ಯುಪಿಐ ಪಾವತಿ ವಿಫಲವಾದಾಗ ಏನ್ ಮಾಡ್ಬೇಕು? ಇಲ್ಲಿದೆ ಮಾಹಿತಿ

ಹಣ ವರ್ಗಾವಣೆಗೆ ಯುಪಿಐ ಪಾವತಿ ಸುಲಭ ಮಾರ್ಗವೇನೋ ಹೌದು. ಆದ್ರೆ, ಕೆಲವು ಸಂದರ್ಭಗಳಲ್ಲಿ ಈ ಪಾವತಿ ವಿಫಲವಾಗಿ ಮುಂದೇನು ಮಾಡ್ಬೇಕು ಎಂಬ ಗೊಂದಲದಲ್ಲಿ ಬೀಳುತ್ತೇವೆ. ಕೆಲವೊಮ್ಮೆ ನಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದ್ರೂ ಪಾವತಿಯಾಗಿರೋದಿಲ್ಲ.ಇಂಥ ಸಂದರ್ಭಗಳಲ್ಲಿ ಏನ್ ಮಾಡ್ಬೇಕು? ಇಲ್ಲಿದೆ ಮಾಹಿತಿ. 
 

What Should You Do If Your UPI Transactions Fail

Business Desk: ಯುಪಿಐ ಪಾವತಿಗಳು ಹಣ ವರ್ಗಾವಣೆಯನ್ನು ಸುಲಭವಾಗಿಸುವ ಮೂಲಕ ನಮ್ಮ ಕೆಲಸವನ್ನು ತಗ್ಗಿಸಿವೆ. ಬ್ಯಾಂಕ್ ಖಾತೆದಾರರು ಹಣ ವರ್ಗಾವಣೆಗೆ ಬ್ಯಾಂಕಿಗೆ ಹೋಗಬೇಕಾದ ಅನಿವಾರ್ಯತೆ ಈಗ ತಪ್ಪಿದೆ. ಸಣ್ಣ ಮೊತ್ತವೇ ಆಗಿರಬಹುದು ಇಲ್ಲವೇ ದೊಡ್ಡದು, ದೇಶಾದ್ಯಂತ ಯಾವ ಮೂಲೆಯಿಂದ ಬೇಕಾದರೂ ಈಗ ಕೆಲವೇ ಸೆಕೆಂಡ್ ಗಳಲ್ಲಿ ಯುಪಿಐ ಪಾವತಿ ಮಾಡಬಹುದು. ಆದರೆ, ಈ ಯುಪಿಐ ಪಾವತಿಯಿಂದ ಅನೇಕ ಬಾರಿ ಸಂಕಷ್ಟಕ್ಕೆ ಸಿಲುಕಿದ್ದೂ ಇದೆ. ಕೆಲವು ಸಂದರ್ಭಗಳಲ್ಲಿ ಯುಪಿಐ ಪಾವತಿ ಮಾಡಿರುತ್ತೇವೆ. ಆದರೆ ವಿಫಲ ಎಂದು ಬಂದಿರುತ್ತದೆ. ಹೀಗಾಗಿ ಇನ್ನೊಮ್ಮೆ ಮಾಡುತ್ತೇವೆ. ಇಂಥ ಸಮಯದಲ್ಲಿ ಕೆಲವೊಮ್ಮೆ ಖಾತೆಯಿಂದ ಎರಡೆರಡು ಬಾರಿ ಹಣ ಕಡಿತವಾಗಿರುತ್ತದೆ. ಇನ್ನೂ ಕೆಲವೊಮ್ಮೆ ಬ್ಯಾಂಕ್ ಸರ್ವರ್ ತೊಂದರೆಯಿಂದ ಹಣ ವರ್ಗಾವಣೆ ಆಗೋದೇ ಇಲ್ಲ. ಮತ್ತೆ ಕೆಲವೊಮ್ಮೆ ಪೇಮೆಂಟ್ ಪ್ರೊಸೆಸಿಂಗ್ ಎಂದು ತೋರಿಸುತ್ತದೆ. ಯಾವುದೋ ಶಾಪ್ ನಲ್ಲಿ ತುರ್ತಾಗಿ ಏನೋ ಖರೀದಿಸಿ ಯುಪಿಐ ಪಾವತಿ ಮಾಡಿದ ಬಳಿಕ ಈ ರೀತಿ ತೋರಿಸಿದ್ರೆ ಆ ಕ್ಷಣಕ್ಕೆ ಏನು ಮಾಡಬೇಕೆಂಬುದೇ ತೋಚುವುದಿಲ್ಲ. ಹಾಗಾದ್ರೆ ಇಂಥ ಸನ್ನಿವೇಶಗಳಲ್ಲಿ ಏನ್ ಮಾಡ್ಬೇಕು?

ಯುಪಿಐ ಪಾವತಿ ವಿಫಲವಾಗೋದು ಏಕೆ?
ನೀವು ಯುಪಿಐ (UPI) ಪಾವತಿ (Payment) ಸೇವೆ ಬಳಕೆದಾರರಾಗಿದ್ರೆ ಕೆಲವು ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯುಪಿಐ ಪಾವತಿ ವಿಫಲವಾಗೋದಕ್ಕೆ ಕೆಲವು ಕಾರಣಗಳು ಹೀಗಿವೆ:
*ಯುಪಿಐ ವಹಿವಾಟಿನ (UPI transaction) ದೈನಂದಿನ ಮಿತಿ ಮೀರಿರಬಹುದು. 24 ಗಂಟೆಗಳಲ್ಲಿ ಒಬ್ಬ ಬಳಕೆದಾರನಿಗೆ ಯುಪಿಐ ಪಾವತಿಗೆ (UPI payment)  ನಿಗದಿತ ಮಿತಿಯಿರುತ್ತದೆ. ಬಹುತೇಕ ಬ್ಯಾಂಕುಗಳಲ್ಲಿ (Banks) 24 ಗಂಟೆಗಳಲ್ಲಿ ವಹಿವಾಟಿನ ಮಿತಿ 10. ಒಂದು ವೇಳೆ ನೀವು ಈ ಮಿತಿ ಮೀರಿದ್ರೆ 24 ಗಂಟೆಗಳ ಬಳಿಕ ಇನ್ನೊಮ್ಮೆ ಪ್ರಯತ್ನಿಸಬೇಕು. 
*ತಪ್ಪು ಮಾಹಿತಿಗಳೊಂದಿಗೆ ಪಾವತಿಗಳನ್ನು ಮಾಡಿದ್ರೆ ಕೂಡ ವಿಫಲವಾಗುತ್ತದೆ. ಹೀಗಾಗಿ ಯುಪಿಐನಿಂದ (UPI) ಪಾವತಿಗಳನ್ನು ಮಾಡುವ ಮುನ್ನ ನೀವು ಯುಪಿಐ ಪಿನ್ (UPI Pin), ಸ್ವೀಕರಿಸುವವರ ಮಾಹಿತಿ ಹಾಗೂ ಪಾವತಿಯ ಬೆಳವಣಿಗೆಗಳ ಬಗ್ಗೆ ತಿಳಿಯಲು ಲೋಕೇಷನ್ ಆನ್ ಮಾಡಿದ್ದೀರಾ ಎಂಬುದನ್ನು ಪರಿಶೀಲಿಸಬೇಕು. ತಪ್ಪು ಯುಪಿಐ ಪಿನ್ ಬಳಕೆಯಿಂದ ಯುಪಿಐ ಪಾವತಿ ವಿಫಲವಾಗಬಹುದು. 
*ಬ್ಯಾಂಕ್ ಖಾತೆ (Bank account) ಬ್ಯಾಲೆನ್ಸ್ (Balance) ಸಾಕಷ್ಟು ಇಲ್ಲದಿರೋದು: ಯುಪಿಐ ಪಾವತಿ ಮಾಡುವ ಮುನ್ನ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿ. ನಿಮ್ಮ ಖಾತೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಹಣವಿಲ್ಲದಿದ್ರೂ ಯುಪಿಐ ಪಾವತಿ ವಿಫಲವಾಗುತ್ತದೆ. 

ನೀವು ಒಂದಕ್ಕಿಂತ ಹೆಚ್ಚು Bank Account ಹೊಂದಿದ್ದೀರಾ..? ಹಾಗಾದ್ರೆ ಈ ಅಂಶಗಳ ಬಗ್ಗೆ ಗಮನವಿರಲಿ..!

ಬ್ಯಾಂಕ್ ಸರ್ವರ್ ಡೌನ್ ಇದ್ರೆ ಏನ್ ಮಾಡ್ಬೇಕು?
ಕೆಲವೇ ಕೆಲವು ಸನ್ನಿವೇಶಗಳಲ್ಲಿ ಆಂತರಿಕ ಕಾರಣಗಳಿಂದಾಗಿ ಬ್ಯಾಂಕಿಗೆ ಯುಪಿಐ ಪಾವತಿ ಮಾಡಲು ಸಾಧ್ಯವಾಗೋದಿಲ್ಲ. ಆದರೆ, ಇಂಥ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುತ್ತದೆ. ಕೆಲವೊಮ್ಮೆ ಮಾತ್ರ ನೀವು ಬ್ಯಾಂಕ್ ಸರ್ವರ್ (Server) ದುರಸ್ತಿಯಾಗುವ ತನಕ ಕಾದು ಆ ಬಳಿಕ ಪಾವತಿ ಮಾಡಬೇಕಾಗುತ್ತದೆ.

Personal Finance: ಭವಿಷ್ಯ ಚೆನ್ನಾಗಿರ್ಬೇಕಾ? ಉಳಿತಾಯದಲ್ಲಿ ಈ ತಪ್ಪು ಮಾಡ್ಬೇಡಿ

ಪೇಮೆಂಟ್ ಪ್ರೊಸೆಸಿಂಗ್ ಅಂತಹ ಬಂದ್ರೆ ಏನ್ ಮಾಡ್ಬೇಕು?
ಯುಪಿಐ ಪಾವತಿ (UPI payment) ಸಂದರ್ಭದಲ್ಲಿ ಕೆಲವೊಮ್ಮೆ ಬಳಕೆದಾರರಿಗೆ (Users) ಪೇಮೆಂಟ್ ಪ್ರೊಸೆಸಿಂಗ್ (Payment Processing)  ಎಂಬ ಫೀಡ್ ಬ್ಯಾಕ್ ಬರುತ್ತದೆ. ಇಂಥ ಸಂದರ್ಭದಲ್ಲಿ ನಿಮ್ಮ ಖಾತೆಯಿಂದ ಹಣ ಕಡಿತವಾಗಿದ್ರೆ ಹೆಚ್ಚಾಗಿ ಪಾವತಿ (Payment) ಸ್ವಲ್ಪ ಸಮಯದ ಬಳಿಕ ಯಶಸ್ವಿಯಾಗಿ ಆಗುತ್ತದೆ. ಒಂದು ವೇಳೆ ಪಾವತಿ ಆಗಿಲ್ಲವೆಂದಾದ್ರೆ 48 ಗಂಟೆಗಳೊಳಗೆ ಹಣ ನಿಮ್ಮ ಖಾತೆಯಿಂದ (account)  ಕಡಿತವಾಗುತ್ತದೆ. 
 

Latest Videos
Follow Us:
Download App:
  • android
  • ios