ವ್ಯಾಲೆಂಟೆನ್ಸ್ ಡೇಗೆ ಹೋಟೆಲ್ ಬುಕ್ಕಿಂಗ್, ಟಾಪ್ ಸ್ಥಾನದಲ್ಲಿ ವೃಂದಾವನ,ಬೆಂಗಳೂರು!
ಫೆ.14ರಂದು ಪ್ರೇಮಿಗಳು ಸಂಭ್ರಮದಿಂದ ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ. ಹೀಗಿರುವಾಗ ಈ ಬಾರಿ ಭಾರತದಲ್ಲಿ ಪ್ರೇಮಿಗಳ ದಿನ ಆಚರಿಸಲು ಪ್ರೇಮಿಗಳ ನೆಚ್ಚಿನ ನಗರ ಯಾವುದಾಗಿತ್ತು? ಅತೀಹೆಚ್ಚು ಹೋಟೆಲ್ ಬುಕ್ಕಿಂಗ್ ಯಾವ ನಗರಗಳಲ್ಲಿ ಆಗಿತ್ತು? ಇಲ್ಲಿದೆ ಮಾಹಿತಿ.
ಬೆಂಗಳೂರು (ಫೆ.16): ದೇಶದ ಕೆಲವು ನಗರಗಳಲ್ಲಿ ಪ್ರೇಮಿಗಳ ದಿನ ಪ್ರೇಮಿಗಳ ಜೊತೆಗೆ ವ್ಯಾಪಾರಿಗಳಿಗೂ ಸಂತಸ ನೀಡಿದೆ. ಅದರಲ್ಲೂ ಹೋಟೆಲ್, ರೆಸ್ಟೋರೆಂಟ್ ಗಳಿಗಂತೂ ಸುಗ್ಗಿ. ಪ್ರೇಮಿಗಳು ತಮ್ಮ ಪ್ರೇಮ ಸಂಭ್ರಮಕ್ಕೆ ಹೋಟೆಲ್ ಅಥವಾ ಇನ್ನಿತರ ಸ್ಥಳಗಳಿಗೆ ಹೋಗೋದು ಕಾಮನ್. ಈ ವರ್ಷ ಕೂಡ ಪ್ರೇಮಿಗಳ ದಿನಕ್ಕೆ ಈ ರೀತಿ ಹೋಟೆಲ್ ಬುಕ್ ಮಾಡಿದವರ ಸಂಖ್ಯೆಗೇನೂ ಕಡಿಮೆಯಿಲ್ಲ. ಅಂದ ಹಾಗೇ ಈ ವರ್ಷ ಪ್ರೇಮಿಗಳ ದಿನಕ್ಕೆ ಅತೀಹೆಚ್ಚು ಹೋಟೆಲ್ ಬುಕ್ ಆಗಿರೋದು ಯಾವ ನಗರಗಳಲ್ಲಿ ಗೊತ್ತ? ಆತಿಥ್ಯ ಸೇವಾ ಕಂಪನಿ ಒಯೋ (OYO) ನೀಡಿರುವ ಮಾಹಿತಿ ಅನ್ವಯ ವೃಂದಾವನ, ಬೆಂಗಳೂರು ಹಾಗೂ ಹೈದರಬಾದ್ ನಲ್ಲಿ. ಈ ಮೂರು ನಗರಗಳಲ್ಲಿ ವ್ಯಾಲೆಂಟೈನ್ಸ್ ಡೇಗೆ ಅತೀಹೆಚ್ಚು ಹೋಟೆಲ್ ಬುಕ್ಕಿಂಗ್ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವೃಂದಾವನದಲ್ಲಿ ಹೋಟೆಲ್ ಬುಕ್ಕಿಂಗ್ ಶೇ.231ರಷ್ಟು ಏರಿಕೆಯಾಗಿದೆ. ಇದರ ನಂತರದ ಸ್ಥಾನದಲ್ಲಿ ಬೆಂಗಳೂರು ಇದ್ದು, ಇಲ್ಲಿ ಶೇ.51ರಷ್ಟು ಬುಕ್ಕಿಂಗ್ ನಡೆದಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ಹೈದರಬಾದ್ ನಲ್ಲಿ ಶೇ.47ರಷ್ಟು ಹೋಟೆಲ್ ಗಳು ಬುಕ್ ಆಗಿವೆ. ಪುಣೆಯಲ್ಲಿ ಶೇ.45, ಕೋಲ್ಕತ್ತದಲ್ಲಿ ಶೇ.38, ಚೆನ್ನೈನಲ್ಲಿ ಶೇ.35 ಹಾಗೂ ಮುಂಬೈನಲ್ಲಿ ಶೇ.19ರಷ್ಟು ಹೋಟೆಲ್ ಬುಕ್ಕಿಂಗ್ ನಡೆದಿದೆ.
ಬಹುತೇಕ ಪ್ರವಾಸಿಗರು ವ್ಯಾಲೆಂಟೆನ್ಸ್ ಡೇ ಸಂಭ್ರಮಿಸಲು ಬೀಚ್ ಗಳಿಗಿಂತ ಗಿರಿಧಾಮಗಳನ್ನು ಹೆಚ್ಚಾಗಿ ಆಯ್ಕೆ ಮಾಡಿದ್ದಾರೆ. ಇನ್ನು ಹೋಟೆಲ್ ಗಳಲ್ಲಿ ತಂಗಿರುವ ಅವಧಿಯಲ್ಲಿ ಕೂಡ ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚಿನ ಏರಿಕೆಯಾಗಿದೆ. 2022ರಲ್ಲಿ ಈ ಅವಧಿ ಎರಡು ದಿನಗಳಾಗಿದ್ರೆ, 2023ರಲ್ಲಿ ನಾಲ್ಕು ದಿನಗಳಾಗಿವೆ. ಇದು ಜನರು ದೀರ್ಘಾವಧಿ ಪ್ರವಾಸಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ ಎಂಬುದಕ್ಕೆ ನಿದರ್ಶನವಾಗಿದೆ. ಕೋವಿಡ್-19 ಬಳಿಕ ಈ ಟ್ರೆಂಡ್ ಸಾಕಷ್ಟು ಜನಪ್ರಿಯತೆ ಗಳಿಸಿದೆ.
90ಲಕ್ಷ ರೂ. ಮೌಲ್ಯದ ಮರ್ಸಿಡಿಸ್ ಬೆಂಜ್ ಖರೀದಿಸಿದ ಚಾಯ್ ವಾಲಾ; ಈತನ ಕಥೆ ಕೆಳಿದ್ರೆ ಅಚ್ಚರಿಯಾಗೋದು ಗ್ಯಾರಂಟಿ!
ಬಹುತೇಕ ಪ್ರವಾಸಿಗರಿಗೆ ಬಜೆಟ್ ಸ್ನೇಹಿ ಹೋಟೆಲ್ ಗಳಲ್ಲಿ ಪ್ರೇಮಿಗಳ ದಿನವನ್ನು ಸಂಭ್ರಮಿಸಲು ಬಯಸಿದರೆ, ಇನ್ನೂ ಕೆಲವರು ಪ್ರೀಮಿಯಂ ಆಸ್ತಿಗಳ ಮೇಲೆ ವ್ಯಯಿಸಲು ಬಯಸಿದ್ದರು. 'ಜನರು ಈಗ ವಾರಾಂತ್ಯದ ಬದಲು ವಾರದ ಇತರ ದಿನಗಳಂದು ಪ್ರಯಾಣಿಸಲು ಇಷ್ಟಪಡುತ್ತಾರೆ. ಈ ದಿನಗಳಂದು ವಿವಿಧ ಆಫರ್ ಗಳನ್ನು ಹೋಟೆಲ್ ಗಳು ನೀಡುವುದು ಕೂಡ ಈ ಟ್ರೆಂಡ್ ಗೆ ಕಾರಣವಾಗಿದೆ. ಇನ್ನು ಸಣ್ಣ ನಗರಗಳಲ್ಲಿರುವ ಜನರು ಕೂಡ ಮೆಟ್ರೋ ನಗರಗಳಲ್ಲಿನ ಜನರಂತೆ ಈ ದಿನಕ್ಕಾಗಿ ವ್ಯಯಿಸಲು ಹಿಂದೆಮುಂಚೆ ನೋಡೋದಿಲ್ಲ ಎಂಬುದನ್ನು ಬುಕ್ಕಿಂಗ್ ಟ್ರೆಂಡ್ ಸ್ಪಷ್ಟವಾಗಿ ತೋರಿಸಿದೆ ಎಂದು ಒಯೋ (OYO) ವಕ್ತಾರ ತಿಳಿಸಿದ್ದಾರೆ.
Gautam Adani: ಗೌತಮ್ ಅದಾನಿ ಪತ್ನಿ ಯಾರು? ಮದುವೆಗೂ ಮುನ್ನ ಅವ್ರೇನ್ ಮಾಡ್ತಿದ್ರು?
ಈ ಬಾರಿ ವ್ಯಾಲೆಂಟೆನ್ಸ್ ಡೇ ಮಂಗಳವಾರ ಬಂದಿರುವ ಕಾರಣ ಬಹುತೇಕರು ವೀಕೆಂಡ್ ನಿಂದಲೇ ಬುಕ್ಕಿಂಗ್ ಮಾಡಿದ್ದಾರೆ. ಹೀಗೆ ಮಾಡೋದ್ರಿಂದ ನಾಲ್ಕು ದಿನಗಳ ಸಮಯಾವಕಾಶ ಸಿಗುತ್ತದೆ ಎಂಬುದು ಅವರ ಲೆಕ್ಕಾದಾರ. ವ್ಯಾಲೆಂಟೆನ್ಸ್ ಡೇ ಬುಕ್ಕಿಂಗ್ ನಲ್ಲಿ ಈ ಬಾರಿ ಶೇ.35ರಷ್ಟು ಏರಿಕೆಯಾಗಿದೆ ಎಂದು OYO ತಿಳಿಸಿದೆ. ಇದು ಗಣರಾಜ್ಯೋತ್ಸವ ಸಮಯದಲ್ಲಿನ ದಾಖಲೆಯ ಬುಕ್ಕಿಂಗ್ ನಷ್ಟೇ ಏರಿಕೆ ಕಂಡಿದೆ. ಈ ವರ್ಷ ಗಣರಾಜ್ಯೋತ್ಸವ ಗುರುವಾರ ಬಂದಿದ್ದ ಕಾರಣ ಬಹುತೇಕರು ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿ ತಾಣಗಳಲ್ಲಿನ ಹೋಟೆಲ್ ಗಳನ್ನು ಬುಕ್ ಮಾಡಿದ್ದರು. ಜನವರಿ 26ರಂದು ಗೋವಾದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಂದ್ರೆ ಶೇ.75ರಷ್ಟು ಬುಕ್ಕಿಂಗ್ ಆಗಿತ್ತು. ಒಟ್ಟಾರೆ ಈ ಬಾರಿ ಪ್ರೇಮಿಗಳ ದಿನವನ್ನು ಅದ್ದೂರಿಯಾಗಿ ಆಚರಿಸಿದ ಪ್ರೇಮಿಗಳು ಹೋಟೆಲ್ ಮಾಲೀಕರ ಆದಾಯ ಹೆಚ್ಚಳಕ್ಕೆ ಭರ್ಜರಿ ಕೊಡುಗೆ ನೀಡಿರೋದಂತೂ ಸುಳ್ಳಲ್ಲ.