Personal Finance : ಬ್ಯಾಂಕ್ ಬಂದ್ ಆದ್ರೆ ನಿಮ್ಮ ಠೇವಣಿ ಹಣದ ಕಥೆ ಏನು?

ಬ್ಯಾಂಕ್ ನಲ್ಲಿ ನಾವು – ನೀವೆಲ್ಲ ಹಣ ಇಟ್ಟಿರ್ತೇವೆ. ಏಕಾಏಕಿ ಬ್ಯಾಂಕ್ ಕ್ಲೋಸ್ ಆಗ್ಬಿಡುತ್ತೆ. ಆಗ ಏನ್ಮಾಡ್ಬೇಕು ತಿಳಿಯೋದಿಲ್ಲ. ಹಣ ವಾಪಸ್ ಸಿಗಲ್ವಾ ಎಂಬ ಚಿಂತೆ ಕಾಡುತ್ತದೆ. ಇದಕ್ಕೆ ಭಯಪಡುವು ಅಗತ್ಯವಿಲ್ಲ. ಹಣ ವಾಪಸ್ ಸಿಗೋದು ನಿಶ್ಚಿತ.
 

What Will Happen To Fixed Deposit Money If Bank Is Closed

ಹಣ (Money) ಗಳಿಸಿದ್ಮೇಲೆ ಅದನ್ನು ಉಳಿತಾಯ (Savings) ಮಾಡ್ಲೇಬೇಕು. ಮನೆಯಲ್ಲಿ ನಗದು ಇಡೋದು ಸುರಕ್ಷಿತವಲ್ಲ. ಇರೋ ಹಣಕ್ಕೆ ಬಡ್ಡಿ ಸಿಗ್ಬೇಕೆಂದ್ರೆ ಬ್ಯಾಂಕ್ ಬೆಸ್ಟ್. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಬ್ಯಾಂಕ್ ನಲ್ಲಿ ಖಾತೆ (Account) ತೆಗೆದು ಹಣವನ್ನು ಇಡ್ತಾರೆ. ಬ್ಯಾಂಕ್ (Bank) ಖಾತೆಯಲ್ಲಿರುವ ಹಣ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆಯಲ್ಲಿ ಜನರು ಹಣವನ್ನು ಬ್ಯಾಂಕ್ ಖಾತೆಗೆ ಹಾಕ್ತಾರೆ. ಮನೆಯಲ್ಲಿ ಹಣವಿದ್ರೆ ನಿದ್ರೆ ಬರೋದಿಲ್ಲ. ಅದೇ ಬ್ಯಾಂಕ್ ಖಾತೆಯಿಲ್ಲಿ ಹಣವಿದ್ರೆ ಯಾವುದೇ ಚಿಂತೆಯಿಲ್ಲದೆ ಇರಬಹುದು ಎಂಬುದು ಅನೇಕರ ನಂಬಿಕೆ. ಇದು ನೂರಕ್ಕೆ ನೂರು ಸತ್ಯ ಕೂಡ ಹೌದು. ಆದ್ರೆ ಇತ್ತೀಚಿನ ದಿನಗಳಲ್ಲಿ ಕೆಲ ಬ್ಯಾಂಕ್ ಗಳು ಬಾಗಿಲು ಮುಚ್ಚುತ್ತಿದೆ. ಬ್ಯಾಂಕ್ ನಲ್ಲಿ ಹಣ ಸುರಕ್ಷಿತವಾಗಿರುತ್ತೆ ಎಂಬ ಕಾರಣಕ್ಕೆ ಖಾತೆ ತೆರೆದು ಹಣ ಹಾಕಿದವರು ಬ್ಯಾಂಕ್ ಮುಚ್ಚುತ್ತಿದ್ದಂತೆ ಕಂಗಾಲಾಗ್ತಾರೆ. ಬೆವರಿಳಿಸಿ ದುಡಿದ ಹಣ ಎಲ್ಲಿ ಕೈತಪ್ಪಿ ಹೋಗುತ್ತೋ ಎನ್ನುವ ಆತಂಕ ಕಾಡುತ್ತದೆ. ಇದೇ ಭಯ (Fear) ಕ್ಕೆ ಬ್ಯಾಂಕ್ ಖಾತೆಯಲ್ಲಿ ಹಣವಿಡಲು ಅನುಮಾನ ಮಾಡ್ತಾರೆ. ಆದ್ರೆ ಬ್ಯಾಂಕ್ ಖಾತೆಯಲ್ಲಿ ಇಟ್ಟ ಹಣ ಯಾವಾಗ್ಲೂ ಸುರಕ್ಷಿತವೇ ಎಂಬುದು ನಿಮಗೆ ಗೊತ್ತಿರಲಿ. ನಾವಿಂದು ಬ್ಯಾಂಕ್ ಮುಚ್ಚಿದ್ರೆ ಗ್ರಾಹಕ (Customer) ರ ಹಣವನ್ನು ಏನು ಮಾಡಲಾಗುತ್ತದೆ ಎನ್ನುವ ಬಗ್ಗೆ ನಿಮಗೆ ತಿಳಿಸ್ತೇವೆ. 

ಬ್ಯಾಂಕ್ ಮುಚ್ಚಿದ್ರೆ ಖಾತೆಯಲ್ಲಿರುವ ಹಣದ ಕಥೆ ಏನು? ಹಣವನ್ನು ಮರಳಿ ಪಡೆಯುವುದು ಹೇಗೆ ? : ಹಣವಿಟ್ಟ ಬ್ಯಾಂಕ್ ಬಾಗಿಲು ಮುಚ್ಚುತ್ತಿದೆ ಅಂದ್ರೆ ನೀವು ಭಯಪಡುವ ಅಗತ್ಯವಿಲ್ಲ. ಏಕೆಂದರೆ ಬ್ಯಾಂಕ್ ಮುಚ್ಚಿದರೂ ಸಹ ನಿಮ್ಮ ಹಣವನ್ನು ಬ್ಯಾಂಕ್ ನಿಮಗೆ ಹಿಂತಿರುಗಿಸುತ್ತದೆ. ವಾಸ್ತವವಾಗಿ ಬ್ಯಾಂಕ್ ಮುಚ್ಚಿದಾಗ, ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಒದಗಿಸಿದ ವಿಮಾ ರಕ್ಷಣೆ (Insurance Coverage) ಯನ್ನು ಪಡೆಯುತ್ತಾರೆ. ಡಿಐಸಿಜಿಸಿ ಅಡಿಯಲ್ಲಿ ವಿಮಾ ರಕ್ಷಣೆಯು ಫೆಬ್ರವರಿ 4, 2020  ರಿಂದ ಜಾರಿಗೆ ಬರುವಂತೆ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆಯಾಗಿದೆ. ಹಾಗಾಗಿ ಬ್ಯಾಂಕ್ ಮುಚ್ಚಿದ್ರೆ ನೀವು ಆತಂಕಕ್ಕೊಳಗಾಗಬೇಕಾಗಿಲ್ಲ. ನಿಮ್ಮ ಹಣ ನಿಮಗೆ ಸಿಗುತ್ತದೆ. 

Pension Scheme:ದಿನಕ್ಕೆ ಕೇವಲ 2ರೂ. ಹೂಡಿಕೆ ಮಾಡಿದ್ರೆ 36 ಸಾವಿರ ಲಾಭ; ಹೇಗೆ? ಯಾವ ಯೋಜನೆ? ಇಲ್ಲಿದೆ ಮಾಹಿತಿ

ಯಾವ ರೀತಿಯ ಬ್ಯಾಂಕ್ ಠೇವಣಿಗಳ ಮೇಲೆ ನೀವು ವಿಮಾ ರಕ್ಷಣೆಯನ್ನು ಪಡೆಯುತ್ತೀರಿ ? : ಬ್ಯಾಂಕ್ ನಲ್ಲಿ ಅನೇಕ ರೀತಿಯ ಠೇವಣಿ ವಿಧಾನಗಳಿವೆ. ಬ್ಯಾಂಕ್ ಮುಚ್ಚಿದ್ರೆ ಉಳಿತಾಯ ಖಾತೆ, ಸ್ಥಿರ ಠೇವಣಿ (ಎಫ್‌ಡಿ), ಚಾಲ್ತಿ ಖಾತೆ,  ಆರ್‌ಡಿ  ಮತ್ತು ಇತರ ಠೇವಣಿಗಳು ಡಿಐಸಿಜಿಸಿಯ ವಿಮೆಗೆ ಒಳಪಡುತ್ತವೆ. ಡಿಐಸಿಜಿಸಿ ಉಳಿತಾಯ, ಸ್ಥಿರ, ಕರೆಂಟ್, ಆರ್ ಡಿ ಇತ್ಯಾದಿ ಠೇವಣಿಗಳನ್ನು ವಿಮೆ ಮಾಡುತ್ತದೆ. ಆದರೆ ಇದರಲ್ಲಿ ವಿದೇಶಿ ಸರಕಾರಗಳ ಠೇವಣಿ, ಕೇಂದ್ರ ಅಥವಾ ರಾಜ್ಯ ಸರಕಾರಗಳ ಠೇವಣಿ, ಅಂತರ ಬ್ಯಾಂಕ್ ಠೇವಣಿ, ರಾಜ್ಯ ಸಹಕಾರಿ ಬ್ಯಾಂಕ್, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ಗಳ ಠೇವಣಿ ಇತ್ಯಾದಿ ಸೇರುವುದಿಲ್ಲ.

ಯಾವ ಬ್ಯಾಂಕ್‌ಗಳಲ್ಲಿ ಈ ಸೌಲಭ್ಯವಿದೆ ? : ವಿದೇಶಿ ಬ್ಯಾಂಕುಗಳು, ಸ್ಥಳೀಯ ಪ್ರದೇಶದ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸೇರಿದಂತೆ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಡಿಐಸಿಜಿಸಿಯಿಂದ ವಿಮೆ ಮಾಡಲ್ಪಟ್ಟಿವೆ. ಪ್ರಸ್ತುತ ಎಲ್ಲಾ ಸಹಕಾರಿ ಬ್ಯಾಂಕುಗಳು ಡಿಐಸಿಜಿಸಿ ಅಡಿಯಲ್ಲಿ ಬರುತ್ತವೆ.

Personal Finance: ಉಳಿತಾಯ ಖಾತೆ ಹೊಂದಿದ್ರೆ ಈ ವಿಷ್ಯ ಗಮನದಲ್ಲಿರಲಿ

ನಿಮ್ಮ ಹಣವನ್ನು ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಿದ್ದರೆ, ನೀವು ಪ್ರತಿ ಬ್ಯಾಂಕ್‌ ನಿಂದಲೂ ವಿಮಾ ರಕ್ಷಣೆಯನ್ನು ಪಡೆಯುತ್ತೀರಿ. ಠೇವಣಿದಾರರು ತಮ್ಮ ಬ್ಯಾಂಕ್ ಅಧಿಕಾರಿಯಿಂದ ಈ ಬಗ್ಗೆ ಸಂಪೂರ್ಣ ವಿವರಗಳನ್ನು ಪಡೆಯಬಹುದು.
 

Latest Videos
Follow Us:
Download App:
  • android
  • ios