ಸಾಲಗಾರ ಸತ್ತರೆ ಯಾರಿಗೆ ಸಾಲದ ಹೊಣೆ? ಇಲ್ಲಿದೆ ಲೋನ್ ರೂಲ್ಸ್
ಸಾಲ ಈಗ ಸುಲಭವಾಗ ಸಿಗುತ್ತೆ. ಸಾಲ ಪಡೆದ ವ್ಯಕ್ತಿ ಅದನ್ನು ಹಂತ ಹಂತವಾಗಿ ಪಾವತಿ ಮಾಡ್ತಾನೆ. ಒಂದ್ವೇಳೆ ಮಧ್ಯದಲ್ಲೇ ವ್ಯಕ್ತಿ ಸಾವನ್ನಪ್ಪಿದ್ರೆ ಆ ಸಾಲ ತೀರಿಸೋರು ಯಾರು?
ಎಲೆಕ್ಟ್ರಿಕ್ ಐಟಂ (electric item)ನಿಂದ ಹಿಡಿದು ಬಟ್ಟೆಯವರೆಗೆ ಈಗ ಎಲ್ಲ ವಸ್ತುವಿಗೂ ಸಾಲ ಸೌಲಭ್ಯ(Loan facility )ವಿದೆ. ಕೈನಲ್ಲಿ ಹಣವಿಲ್ಲ ಅಂತ ಚಿಂತಿಸುವ ಅಗತ್ಯವಿಲ್ಲ. ಒಂದಿಷ್ಟು ಸಾಲ ಮಾಡಿ, ನಮ್ಮಿಷ್ಟದ ವಸ್ತುಗಳನ್ನು ಖರೀದಿ ಮಾಡ್ಬಹುದು. ಸಾಲದಲ್ಲಿ ಮೂರು ಮುಖ್ಯ ವಿಧಗಳಿವೆ. ಅವುಗಳನ್ನು ವೈಯಕ್ತಿಕ ಸಾಲ(personal loan), ಗೃಹ ಸಾಲ (home loan) ಮತ್ತು ಕಾರು ಸಾಲ (car loan) ಎಂದು ವಿಂಗಡಿಸಲಾಗಿದೆ. ಈ ಸಾಲಗಳು ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಜನರು ವೈಯಕ್ತಿಕ ಆಸಕ್ತಿಗೆ ಇಲ್ಲವೆ ಮನೆಗಾಗಿ ಸಾಲ ಮಾಡ್ತಾರೆ. ಬ್ಯಾಂಕ್ ನಿಂದ ಸಾಲ ಪಡೆದು ತನ್ನ ಆಸೆ ಈಡೇರಿಸಿಕೊಳ್ಳುವ ವ್ಯಕ್ತಿ, ಸಾಲ ಮರುಪಾವತಿಗೆ ಮುನ್ನವೇ ಸಾವನ್ನಪ್ಪಿದ್ರೆ ಆ ಸಾಲದ ಕಥೆ ಏನಾಗುತ್ತೆ? ಅನೇಕರಿಗೆ ಈ ಪ್ರಶ್ನೆ ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಸಾಲಗಾರ ಸತ್ತರೆ ಸಾಲದ ಹೊಣೆಗಾರಿಕೆ ಯಾರಿಗೆ? : ಇದಕ್ಕೆ ಸಂಬಂಧಿಸಿದಂತೆ ವಿವಿಧ ಸಾಲಗಳ ನೀತಿ – ನಿಯಮಗಳು ಭಿನ್ನವಾಗಿವೆ. ಕೆಲವೊಮ್ಮೆ ಉತ್ತರಾಧಿಕಾರಿ ಅಥವಾ ಸಹ-ಸಾಲಗಾರ ಬಾಕಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಮತ್ತೆ ಕೆಲ ಸಾಲದಲ್ಲಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ, ನಿಯಮಗಳ ಪ್ರಕಾರ ಪಾವತಿಗೆ ವ್ಯವಸ್ಥೆ ಮಾಡುತ್ತದೆ.
ಏರ್‌ಟೆಲ್, BSNLಗೆ ಶಾಕ್ ಕೊಟ್ಟ ಜಿಯೋ, ಕೇವಲ 91ರೂಗೆ ಉಚಿತ ಡೇಟಾ, ಕಾಲ್ ಪ್ಲಾನ್!
ಗೃಹ ಸಾಲದಲ್ಲಿ ನಿಯಮ ಏನಿದೆ? : ಗೃಹ ಸಾಲದಲ್ಲಿ ಬ್ಯಾಂಕ್ ಮನೆಯ ಆಸ್ತಿಯನ್ನು ಅಡಮಾನ ಇಡುತ್ತದೆ. ಸಾಲಗಾರ ಸತ್ತಾಗ, ಬಾಕಿ ಸಾಲವನ್ನು ಸಹ ಸಾಲಗಾರ ಅಥವಾ ವಾರಸುದಾರ ತೀರಿಸಬೇಕು. ಆಸ್ತಿ ಮಾರಾಟ ಮಾಡಿ ಸಾಲ ತೀರಿಸುವ ಆಯ್ಕೆಯನ್ನೂ ನೀಡಲಾಗುತ್ತದೆ. ಹೆಚ್ಚಿನ ಬ್ಯಾಂಕ್ ಗಳು ಗೃಹ ಸಾಲಕ್ಕೆ ವಿಮೆ ಸೌಲಭ್ಯ ನೀಡುತ್ತವೆ. ಸಾಲಗಾರ ಸತ್ತಾಗ, ವಿಮೆ ಕ್ಲೈಮ್ ಮಾಡುವ ಮೂಲಕ ಉಳಿದ ಮೊತ್ತವನ್ನು ಮರುಪಾವತಿ ಮಾಡುತ್ತವೆ.
ವೈಯಕ್ತಿಕ ಸಾಲದ ನಿಯಮ : ವೈಯಕ್ತಿಕ ಸಾಲದಲ್ಲಿ ನಿಯಮ ಭಿನ್ನವಾಗಿದೆ. ಪರ್ಸನಲ್ ಲೋಸ್ ಸುರಕ್ಷಿತವಲ್ಲ. ಹಾಗಾಗಿ ಇದನ್ನು ಪಡೆದ ವ್ಯಕ್ತಿ ಸಾವನ್ನಪ್ಪಿದ್ರೆ ಆ ಸಾಲ ಕೂಡ ಆತನ ಜೊತೆಯೇ ಮಣ್ಣಾಗುತ್ತದೆ. ವೈಯಕ್ತಿಕ ಸಾಲದ ಜೊತೆ ಕ್ರೆಡಿಟ್ ಕಾರ್ಡ್ ಸಾಲವನ್ನು ಕೂಡ ಇದ್ರಲ್ಲಿ ಸೇರಿಸಲಾಗುತ್ತದೆ. ಕ್ರೆಡಿಟ್ ಕಾರ್ಡ್ ಮೂಲಕ ಸಾಲಪಡೆದ ವ್ಯಕ್ತಿ ಸಾವನ್ನಪ್ಪಿದ್ರೆ ಈ ಸಾಲ ತೀರಿಸುವ ಜವಾಬ್ದಾರಿಯನ್ನು ವಾರಸುದಾರನಿಗಾಗಲಿ ಇಲ್ಲ ಅನ್ಯವ್ಯಕ್ತಿಗಾಗಲಿ ಹಸ್ತಾಂತರಿಸುವುದಿಲ್ಲ. ಈ ಸಾಲವನ್ನು ಬ್ಯಾಂಕ್ ಸ್ವತಃ ಮರುಪಾವತಿ ಮಾಡುತ್ತದೆ. ಬ್ಯಾಂಕ್ ಸಾಲವನ್ನು ಎನ್ಪಿಎ ಎಂದು ಘೋಷಿಸುತ್ತದೆ.
ಕಾರಿನ ಸಾಲ : ಕಾರು ಖರೀದಿ ವೇಳೆ ಸಾಲ ಮಾಡಿದ್ದ ವ್ಯಕ್ತಿ, ಸಾಲ ಮರುಪಾವತಿ ಮಾಡದೆ ಸಾವನ್ನಪ್ಪಿದ್ರೆ ಕಾರನ್ನು ಅಡಮಾನ ಇಡಲಾಗುತ್ತದೆ. ಕಾರಿನ ಸಾಲ ಪಾವತಿಸುವಂತೆ ಮೊದಲು ಮೃತ ವ್ಯಕ್ತಿ ಕುಟುಂಬವನ್ನು ಕೇಳಲಾಗುತ್ತದೆ. ಕುಟುಂಬಸ್ಥರಿಗೆ ಅದು ಸಾಧ್ಯವಾಗದ ಸಂದರ್ಭದಲ್ಲಿ ಕಾರನ್ನು ಮಾರಾಟ ಮಾಡಿ ಸಾಲ ತೀರಿಸುವಂತೆ ಕೇಳಲಾಗುತ್ತದೆ.
ವಾವ್! ರಾಯಲ್ ಲುಕ್ ನಲ್ಲಿ ಮಿಂಚಿದ ಅನಂತ್ – ರಾಧಿಕಾ
ವಾರಸುದಾರರಿಗೆ ಸಾಲದ ಹೊಣೆ ತಪ್ಪಿಸೋದು ಹೇಗೆ? : ಸಾಲ ತೆಗೆದುಕೊಂಡ ವ್ಯಕ್ತಿ, ತನ್ನ ಸಾಲದ ಹೊಣೆ ವಾರಸುದಾರರಿಗೆ ಬೀಳದಂತೆ ಮಾಡಲು ಒಂದು ಉಪಾಯವಿದೆ. ಸಾಲ ಪಡೆದ ವ್ಯಕ್ತಿ, ಸಾಲ ಪಡೆಯುವ ಸಮಯದಲ್ಲಿ ವಿಮೆ ಮಾಡಿಸಬೇಕು. ಹೀಗೆ ಮಾಡಿದ್ರೆ, ವ್ಯಕ್ತಿ ಸತ್ತಾಗ ಸಾಲ ಪಡೆದವನ ಕುಟುಂಬವು ಹಣವನ್ನು ಮರುಪಾವತಿಸಬೇಕಾಗಿಲ್ಲ. ಬ್ಯಾಂಕ್ ವಿಮಾ ಪ್ರೀಮಿಯಂನಿಂದ ಬಾಕಿ ಮೊತ್ತವನ್ನು ಮರುಪಡೆಯುತ್ತದೆ. ಪ್ರತಿಯೊಂದು ಬ್ಯಾಂಕ್, ಸಾಲ ವಿಮಾ ಸೌಲಭ್ಯವನ್ನು ಹೊಂದಿದೆ. ಅನಾರೋಗ್ಯ, ಗಾಯ ಅಥವಾ ಸಾವಿನಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ ಸಾಲ ಮರುಪಾವತಿಯನ್ನು ಕವರ್ ಮಾಡಲು ಈ ವಿಮೆ ಸಹಾಯ ಮಾಡುತ್ತದೆ.