ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಿದ್ರೆ 10 ವರ್ಷಗಳಲ್ಲಿ ಡಬಲ್ ಆಗುತ್ತೆ ನಿಮ್ಮ ಹಣ!

ನೀವು ಹೂಡಿಕೆ ಮಾಡುವ ಯೋಚನೆಯಲ್ಲಿದ್ದರೆ, ಕಿಸಾನ್ ವಿಕಾಸ್ ಪತ್ರದ ಬಗ್ಗೆ ತಿಳಿದುಕೊಳ್ಳೋದು ಉತ್ತಮ. ಅಂಚೆ ಕಚೇರಿಯಲ್ಲಿ ಅಥವಾ ಆನ್ ಲೈನ್ ಮೂಲಕ ಇದರಲ್ಲಿ ಹೂಡಿಕೆ ಮಾಡಬಹುದು.ಇದರಲ್ಲಿ ಉತ್ತಮ ಬಡ್ಡಿದರದ ಜೊತೆಗೆ ನಿಮ್ಮ ಹೂಡಿಕೆ ಸುರಕ್ಷಿತವಾಗಿರುತ್ತದೆ. 
 

Want To Double Your Investment In 10 Years Deposit In Govt Supported Kisan Vikas Patra Scheme Details

Business Desk: ಭಾರತದಲ್ಲಿ ಹೂಡಿಕೆಗೆ ಹತ್ತಾರು ಆಯ್ಕೆಗಳಿದ್ರೂ ಸಣ್ಣ ಉಳಿತಾಯ ಯೋಜನೆಗಳು ಮಧ್ಯಮ ವರ್ಗದ ಜನರಿಗೆ ಅಚ್ಚುಮೆಚ್ಚು. ಈ ವಾರದ ಕೊನೆಯಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪರಿಷ್ಕರಣೆಯಾಗುವ ನಿರೀಕ್ಷೆಯಿದೆ. ಅಂಚೆ ಇಲಾಖೆಯಲ್ಲಿ ಇಂಥ ಅನೇಕ ಸಣ್ಣ ಉಳಿತಾಯ ಯೋಜನೆಗಳಿವೆ. ಅವುಗಳಲ್ಲಿ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಕೂಡ ಒಂದು. ಅಂಚೆ ಇಲಾಖೆ 1988ರಲ್ಲಿ ಈ ಯೋಜನೆಯನ್ನು ಪರಿಚಯಿಸಿತು. ಪ್ರಸ್ತುತ ಕೆವಿಪಿ ಉಳಿತಾಯದ ಮೇಲೆ ವಾರ್ಷಿಕ ಶೇ.6.9 ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆ ಮೆಚ್ಯುರಿಟಿ ಅವಧಿ  10 ವರ್ಷ 4 ತಿಂಗಳು. ಮೆಚ್ಯುರಿಟಿ ಅವಧಿಯಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ ಇಮ್ಮಡಿಯಾಗುತ್ತದೆ. ಭಾರತದ ಯಾವುದೇ ವಯಸ್ಕ ವ್ಯಕ್ತಿ ಕೆವಿಪಿಯಲ್ಲಿ ತನ್ನ ಹೆಸರಿನಲ್ಲಿ ಅಥವಾ ಅಪ್ರಾಪ್ತರ ಪರವಾಗಿ ಹೂಡಿಕೆ ಮಾಡಬಹುದು. ಮೂವರು ವಯಸ್ಕರು ಜಂಟಿಯಾಗಿ ಕೂಡ ಕೆವಿಪಿಯಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಸಮೀಪದ ಅಂಚೆ ಕಚೇರಿ ಶಾಖೆಗೆ ಭೇಟಿ ನೀಡಿ ಅಥವಾ ಆನ್ ಲೈನ್ ಮೂಲಕ ಈ ಯೋಜನೆಗೆ ಸೇರ್ಪಡೆಗೊಳ್ಳಬಹುದು. ಆನ್ ಲೈನ್ ನಲ್ಲಿ ಸೇರ್ಪಡೆಗೊಳ್ಳಲು ಅಂಚೆ ಇಲಾಖೆ ವೆಬ್ ಸೈಟ್ ಗೆ ಭೇಟಿ ನೀಡಬೇಕು ಅಥವಾ  ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಕೂಡ ಹೂಡಿಕೆ ಮಾಡಲು ಅವಕಾಶವಿದೆ. 'ಕಿಸಾನ್ ವಿಕಾಸ್ ಪತ್ರ (ಕೆವಿಪಿ)  ಆಯ್ಕೆ ಮಾಡಿ ಹಾಗೂ ಕೆವಿಪಿ ಅರ್ಜಿ ಎ ಡೌನ್ ಲೋಡ್ ಮಾಡಬೇಕು. ಇದನ್ನು ಭರ್ತಿ ಮಾಡಿದ ಬಳಿಕ ಅಗತ್ಯ ಕೆವೈಸಿ ದಾಖಲೆಗಳ ಜೊತೆಗೆ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಸಲ್ಲಿಕೆ ಮಾಡಬೇಕು. 

ಎಷ್ಟು ಹೂಡಿಕೆ ಮಾಡ್ಬಹುದು?
ಹೂಡಿಕೆದಾರರು ಕನಿಷ್ಠ 1,000ರೂ. ಅನ್ನು ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಬೇಕು. ಆದರೆ, ಹೂಡಿಕೆಗೆ ಯಾವುದೇ ಗರಿಷ್ಠ ಮಿತಿಯಿಲ್ಲ. ಕಿಸಾನ್ ವಿಕಾಸ್ ಪತ್ರವನ್ನು ಮೊದಲಿಗೆ 1988ರಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ, 50,000 ರೂ. ಮೀರಿದ ಹೂಡಿಕೆಗೆ ಪ್ಯಾನ್ ಕಾರ್ಡ್ ಹಾಗೂ 10 ಲಕ್ಷ ರೂ. ಮೀರಿದ ಹೂಡಿಕೆಗೆ ಆದಾಯ ಮೂಲದ ದಾಖಲೆ ಕಡ್ಡಾಯ ಸೇರಿದಂತೆ ಕೆಲವು ಬದಲಾವಣೆಗಳೊಂದಿಗೆ 2014ರಲ್ಲಿ ಮರುಬಿಡುಗಡೆ ಮಾಡಲಾಗಿದೆ. 

ವಿಪ್ರೋ ಉದ್ಯೋಗಿಗಳಿಗೆ ಸಿಹಿ ಸುದ್ದಿ; ಶೇ.96ರಷ್ಟು ಮಂದಿಗೆ ವಾರ್ಷಿಕ ವೇತನ ಹೆಚ್ಚಳ

ತೆರಿಗೆ ಪ್ರಯೋಜನವಿಲ್ಲ
ಕಿಸಾನ್ ವಿಕಾಸ್ ಪತ್ರದಲ್ಲಿ ((KVP)) ಹೂಡಿಕೆ (Invest) ಮಾಡಿದ್ರೆ ಯಾವುದೇ ಆದಾಯ ತೆರಿಗೆ (Income tax) ಪ್ರಯೋಜನ ಸಿಗೋದಿಲ್ಲ. ಆದರೂ ವಿತ್ ಡ್ರಾ (withdraw) ಸಮಯದಲ್ಲಿ ಠೇವಣಿ ಟಿಡಿಎಸ್ ನಿಂದ (TDS) ಮುಕ್ತವಾಗಿರುತ್ತದೆ. ಈ ಯೋಜನೆ 124 ತಿಂಗಳುಗಳ ಮೆಚ್ಯುರಿಟಿ (Maturity) ಅವಧಿ ಹೊಂದಿದ್ದರೂ, ಪ್ರಮಾಣಪತ್ರ (Certificate) ಪಡೆದ ಎರಡೂವರೆ ವರ್ಷಗಳು (30 ತಿಂಗಳುಗಳ) ಬಳಿಕ ನಗದೀಕರಣಗೊಳಿಸಲು ಅವಕಾಶವಿದೆ. 

ವರ್ಗಾವಣೆ ಸಾಧ್ಯ
ಕಿಸಾನ್ ವಿಕಾಸ್ ಪತ್ರದ ((KVP)ಪ್ರಮಾಣಪತ್ರಗಳನ್ನು ವ್ಯಕ್ತಿಯಿಂದ ವ್ಯಕ್ತಿಗೆ ವರ್ಗಾಯಿಸಲು ಅವಕಾಶವಿದೆ. ಹಾಗೆಯೇ ಭಾರತದಲ್ಲಿ ಒಂದು ಅಂಚೆ ಕಚೇರಿಯಿಂದ ಇನ್ನೊಂದು ಅಂಚೆ ಕಚೇರಿ ಶಾಖೆಗೆ ವರ್ಗಾಯಿಸಲು ಕೂಡ ಅವಕಾಶವಿದೆ.

ಜಗತ್ತಿನಲ್ಲಿ ಮತ್ತೆ Economic Recession ಪರ್ವ ಆರಂಭ..?

ಬಡ್ಡಿದರ ಪರಿಷ್ಕರಣೆ
ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ (small savings schemes) ಮೇಲಿನ ಬಡ್ಡಿದರಗಳನ್ನು (Interest rates) 2020-21ನೇ ಸಾಲಿನ ಮೊದಲ ತ್ರೈಮಾಸಿಕದಿಂದ ಬದಲಾಯಿಸಿಲ್ಲ.  ಪ್ರಸ್ತುತ ದೇಶದ ಎಲ್ಲ ಬ್ಯಾಂಕುಗಳು ಸ್ಥಿರ ಠೇವಣಿಗಳ (ಎಫ್ ಡಿ ) ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿವೆ. ಹೀಗಾಗಿ ಈ ವಾರದ ಕೊನೆಯಲ್ಲಿ ಅಂತ್ಯವಾಗುವ ಈ ಹಣಕಾಸು ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸುವ ಸಾಧ್ಯತೆಯಿದೆ. 

Latest Videos
Follow Us:
Download App:
  • android
  • ios