ವೊಡಾಫೋನ್ ಐಡಿಯಾವನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟಪಡಿಸಿದ್ದಾರೆ. ಈಕ್ವಿಟಿ ಪರಿವರ್ತನೆಯ ನಂತರ ಸರ್ಕಾರದ ಪಾಲು ಶೇ.೪೯ಕ್ಕೆ ಏರಿದ್ದರೂ, ಹೆಚ್ಚುವರಿ ಪಾಲು ಪಡೆದರೆ ಕಂಪನಿ ಸಾರ್ವಜನಿಕ ವಲಯಕ್ಕೆ ಸೇರುತ್ತದೆ ಎಂದಿದ್ದಾರೆ. ಬಿಎಸ್‌ಎನ್‌ಎಲ್‌ನ ಸ್ವದೇಶಿ ೪ಜಿ ಜಾಲ ಸಿದ್ಧವಾಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದೂ ತಿಳಿಸಿದ್ದಾರೆ.

ನವದೆಹಲಿ: ದೇಶದ ಮೂರನೇ ಅತಿದೊಡ್ಡ ಖಾಸಗಿ ಟೆಲಿಕಾಂ ಕಂಪನಿಯಾಗಿರುವ ವೊಡಾಫೋನ್ ಐಡಿಯಾ ಸರ್ಕಾರದ ಸ್ವಾಧೀನಕ್ಕೆ ಒಳಗಾಗುತ್ತಾ ಪ್ರಶ್ನೆಗೆ ಕೇಂದ್ರ ಸಂವಹನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಉತ್ತರಿಸಿದ್ದಾರೆ.PITಗೆ ನೀಡಿದ ಸಂದರ್ಶನದಲ್ಲಿ ವೊಡಾಫೋನ್ ಐಡಿಯಾ ಷೇರು ಪಾಲುದಾರಿಕೆ ಹೆಚ್ಚಿಸುವ ಕುರಿತ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದರು. ಸರ್ಕಾರದ ಮುಂದೆ ವೊಡಾಫೋನ್ ಐಡಿಯಾದಲ್ಲಿನ ಪಾಲುದಾರಿಕೆಯನ್ನು ಹೆಚ್ಚಿಸಿಕೊಳ್ಳುವ ಯಾವುದೇ ಪ್ರಸ್ತಾವನೆಗಳು ಇಲ್ಲ. ಒಂದು ವೇಳೆ ಪಾಲುದಾರಿಕೆಗೆ ಹೆಚ್ಚಿಸಿಕೊಂಡರೆ ಖಾಸಗಿ ಒಡೆತನದಲ್ಲಿರುವ ವೊಡಾಫೋನ್ ಐಡಿಯಾ ಸಾರ್ವಜನಿಕ ವಲಯಕ್ಕೆ ಸೇರಿದಂತಾಗುತ್ತದೆ ಎಂದು ಕೇಂದ್ರ ಸಂವಹನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಬುಧವಾರ ಹೇಳಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಂಧಿಯಾ, ಕಂಪನಿ ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ವೊಡಾಫೋನ್ ಐಡಿಯಾಗೆ ಸಂದೇಶ ನೀಡಿದರು.ಇತ್ತೀಚಿನ ಸ್ಪೆಕ್ಟ್ರಮ್ ಹರಾಜು ಬಾಕಿಯ 36,950 ಕೋಟಿ ರೂಪಾಯಿಗಳನ್ನು ಈಕ್ವಿಟಿಯಾಗಿ ಪರಿವರ್ತಿಸಿದೆ. ಇದಾದ ಬಳಿಕ ಸರ್ಕಾರವು ಈಗ ವೊಡಾಫೋನ್ ಐಡಿಯಾ ಲಿಮಿಟೆಡ್‌ನಲ್ಲಿ 48.99 ಶೇಕಡಾ ಷೇರುಗಳನ್ನು ಹೊಂದಿದೆ. ಈ ಹಿಂದೆ ಅಂದ್ರೆ ಈಕ್ವಿಟಿ ಷೇರುಗಳು ಮುನ್ನ ವೊಡಾಫೊನ್ ಐಡಿಯಾ ಲಿಮಿಟೆಡ್‌ನಲ್ಲಿ ಸರ್ಕಾರದ ಪಾಲು ಶೇ.22.6 ರಷ್ಟಿತ್ತು.

ಸಾರ್ವಜನಿಕ ವಲಯದ ಉದ್ಯಮ ಆಗುತ್ತಾ?
ಮುಂದುವರಿದ ಮಾತನಾಡಿದ ಕೇಂದ್ರ ಸಚಿವರು, ಈ ಸಂದರ್ಭದಲ್ಲಿ ಸರ್ಕಾರ ಯಾವುದೇ ಹೆಚ್ಚುವರಿ ಪಾಲು ಅಥವಾ ಷೇರುಗಳನ್ನು ಪಡೆದುಕೊಂಡರೆ ವೊಡಾಫೋನ್ ಐಡಿಯಾ ಕಂಪನಿಯನ್ನು ಸಾರ್ವಜನಿಕ ವಲಯದ ಉದ್ಯಮವಾಗಿ ಪರಿವರ್ತಿಸಬೇಕಾಗುತ್ತದೆ. ಹಾಗೆ ಕಂಪನಿಯ ಆಡಳಿತವನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ನಿಯಂತ್ರಣಕ್ಕೆ ತೆಗೆದುಕೊಂಡ ನಂತರವೇ ಸರ್ಕಾರವೇ ಕಂಪನಿಯ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸದಸ್ಯರನ್ನು ಸರ್ಕಾರದಿಂದಲೇ ನೇಮಕ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕಂಪನಿಯ ಸಿಎಜಿ ಮತ್ತು ಇತರೆ ತಪಾಸಣಾ ಸಂಸ್ಥೆಗಳ ವ್ಯಾಪ್ತಿಗೆ ವೊಡಾಫೋನ್ ಐಡಿಯಾ ಬರುತ್ತದೆ ಎಂದು ಹೇಳಿದ್ದಾರೆ.

ಶೇ.49ರ ಪಾಲುದಾರಿಕೆಯಲ್ಲಿಯೇ ಮುಂದುವರಿಕೆ?
ಈ ಸಂದರ್ಭದಲ್ಲಿ ಉತ್ತಮ ಸೇವೆಗಳನ್ನು ಕಾರ್ಯನಿರ್ವಹಿಸೋದು ವೊಡಾಫೋನ್ ಐಡಿಯಾದ ಕೆಲಸವಾಗಿದೆ. ಇಂದು ಪ್ರಸ್ತುತ ಕೇಂದ್ರ ಸರ್ಕಾರದ ಬಳಿಯಲ್ಲಿ ಕಂಪನಿಯ ಶೇ.49ರಷ್ಟು (ಶೇ.48.99) ಪಾಲುದಾರಿಕೆಯನ್ನು ಹೊಂದಿದೆ. ವೊಡಾಫೋನ್ ಐಡಿಯಾವನ್ನು ಸಾರ್ವಜನಿಕ ವಲಯದ ಉದ್ಯಮವನ್ನಾಗಿ ಮಾಡುವ ಯಾವುದೇ ಯೋಚನೆ ಮತ್ತು ಪ್ರಸ್ತಾವನನೆ ಸರ್ಕಾರದ ಮುಂದಿಲ್ಲ. ನಾವು ಶೇ.49ರ ಪಾಲುದಾರಿಕೆಯಲ್ಲಿ ಮುಂದುವರಿಯುತ್ತವೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದರು.

ಇದನ್ನೂ ಓದಿ: ಗ್ರಾಹಕರಿಗಾಗಿ ಹೊಸ 7 ಸೇವೆ ಬಿಡುಗಡೆಗೊಳಿಸಿದ ಬಿಎಸ್‌ಎನ್‌ಎಲ್: ಪತರಗುಟ್ಟಿದ ಜಿಯೋ, ಏರ್‌ಟೆಲ್

ದೇಸಿ 4ಜಿ ನೆಟ್‌ವರ್ಕ್ ಸಿದ್ಧ
ಈ ಹಿಂದೆ ಮಾತನಾಡಿದ್ದ ಸಿಂಧಿಯಾ, ಸರ್ಕಾರಿ ಸ್ವಾಮ್ಯದ ಭಾರತ್‌ ಸಂಚಾರ್‌ ನಿಗಮ್‌ ಲಿ.ನ (ಬಿಎಸ್‌ಎನ್‌ಎಲ್‌) ಸ್ವದೇಶಿ 4ಜಿ ಸಂಪರ್ಕಜಾಲ ಸಿದ್ಧವಾಗಿದ್ದು, ಸದ್ಯದಲ್ಲೇ ಗ್ರಾಹಕರ ಬಳಕೆಗೆ ಸಿಗಲಿದೆ ಎಂದು ಕೇಂದ್ರ ಸಂಹವನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ. ಅಲ್ಲದೆ, ಬಿಎಸ್‌ಎನ್‌ಎಲ್‌ನ ಗ್ರಾಹಕರ ಸಂಖ್ಯೆ ಏರಿಕೆಯಾಗುತ್ತಿದೆ. ಆತ್ಮನಿರ್ಭರ ಭಾರತ ಯೋಜನೆಯಡಿ ಸ್ವದೇಶಿ ತಂತ್ರಜ್ಞಾನದೊಂದಿಗೆ 4ಜಿ ತಂತ್ರಜ್ಞಾನ ಸಿದ್ಧವಾಗಿದೆ. ಕೆಲವೇ ತಿಂಗಳಲ್ಲಿ ಅದನ್ನು ದೇಶಾದ್ಯಂತ ಗ್ರಾಹಕರಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದರು. 

ಈಗಾಗಲೇ ದೇಶದಲ್ಲಿರುವ ಮೂರು ಖಾಸಗಿ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ತಮ್ಮ ಬಳಕೆದಾರರಿಗೆ 5G ಕನೆಕ್ಟಿವಿಟಿ ನೀಡಲು ಶುರು ಮಾಡಿಕೊಂಡಿವೆ. ವೋಡಾಫೋನ್ ಐಡಿಯಾ ಮಾತ್ರ ಆಯ್ದ ಕೆಲವು ಪ್ರದೇಶಗಳಲ್ಲಿ 5G ಸೇವೆಯನ್ನು ನೀಡುತ್ತಿದೆ.

ಇದನ್ನೂ ಓದಿ: 4500ಕೋಟಿ ಮೌಲ್ಯದ ಅರಮನೆಯಲ್ಲಿ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಗಳ ಅದ್ಧೂರಿ ಲೈಫ್!