ಕೇಂದ್ರದ ಸಾಲ ಮರುಪಾವತಿ ಮುಂದೂಡಿಕೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!
ಕಳೆದ ಮಾರ್ಚ್ ತಿಂಗಳಲ್ಲಿ ಕೊರೋನಾ ಕಾರಣ ಭಾರತದಲ್ಲಿ ಲಾಕ್‌ಡೌನ್ ಘೋಷಿಸಲಾಗಿತ್ತು. ಜೂನ್ ತಿಂಗಳ ವರೆಗೂ ಲಾಕ್‌ಡೌನ್ ವಿಸ್ತರಣೆಯಾಗಿತ್ತು. ಈ ವೇಳೆ ಕೇಂದ್ರ ಸರ್ಕಾರ ಸಾಲ ಮರುಪಾವತಿಯನ್ನು ಆರಂಭದಲ್ಲಿ 3 ಹಾಗೂ ಬಳಿಕ 3 ತಿಂಗಳು ಮುಂದೂಡಿಕೆ ಮಾಡಿತ್ತು. ಸಾಲದ ಬಡ್ಡಿ ಮನ್ನ ಮಾಡುವ ಕುರಿತು ಪರ ವಿರೋಧಗಳು ಕೇಳಿಬಂದಿತ್ತು. ಈ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನವದೆಹಲಿ(ಮಾ.23): ಲಾಕ್‌ಡೌನ್ ಕಾರಣ ಸಾಲ ಮರುಪಾವತಿಸಲು ಸಾಧ್ಯವಾಗದವರಿಗೆ ಕೇಂದ್ರ ಸರ್ಕಾರ ಮರುಪಾವತಿ ಕಂತನ್ನು ಮುಂದೂಡಿಕೆ ಮಾಡಿತ್ತು. ಆರಂಭಿಕ ಹಂತದಲ್ಲಿ 3 ತಿಂಗಳಿಗೆ ಮುಂದೂಡಿಕೆ ಮಾಡಿದ್ದ ಕೇಂದ್ರ ಬಳಿಕ 3 ತಿಂಗಳಿಗೆ ವಿಸ್ತರಿಸಿತ್ತು. ಒಟ್ಟು 6 ತಿಂಗಳು ಸಾಲ ಮುಂದೂಡಿಕೆ ಮಾಡಲಾಗಿತ್ತು. ಆದರೆ ಸಾಲದ ಬಡ್ಡಿ ಪಾವತಿಸಲು ಆರ್‌ಬಿಐ ಸೂಚಿಸಿತ್ತು. ಹೀಗಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್ ತೀರ್ಪ ನೀಡಿದೆ.
22 ಲಕ್ಷ ರೈತರಿಗೆ 14 ಸಾವಿರ ಕೋಟಿ ಸಾಲ
ಲೋನ್ ಮೊರಟೊರಿಯಂ ಆರ್‌ಬಿಐ ವ್ಯಾಪ್ತಿಗೆ ಬರಲಿದೆ. ಹೀಗಾಗಿ ಈ ಕುರಿತು ಕೋರ್ಟ್ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಸಾಲ ಮುಂದೂಡಿಕೆ ಮಾಡಿದಾಗ ಹಾಕಿರುವ ಬಡ್ಡಿಯನ್ನು ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಇದೀಗ ಸಾಲ ಮುಂದೂಡಿಕೆ ಮಾಡಿದವರು ಮೂಂದೂಡಿದ ತಿಂಗಳ ಚಕ್ರ ಬಡ್ಡಿ ಕಟ್ಟಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಮನೆ ನಿರ್ಮಿಸುವ ಬಡವರಿಗೆ ಇಲ್ಲಿದೆ ಗುಡ್ ನ್ಯೂಸ್.
ಲೋನ್ ಮೊರಟೊರಿಯಂ ಮುಂದೂಡಿಕೆ ಮಾಡಲು ಸಾಧ್ಯವಿಲ್ಲ. ಈ ಕುರಿತು ಆರ್‌ಬಿಐ ನಿರ್ಧಾರಗಳೇ ಅಂತಿಮ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಾಲ ಮರುಪಾವತಿ ಮುಂದೂಡಿಕೆ ಮಾಡಿದವರಿಗೆ ಚಕ್ರ ಬಡ್ಡಿ ಕಟ್ಟಲು ಸಾಧ್ಯವಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಬಡ್ಡಿ ಮನ್ನ ಮಾಡಬೇಕು ಎಂಬು ವಾದ ಬಲವಾಗಿ ಕೇಳಿಬಂದಿತ್ತು. ವಿಚಾರಣೆ ನಡೆಸಿದ ಕೋರ್ಟ್ ಡಿಸೆಂಬರ್ 17 ರಂದು ತೀರ್ಪು ಕಾಯ್ದಿರಿಸಿತ್ತು.