Personal Finance: ಉಳಿತಾಯ ಖಾತೆ ಹೊಂದಿದ್ರೆ ಈ ವಿಷ್ಯ ಗಮನದಲ್ಲಿರಲಿ

ಹಣ ಇಡಲು ಸುರಕ್ಷಿತ ಜಾಗ ಬೇಕು ಎನ್ನುವ ಕಾರಣಕ್ಕೆ ಅನೇಕರು ಬ್ಯಾಂಕ್ ನಲ್ಲಿ ಉಳಿತಾಯ ಖಾತೆ (Savings Account) ತೆರೆದಿರುತ್ತಾರೆ. ಮತ್ತೆ ಕೆಲವರು ಸರ್ಕಾರದಿಂದ ಬರುವ ಸಬ್ಸಿಡಿ ಪಡೆಯಲು ಖಾತೆ ತೆರೆದಿರುತ್ತಾರೆ. ಉಳಿತಾಯ ಖಾತೆಯಿಂದ ಏನೇನೆಲ್ಲ ಪ್ರಯೋಜನವಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
 

5 Smart Things must know about Bank Savings Account

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಉಳಿತಾಯ ಖಾತೆ (Savings Account) ಯನ್ನು ಹೊಂದಿದ್ದಾರೆ. ಹಣಕಾಸಿನ ವ್ಯವಹಾರಕ್ಕೆ ಇದು ಅಗತ್ಯವಾಗಿರುವ ಕಾರಣ ಹಳ್ಳಿಯ ಮೂಲೆ ಮೂಲೆಯಲ್ಲಿನ ಜನರು ಉಳಿತಾಯ ಖಾತೆ ಹೊಂದಿರುತ್ತಾರೆ. ಈ ಉಳಿತಾಯ ಖಾತೆಯನ್ನು ಹಣವನ್ನು ಇಡಲು ಮತ್ತು ಹಣದ ವಹಿವಾಟುಗಳಿಗೆ ಬಳಸಲಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.  ಆದರೆ ಉಳಿತಾಯ ಖಾತೆಯಿಂದ ಇನ್ನೂ ಹಲವಾರು ಪ್ರಯೋಜನಗಳಿವೆ ಎಂಬುದು ಕೆಲವೇ ಕೆಲವು ಜನರಿಗೆ ತಿಳಿದಿದೆ.  ಉಳಿತಾಯ ಖಾತೆ ಹೊಂದಿರುವ ಎಲ್ಲರೂ ಅದರ ಪ್ರಯೋಜನ (Benefit) ಗಳ ಬಗ್ಗೆ ತಿಳಿಯುವ ಅಗತ್ಯವಿದೆ. ಇಂದು ನಾವು ಉಳಿತಾಯ ಖಾತೆ ಪ್ರಯೋಜನಗಳ ಬಗ್ಗೆ ಹೇಳ್ತೇವೆ.

ಉಳಿತಾಯ ಖಾತೆ ಪ್ರಯೋಜನಗಳು : 
ಹಣ ಸೇವಿಂಗ್ ಹಾಗೂ ವಹಿವಾಟು :
 ಹೆಚ್ಚಿನ ಜನರಿಗೆ ಉಳಿತಾಯ ಖಾತೆಯ ಈ ವಿಷ್ಯ ತಿಳಿದಿದೆ. ಜನರು ತಮ್ಮ ಹಣವನ್ನು ಉಳಿತಾಯ ಖಾತೆಯಲ್ಲಿ ಇಡುತ್ತಾರೆ. ಈ ಖಾತೆಯಲ್ಲಿ ಹಣ ಹಾಕಬಹುದು. ಖಾತೆಯಿಂದ ಹಣ ತೆಗೆಯಬಹುದು. ಖಾತೆಯಿಂದ ಖಾತೆಗೆ ಹಣ ವರ್ಗಾವಣೆ ಮಾಡ್ಬಹುದು. ಬಿಲ್ ಪಾವತಿ (Bill Payment) ಮಾಡ್ಬಹುದು. ಹಾಗೆಯೇ ಈ ಖಾತೆಗೆ ಸಬ್ಸಿಡಿ ಲಿಂಕ್ (Subsidy Link ) ಮಾಡ್ಬಹುದು. ಎಲ್ಲಾ ರೀತಿಯ ಪಾವತಿಗಳಿಗೆ ಸ್ಟ್ಯಾಂಡಿಂಗ್ ಇನ್‌ಸ್ಟ್ರಕ್ಷನ್ (Standing Instruction) ಅನ್ನು ಸಹ ಅನ್ವಯಿಸಬಹುದು. ಹೀಗೆ ಮಾಡಿದ್ರೆ ನಿಗದಿತ ದಿನಾಂಕದಂದು ನಿಮ್ಮ ಖಾತೆಯಿಂದ ಹಣ ಕಟ್ ಆಗಿ ಹೋಗಬೇಕಾದ ಖಾತೆಗೆ ವರ್ಗವಾಗುತ್ತದೆ.

Credit Card:ಆಫರ್ ಗೆ ಮರುಳಾಗಿ ಕ್ರೆಡಿಟ್ ಕಾರ್ಡ್ ಕೊಳ್ಳಬೇಡಿ; ಈ 5 ವಿಷಯಗಳನ್ನು ಮರೆಯದೆ ವಿಚಾರಿಸಿ

ವಿವಿಧ ಪಾವತಿಗೆ ಉಳಿತಾಯ ಖಾತೆ ಬಳಕೆ : ಉಳಿತಾಯ ಖಾತೆ ಹೊಂದಿರುವ ವ್ಯಕ್ತಿ, ಡೆಬಿಟ್ ಕಾರ್ಡ್‌ಗಳು, ಚೆಕ್‌ಗಳು ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ವಹಿವಾಟುಗಳನ್ನು ಮಾಡಬಹುದು. ಉಳಿತಾಯ ಖಾತೆಯನ್ನು ಎಲ್ಲಾ ಬ್ಯಾಂಕ್‌ಗಳ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕವೂ ಬಳಸಬಹುದು. ನಿಮ್ಮ ಉಳಿತಾಯ ಖಾತೆಯಲ್ಲಿ ನೀವು ಎಷ್ಟು ವಹಿವಾಟುಗಳನ್ನು ಮಾಡುತ್ತೀರಿ, ಅಂದರೆ ನೀವು ಎಷ್ಟು ಪಾವತಿಸುತ್ತೀರಿ ಮತ್ತು ಎಲ್ಲಿಂದ ಎಷ್ಟು ಹಣವನ್ನು ಸ್ವೀಕರಿಸುತ್ತೀರಿ ಎಂಬ ಸಂಪೂರ್ಣ ಮಾಹಿತಿಯನ್ನು ನೀವು ಪಡೆಯಬಹುದು.

ಕನಿಷ್ಠ ಬ್ಯಾಲೆನ್ಸ್ (Minimum Balance) ಅನಿವಾರ್ಯ : ವಿವಿಧ ರೀತಿಯ ಉಳಿತಾಯ ಖಾತೆಗಳಿವೆ ಮತ್ತು ಅದೇ ಆಧಾರದ ಮೇಲೆ ಪ್ರತಿ ಖಾತೆಗೆ ಕನಿಷ್ಠ ಬ್ಯಾಲೆನ್ಸ್  ನಿಗದಿ ಮಾಡಲಾಗುತ್ತದೆ. ಉಳಿತಾಯ ಖಾತೆ ಹೊಂದಿರುವವರು ಶೂನ್ಯ ಬ್ಯಾಲೆನ್ಸ್ ಹೊಂದುವಂತಿಲ್ಲ. ಬ್ಯಾಂಕ್ ನಿಗದಿಪಡಿಸಿದ ಹಣ ಖಾತೆಯಲ್ಲಿ ಇರಬೇಕು. ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದರೆ  ದಂಡವನ್ನು ಪಾವತಿಸಬೇಕಾಗುತ್ತದೆ.

ಸುಲಭ ವ್ಯವಹಾರ ಶುರು ಮಾಡಿ ತಿಂಗಳಿಗೆ ಗಳಿಸಿ 80 ಸಾವಿರ ಗಳಿಸಿ

ಉಳಿತಾಯ ಖಾತೆಯಲ್ಲಿ ಇರಿಸಲಾದ ಹಣದ ಮೇಲೆ ಬಡ್ಡಿ :  ನೀವು ಉಳಿತಾಯ ಖಾತೆಯಲ್ಲಿ ಇಡುವ ಹಣಕ್ಕೆ ಬಡ್ಡಿಯೂ ಸಿಗುತ್ತದೆ. ಈ ಬಡ್ಡಿಯನ್ನು ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕವಾಗಿ ಪಾವತಿಸಲಾಗುತ್ತದೆ. ವಿವಿಧ ಬ್ಯಾಂಕುಗಳು ವಿವಿಧ ಅವಧಿಗಳಿಗೆ ವಿಭಿನ್ನ ಬಡ್ಡಿದರಗಳನ್ನು ಸಹ ನಿಗದಿಪಡಿಸುತ್ತವೆ. ಉಳಿತಾಯ ಖಾತೆ ಬಡ್ಡಿ ಕಡಿಮೆ. ಹಣವನ್ನು ಖಾತೆಯಲ್ಲಿ ದೀರ್ಘಾವಧಿಯವರೆಗೆ ಇರಿಸಲು ಬಯಸಿದರೆ  ನೀವು ಸ್ಥಿರ ಠೇವಣಿ ಇಡುವುದು ಯೋಗ್ಯ. ಅದ್ರಲ್ಲಿ ಬಡ್ಡಿ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ.  

ಉಳಿತಾಯ ಖಾತೆಯಲ್ಲಿ ಗಳಿಸಿದ ಬಡ್ಡಿಗೆ ತೆರಿಗೆ (Interest on Tax) :  ಉಳಿತಾಯ ಖಾತೆ ಹೊಂದಿರುವವರು ಇದನ್ನು ತಿಳಿದಿರಬೇಕು. ಉಳಿತಾಯ ಖಾತೆಯಲ್ಲಿ ಗಳಿಸಿದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಆದಾಯ ತೆರಿಗೆಯ ನಿಯಮಗಳ ಪ್ರಕಾರ, ಉಳಿತಾಯ ಖಾತೆಯಿಂದ ಪಡೆದ ಬಡ್ಡಿಯ ಮೊತ್ತವು 10 ಸಾವಿರ ರೂಪಾಯಿಗಳನ್ನು ಮೀರಿದರೆ ಅದರ ಮೇಲೆ ಸೆಕ್ಷನ್ 80TTA ಅಡಿಯಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ. ಹಿರಿಯ ನಾಗರಿಕರಿಗೆ  ಈ ಮಿತಿ 80TTB ಅಡಿಯಲ್ಲಿ 50 ಸಾವಿರ ರೂಪಾಯಿ.  

5 Smart Things must know about Bank Savings Account


 

Latest Videos
Follow Us:
Download App:
  • android
  • ios