Asianet Suvarna News Asianet Suvarna News

Gold Silver Price Today: ಬೆಂಗಳೂರಲ್ಲಿ ಚಿನ್ನ, ಬೆಳ್ಳಿ ದರ ಮತ್ತಷ್ಟು ಅಗ್ಗ ; ಆಭರಣ ಕೊಳ್ಳೋಕೆ ಇದೇ ಒಳ್ಳೆ ಟೈಂ..!

ನೀವು ಸಹ ಚಿನ್ನ, ಬೆಳ್ಳಿ ಆಭರಣ ಖರೀದಿಗೆ ಪ್ಲ್ಯಾನ್‌ ಮಾಡಿದ್ದೀರಾ.. ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ..

what is the gold silver price today in your cities on january 22nd 2023 ash
Author
First Published Jan 22, 2023, 10:47 AM IST

Gold Rate on January 22nd 2023: ದೇಶದಲ್ಲಿ ಆಭರಣ ಪ್ರಿಯರ ಸಂಖ್ಯೆಗೇನೂ ಕೊರತೆ ಇಲ್ಲ. ಬಹುತೇಕ ಮಹಿಳೆಯರು ಬಂಗಾರದ ಪ್ರಿಯರು. ಈ ಹಿನ್ನೆಲೆ, ಚಿನ್ನ , ಬೆಳ್ಳಿ ದರ ಇಳಿಕೆಯಾದರೆ ಮಹಿಳೆಯರ ಮೊಗದಲ್ಲಿ ನಗು ಮೂಡುವುದಂತೂ ಗ್ಯಾರಂಟಿ. ಶುಭ ಸಮಾರಂಭಗಳು ಸಹ ದೇಶದಲ್ಲಿ ಹೆಚ್ಚು ನಡೆಯುವುದರಿಂದಲೂ ಆಭರಣ ವಹಿವಾಟು ನಡೆಯುತ್ತಲೇ ಇರುತ್ತದೆ. ಈ ಕಾರಣಕ್ಕಾಗಿ ಪ್ರತಿನಿತ್ಯ ಹಲವರು ಚಿನ್ನ, ಬೆಳ್ಳಿ ದರವನ್ನು ಪರಿಶೀಲಿಸುತ್ತಾರೆ. ನೀವೂ ಸಹ ಚಿನ್ನ, ಬೆಳ್ಳಿ ಖರೀದಿಗೆ ಪ್ಲ್ಯಾನ್‌ ಮಾಡಿದ್ದೀರಾ..? 

ಇಂದು ಬೆಂಗಳೂರಿನಲ್ಲಿ (Bengaluru) ಬಂಗಾರ (Gold), ಬೆಳ್ಳಿ (Silver) ಬೆಲೆ ಎಷ್ಟಿದೆ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಆಭರಣ (Jewellery) ದರ ಹೇಗಿದೆ ಎಂಬ ಬಗ್ಗೆ ತಿಳ್ಕೋಬೇಕಾ.. ಇಲ್ಲಿದೆ ವಿವರ..

ಇದನ್ನು ಓದಿ: Petrol, Diesel Price Today: ಭಾನುವಾರ ನಿಮ್ಮ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಹೇಗಿದೆ ನೋಡಿ..

ಇಂದು ದೇಶದಲ್ಲಿ (India) ಬಂಗಾರದ ದರ ಇಳಿಕೆಯಾಗಿದ್ದು, ಆದರೆ, ದೇಶದ ಹಲವೆಡೆ ಬೆಳ್ಳಿಯ ದರದಲ್ಲಿ ಸಹ ಏರಿಕೆಯಾಗಿದೆ. ಇನ್ನೊಂದೆಡೆ, ಬೆಂಗಳೂರಲ್ಲಿ ಬೆಳ್ಳಿ ದರ ಇಳಿಕೆಯಾಗಿದೆ. ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ ನೋಡಿ..

ಒಂದು ಗ್ರಾಂ ಚಿನ್ನ (1GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 5,230
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,711

ಎಂಟು ಗ್ರಾಂ ಚಿನ್ನ (8GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 41,840
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 45,688

ಹತ್ತು ಗ್ರಾಂ ಚಿನ್ನ (10GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 52,300
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 57,110

ನೂರು ಗ್ರಾಂ ಚಿನ್ನ (100GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 5,23,000
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,71,100

ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ.     52,300 ರೂ. ಆಗಿದ್ದು, ನಿನ್ನೆಯ ಬೆಲೆಗಿಂತ ಇಳಿಕೆಯಾಗಿದೆ. ಇನ್ನು, ದೇಶದ ಪ್ರಮುಖ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 53,200, ರೂ. 52,250 ಹಾಗೂ ರೂ., 52,250 ಆಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ಸಹ ಚಿನ್ನದ ಬೆಲೆ ಭಾನುವಾರ 52,400 ರೂ. ಆಗಿದ್ದು, ಬೆಲೆಯಲ್ಲಿ ಇಳಿಕೆಯಾಗಿದೆ.

ಇಂದಿನ ಬೆಳ್ಳಿ ದರ
ಇನ್ನು, ದೇಶದಲ್ಲಿ ನಿನ್ನೆಗೆ ಹೋಲಿಸಿದರೆ ಬೆಳ್ಳಿ ದರದಲ್ಲಿ ಹೆಚ್ಚಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ - ಇಳಿಕೆಯಾದಂತೆಯೂ ಚಿನ್ನ - ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. 

ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್
ದೇಶಾದ್ಯಂತ ಇಂದು ಬಂಗಾರದ ದರದಲ್ಲಿ ಇಳಿಕೆಯಾಗಿದೆ. ಆದರೆ, ದೇಶದ ಹಲವೆಡೆ ಬೆಳ್ಳಿ ದರದಲ್ಲಿ ಹೆಚ್ಚಳವಾಗಿದೆ. ಇನ್ನೊಂದೆಡೆ, ಬೆಂಗಳೂರಲ್ಲಿ ಬೆಳ್ಳಿ ದರ ಕಡಿಮೆಯಾಗಿದೆ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 743, ರೂ. 7,430 ಹಾಗೂ ರೂ. 74,300 ಗಳಾಗಿವೆ. ಇನ್ನು, ದೇಶದ ಇತರೆ ಪ್ರಮುಖ ನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,300 ಆಗಿದ್ದು, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ರೂ. 72,300 ಹಾಗೂ ಕೋಲ್ಕತ್ತದಲ್ಲಿ ಸಹ 1 ಕೆಜಿ ಬೆಳ್ಳಿ ದರ ರೂ. 72,300 ಆಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಹ 72,300 ರೂ. ಆಗಿದ್ದು, ಚೆನ್ನೈ ಹೊರತುಪಡಿಸಿ ಉಳಿದೆಡೆ ಬೆಲೆಯಲ್ಲಿ ಏರಿಕೆಯಾಗಿದೆ.

Follow Us:
Download App:
  • android
  • ios