಚೆಯಾಗುತ್ತಿದೆ.

ಬೆಂಗಳೂರಿನ ಆ್ಯಪ್ ಸಂಸ್ಥಾಪಕಿ ಸುರಭಿ ಜೈನ್ ವ್ಯಾಟ್ಸ್ಆ್ಯಪ್ ಡಿಪಿ ಹೊಸ ಚರ್ಚೆ ಹುಟ್ಟುಹಾಕಿದೆ. ಈ ಘಟನೆ ಕುರಿತು ವಿಸ್ತಾರವಾಗಿ ಬರೆದುಕೊಂಡಿರುವ ಸುರಭಿ ಜೈನ್, ಹಲವು ತಾರ್ಕಿಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಉದ್ಯಮ ಅನುಭವಿ ವ್ಯಕ್ತಿಯೊಬ್ಬರು ನನ್ನ ವ್ಯಾಟ್ಸ್ಆ್ಯಪ್ ಡಿಪಿ ನೋಡಿ ಸಂದೇಶ ಕಳುಹಿಸಿದ್ದಾರೆ. ಈ ರೀತಿಯ ಡಿಪಿ ಹಾಕಬೇಡಿ. ಇದು ವೃತ್ತಿಪರವಾಗಿಲ್ಲ ಎಂದಿದ್ದಾರೆ. ಕಾರಣ ಕೇಳಿದಾಗ, ಕೂದಲಿನ ಬಣ್ಣ ಸೇರಿದಂತೆ ಸ್ಟೈಲಿಶ್ ಡಿಪಿ ವೃತ್ತಿಪರವಾಗಿಲ್ಲ ಎಂದ ಉತ್ತರಿಸಿದ್ದಾರೆ. ಆದರೆ ಈ ವಿಚಾರ ಕೇಳಿ ನಾನು ಅಚ್ಚರಿಗೊಂಡೆ. ಹಾಗಾದರೆ ಈ ಡಿಪಿ ತುಂಬಾ ಬೋಲ್ಡ್ ಆಗಿದೆಯಾ? ಅಥವಾ ಸಾಂಪ್ರದಾಯಿಕವಾಗಿಲ್ಲವೇ? ಎಂದು ಸುರಭಿ ಜೈನ್ ಪ್ರಶ್ನಿಸಿದ್ದಾರೆ.

ಒಂದೇ ವ್ಯಾಟ್ಸ್ಆ್ಯಪ್ ಖಾತೆಯಲ್ಲಿ ಎರಡೆರಡು ಪ್ರೊಫೈಲ್, ಡಿಪಿ, ಹೆಸರು ಬಳಸಲು ಅವಕಾಶ!

ಕಂಪನಿಯ ಉನ್ನತ ಹುದ್ದೆಯಲ್ಲಿರವವರು, ಸಂಸ್ಥಾಪಕರು  ಕೇವಲ ನಾಯಕರಲ್ಲ, ನಾವು ಕೂಡ ಮನುಷ್ಯರೇ. ನಮ್ಮ ವೈಯುಕ್ತಿಕ ಅಭಿವ್ಯಕ್ತಿಗಳಲ್ಲಿ ಧೈರ್ಯ, ಆತ್ಮವಿಶ್ವಾಸ ಪ್ರತಿಬಿಂಬಿಸುತ್ತದೆ. ನನ್ನ ಕೂದಲಿಗೆ ಬಣ್ಣ ಹಾಕಿರುವುದು ನನ್ನ ವೈಯುಕ್ತಿಕ ಆಯ್ಕೆ. ಆದರೆ ಇದು ಹೊಸದನ್ನು ಪ್ರಯತ್ನಿಸುವ ಇಚ್ಚೆ, ಸವಾಲುಗಳನ್ನು ಟೀಕೆಗಳನ್ನು ಎದುರಿಸುವ ರೀತಿಯನ್ನು ಪ್ರದರ್ಶಿಸುತ್ತದೆ. ಕೆಲವರು ಇದನ್ನು ವೃತ್ತಿಪರವಾಗಿಲ್ಲ ಎಂದು ವ್ಯಾಖ್ಯಾನಿಸಬಹುದು. ಹಲವರು ವೃತ್ತಿಪರತೆಯನ್ನು ಪರಿಗಣಿಸದೇ ಇರಬಹುದು. ಹಾಗಾದರೆ ಈ ವೃತ್ತಿಪರತೆಯನ್ನು ಬದಲಾಯಿಸುವ ಸಮಯ ಇದಲ್ಲವೇ? ಎಂದು ಸುರಭಿ ಜೈನ್ ಹೇಳಿದ್ದಾರೆ.

 

 

ಈ ಕುರಿತು ನಿಮ್ಮ ಅಭಿಪ್ರಾಯವೇನು? ಸ್ವಯಂ ಅಭಿವ್ಯಕ್ತಿಯನ್ನು ವೃತ್ತಿಪರವಾಗಿಲ್ಲ ಎಂದು ಪರಿಗಣಿಸಬೇಕೆ ಅಥವಾ ವೃತ್ತಿಪರ ವ್ಯಾಖ್ಯಾನವನ್ನು ಸವಿಸ್ತಾರವಾಗಿ ನೋಡಬೇಕೆ ಎಂದು ಅಭಿಪ್ರಾಯ ಕೇಳಿದ್ದಾರೆ.   ಸುರಭಿ ಜೈನ್ ಪ್ರಶ್ನೆಗೆ ಹಲವರು ಕಮೆಂಟ್ ಮಾಡಿದ್ದಾರೆ. ತಮ್ಮ ತಮ್ಮ ಅನುಭವ ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಜನರ ಮಾಹಿತಿ ರಕ್ಷಣೆ, ಮಾರಾಟ ತಡೆಗೆ ಡಿಪಿಡಿಪಿ ಕಾಯ್ದೆ ರಚನೆ: ರಾಜೀವ್‌ ಚಂದ್ರಶೇಖರ್
 

Latest Videos
Follow Us:
Download App:
  • android
  • ios