ಏರ್‌ಟೆಲ್, BSNLಗೆ ಶಾಕ್ ಕೊಟ್ಟ ಜಿಯೋ, ಕೇವಲ 91ರೂಗೆ ಉಚಿತ ಡೇಟಾ, ಕಾಲ್ ಪ್ಲಾನ್!
28 ದಿನ ವ್ಯಾಲಿಟಿಡಿ, ಅನ್‌ಲಿಮಿಟೆಡ್ ಕಾಲ್, ಉಚಿತ ಡೇಟಾ ಸೇರಿದಂತೆ ಹಲವು ಸೌಲಭ್ಯ ಕೇವಲ 91 ರೂಪಾಯಿ. ಇದು ಜಿಯೋ ಘೋಷಿಸಿದ ಹೊಸ ರೀಚಾರ್ಜ್ ಆಫರ್. ಕಡಿಮೆ ರೂ ಪ್ಲಾನ್ ಮೂಲಕ ಬಿಎಸ್‌ಎನ್‌ಎಲ್ ಹಾಗೂ ಏರ್‌ಟೆಲ್‌ಗೆ ಶಾಕ್ ನೀಡಿದೆ.
ಮುಂಬೈ(ನ.09) ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಇದೆ. ಇತ್ತೀಚೆಗೆ ಬಹುತೇಕ ಟೆಲಿಕಾಂ ಸರ್ವೀಸ್ ಪ್ರೊವೈಡರ್ ರೀಚಾರ್ಜ್ ಬೆಲೆ ಏರಿಕೆ ಮಾಡಿದಾಗ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕಡಿಮೆ ದರದ ಮೂಲಕ ಗ್ರಾಹಕರನ್ನು ಸೆಳೆದಿತ್ತು. ಹಲವರು ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡಿದ್ದರು. ಇದೀಗ ರಿಲಯನ್ಸ್ ಜಿಯೋ ಗ್ರಾಹಕರ ಉಳಿಸಿಕೊಳ್ಳಲು ಮಾತ್ರವಲ್ಲ, ಇತರ ಟೆಲಿಕಾಂಗಳಿಂದ ಗ್ರಾಹಕರ ಸೆಳೆಯಲು ಅತೀ ಕಡಿಮೆ ದರದ ರೀಚಾರ್ಜ್ ಪ್ಲಾನ್ ಘೋಷಿಸಿದೆ. ಬೆಲೆ ಕಡಿಮೆ ಎಂದು ಸೌಲಭ್ಯದಲ್ಲಿ ಯಾವದೇ ಕಡಿಮೆ ಇಲ್ಲ. ಇತರ ಪ್ಲಾನ್‌ಗಳಿಂತೆ 28 ದಿನದ ವ್ಯಾಲಿಟಿಡಿಯನ್ನು ನೀಡಲಾಗಿದೆ. ಇನ್ನು 28 ದಿನ ಅನ್‌ಲಿಮಿಟೆಡ್ ಕಾಲ್ ಸೌಲಭ್ಯವೂ ಇದರಲ್ಲಿದೆ.
ರಿಲಯನ್ಸ್ ಜಿಯೋ ಘೋಷಿಸಿದ 91 ರೂಪಾಯಿ ರೀಚಾರ್ಜ್ ಪ್ಲಾನ್ ಅನ್‌ಲಿಮಿಟೆಡ್ ಕಾಲ್ ಜೊತೆಗೆ 3 ಜಿಬಿ ಉಚಿತ ಡೇಟಾ ನೀಡಿದೆ. ಪ್ರತಿ ದಿನ 100 ಎಂಬಿ ಡೇಟಾ ಲಿಮಿಟ್‌ನಂತೆ ಒಟ್ಟು 3 ಜಿಬಿ ಡೇಟಾ ನೀಡಿದೆ. ಇನ್ನು 200ಎಂಬಿ ಡೇಟಾ ಹೆ್ಚ್ಚುವರಿಯಾಗಿ ನೀಡಲಾಗಿದೆ. ಒಟ್ಟು 30 ಎಸ್ಎಂಎಸ್ ಉಚಿತವಾಗಿ ನೀಡಲಾಗಿದೆ. ಇವಿಷ್ಟು ಸಾಮಾನ್ಯ ಸೌಲಭ್ಯಗಳಾಗಿದ್ದರೆ, ಇದೇ 91 ರೂಪಾಯಿ ಪ್ಲಾನ್‌ನಲ್ಲಿ ಎಂಟರ್ಟೈನ್ಮೆಂಟ್ ಸೌಲಭ್ಯ ಕೂಡ ನೀಡಲಾಗಿದೆ.
ಜಿಯೋ ಸೂಪರ್ ರೀಚಾರ್ಜ್ ಆಫರ್, ಕೇವಲ 175 ರೂಗೆ ಡೇಟಾ, 11 ಒಟಿಟಿ ಉಚಿತ!
ಜಿಯೋ ಕಾಂಪ್ಲಿಮೆಂಟರಿ ಸರ್ವೀಸ್ ಮೂಲಕ ಜಿಯೋ ಸಿನಿಮಾ, ಜಿಯೋ ಟಿವಿ ಹಾಗೂ ಜಿಯೋ ಕ್ಲೌಡ್ ಸರ್ವೀಸ್ ಕೂಡ ಲಭ್ಯವಾಗಲಿದೆ. ಹೀಗಾಗಿ ಜಿಯೋ ಬಳಕೆದಾರರು ಕೇವಲ 91 ರೂಪಾಯಿ ರೀಚಾರ್ಜ್ ಮಾಡಿ ಅನಿಯಮತಿ ಕರೆ, ಉಚಿತ ಡೇಟಾ ಜೊತೆಗೆ ಜಿಯೋ ಸಿನಿಮಾ ಸೇರಿದಂತೆ ಒಟಿಟಿ ಪ್ಲಾಟ್‌ಫಾರ್ಮ್ ಕೂಡ ಪಡೆಯಲಿದ್ದಾರೆ.
ರಿಲಯನ್ಸ್ ಜಿಯೋ ಇತ್ತೀಚೆಗೆ ಹಲವು ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಘೋಷಿಸಿದೆ. ಈ ಪೈಕಿ 198 ರೂಪಾಯಿ ಪ್ಲಾನ್ ಕೂಡ ಒಂದಾಗಿದೆ. ಈ ಪ್ಲಾನ್ ರೀಚಾರ್ಜ್ ಮಾಡಿಕೊಂಡರೆ 14 ದಿನ ವ್ಯಾಲಿಟಿಡಿ ಸಿಗಲಿದೆ. ಪ್ರತಿ ದಿನ 2 ಜಿಬಿ ಉಚಿತ ಡೇಟಾ ಸಿಗಲಿದೆ. ಟ್ರು 5ಜಿ ಡೇಟಾ ಇದಾಗಿದೆ. ಅನ್ನು ಅನ್‌ಲಿಮಿಟೆಡ್ ಕಾಲ್ ಸೌಲಭ್ಯ, ಪ್ರತಿ ದಿನ 100 ಎಸ್ಎಂಎಸ್ ಸೌಲಭ್ಯವೂ ಸಿಗಲಿದೆ. ಇದರ ಜೊತೆಗೆ ಜಿಯೋ ಸಿನಿಮಾ ಸಬ್‌ಸ್ಕ್ರಿಪ್ಶನ್, ಜಿಯೋ ಟಿವಿ ಹಾಗೂ ಜಿಯೋ ಕ್ಲೌಡ್ ಸೌಲಭ್ಯವೂ ಗ್ರಾಹಕರಿಗೆ ಸಿಗಲಿದೆ.
239 ರೂಪಾಯಿ ರೀಚಾರ್ಜ್ ಪ್ಲಾನ್ ಮೂಲಕ ಗ್ರಾಹಕರು 22 ದಿನದ ವ್ಯಾಲಿಟಿಡಿ ಪಡೆಯಲಿದ್ದಾರೆ. ಪ್ರತಿ ದಿನ 1.5 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಪ್ರತಿ ದಿನ 100 ಎಸ್ಎಂಎಸ್ ಕೂಡ ಸಿಗಲಿದೆ. ಇದರ ಜೊತೆಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಸೌಲಭ್ಯವೂ ಸಿಗಲಿದೆ. ಇನ್ನು 209 ರೂಪಾಯಿ ರೀಚಾರ್ಜ್ ಪ್ಲಾನ್‌ನಲ್ಲಿ 22 ದಿನ ವ್ಯಾಲಿಟಿಡಿ ಸಿಗಲಿದೆ. ಪ್ರತಿ ದಿನ 1 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್ ಸೇರಿದಂತೆ ಇತರ ಸೌಲಭ್ಯಗಳು ಇರಲಿದೆ.
ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಬರೆದ ಜಿಯೋ, ಚೀನಾ ಸೇರಿ ಹಲವರ ಹಿಂದಿಕ್ಕಿ ವಿಶ್ವದ ನಂಬರ್ 1